ನಾಡಿನಲ್ಲಿ ಅಕ್ರಮವಾಗಿ ಸಾಗಿಸಲ್ಪಡುವ ಗೋವುಗಳನ್ನು ಕಾನೂನಾತ್ಮಕವಾಗಿ ರಕ್ಷಿಸಿದ ನಂತರ ಆ ಗೋವುಗಳನ್ನು ಈ ಗೋಶಾಲೆಗಳಿಗೆ ತಂದು ಬಿಡಲಾಗುತ್ತದೆ. ಅಂತಹ ಗೋವುಗಳನ್ನು ಪೊರೆಯಲು ಗೋಶಾಲೆಗಳಿಗೆ ಆರ್ಥಿಕ ಶಕ್ತಿ..
ಬೆಂಗಳೂರಿನ ವಿಜಯನಗರ ಮಾರುತಿ ಮೆಡಿಕಲ್ಸ್‌ನ ಮಾಲೀಕ ಹಾಗೂ ಗೋಸೇವಕ ಮಹೇಂದ್ರ ಮನ್ನೋತ್, ಶಾಲೆಗಳ ಉಳಿವಿಗಾಗಿ ಮತ್ತು ಗೋವುಗಳ ಸಂರಕ್ಷಣೆಗಾಗಿ ದೇಣಿಗೆ ನೀಡುವಂತ ಪುಣ್ಯದ ಕೆಲಸ ಮಾಡುವ ಮೂಲಕ ಇತರರಿಗೆ ಸ್ಪೂರ್ತಿಯಾಗಿದ್ದಾರೆ. ʼತಾಯಿಯ ಋಣವನ್ನು ತೀರಿಸಲು ಅಸಾಧ್ಯ. ಆದರೆ ತಾಯಿಯಂತೆ ನಮ್ಮನ್ನು ಪೊರೆಯುವ ಗೋಮಾತೆಯ ಋಣವನ್ನು ತೀರಿಸಲು ಖಂಡಿತಾ ಸಾಧ್ಯʼ ಎನ್ನುತ್ತಾರೆ ಮಹೇಂದ್ರ ಮನ್ನೋತ್.
ತಮ್ಮ ವ್ಯಾಪಾರದಲ್ಲಿ ಸಂಗ್ರಹಿಸಿದ ಬಹುಪಾಲು ಹಣವನ್ನು ಗೋವುಗಳ ರಕ್ಷಣೆಗೆ ಪಾಲನೆಗಾಗಿ ವ್ಯಯಿಸುತ್ತಿರುವ ಕುಟುಂಬವೆಂದರೆ ಅದು ಈ ಮಹೇಂದ್ರ ಮನ್ನೋತ್ ರವರ ಕುಟುಂಬ. ಕಳೆದ ಹದಿನಾಲ್ಕು ವರ್ಷಗಳಿಂದ ಪ್ರತೀ ವರ್ಷ ಗೋಶಾಲೆಗಳಿಗೆ ಲಕ್ಷಾಂತರ ರೂಪಾಯಿಗಳನ್ನು ದೇಣಿಗೆ ನೀಡುತ್ತಾರೆ. ಈ ವರ್ಷ ಅವರು ನಾಡಿನ ವಿವಿಧ ಗೋಶಾಲೆಗಳಿಗೆ 51 ಲಕ್ಷ ರೂಪಾಯಿಗಳನ್ನು ದಾನ ಮಾಡಿದ್ದಾರೆ. ಗೋಶಾಲೆಗಳಿಗೆ ಅಗತ್ಯಗಳ ತಕ್ಕಂತೆ ಹಣವನ್ನು ಒದಗಿಸಲಾಗಿದೆ.
ಇದೇನು ಪ್ರೀತಿ ತೋರಿಸೋ ಅವತಾರವೋ ಅವಮಾನವೋ ಗೊತ್ತಿಲ್ಲ; ನಟ ಶಂಕರ್ ಅಶ್ವಥ್ ಬೇಸರ!
ಇದರ ಹಿಂದಿನ ಕುತೂಹಲಕಾರಿ ಅಂಶವೆಂದರೆ ನಾಡಿನಲ್ಲಿ ಅಕ್ರಮವಾಗಿ ಸಾಗಿಸಲ್ಪಡುವ ಗೋವುಗಳನ್ನು ಕಾನೂನಾತ್ಮಕವಾಗಿ ರಕ್ಷಿಸಿದ ನಂತರ ಆ ಗೋವುಗಳನ್ನು ಈ ಗೋಶಾಲೆಗಳಿಗೆ ತಂದು ಬಿಡಲಾಗುತ್ತದೆ. ಅಂತಹ ಗೋವುಗಳನ್ನು ಪೊರೆಯಲು ಗೋಶಾಲೆಗಳಿಗೆ ಆರ್ಥಿಕ ಶಕ್ತಿಬೇಕಲ್ಲವೇ ? ಅಂಥ ಶಕ್ತಿಯನ್ನು ತುಂಬವ ಕೆಲಸವನ್ನು ಮಹೇಂದ್ರ ಮುನ್ನೋತ್ ಅವರು ತಮ್ಮ ಮಾತಾಪಿತೃಗಳ ಪುಣ್ಯಸ್ಮರಣೆಯ ಹೆಸರಿನಲ್ಲಿ ಈ ಸೇವೆಯನ್ನು ಈ ಕುಟುಂಬವು ಮಾಡಿಕೊಂಡು ಬಂದಿದೆ.
ಸೀಕ್ರೆಟ್ ಬಿಚ್ಚಿಟ್ಟರು ಸ್ನೇಹಿತ ಅಣಜಿ ನಾಗರಾಜ್, ಕೊಲೆ ಕೇಸಿನಲ್ಲಿ ನಟ ದರ್ಶನ್ ಜೈಲು ಪಾಲಾಗಿದ್ದು ಹೇಗೆ?
ಕನಕಪುರ ರಸ್ತೆಯ ದಿಣ್ಣೆಪಾಳ್ಯದಲ್ಲಿರುವ ಅಮೃತಧಾರಾ ಗೋಶಾಲೆಯಲ್ಲಿ 20ಕ್ಕೂ ಹೆಚ್ಚು ಗೋಶಾಲೆಯ ಮುಖ್ಯಸ್ಥರನ್ನು ಆಹ್ವಾನಿಸಿ ಅವರಿಗೆ ಚೆಕ್ ರೂಪದಲ್ಲಿ ಹಣವನ್ನು ನೀಡಲಾಗಿದೆ. ಇವರೊಂದಿಗೆ ಮಹೇಂದ್ರ ಅವರ ಧರ್ಮಪತ್ನಿ ಸುರಕ್ಷಾ ಅಲ್ಲದೇ ಇಡೀ ಕುಟುಂಬ ಹಾಜರಿದ್ದು ವೃಕ್ಷಾರೋಹಣ ಹೆಸರಿನಲ್ಲಿ ಗೋಶಾಲೆಯಲ್ಲಿ ನೂರಕ್ಕೂ ಹೆಚ್ಚು ಸಸಿಗಳನ್ನು ನೆಡುವುದರೊಂದಿಗೆ ಗೋಪೂಜೆಯನ್ನೂ ಹಮ್ಮಿಕೊಳ್ಳಲಾಗಿತ್ತು.
ಬರ್ಲಿನ್-ಲಾಸ್ ಎಂಜಲೀಸ್‌ಗೆ ಪ್ರಿಯಾಂಕಾ ಚೋಪ್ರಾ ಒಂದೇ ದಿನದಲ್ಲಿ ಹೋಗಿ ಬಂದಿದ್ದು ಹೇಗೆ?
ಈ ಕಾರ್ಯವನ್ನೂದ್ದೇಶಿಸಿ ಮಾತನಾಡಿದ ಮಹೇಂದ್ರ ಮನ್ನೋತ್ 'ನಮ್ಮ ತಂದೆತಾಯಿಯ ಋಣವನ್ನು ನಾವುಗಳು ತೀರಿಸಲು ಅಸಾಧ್ಯ. ಆದರೆ ಜೀವನಪೂರ್ತಿ ಪಂಚಾಮೃತವನ್ನು ನೀಡುವ ಗೋಮಾತೆಯ ಋಣವನ್ನು ಖಂಡಿತಾ ತೀರಿಸಬಹುದು. ಅಲ್ಲದೇ ಗೋವು ಎಂಬುದು ನಮ್ಮ ಸನಾತನ ಪರಂಪರೆಯ ದೈವೀಮೂರ್ತಿ ಮಾತ್ರವಲ್ಲ ಒಂದು ರೀತಿಯ ಪಾಪನಾಶಿನಿ.
ಯಾಕಂದ್ರು ಕಿಚ್ಚ ಸುದೀಪ್: ನಾವು ರಿಯಾಕ್ಟ್ ಮಾಡೋಕೆ ಹೋದ್ರೆ ಅದು ದೀಪಕ್ಕೆ ಎಣ್ಣೆ ಹಾಕಿದ ಹಾಗೆ!
ಅಲ್ಲದೇ ಭಾರತೀಯ ಕೃಷಿ ವ್ಯವಸ್ಥೆಯ ಮಹಾಪಾತ್ರ ಮತ್ತು ಅನ್ನದಾತನ ಜೀವಬಂಧು. ಅಂತಹ ಗೋವನ್ನು ಉಳಿಸಿದರೆ ಬರಿಯ ಗ್ರಾಮ ಮಾತ್ರವಲ್ಲ ಇಡೀ ದೇಶ ಸಂವೃದ್ಧಿ ಸಂಪದ್ಭರಿತ ಭೂಮಿಯಾಗುತ್ತದೆ. ಈ ನಂಬಿಕೆಯನ್ನು ಪ್ರತಿಯೊಬ್ಬ ಭಾರತೀಯನೂ ಅರ್ಥೈಸಿಕೊಳ್ಳಬೇಕಿದೆ' ಎಂದರು. ಅಂದಹಾಗೆ, ನಟ, ನಿರ್ಮಾಪಕರಾಗಿರುವ ಮಹೇಂದ್ರ ಮನ್ನೋತ್ ಅವರು ಸಪ್ಲಿಮೆಂಟರಿ, ಅರಿವು, ಕಿಲಾಡಿಗಳು ಮುಂತಾದ ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದಾರೆ.
ಆನ್‌ಲೈನ್ ರೇಪ್, ಎಲ್ಲಿಂದಲೋ ಮಾಡುವ ಮಾನಸಿಕ ಹಿಂಸೆ ಅಂದ್ರೇನೇ ಅಶ್ಲೀಲ ಮೆಸೇಜ್; ನಟಿ ಚಿತ್ರಾಲ್!