ಲವ್‌ ಜಿಹಾದ್ ಎಂಬುದು ಸತ್ಯ: ಕೇರಳ ಸ್ಟೋರಿ ವೀಕ್ಷಿಸಿ ಬಿಷಪ್ ಪ್ರಶಂಸೆ

Published : May 11, 2023, 06:54 AM ISTUpdated : May 11, 2023, 06:58 AM IST
ಲವ್‌ ಜಿಹಾದ್ ಎಂಬುದು ಸತ್ಯ:  ಕೇರಳ ಸ್ಟೋರಿ ವೀಕ್ಷಿಸಿ ಬಿಷಪ್ ಪ್ರಶಂಸೆ

ಸಾರಾಂಶ

ಐಸಿಸ್‌ ಉಗ್ರರ ಕಥಾಹಂದರದ ಕೇರಳ ಸ್ಟೋರಿ ಚಿತ್ರಕ್ಕೆ ಸಮಾಜದ ಒಂದು ವರ್ಗದ ವಿರೋಧ ವ್ಯಕ್ತ ಆಗುತ್ತಿದ್ದಂತೆಯೇ ‘ದ ಕೇರಳ ಸ್ಟೋರಿ ಚಿತ್ರವು ನಿರ್ದೇಶಕ ಮತ್ತು ಚಿತ್ರಕಥೆಗಾರರ ಕಲಾತ್ಮಕ ಚಿತ್ರವಾಗಿದೆ’ ಎಂದು ಕೇರಳ ಕ್ಯಾಥೊಲಿಕ್‌ ಬಿಷಪ್‌ಗಳ ಪರಿಷತ್ತು (ಕೆಸಿಬಿಸಿ) ಪ್ರಶಂಸಿಸಿದೆ.

ಕೊಚ್ಚಿ: ಐಸಿಸ್‌ ಉಗ್ರರ ಕಥಾಹಂದರದ ಕೇರಳ ಸ್ಟೋರಿ ಚಿತ್ರಕ್ಕೆ ಸಮಾಜದ ಒಂದು ವರ್ಗದ ವಿರೋಧ ವ್ಯಕ್ತ ಆಗುತ್ತಿದ್ದಂತೆಯೇ ‘ದ ಕೇರಳ ಸ್ಟೋರಿ ಚಿತ್ರವು ನಿರ್ದೇಶಕ ಮತ್ತು ಚಿತ್ರಕಥೆಗಾರರ ಕಲಾತ್ಮಕ ಚಿತ್ರವಾಗಿದೆ’ ಎಂದು ಕೇರಳ ಕ್ಯಾಥೊಲಿಕ್‌ ಬಿಷಪ್‌ಗಳ ಪರಿಷತ್ತು (ಕೆಸಿಬಿಸಿ) ಪ್ರಶಂಸಿಸಿದೆ.

ಈ ಕುರಿತು ಮಾತನಾಡಿದ ಕೆಸಿಬಿಸಿ (KCBC) ವಕ್ತಾರ ಫಾದರ್‌ ಜಾಕೋಬ್‌ ಪಾಲಕಪಿಲ್ಲಿ (Jackob palakapilli), ‘ಚಿತ್ರವು ಇಸ್ಲಾಮಿಕ್‌ ಸ್ಟೇಟ್‌ ನಡೆಸಿದ ದೌರ್ಜನ್ಯವನ್ನು ಬಹಿರಂಗಪಡಿಸುತ್ತದೆ. ಇದನ್ನು ಕೋಮುವಾದದ ಮಾದರಿಯಲ್ಲಿ ಮೌಲ್ಯಮಾಪನ ಮಾಡಲು ಸಾಧ್ಯವಿಲ್ಲ. ಮಹಿಳೆಯರನ್ನು ಪ್ರೀತಿಯ ಜಾಲದಲ್ಲಿ ಬೀಳಿಸಿ ಅವರನ್ನು ಐಸಿಸ್‌ಗೆ ಸೇರಿಸಿದ ಬಗ್ಗೆ ಬಹಳ ನಿದರ್ಶನಗಳಿವೆ. ಚಿತ್ರ ಅದನ್ನು ತೋರಿಸಿದೆ. ಆದರೆ ಇದರಿಂದ ಅನೇಕರಿಗೆ ಅಸಮಾಧಾನವಾಗಿದೆ. ಐಸಿಸ್‌ಅನ್ನು ಮುಸ್ಲಿಮರು ಅಥವಾ ಇಸ್ಲಾಂ ಎಂದು ಯಾರೂ ಹೇಳುತ್ತಿಲ್ಲ. ಲವ್‌ ಜಿಹಾದ್‌ ಎಂಬುದು ಸತ್ಯ. ಬಲವಂತದ ಮತಾಂತರ ಅಥವಾ ಪ್ರೀತಿ ಹೆಸರಿನಲ್ಲಿ ಮತಾಂತರ ಮಾಡುವುದು ಸ್ವೀಕಾರಾರ್ಹವಲ್ಲ’ ಎಂದಿದ್ದಾರೆ.

The Kerala story: ನಾಳೆ 37 ವಿದೇಶಗಳಲ್ಲಿ ‘ಕೇರಳ ಸ್ಟೋರಿ’ ಬಿಡುಗಡೆ

ದಿ ಕೇರಳ ಸ್ಟೋರಿ' ಸಕ್ಸಸ್ ಬಳಿಕ ನಾಯಕಿ ಅದಾ ಶರ್ಮಾ ರಿಯಾಕ್ಷನ್

ವಿವಾದಗಳ ನಡುವೆಯೂ ದಿ ಕೇರಳ ಸ್ಟೋರಿ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಉತ್ತಮ ಕಲೆಕ್ಷನ್ ಮಾಡಿದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ತೆರೆಗೆ ಬಂದಿರುವ ದಿ ಕೇರಳ ಸ್ಟೋರಿ ಸಿನಿಮಾವನ್ನು ಕೆಲವರು ರಾಜ್ಯಗಳಲ್ಲಿ ಬ್ಯಾನ್ ಮಾಡಲಾಗಿದೆ. ಆದರೂ ಉತ್ತಮ ಕಮಾಯಿ ಮಾಡಿದೆ. ಕರ್ನಾಟಕದಲ್ಲೂ ಅನೇಕ ಚಿತ್ರಮಂದಿರಗಳಲ್ಲಿ ಕೇರಳ ಸ್ಟೋರಿ ಪ್ರದರ್ಶನ ಕಾಣುತ್ತಿದೆ. ಒಂದಿಷ್ಟು ವಿರೋಧ, ಟೀಕೆಯ ನಡುವೆಯೂ ಅನೇಕರು ಕೇರಳ ಸ್ಟೋರಿ ಸಿನಿಮಾ ನೋಡಿ ಮೆಚ್ಚಿಕೊಂಡಿದ್ದಾರೆ. ಇನ್ನು ಅನೇಕರು ದಿ ಕೇರಳ ಸ್ಟೋರಿ ಸಿನಿಮಾವನ್ನು ಕಾಶ್ಮೀರ್ ಫೈಲ್ಸ್‌ಗೆ ಹೋಲಿಸುತ್ತಿದ್ದಾರೆ.

ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆದಿರುವ ದಿ ಕೇರಳ ಸ್ಟೋರಿ ಬಗ್ಗೆ ನಟಿ ಅದಾ ಶರ್ಮಾ ಮಾತನಾಡಿದ್ದಾರೆ. 'ಚಿತ್ರ ಸೃಷ್ಟಿಸಿದ ಜಾಗೃತಿಯು ಅನೇಕ ಹುಡುಗಿಯರ ಜೀವಗಳನ್ನು ಉಳಿಸುತ್ತದೆ. ನಮಗೆ ದೊರೆತ ಬೆಂಬಲ ದೊಡ್ಡದು. ನಾನು ಕೃತಜ್ಞನಾಗಿದ್ದೇವೆ' ಎಂದು ಹೇಳಿದ್ದಾರೆ. 

ಕೇರಳ ಸ್ಟೋರಿ ವಿಶೇಷ  ಸ್ಕ್ರೀನಿಂಗ್‌ಗೆ ತಮಿಳುನಾಡಲ್ಲಿ ತಡೆ, ಸೆನ್ಸಾರ್‌ ಬೋರ್ಡ್‌ ಕಿಡಿ!
ರಾಜ್ಯಾದ್ಯಂತ ಜನರ ಪ್ರತಿಭಟನೆಗಳ ಕಾರಣಕ್ಕಾಗಿ ತಮಿಳುನಾಡಿನಲ್ಲಿ ದಿ ಕೇರಳ ಸ್ಟೋರಿ ಚಿತ್ರವನ್ನು ಬ್ಯಾನ್‌ ಮಾಡಲಾಗಿದೆ. ಈ ನಡುವೆ  ರಾಜ್ಯದ ಬಿಜೆಪಿಯ ಹಿರಿಯ ನಾಯಕರನ್ನು ಆಹ್ವಾನಿಸಿದ್ದ ಚಿತ್ರದ ವಿಶೇಷ ಪ್ರದರ್ಶನವನ್ನು ಚೆನ್ನೈ ಪೊಲೀಸರು ಬುಧವಾರ ತಡೆದಿದ್ದಾರೆ. ಮೇ 10 ರಂದು ಬೆಳಿಗ್ಗೆ, ಚೆನ್ನೈನ ಜನಪ್ರಿಯ ಪ್ರಿವ್ಯೂ ಥಿಯೇಟರ್‌ನಲ್ಲಿ ಚಿತ್ರದ ವಿಶೇಷ ಪ್ರದರ್ಶನವನ್ನು ಯೋಜಿಸಲಾಗಿತ್ತು ಮತ್ತು ಪ್ರದರ್ಶನಕ್ಕೆ ಬಿಜೆಪಿಯ ಹಿರಿಯ ರಾಜಕಾರಣಿಗಳು ಸೇರಿದಂತೆ ಹಲವಾರು ಜನರನ್ನು ಆಹ್ವಾನಿಸಲಾಯಿತು. ವಿಶೇಷ ಪ್ರದರ್ಶನವನ್ನು ವೀಕ್ಷಿಸಲು ಸುಮಾರು 10-12 ಜನರು ಬಂದಿದ್ದರು ಎಂದು ವರದಿಯಾಗಿದೆ. ಆದರೆ, ಚೆನ್ನೈ ಪೊಲೀಸರು ಮಧ್ಯಪ್ರವೇಶಿಸಿ ಕಾನೂನು ಮತ್ತು ಸುವ್ಯವಸ್ಥೆಯ ಸಮಸ್ಯೆಗಳನ್ನು ಉಲ್ಲೇಖಿಸಿ ಪ್ರದರ್ಶನವನ್ನು ನಿಲ್ಲಿಸಿದರು ಎಂದು ಮೂಲಗಳು ತಿಳಿಸಿವೆ. ತಮಿಳುನಾಡು ಬಿಜೆಪಿ ಉಪಾಧ್ಯಕ್ಷ ನಾರಾಯಣನ್ ತಿರುಪತಿ ಅವರೊಂದಿಗೆ ಮಾತನಾಡಿದಾಗ, ವಿಶೇಷ ಪ್ರದರ್ಶನವನ್ನು ಬಿಜೆಪಿ ಆಯೋಜಿಸಿಲ್ಲ ಎಂದು ಸ್ಪಷ್ಟಪಡಿಸಿದರು. ಮೇ 5 ರಂದು ಕೇರಳ ಸ್ಟೋರಿ ಬಿಡುಗಡೆಯಾದಾಗ ತಮಿಳುನಾಡಿನಾದ್ಯಂತ ಹಲವಾರು ಹಿಂಸಾಚಾರದ ಘಟನೆಗಳು ವರದಿಯಾಗಿದ್ದವು.

The Kerala Story: ಮತಾಂತರದ ರೋಲ್​ ಒಪ್ಪಿದ್ದೇಕೆ ಎಂಬ ಗುಟ್ಟು ಬಿಚ್ಚಿಟ್ಟ 'ಆಸಿಫಾ'

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Dhurandhar Review: ಹಿಂದೂಗಳಿಗೆ ಪ್ರಥಮ ಶತ್ರು ಹಿಂದೂ-ಮೊಬೈಲ್‌ ಕೂಡ ನೋಡದಂತೆ ಮಾಡೋ Ranveer Singh ಸಿನಿಮಾ!
BBK 12: ಕನ್ನಡ ಬಿಗ್‌ಬಾಸ್ ವಿರುದ್ಧ ಲಕ್ಷ್ಮೀ ಹೆಬ್ಬಾಳ್ಕರ್‌ಗೆ ದೂರು ನೀಡಿದ ವೀಕ್ಷಕರು