ಬೆಂಗಳೂರಿನಲ್ಲಿ ಸ್ಯಾಂಡಲ್ ವುಡ್ ನಟ ಕೋಮಲ್ ಮೇಲೆ ಹಲ್ಲೆ| ನಟ ಕೋಮಲ್ ಗೆ ಹಿಗ್ಗಾಮುಗ್ಗ ಥಳಿಸಿದ ದುಷ್ಕರ್ಮಿಗಳು| ಮಲ್ಲೇಶ್ವರಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲು
ಬೆಂಗಳೂರು, [ಆ.13]: ಸ್ಯಾಂಡಲ್ ವುಡ್ ನಟ ಕೋಮಲ್ ಕುಮಾರ್ ಮೇಲೆ ಹಲ್ಲೆ ನಡೆದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಮಾಹಿತಿ ಪ್ರಕಾರ, ಇಂದು [ಮಂಗಳವಾರ] ಶ್ರೀರಾಮಪುರ ರೈಲ್ವೆ ಅಂಡರ್ ಪಾಸ್ ನಲ್ಲಿ ಸೈಡ್ ಕೊಡುವ ವಿಚಾರದಲ್ಲಿ ಕೋಮಲ್ ಹಾಗೂ ಅಪರಿಚಿತರ ನಡುವೆ ಮಾತಿನ ಚಕಮಕಿ ನಡೆದಿದೆ.
ಕೋಮಲ್ ಮೇಲೆ ಹಲ್ಲೆ, ಜಗ್ಗೇಶ್ ಹೇಳಿದ ಇನ್ ’ಸೈಡ್’ ವಿಚಾರ
ಮಾತಿನ ಚಕಮಕಿ ಅತಿರೇಕಕ್ಕೆ ಹೋಗಿ ಕೈ ಕೈ ಮಿಲಾಯಿಸುವ ಹಂತಕ್ಕೆ ಹೋಗಿದ್ದು, ಕೋಮಲ್ ಬಾಯಲ್ಲಿ ರಕ್ತ ಬರುವಾಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ ಎಂದು ತಿಳಿದುಬಂದಿದೆ.
ಕರ್ನಾಟಕ ಪ್ರವಾಹದ ಹೆಚ್ಚಿನ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಸದ್ಯ ಕೋಮಲ್ ಮಲ್ಲೇಶ್ವರಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಹಲ್ಲೆ ಮಾಡಿರುವ ವ್ಯಕ್ತಿಯನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.
ಇದೇ ಸುದ್ದಿಯನ್ನು ಇಂಗ್ಲಿಷ್ ನಲ್ಲಿ ಓದಲು ಕ್ಲಿಕ್ ಮಾಡಿ