
ಸದ್ಯ ಅಮೃತಧಾರೆಯಲ್ಲಿ ಭೂಮಿಕಾಳ ಇನ್ನೊಂದು ಮಗು ಏನಾಯಿತು ಎಂದು ತಿಳಿಯಬೇಕಿದೆ. ತನಗೆ ಅವಳಿ ಮಕ್ಕಳು ಹುಟ್ಟಿರುವ ವಿಷ್ಯ ಭೂಮಿಕಾಗೆ ಗೊತ್ತಿಲ್ಲ. ಇದನ್ನು ಆಕೆಗೆ ಹೇಗೆ ಹೇಳುವುದು ಎಂದು ತಿಳಿಯದೇ ಗೌತಮ್ ನೋವಿನಲ್ಲಿ ಇದ್ದಾನೆ. ಇರುವ ಒಂದು ಮಗುವನ್ನು ಶಕುಂತಲಾ ಇನ್ನೇನು ಮಾಡಿಬಿಟ್ಟಾಳೋ ಎನ್ನುವ ಭಯದಲ್ಲಿ ವೀಕ್ಷಕರು ಇದ್ದಾರೆ. ಇದೀಗ ಮಗುವಿಗಾಗಿ ಗೌತಮ್ ಸಿಕ್ಕಾಪಟ್ಟೆ ಒಡವೆ ತಂದಿದ್ದಾನೆ. ಹೆಣ್ಣುಮಗುವಿಗೆ ಆದ್ರೆ ಇದೆಲ್ಲಾ ಹಾಕ್ಬೋದಿತ್ತು, ನಿಮಗೆ ಹೆಣ್ಣುಮಗು ಎಂದ್ರೆ ಇಷ್ಟ ಎಂದು ಗೊತ್ತಿದೆ. ಒಂದುವೇಳೆ ಹೆಣ್ಣುಮಗು ಹುಟ್ಟಿದ್ರೆ ಚಿನ್ನದ ಒಡವೆಗಳಿಂದಲೇ ಮುಚ್ಚಿಬಿಡ್ತಿದ್ರೇನೋ ಎಂದು ಭೂಮಿಕಾ ಹೇಳಿದಾಗ, ಗೌತಮ್ಗೆ ಕಳೆದು ಹೋಗಿರುವ ಮಗುವಿನ ನೆನಪಾಗಿ ದುಃಖವಾಗಿದೆ. ಆದರೆ ಅದನ್ನು ಭೂಮಿಕಾ ಎದುರು ತೋರಿಸಿಕೊಳ್ಳಲಾಗದ ಸ್ಥಿತಿ.
ಅದೇ ಇನ್ನೊಂದೆಡೆ, ಮಗುವಿಗೆ ತಂದಿರುವ ಆಭರಣಗಳನ್ನು ಭೂಮಿಕಾ ಮಗುವಿಗೆ ಹಾಕುತ್ತಿದ್ದಾಳೆ. ಮಗು ಹುಟ್ಟಿದಾಗಿನಿಂದಲೂ ಮಗುವಿನ ಬಗ್ಗೆ ನೆಟ್ಟಿಗರು ಸಿಕ್ಕಾಪಟ್ಟೆ ಟ್ರೋಲ್ ಮಾಡುತ್ತಿದ್ದರು. ಇದಕ್ಕೆ ಕಾರಣ, ಬೇರೆ ಬೇರೆ ಮಗು ಕಾಣಿಸಿಕೊಳ್ತಿರೋದು ಹಾಗೂ ಹುಟ್ಟಿದ ಮಗುವು ತುಂಬಾ ದೊಡ್ಡದು ಇರುವುದು. ಇದೀಗ ಕೆಲವು ಸೀರಿಯಲ್ಗಳಿಂದ ಒಂದೇ ಮಗು ಕಾಣಿಸಿಕೊಳ್ತಿದೆ. ಹಲವು ಬಾರಿ ಗೊಂಬೆಯನ್ನು ಭೂಮಿಕಾ ಇಟ್ಟುಕೊಳ್ಳುವುದು ಸ್ಪಷ್ಟವಾಗಿ ತಿಳಿಯುತ್ತದೆ. ಏಕೆಂದರೆ ಪದೇ ಪದೇ ಮಗುವನ್ನು ಶೂಟಿಂಗ್ನಲ್ಲಿ ತರುವುದು ಕಷ್ಟ ಎನ್ನುವ ಕಾರಣಕ್ಕೆ. ಆದರೆ ಕೆಲವೊಮ್ಮೆ ಮಗುವನ್ನು ಅನಿವಾರ್ಯವಾಗಿ ತೋರಿಸಲೇ ಬೇಕಾಗುತ್ತದೆ.
ಇದೀಗ ಭೂಮಿಕಾ ಮತ್ತು ಗೌತಮ್ಗೆ ಬಂದಿರುವ ಪುಟಾಣಿ ಮಗು ಯಾರದ್ದು ಎನ್ನುವ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆ ನಡೆಯುತ್ತಿದೆ. ಅಷ್ಟಕ್ಕೂ ಮಕ್ಕಳು ಎಂದರೆ ಹಾಗೇ ಅಲ್ವಾ? ಎಂಥ ಕಟುಕನ ಮನಸ್ಸನ್ನೂ ಅರೆ ಕ್ಷಣವಾದರೂ ಬದಲಾಯಿಸುವ ತಾಕತ್ತು ಪುಟಾಣಿ ಕಂದಮ್ಮಗಳಿಗೆ ಇರುತ್ತದೆ. ಆ ಮುಗ್ಧತೆ, ಚೆಲುವಿನ ನೋಟ ಎಂಥವರನ್ನೂ ಮರಳು ಮಾಡುವುದು ಇದೆ. ಅದೇ ರೀತಿ ತುಳಸಿಯ ಮಗಳಾಗಿ ಬಂದಿರುವ ಪುಟ್ಟ ಕಂದನ ನೋಟಕ್ಕೆ ಸೀರಿಯಲ್ನಲ್ಲಿ ಮಾತ್ರವಲ್ಲದೇ ವೀಕ್ಷಕರೂ ಫಿದಾ ಆಗಿದ್ದಾರೆ. ಶೂಟಿಂಗ್ ಸೆಟ್ನಲ್ಲಿ ಒಂದು ಮಗುವನ್ನು ಸಮಾಧಾನ ಮಾಡುವುದು ಬಹಳ ಕಷ್ಟಕರವಾದದ್ದೇ. ಅಲ್ಲಿನ ಲೈಟು, ಗಲಾಟೆ, ಅಪರಿಚಿತ ಮುಖ ಎಲ್ಲವನ್ನೂ ನೋಡುವ ಮಗು ಸುಮ್ಮನೇ ಇರುವುದು ತುಂಬಾ ಕಷ್ಟ. ಆದರೆ ಅದನ್ನು ಸಮಾಧಾನಪಡಿಸಿ ಶೂಟಿಂಗ್ ಮಾಡುವುದು ಸವಾಲಿನ ಕೆಲಸವೇ.
ಇದೀಗ ಈ ಮಗು ಯಾರು ಎಂಬ ಬಗ್ಗೆ ನೆಟ್ಟಿಗರು ತಡಕಾಡುತ್ತಿದ್ದಾರೆ. ಸಿಕ್ಕದ್ದೇ ಛಾನ್ಸ್ ಎಂದುಕೊಂಡೋ ಏನೋ, ಒಬ್ಬರು ಇದು ತಮ್ಮ ಪಕ್ಕದ ಮನೆಯ ಮಗು ಎಂದಿದ್ದಾರೆ. ಅದಕ್ಕೆ ಹಲವಾರು ಮಂದಿ ರಿಪ್ಲೈ ಮಾಡಿದ್ದು, ಪ್ರಶ್ನೆಗಳ ಸುರಿಮಳೆಗೈದಿದ್ದಾರೆ. ಆದರೆ ಅದಕ್ಕೆ ಯಾವುದಕ್ಕೂ ಅವರು ಉತ್ತರ ಕೊಟ್ಟಿಲ್ಲ. ಒಟ್ಟಿನಲ್ಲಿ ಹುಟ್ಟಿ ಕೆಲವೇ ದಿನಗಳಲ್ಲಿ ಮಗು ಸೀರಿಯಲ್ನಲ್ಲಿ ಕಾಣಿಸಿಕೊಳ್ಳುವಂತಾಗಿದೆ. ಅದು ತುಂಬಾ ಹಠ ಮಾಡದ ಕಾರಣ ಅಲ್ಲಿಯೇ ಇರುವ ಯಾರದ್ದೋ ಮಗುವಿರಬೇಕು ಎಂದೇ ನೆಟ್ಟಿಗರು ಊಹಿಸುತ್ತಿದ್ದಾರೆ. ಅಷ್ಟಕ್ಕೂ ಮಗು ಯಾರದ್ದೇ ಆಗಿದ್ದರೂ ಅದರ ಅಮ್ಮನನ್ನೂ ಶೂಟಿಂಗ್ ಸೆಟ್ಗೆ ಕರೆದುಕೊಂಡು ಬರಲೇಬೇಕು. ಅವರನ್ನು ಒಮ್ಮೆಯಾದರೂ ತೋರಿಸಿ ಎನ್ನುವುದು ಅಭಿಮಾನಿಗಳ ಕೋರಿಕೆ. ಸೀರಿಯಲ್ನಲ್ಲಿ ಆಕಾಶ್ ಎಂದು ಹೆಸರು ಇಡಲಾಗಿದೆ. ಅದರ ರಿಯಲ್ ಹೆಸರು ಏನು ಎಂದು ನೆಟ್ಟಿಗರು ಪ್ರಶ್ನಿಸುತ್ತಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.