Uttara Kannada: ಚಿತ್ರಮಂದಿರ ನೌಕರನ ಪತ್ನಿಯ ಮೃತದೇಹ ಬಿಡಿಸಿಕೊಳ್ಳಲು ಸಹಾಯವಿತ್ತ ಅಪ್ಪು ಅಭಿಮಾನಿಗಳು

By Gowthami KFirst Published Oct 28, 2022, 10:29 PM IST
Highlights

ಶಿರಸಿಯ ನಟರಾಜ ಚಿತ್ರಮಂದಿರದ ದಿನಗೂಲಿ ನೌಕರನಾಗಿರುವ ಪರಶುರಾಮ ಛಲವಾದಿ ಅವರ ಗರ್ಭಿಣಿ ಪತ್ನಿ  ಚಿಕಿತ್ಸೆ ಫಲಕಾರಿಯಾಗದೆ  ಸಾವಿಗೀಡಾಗಿದ್ರು. ಮಹಿಳೆಯ ಮೃತದೇಹ ಕೊಂಡೊಯ್ಯುಲು ಖಾಸಗಿ ಆಸ್ಪತ್ರೆಯವರು 24,000ರೂ. ಚಾರ್ಜ್ ಮಾಡಿದ್ದರು. ಆದರೆ,  ಹಣವಿಲ್ಲದೇ ಪರದಾಡಿದ್ದ  ಅವರಿಗೆ ಅಪ್ಪು ಅಭಿಮಾನಿಗಳು ಸಹಾಯ ಮಾಡಿದ್ದಾರೆ.

ಉತ್ತರ ಕನ್ನಡ (ಅ,28): ಇಂದು ರಾಜ್ಯದಾದ್ಯಂತ ದಿ. ಪವರ್‌ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ಗಂಧದಗುಡಿ ಡಾಕ್ಯುಮೆಂಟರಿ ಸಿನೆಮಾ ಬಿಡುಗಡೆಗೊಂಡಿದೆ. ಅಪ್ಪು ಅವರ ಲಕ್ಷಾಂತರ ಅಭಿಮಾನಿಗಳು ಟಾಕೀಸ್ ತೆರಳಿ ಡಾಕ್ಯುಮೆಂಟರಿ ವೀಕ್ಷಿಸಿದ್ದಾರೆ. ಈ ನಡುವೆ ಉತ್ತರಕನ್ನಡ ಜಿಲ್ಲೆಯ ಶಿರಸಿಯಲ್ಲಿ ಅಪ್ಪು ಅಭಿಮಾನಿಗಳು ಒಂದು ಕುಟುಂಬಕ್ಕೆ ಸಹಾಯ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಶಿರಸಿಯ ನಟರಾಜ ಚಿತ್ರಮಂದಿರದ ದಿನಗೂಲಿ ನೌಕರನಾಗಿರುವ ಪರಶುರಾಮ ಛಲವಾದಿ ಅವರ ಗರ್ಭಿಣಿ ಪತ್ನಿ ವನಜಾ ಅವರ ಹೊಟ್ಟೆಯಲ್ಲೇ ಮಗು ಸತ್ತು ಸೋಂಕಾಗಿತ್ತು. ಮೃತ ಮಗುವನ್ನು ಹೊರತೆಗೆದು ಮಹಿಳೆಗೆ ಚಿಕಿತ್ಸೆ ನೀಡುವಾಗ ಚಿಕಿತ್ಸೆ ಫಲಕಾರಿಯಾಗದೆ ಮಹಿಳೆ ಸಾವಿಗೀಡಾಗಿದ್ರು. ಮಹಿಳೆಯ ಮೃತದೇಹ ಕೊಂಡೊಯ್ಯುವ ಮುನ್ನ ಶಿರಸಿಯ ಖಾಸಗಿ ಆಸ್ಪತ್ರೆಯವರು 24,000ರೂ. ಚಾರ್ಜ್ ಮಾಡಿದ್ದರು. ಆದರೆ, ಪತ್ನಿಯ ಮೃತದೇಹ ಬಿಡಿಸಿಕೊಳ್ಳಲು ಹಣವಿಲ್ಲದೇ ಪರದಾಡಿದ್ದ ಪರಶುರಾಮ ಛಲವಾದಿ, ತನ್ನ ನೋವನ್ನು ಪುನೀತ್ ರಾಜ್‌ಕುಮಾರ್ ಅಭಿಮಾನಿಗಳ ಜತೆ ತೋಡಿಕೊಂಡಿದ್ದರು. ವಿಷಯ ತಿಳಿದು ಪುನೀತ್ ರಾಜ್‌ಕುಮಾರ್ ಅಭಿಮಾನಿಗಳ ಬಳಗ ತಮ್ಮಲ್ಲೇ 100ರೂ. 200ರೂ.ನಂತೆ ಕಲೆಕ್ಷನ್ ಮಾಡಿ ಚಿತ್ರಮಂದಿರ ದಿನಗೂಲಿ ನೌಕರನ ಪತ್ನಿಯ ಮೃತದೇಹ ತರಲು ಖಾಸಗಿ ಆಸ್ಪತ್ರೆಗೆ ಹಣ ಪಾವತಿಸಿದ್ದಾರೆ.

ಅಪ್ಪು ಬಂದಿದ್ದು ಗಂಧದ ಗುಡಿ ಮಾಡುವುದಕ್ಕೆ: ರಾಘಣ್ಣ ಭಾವುಕ ನುಡಿ

Latest Videos

ಅಪ್ಪು ಅಭಿಮಾನಿ ಬಳಗದ ವಿನಂತಿ ಮೇರೆಗೆ ವೆಚ್ಚ ಖಡಿತಗೊಳಿಸಿದ ಖಾಸಗಿ ಆಸ್ಪತ್ರೆ, ಬಳಿಕ ಮೃತದೇಹ ಬಿಟ್ಟುಕೊಟ್ಟಿದೆ. ನಂತರ ಅಪ್ಪು ಅಭಿಮಾನಿಗಳು ಪರಶುರಾಮ ಅವರ ಮನೆಯವರೆಗೆ ವನಜಾ ಅವದ ಮೃತದೇಹ ತಂದುಕೊಟ್ಟಿದ್ದಾರೆ. ಈ ಮೂಲಕ ಅಪ್ಪು ಅವರು ನಡೆದ ದಾರಿಯಲ್ಲೇ ಶಿರಸಿಯ ಅಪ್ಪು ಅಭಿಮಾನಿಗಳು ಸಾಗುವ ಮೂಲಕ ಮಾದರಿಯಾಗಿದ್ದಾರೆ.

ನಿಮಿಷಾಂಬ ದೇಗುಲಕ್ಕೂ 'ಅಪ್ಪು' ಗೂ ಇದೆ ನಂಟು: ದೇವಿಯ ದರ್ಶನ ಪಡೆದ ಅಶ್ವಿನಿ 

‘ಗಂಧದಗುಡಿ’ ಪ್ರದರ್ಶನಕ್ಕೆ ಆಗ್ರಹಿಸಿ ಪ್ರತಿಭಟನೆ
ಶಿರಸಿ: ದಿ.ಪುನೀತ್‌ ರಾಜಕುಮಾರ ಅವರ ‘ಗಂಧದಗುಡಿ’ ಚಲನಚಿತ್ರ ಪ್ರದರ್ಶನ ಮಾಡಬೇಕು ಎಂದು ಆಗ್ರಹಿಸಿ ಪುನೀತ್‌ ಅಭಿಮಾನಿಗಳು ಇಲ್ಲಿಯ ನಟರಾಜ ಚಿತ್ರಮಂದಿರದ ಎದುರು ಪ್ರತಿಭಟನೆ ನಡೆಸಿದ ಘಟನೆ ಬುಧವಾರ ನಡೆಯಿತು.

ಚಿತ್ರಮಂದಿರದಲ್ಲಿ ಹೊಂಬಾಳೆ ಫಿಲಮ್ಸ್‌ನ ‘ಕಾಂತಾರ’ ಚಲನಚಿತ್ರ ಹೌಸ್‌ಫುಲ್‌ಗಳಲ್ಲಿ ಪ್ರದರ್ಶನ ಕಾಣುತ್ತಿದೆ. ಗಂಧದ ಗುಡಿ ಚಿತ್ರ ಅ.28 ರಂದು ಬಿಡುಗಡೆ ಆಗಲಿದೆ. ಆದರೆ, ನಟರಾಜ ಚಿತ್ರಮಂದಿರ ಕಾಂತಾರ ಪ್ರದರ್ಶನವನ್ನೇ ಮುಂದುವರಿಸುತ್ತಿರುವ ಬಗ್ಗೆ ಅಭಿಮಾನಿಗಳು ಅಸಮಾಧಾನಗೊಂಡಿದ್ದಾರೆ.

ಈ ವೇಳೆ ಚಿತ್ರಮಂದಿರದ ಮುಖ್ಯಸ್ಥರು ಮಾತನಾಡಿ, ಕಾಂತಾರ ಚಿತ್ರ ಜನ ಜಂಗುಳಿಯಲ್ಲಿ ನಡೆಯುತ್ತಿದೆ. ಗಂಧದಗುಡಿ ಪ್ರದರ್ಶನದ ಕುರಿತಂತೆ ಹೊಂಬಾಳೆ ಫಿಲಮ್ಸ್‌ ಜೊತೆ ಮಾತನಾಡಿ ನಿರ್ಧರಿಸುತ್ತೇವೆ ಎಂದರು. ಅಂತಿಮವಾಗಿ ಗಂಧದಗುಡಿ ಚಿತ್ರವನ್ನು ಪ್ರತಿದಿನ 2 ಪ್ರದರ್ಶನ ನಡೆಸಲು ಒಪ್ಪಿಗೆ ಸೂಚಿಸಲಾಯಿತು. ಈ ವೇಳೆ ಮಹೇಶ ನಾಯ್ಕ, ಪ್ರಸನ್ನ ಶೆಟ್ಟಿ, ಗೀತಾ ಭೋವಿ ಇತರರಿದ್ದರು.

click me!