‘ಮಿಷನ್ ಮಂಗಲ್’ಗೂ  ತಟ್ಟಿದ ವಿವಾದ, ಕಾರಣ ತಾಪ್ಸಿ ಆ ದೃಶ್ಯ!

Published : Aug 12, 2019, 07:45 PM ISTUpdated : Aug 12, 2019, 07:58 PM IST
‘ಮಿಷನ್ ಮಂಗಲ್’ಗೂ  ತಟ್ಟಿದ ವಿವಾದ,  ಕಾರಣ ತಾಪ್ಸಿ ಆ ದೃಶ್ಯ!

ಸಾರಾಂಶ

ಬಾಲಿವುಡ್ ಚಿತ್ರಗಳು ಕೆಲವೊಮ್ಮೆ ಕಾರಣವಿಲ್ಲದ ಕಾರಣಕ್ಕೆ ಸುದ್ದಿ ಮಾಡಿ ಬಿಡುತ್ತವೆ. ತಾಪ್ಸಿ ಪನ್ನು ಅಭಿನಯದ ಬಹುನಿರೀಕ್ಷಿತ  ‘ಮಿಷನ್ ಮಂಗಲ್’ಗೆ ಬೇಡದ ವಿವಾದ ಸಿಕ್ಕಿಕೊಳ್ಳಲು ಅದೊಂದು ದೃಶ್ಯ ಕಾರಣವಾಗಿದೆ.

ಮುಂಬೈ[ಆ. 12) ಅಗಸ್ಟ್ 15ರಂದು ಬಿಡುಗಡೆಗೆ ಸಿದ್ಧವಾಗಿರುವ ‘ಮಿಷನ್ ಮಂಗಲ್‌’ಗೆ ಈಗ ವಿವಾದವೊಂದು ಸುತ್ತಿಕೊಂಡಿದೆ. ಹಾಸ್ಯ ಸನ್ನಿವೇಶವೊಂದು ವಿವಾದಕ್ಕೆ ಕಾರಣವಾಗಿದೆ.

ಬಹುಭಾಷಾ ನಟಿ ತಾಪ್ಸಿ ಪನ್ನು ಮುಖ್ಯ ಭೂಮಿಕೆಯಲ್ಲಿರುವ ಚಿತ್ರದ ಟ್ರೇಲರ್ ವಿವಾದದ ಕಿಡಿಯ ಮೂಲ.  ಚಿತ್ರದ ಟ್ರೇಲರ್‌ ನಲ್ಲಿ ಡ್ರೈವಿಂಗ್ ಕಲಿಯುವ ತಾಪ್ಸಿ ಪನ್ನು ಪಕ್ಕದ ಸೀಟಿನಲ್ಲಿರುವ ಡ್ರೈವಿಂಗ್ ಟೀಚರ್‌ ನ ಪ್ಯಾಂಟ್ ಗೆ ಕೈಹಾಕುತ್ತಾರೆ.  ಕಾರಿನ ಗೇರ್ ಬದಲಾಗಿ ಕೈ ತಪ್ಪಿನಿಂದ ಪ್ಯಾಂಟ್ ಮಧ್ಯಕ್ಕೆ ಕೈ ಹಾಕುತ್ತಾಳೆ ಎಂಬುವಂತೆ ನಿರೂಪಣೆ ಮಾಡಲಾಗಿದೆ. ಕೆಲವೆ ಕ್ಷಣದಲ್ಲಿ ಡ್ರೈವಿಂಗ್ ಮೇಷ್ಟ್ರು ಕಸಿವಿಸಿಗೊಂಡು ಚೀರುತ್ತಾರೆ.

ನಿನ್ನ ಬಾಡಿ ಪಾರ್ಟ್ಸ್ ನಂಗಿಷ್ಟ ಎಂದವನಿಗೆ ತಾಪ್ಸಿ ಉತ್ತರವಿದು...!

ಇದನ್ನು ಕಂಡ ನೆಟ್ಟಿಗರು ಕೆಂಡಾಮಂಡಲವಾಗಿದ್ದಾರೆ. ಇದೇ ರೀತಿಯಲ್ಲಿ ಮಹಿಳೆ ಚಿತ್ರಣ ಮಾಡದ್ದರೆ  ನೀವೇನು ಸುಮ್ಮನೆ ಕೂರುತ್ತಿದ್ರಾ? ಹಾಸ್ಯ ಎಂದು ಪುರುಷನ ಹಕ್ಕು ಹರಣ ಮಾಡುತ್ತಿದ್ದೀರಾ? ಎಂದೆಲ್ಲ ಸವಾಲು ಎಸೆದಿದ್ದಾರೆ.

ಚಿತ್ರದ ವಿಷಯ ಏನು?
ಮಂಗಳನ ಅಂಗಳದಲ್ಲಿ ಮೊದಲ ಬಾರಿ ಉಪಗ್ರಹ ಇಳಿಸಿದ ಭಾರತದ ಸಾಧನೆಯನ್ನು ಪ್ರತಿಬಿಂಬಿಸುವ ಚಿತ್ರ ಇದಾಗಿದ್ದು, ‘ಮಿಶನ್ ಮಂಗಲ್’ ಎಂದು ಹೆಸರಿಡಲಾಗಿದೆ. ಇದು ಅ. 15ರ ಸ್ವಾತಂತ್ರ್ಯ ದಿನಾಚರಣೆಯಂದು ದೇಶಾದ್ಯಂತ ತೆರೆ ಕಾಣಲಿದೆ. ಅಕ್ಷಯ್ ಕುಮಾರ್ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ತಾಪ್ಸಿ ಪನ್ನು, ವಿದ್ಯಾ ಬಾಲನ್, ಕೀರ್ತಿ ಕುಲ್ಹಾರಿ, ಸೋನಾಕ್ಷಿ ಸಿನ್ಹಾ ಸೇರಿದಂತೆ ದೊಡ್ಡ ತಾರಾಬಳಗ ಇದೆ.


 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಬೇರೆಯದೇ ಸಂದೇಶ ಕೊಡುತ್ತಿರೋ 'ದಿ ಡೆವಿಲ್’ ಟ್ರೈಲರ್; ದರ್ಶನ್ ಫ್ಯಾನ್ಸ್‌ ಮುಖದಲ್ಲಿ ಮೂಡ್ತಿದೆ ಮಂದಹಾಸ!
ಈಡೇರಿದ ಪ್ರಾರ್ಥನೆ; ಪತಿಯೊಂದಿಗೆ ಮಂತ್ರಾಲಯಕ್ಕೆ ಭೇಟಿ ನೀಡಿದ ಗಾಯಕಿ ಸುಹಾನಾ ಸೈಯದ್