ಪಾಠ ಹೇಳಿಕೊಟ್ಟ ಪ್ರಿಯಾಂಕಾ ಚೋಪ್ರಾ: ಅತೃಪ್ತರು ಎಲ್ಲಾ ಕಡೆ ಇರ್ತಾರೆ, ಯಾಕೆ ತಲೆ ಕೆಡಿಸ್ಕೋತೀರಿ!

By Shriram Bhat  |  First Published Jun 26, 2024, 4:32 PM IST

ನಾನು ನನ್ನ ಪಾಲಿಗೆ ಬಂದಿದ್ದೆಲ್ಲವನ್ನೂ ಸ್ವೀಕರಿಸಲು, ನನಗೆ ಬಂದಿರುವ ಎಲ್ಲ ಆಮಂತ್ರಣಗಳನ್ನೂ ಒಪ್ಪಿಕೊಂಡು ಹೋಗಿ ಬರುತ್ತಿದ್ದೆ. ಏಕೆಂದರೆ, ನನಗೆ ಎಲ್ಲವೂ ಬೇಕಾಗಿತ್ತು. ನಾನು ತುಂಬಾನೇ ಬಯಸುತ್ತಿದ್ದೆ, ಪಡೆಯಲು ಹಾತೊರೆಯುತ್ತಿದ್ದೆ...


'ನೀವು ಏನೇ ಮಾಡಿದರೂ ಯಾರಾದರೂ ಒಬ್ಬರು ನಿಮ್ಮ ಬಗ್ಗೆ ಅತೃಪ್ತಿ ಹೋದಿರುವವರು ಇದ್ದೇ ಇರುತ್ತಾರೆ. ನೀವು ಎಲ್ಲಾ ಸಮಯದಲ್ಲೂ ಎಲ್ಲರನ್ನೂ ತೃಪ್ತಿ ಪಡಿಸಲು ಅಸಾಧ್ಯ. ನಿಮ್ಮ ಬಗ್ಗೆ, ನಿಮ್ಮ ಸಲುವಾಗಿ ನೀವು ಮಾಡಿಕೊಳ್ಳಬಹುದಾದ ಅತ್ಯಂತ ದೊಡ್ ಸಹಾಯ ಅಂದರೆ ಅದು ನಗು. ನಿಮ್ಮ ಖುಷಿಗಾಗಿ, ಖುಷಿಯಿಂದ ಜೋರಾಗಿ ಒಮ್ಮೆ ನಕ್ಕುಬಿಡಿ. ಹಾಗೂ, ಯಾವತ್ತೂ ಏನೇ ಆದರೂ ನಗುಮೊಗದಿಂದ ಅದನ್ನು ಸ್ವಾಗತಿಸಿ. ಏನೇ ಸಮಸ್ಯೆ ಬಂದರೂ ಕೂಡ ಮುಖದಲ್ಲಿ ನಗು ಮಾಯವಾಗದಿರಲಿ. 

ಎಂಥ ಸಮಯ, ಸಂದರ್ಭವೇ ಇರಲಿ, ನೀವು ಬೇರೆಯವರನ್ನು ಖುಷಿ ಪಡಿಸಲು ತಲೆ ಕೆಡಿಸಿಕೊಳ್ಳುವ ಬದಲು ನಿಮ್ಮ ಸಂತೋಷಕ್ಕೆ ಗಮನ ಕೊಡಿ. ಲೈಫ್ ತುಂಬಾ ಚಿಕ್ಕದು. ಇಲ್ಲಿ ಬೇರೆಯವರ ಬಗ್ಗೆ ತಲೆ ಕೆಡಿಸಿಕೊಳ್ಳಲು ಸಮಯ ಇಲ್ಲ, ಕೊಡಲೂ ಬಾರದು. ಬದುಕಲು ನಮಗಿರುವ ತುಂಬಾ ಚಿಕ್ಕ ಕಾಲದಲ್ಲಿ ನಮ್ಮ ಖುಷಿಗಾಗಿ, ನಮ್ಮ ಏಳಿಗೆಗಾಗಿ ದುಡಿಯಲು, ಗಮನಕೊಡಲು ಸಮಯ ಮೀಸಲಿಡಿ. ಬೇರೆಯವರು ನಿಮ್ಮನ್ನು ಇಷ್ಟಪಟ್ಟರೂ ಓಕೆ, ಪಡದಿದ್ದರೂ ಒಕೆ ಎಂಬ ಮೆಂಟಾಲಿಟಿ ನಿಮ್ಮದಾಗಿರಲಿ' ಎಂದಿದ್ದಾರೆ ನಟಿ ಪ್ರಿಯಾಂಕಾ ಚೋಪ್ರಾ (Priyanka Chopra). 

Tap to resize

Latest Videos

ಕಿಚ್ಚ ಸುದೀಪ್ ಪಾಲಿಗೆ ಪುನೀತ್ ಅಪ್ಪು ಅಲ್ಲ ಭಾಗ್ಯವಂತ; ಇದ್ಯಾ ಏನಾದ್ರೂ ರೈಟ್ ರೀಸನ್?

ನಟಿ ಪ್ರಿಯಾಂಕಾ ಚೋಪ್ರಾ (Priyanka Chopra) ಅವರು ಮಿಸ್ ಇಂಡಿಯಾ, ಮಿಸ್ ವರ್ಲ್ಡ್‌ ಆಗಿ ಆಯ್ಕೆಯಾದವರು. ಬಳಿಕ ಅವರು ಮಾಡೆಲಿಂಗ್ ಹಾಗು ಸಿನಿಮಾ ವೃತ್ತಿಜೀವನ ಆರಂಭಿಸಿದವರು. ಬಹಳಷ್ಟು ಬಾಲಿವುಡ್ ಸಿನಿಮಾಗಳಲ್ಲಿ ನಟಿಸಿ ಸಕ್ಸಸ್‌ಫುಲ್ ನಟಿ ಎಂದು ಗುರುತಿಸಿಕೊಂಡವರು. ಸದ್ಯ ಅವರು ಅಮೆರಿಕಾದಲ್ಲಿ ಜೀವನ ನಡೆಸುತ್ತಿದ್ದಾರೆ. ಅದಕ್ಕೆ ಕಾರಣ, ನಟಿ ಪ್ರಿಯಾಂಕಾ ಚೋಪ್ರಾ ಅವರು ಅಮೆರಿಕಾದ ಪಾಪ್ ಸಿಂಗರ್ ನಿಕ್ ಜೊನಾಸ್ ಅವರನ್ನು ಮದುವೆಯಾಗಿರುವುದು. ಸದ್ಯ ಪ್ರಿಯಾಂಕಾ ಅಲ್ಲಿನ ಹಾಲಿವುಡ್ ಸಿನಿಮಾಗಳು ಹಾಗೂ ವೆಬ್ ಸಿರೀಸ್‌ಗಳಲ್ಲಿ ನಟಿಸುತ್ತಿದ್ದಾರೆ. 

ಇದೇನು ಪ್ರೀತಿ ತೋರಿಸೋ ಅವತಾರವೋ ಅವಮಾನವೋ ಗೊತ್ತಿಲ್ಲ; ನಟ ಶಂಕರ್ ಅಶ್ವಥ್ ಬೇಸರ!

ಇಂಥ ಪ್ರಿಯಾಂಕಾ ಅಚ್ಚರಿಯ ಸಂಗತಿಯನ್ನು ಹಂಚಿಕೊಂಡಿದ್ದಾರೆ. 'ನಾನು ಡಾನ್ 2 ಸಿನಿಮಾ ಶೂಟಿಂಗ್‌ನಲ್ಲಿದ್ದೆ. ಆ ಸಿನಿಮಾವನ್ನು ಬರ್ಲಿನ್ (Berlin) ಫಿಲಂ ಫೆಸ್ಟಿವಲ್‌ನಲ್ಲಿ ಪ್ರದರ್ಶಿಸಲು ಆಹ್ವಾನ ಬಂದಿತ್ತು. ಅದೇ ವೇಳೆ, ನಾನು ಮೊಟ್ಟ ಮೊದಲ ಬಾರಿಗೆ ಗ್ರಾಮಿ ಅವಾರ್ಡ್‌ ಫಂಕ್ಷನ್‌ಗೆ ಲಾಸ್ ಎಂಜಲೀಸ್‌ಗೆ (Los Angeles) ಆಹ್ವಾನಿತಳಾಗಿದ್ದೆ. ಎರಡೂ ದೇಶಗಳು ಬೇರೆ ಬೇರೆ ಖಂಡಗಳಲ್ಲಿ ಇದ್ದು, ಒಂದು ಕಡೆಯಿಂದ ಇನ್ನೊಂದು ಕಡೆಗೆ ಹೋಗಲು ಕನಿಷ್ಟಪಕ್ಷ ಒಂದು ದಿನ ಮಧ್ಯೆ ಅಂತರ ಬೇಕು. ಆದರೆ, ನಾನು ಎರಡೂ ಕಡೆ ಹೋಗಲು ನಿರ್ಧರಿಸಿದ್ದೆ. 

ಸೀಕ್ರೆಟ್ ಬಿಚ್ಚಿಟ್ಟರು ಸ್ನೇಹಿತ ಅಣಜಿ ನಾಗರಾಜ್, ಕೊಲೆ ಕೇಸಿನಲ್ಲಿ ನಟ ದರ್ಶನ್ ಜೈಲು ಪಾಲಾಗಿದ್ದು ಹೇಗೆ?

ಆದರೆ, ನನ್ನ ಆಪ್ತರು, ಸ್ನೇಹಿತರು ಎಲ್ಲರೂ 'ನೀನು ಎರಡೂ ಕಡೆ ಒಂದೇ ದಿನ ಹೋಗಲು ಸಾಧ್ಯವೇ ಇಲ್ಲ. ಬೇಕಾದರೆ ಒಂದನ್ನು ಮಾಡಬಹುದು, ಅದೇನೆಂದರೆ, ನಿನಗೆ ಯಾವುದು ಇಷ್ಟವೋ ಅದನ್ನು ಆಯ್ಕೆ ಮಾಡಿಕೊಂಡು ಅಲ್ಲಿಗೆ ಹೋಗಬಹುದು' ಎಂದರು. ಆದರೆ, ನಾನು ಮಾತ್ರ ಎರಡು ಕಡೆ ಹೋಗಲು ನಿರ್ಧರಿಸಿದ್ದೆ. ಹೀಗಾಗಿ ನಾನು ಯಾರೂ ಊಹಿಸಲೂ ಅಸಾಧ್ಯವಾದ ಮಾರ್ಗದ ಪ್ಲಾನ್ ಹಾಕಿಕೊಂಡಿದ್ದೆ. 

ಯಾಕಂದ್ರು ಕಿಚ್ಚ ಸುದೀಪ್: ನಾವು ರಿಯಾಕ್ಟ್ ಮಾಡೋಕೆ ಹೋದ್ರೆ ಅದು ದೀಪಕ್ಕೆ ಎಣ್ಣೆ ಹಾಕಿದ ಹಾಗೆ! 

ಮುಂಬೈ ಟು ಲಂಡನ್‌, ಲಂಡನ್‌ ಟು ಬರ್ಲಿನ್, ಬರ್ಲಿನ್‌ ಟು ಆರ್ಮಸ್ಟ್ರಡ್ಯಾಂ, ಆರ್ಮಸ್ಟ್ರಡ್ಯಾಂ ಟು ಲಾಸ್ ಎಂಜಲೀಸ್, ಲಾಸ್ ಎಂಜಲೀಸ್ ಟು ಮುಂಬೈ. ಹೀಗೆ ಮೂರೇ ಮೂರು ದಿನಗಳಲ್ಲಿ ನಾನು ಎರಡೂ ಕಡೆ ಹೋಗಿ ಬರುವ ನನ್ನ ಕನಸನ್ನು ನನಸು ಮಾಡಿಕೊಂಡಿದ್ದೆ.ನಾನು ಹಾಗೆ ಪ್ಲಾನ್ ಮಾಡಿದ್ದು ಒಂದೇ ಬಾರಿ ಅಲ್ಲ, ಹಲವು ಬಾರಿ ನಾನು ಹಾಗೆ ಮಾಡಿ ತುಂಬಾ ಕಡೆ ಓಡಾಡಿದ್ದೇನೆ. ಯಾಕಂದ್ರೆ ನನಗೆ ಯಾವುದನ್ನೂ ಕಳೆದುಕೊಳ್ಳಲು ಇಷ್ಟವಿರಲಿಲ್ಲ. 

ಗೋವು ಪಾಪನಾಶಿನಿ, ಅನ್ನದಾತನ ಜೀವಬಂಧು; ಗೋ ಶಾಲೆಗೆ ದೇಣಿಗೆ ಕೊಟ್ಟ ಮಹೇಂದ್ರ ಮುನ್ನೋತ್

ಹೀಗಾಗಿ ನಾನು ನನ್ನ ಪಾಲಿಗೆ ಬಂದಿದ್ದೆಲ್ಲವನ್ನೂ ಸ್ವೀಕರಿಸಲು, ನನಗೆ ಬಂದಿರುವ ಎಲ್ಲ ಆಮಂತ್ರಣಗಳನ್ನೂ ಒಪ್ಪಿಕೊಂಡು ಹೋಗಿ ಬರುತ್ತಿದ್ದೆ. ಏಕೆಂದರೆ, ನನಗೆ ಎಲ್ಲವೂ ಬೇಕಾಗಿತ್ತು. ನಾನು ತುಂಬಾನೇ ಬಯಸುತ್ತಿದ್ದೆ, ಪಡೆಯಲು ಹಾತೊರೆಯುತ್ತಿದ್ದೆ. ನನ್ನ ಪ್ರಕಾರ ಎಲ್ಲರೂ ಹಾಗೇ ಬದುಕಬೇಕು, ಬಾಳಬೇಕು. ಏಕೆಂದರೆ, ಲೈಫ್ ಈಸ್ ಶಾರ್ಟ್, ಮೇಕ್ ಇಟ್ ಸ್ವೀಟ್ ಎಂದಿದ್ದಾರೆ ನಟಿ ಪ್ರಿಯಾಂಕಾ ಚೋಪ್ರಾ. 

ಬರ್ಲಿನ್-ಲಾಸ್‌ ಎಂಜಲೀಸ್‌ಗೆ ಪ್ರಿಯಾಂಕಾ ಚೋಪ್ರಾ ಒಂದೇ ದಿನದಲ್ಲಿ ಹೋಗಿ ಬಂದಿದ್ದು ಹೇಗೆ?

click me!