ಕರ್ನಾಟಕ ಪ್ರವಾಹಕ್ಕೆ ಉದಾರ ದೇಣಿಗೆ ಕೊಟ್ಟ ತೆಲುಗು ಸ್ಟಾರ್

Published : Aug 13, 2019, 06:07 PM ISTUpdated : Aug 13, 2019, 06:10 PM IST
ಕರ್ನಾಟಕ ಪ್ರವಾಹಕ್ಕೆ ಉದಾರ ದೇಣಿಗೆ ಕೊಟ್ಟ ತೆಲುಗು ಸ್ಟಾರ್

ಸಾರಾಂಶ

ಉತ್ತರ ಕರ್ನಾಟಕ ಪ್ರವಾಹಕ್ಕೆ ಸಂಘ ಸಂಸ್ಥೆಗಳು, ಮಾಧ್ಯಮಗಳು, ಯುವಕರ ತಂಡ ಆದಿಯಾಗಿ ಎಲ್ಲರೂ ನೆರವು ನೀಡುತ್ತಿದ್ದಾರೆ. ಈಗ ಉತ್ತರ ಕರ್ನಾಟಕ ಸ್ಥಿತಿ ಕಂಡು ತೆಲುಗು ನಟರೊಬ್ಬರು ಮರುಗಿದ್ದಾರೆ.

ಬೆಂಗಳೂರು[ಆ. 13] ತೆಲುಗು ಸ್ಟಾರ್ ಸಂಪೂರ್ಣೇಶ್ ಬಾಬು ಉತ್ತರ ಕರ್ನಾಟಕ ನೆರೆ ಸಂತ್ರಸ್ತರ ನೋವಿಗೆ ಸ್ಪಂದಿಸಿದ್ದಾರೆ.

ಉತ್ತರ ಕರ್ನಾಟಕದ ಪ್ರವಾಹದ ಸುದ್ಧಿ  ನನ್ನ ಮನ ಕಲಕಿಬಿಟ್ಟಿತು, ಕನ್ನಡದ ಜನ ತೆಲುಗು ಚಿತ್ರಗಳನ್ನು ದಶಕಗಳ ಕಾಲದಿಂದ ಆದರಿಸುತ್ತಾ ಬಂದಿರುವವರು  ಉತ್ತರ ಕರ್ನಾಟಕ ಜನ.  ನನ್ನನ್ನು ಸಹ 'ಹೃದಯಕಾಲೇಯಂ' ಚಿತ್ರದಿಂದ ಬಹಳ ಮೆಚ್ಚಿದ್ದೀರಿ, ಅದಕ್ಕೆ ನಾನು ಚಿರ ಋಣಿ, ಇತ್ತೀಚಿನ ಪ್ರವಾಹದ ಫೋಟೋಗಳನ್ನ ಮತ್ತು ಆ ಪ್ರಾಂತ್ಯದ ಜನರ ನೋವನ್ನು ನೋಡಿ ನನಗೆ ತುಂಬಾ ದುಃಖ ಉಂಟಾಗಿದೆ ಎಂದು ನಾಯಕ ನಟ ನೊಂದು ನುಡಿದಿದ್ದಾರೆ.

ಕರ್ನಾಟಕದ ಪ್ರವಾಹ ಎಲ್ಲಿಗೆ ಬಂದು ನಿಂತಿದೆ?

ಈಗ ತೆಲುಗು ಚಿತ್ರ್ಯೋದ್ಯಮ ಕನ್ನಡದ ಪ್ರಜೆಗಳಿಗೆ ಸಹಾಯ ಮಾಡುವ ಸಮಯ ಬಂದಿದೆ, ನನ್ನ ಅಳಿಲು ಸೇವೆಯಾಗಿ 2,00,000 ರೂ.  ನೆರವನ್ನು ಮುಖ್ಯಮಂತ್ರಿ ಪರಿಹಾರ ನಿಧಿಗೆ ನೀಡುತ್ತಿದ್ದೇನೆ. ಜೈ ಹಿಂದ್ ಎಂದು ತಮ್ಮ ಫೇಸ್ ಬುಕ್ ಪೇಜ್ ನಲ್ಲಿ ಬರೆದುಕೊಂಡಿದ್ದಾರೆ.

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಬೆಳಗೆದ್ದು .. ನಾಚುತ್ತಲೇ ಮಲಗುವ ಕೋಣೆಯ ರಹಸ್ಯ ಬಹಿರಂಗಪಡಿಸಿದ ಪಿಗ್ಗಿ
ಬೇರೆಯದೇ ಸಂದೇಶ ಕೊಡುತ್ತಿರೋ 'ದಿ ಡೆವಿಲ್’ ಟ್ರೈಲರ್; ದರ್ಶನ್ ಫ್ಯಾನ್ಸ್‌ ಮುಖದಲ್ಲಿ ಮೂಡ್ತಿದೆ ಮಂದಹಾಸ!