ʼಜೊತೆಯಲಿ ಜೊತೆ ಜೊತೆಯಲಿʼ ಹಾಡಿನ ಮಾಂತ್ರಿಕ, 81ನೇ ವಯಸ್ಸಿನ ಇಳಯರಾಜ ದಿನಚರಿ ನೋಡಿದ್ರೆ ಪಕ್ಕಾ ತಲೆಬಾಗ್ತೀರಾ!

Published : Apr 16, 2025, 10:38 AM ISTUpdated : Apr 16, 2025, 10:46 AM IST
ʼಜೊತೆಯಲಿ ಜೊತೆ ಜೊತೆಯಲಿʼ ಹಾಡಿನ ಮಾಂತ್ರಿಕ, 81ನೇ ವಯಸ್ಸಿನ ಇಳಯರಾಜ ದಿನಚರಿ ನೋಡಿದ್ರೆ ಪಕ್ಕಾ ತಲೆಬಾಗ್ತೀರಾ!

ಸಾರಾಂಶ

81ರ ಇಳಯರಾಜ ಸಂಗೀತ ಲೋಕದ ಮೇರು ಪರ್ವತ. ಬೆಳಿಗ್ಗೆ ೪ಕ್ಕೆ ಏಳುವ ಅವರ ದಿನಚರಿಯಲ್ಲಿ ಸಂಸ್ಕೃತ, ಕರ್ನಾಟಕ ಸಂಗೀತ, ಧ್ಯಾನ, ಸಂಗೀತ ಸಂಯೋಜನೆಗೆ ಪ್ರಮುಖ ಸ್ಥಾನ. ೭೦೦೦ ಹಾಡು, ೧೫೦೦ ಚಿತ್ರಗಳಿಗೆ ಸಂಗೀತ ನೀಡಿರುವ ಅವರು ಲಂಡನ್‌ನ ಟ್ರಿನಿಟಿ ಕಾಲೇಜಿನಿಂದ ಸ್ವರ್ಣ ಪದಕ ಪಡೆದಿದ್ದಾರೆ. ಕೃತಿಚೌರ್ಯದ ವಿರುದ್ಧವೂ ಧ್ವನಿ ಎತ್ತಿದ್ದಾರೆ.

ಸಂಗೀತ ಲೋಕದಲ್ಲಿ ʼಮೇರು ಪರ್ವತʼ ಎಂದೇ ಗುರುತಿಸಿಕೊಂಡಿರೋ ಇಳಯರಾಜ ಅವರು ಯಾವಾಗಲೂ ಬೆರಗು ಮೂಡಿಸುವ ಹಾಡು ನೀಡಿ, ಮನರಂಜಿಸುತ್ತಾರೆ. ಈಗ ಅವರ ದಿನಚರಿ ನೋಡಿದ್ರೆ ನಿಮಗೆ ಇನ್ನಷ್ಟು ಅಚ್ಚರಿ ಆಗೋದಂತೂ ಗ್ಯಾರಂಟಿ. 81 ವರ್ಷದಲ್ಲೂ ಇಷ್ಟು ಆಕ್ಟಿವ್‌ ಆಗಿರೋ ಇಳಯರಾಜ ಅವರು ಎಷ್ಟೋ ಯುವಜನತೆಗೆ ಮಾದರಿ ಆಗಿದ್ದಾರೆ. 

ಸಂಗೀತಮಾಂತ್ರಿಕ ಇಳಯರಾಜ ದಿನಚರಿ ಹೀಗಿದೆ…! 
ಬೆಳಗ್ಗೆ 4 ಗಂಟೆಗೆ ಏಳುವುದು
4-4:30 AM: ಸಂಸ್ಕೃತ ಕ್ಲಾಸ್
4:45-5:30 AM: ಕಾರ್ನಾಟಿಕ್‌ ಮ್ಯೂಸಿಕ್‌ ಕ್ಲಾಸ್
5:45-6:45 AM: ದೇವರಕೋಣೆಯಲ್ಲಿ ಪೂಜೆ ಮಾಡುವುದು
6:45-7AM: ಮನೆಯಿಂದ ಸ್ಟುಡಿಯೋಕ್ಕೆ ಟ್ರಾವೆಲ್‌ ಮಾಡುವುದು
7-7:30 AM: ಇಡೀ ದಿನಕ್ಕೋಸ್ಕರ ನೋಟ್ಸ್‌ ಬರೆಯುವುದು,
7:30-8:30 AM: ಧ್ಯಾನ
8:30-9AM: ತಿಂಡಿ ತಿನ್ನುವುದು
9-1PM: ಸಾಹಿತ್ಯ, ರಿಹರ್ಸಲ್‌ ಮಾಡುವುದು, ರೆಕಾರ್ಡಿಂಗ್‌ ಮಾಡುವುದು 
2-9PM: ಸಾಹಿತ್ಯ ಬರೆಯುವುದು, ರಿಹರ್ಸಲ್‌ ಮಾಡುವುದು ಜೊತೆಯಲ್ಲಿ ರೆಕಾರ್ಡಿಂಗ್‌ ಮಾಡುವುದು 
9:15-10PM: ರಾತ್ರಿ ಊಟ 
10-11:30 PM: ಕಾರ್ನಾಟಿಕ್‌ ಮ್ಯೂಸಿಕ್‌ ಕ್ಲಾಸ್
12-4AM: ‌ನಿದ್ದೆ 

 

ಮಣಿರತ್ನಂ ಜೊತೆಗೆ ಇಳೆಯರಾಜ ಕೆಲಸ ಮಾಡಿದ ಕೊನೆಯ ಸಿನಿಮಾದ ಹಾಡಿನ ರಹಸ್ಯ ರಿವೀಲ್!

ರಾಷ್ಟ್ರ ಪ್ರಶಸ್ತಿ ಪಡೆದ ಸಿನಿಮಾಗಳಿವು! 
ತೆಲುಗು ಭಾಷೆಯ ʼಸಾಗರ ಸಂಗಮಂ', ತಮಿಳಿನ 'ಸಿಂಧು ಭೈರವಿ', ತೆಲುಗು ಭಾಷೆಯ 'ರುದ್ರವೀಣ', ಮಲಯಾಳಂ ಭಾಷೆಯ 'ಪಜಾಸ್ಸಿ ರಾಜʼ ಸಿನಿಮಾ ಸಂಗೀತ ಸಂಯೋಜನೆ ಮಾಡಿದ್ದಕ್ಕೆ ಇಳಯರಾಜ ಅವರಿಗೆ ರಾಷ್ಟ್ರ ಪ್ರಶಸ್ತಿ ಸಿಕ್ಕಿತ್ತು.  

ಕನ್ನಡದಲ್ಲಿಯೂ ಸಂಗೀತ ಸಂಯೋಜನೆ! 
ಕನ್ನಡ ಭಾಷೆಯಲ್ಲಿಯೂ ಕೂಡ ಇವರು ಸಂಗೀತ ಸಂಯೋಜನೆ ಮಾಡಿದ್ದರು. ಅಂಬರೀಶ್‌, ಶಂಕರ್‌ ನಾಗ್‌ ನಟನೆಯ ʼಭರ್ಜರಿ ಬೇಟೆʼ, ರಾಜ್‌ಕುಮಾರ್‌, ಮಂಜುಳಾ ನಟನೆಯ ʼನನ್ನ ನೀ ಗೆಲ್ಲಲಾರೆʼ, ಶಂಕರ್‌ ನಾಗ್‌ ನಟನೆಯ ʼಗೀತಾʼ, ಅನಂತ್‌ ನಾಗ್‌ ಅವರ ʼಜನ್ಮಜನ್ಮದ ಅನುಬಂಧʼ, ಶಿವರಾಜ್‌ಕುಮಾರ್‌, ರಮೇಶ್‌ ಅರವಿಂದ್‌ ನಟನೆಯ ʼನಮ್ಮೂರ ಮಂದಾರ ಹೂವೇʼ, ಅನೀಲ್‌ ಕಪೂರ್‌ ನಟನೆಯ ʼಪಲ್ಲವಿ ಅನುಪಲ್ಲವಿʼ ಸಿನಿಮಾಗಳಿಗೆ ಸಂಗೀತ ಸಂಯೋಜನೆ ಮಾಡಿದ್ದಾರೆ. ಕನ್ನಡದಲ್ಲಿ ಒಟ್ಟೂ 23 ಸಿನಿಮಾಗಳಿಗೆ ಅವರು ಸಂಗೀತ ನೀಡಿದ್ದಾರೆ. 

48 ವರ್ಷಗಳಲ್ಲಿ ಇಷ್ಟೆಲ್ಲ ಹಾಡಿಗೆ ಸಂಗೀತ ಸಂಯೋಜನೆ ಮಾಡಿದ್ದಾರಾ? 
48 ವರ್ಷಗಳಲ್ಲಿ ಇಳಯರಾಜ ಅವರು 7000 ಹಾಡುಗಳ ಸಂಗೀತ ಸಂಯೋಜನೆ ಮಾಡಿದ್ದಾರೆ. ಇನ್ನು 1500 ಸಿನಿಮಾಗಳಿಗೆ ಹಿನ್ನಲೆ ಸಂಗೀತ ನೀಡಿದ್ದಾರೆ. ಅಷ್ಟೇ ಅಲ್ಲದೆ 20000 ಕಾನ್ಸರ್ಟ್‌ಗಳಿಗೆ ಸಂಗೀತ ನೀಡಿದ್ದಾರೆ. Maestro ಎಂದು ಕೂಡ ಇವರನ್ನು ಕರೆಯಲಾಗುವುದು. 

ಇಳಯರಾಜಾ ಲೇಡಿ ವಾಯ್ಸ್‌ನಲ್ಲಿ ಹಾಡಿದ ಸೂಪರ್ ಹಿಟ್ ಹಾಡಿನ ಬಗ್ಗೆ ನಿಮಗೆ ಗೊತ್ತಾ?

ಲಂಡನ್‌ನ ಟ್ರಿನಿಟಿ ಕಾಲೇಜ್ ಆಫ್ ಮ್ಯೂಸಿಕ್‌ನಲ್ಲಿ ಇಳಯರಾಜ ಅವರು ಸ್ವರ್ಣ ಪದಕ ಪಡೆದಿದ್ದಾರೆ. ತಮಿಳು, ಮಲಯಾಳಂ, ಕನ್ನಡ, ತೆಲುಗು, ಹಿಂದಿ, ಮರಾಠಿ ಭಾಷೆಯ ಸಿನಿಮಾಗಳಿಗೆ ಸಂಗೀತ ಸಂಯೋಜನೆ ಮಾಡುವುದಲ್ಲದೆ, ಗೀತರಚನೆಯನ್ನು ಕೂಡ ಮಾಡಿದ್ದಾರೆ. ಜ್ಞಾನದೇಶಿಕನ್ ಎಂಬುದು ಇವರ ಮೊದಲ ಹೆಸರಾಗಿತ್ತು.  ಸಂಗೀತ ನಿರ್ದೇಶಕ ಜಿ ಕೆ ವೆಂಕಟೇಶ್ ಶಿಷ್ಯರಾಗಿದ್ದ ಇಳಯರಾಜ ಇಂದು ದೊಡ್ಡ ಮಟ್ಟದಲ್ಲಿ ಹೆಸರು ಮಾಡಿದ್ದಾರೆ.

ಅಂದಹಾಗೆ ʼಕಣ್ಮಣಿ ಅನ್ಬೋಡುʼ ಹಾಡನ್ನು ಬಳಸಿಕೊಂಡಿದ್ದಕ್ಕೆ ʼಮಂಜುಮ್ಮೆಲ್‌ ಬಾಯ್ಸ್‌ʼ ಸಿನಿಮಾ ತಂಡದ ವಿರುದ್ಧ ಇಳಯರಾಜ ಅವರು ಕಾಪಿರೈಟ್‌ ಹಾಕಿದ್ದರು. ಆ ನಂತರ ಈ ಸಿನಿಮಾ ತಂಡ 60 ಲಕ್ಷ ರೂಪಾಯಿ ನೀಡಿ ಪ್ರಕರಣ ಮುಚ್ಚಿತ್ತು. ಈಗ ಅಜಿತ್‌ ನಟನೆಯ ʼಗುಡ್‌ ಬ್ಯಾಡ್‌ ಅಗ್ಲಿʼ ಸಿನಿಮಾದಲ್ಲಿ ತನ್ನ ತಮಿಳು ಹಾಡು ಬಳಸಿಕೊಂಡಿದ್ದಕ್ಕೆ ಈ ಬಗ್ಗೆ ಇಳಯರಾಜ ಕಿಡಿ ಕಾರಿದ್ದಾರೆ. ಈಗ ಚಿತ್ರತಂಡ ಏನು ಮಾಡಲಿದೆ ಎಂದು ಕಾದು ನೋಡಬೇಕಾಗಿದೆ. 
 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಬೆಳಗೆದ್ದು .. ನಾಚುತ್ತಲೇ ಮಲಗುವ ಕೋಣೆಯ ರಹಸ್ಯ ಬಹಿರಂಗಪಡಿಸಿದ ಪಿಗ್ಗಿ
ಬೇರೆಯದೇ ಸಂದೇಶ ಕೊಡುತ್ತಿರೋ 'ದಿ ಡೆವಿಲ್’ ಟ್ರೈಲರ್; ದರ್ಶನ್ ಫ್ಯಾನ್ಸ್‌ ಮುಖದಲ್ಲಿ ಮೂಡ್ತಿದೆ ಮಂದಹಾಸ!