ಪತ್ನಿ ವಿರುದ್ಧದ ಗೆಲುವನ್ನು ಸಂಭ್ರಮಿಸಲು 48 ಲಕ್ಷ ಖರ್ಚು ಮಾಡಿದ ಜಾನಿ ಡೆಪ್‌

By Anusha Kb  |  First Published Jun 7, 2022, 3:10 PM IST

ಮಾಜಿ ಪತ್ನಿ ಮಾಡಿದ್ದ ಲೈಂಗಿಕ ದೌರ್ಜನ್ಯದ ಆರೋಪದ ಕೇಸ್‌ನಲ್ಲಿ ಗೆದ್ದು ಬಂದ ಪೈರೇಟ್ಸ್‌ ಆಫ್‌ ದ ಕೆರೆಬಿಯನ್‌ ಸಿನಿಮಾ ಖ್ಯಾತಿಯ ನಟ ಜಾನಿ ಡೆಪ್‌ ಈ ಗೆಲುವನ್ನು ಸಂಭ್ರಮಿಸಲು ಇಂಗ್ಲೆಂಡ್‌ನ ಭಾರತೀಯ ರೆಸ್ಟೋರೆಂಟ್‌ ಒಂದರಲ್ಲಿ ಬರೋಬರಿ 48 ಲಕ್ಷ ರೂ. ಖರ್ಚು ಮಾಡಿದ್ದಾರೆ ಎಂದು ತಿಳಿದು ಬಂದಿದೆ. 


ಮಾಜಿ ಪತ್ನಿ ಮಾಡಿದ್ದ ಲೈಂಗಿಕ ದೌರ್ಜನ್ಯದ ಆರೋಪದ ಕೇಸ್‌ನಲ್ಲಿ ಗೆದ್ದು ಬಂದ ಪೈರೇಟ್ಸ್‌ ಆಫ್‌ ದ ಕೆರೆಬಿಯನ್‌ ಸಿನಿಮಾ ಖ್ಯಾತಿಯ ನಟ ಜಾನಿ ಡೆಪ್‌ ಈ ಗೆಲುವನ್ನು ಸಂಭ್ರಮಿಸಲು ಇಂಗ್ಲೆಂಡ್‌ನ ಭಾರತೀಯ ರೆಸ್ಟೋರೆಂಟ್‌ ಒಂದರಲ್ಲಿ ಬರೋಬರಿ 48 ಲಕ್ಷ ರೂ. ಖರ್ಚು ಮಾಡಿದ್ದಾರೆ ಎಂದು ತಿಳಿದು ಬಂದಿದೆ. ತನ್ನ ಮಾಜಿ ಪತ್ನಿ ಅಂಬರ್ ಹರ್ಡ್ ವಿರುದ್ಧ ಅತೀ ಹೆಚ್ಚು ಪ್ರಚಾರಕ್ಕೀಡಾಗಿದ್ದ ಮಾನನಷ್ಟ ಮೊಕದ್ದಮೆಯನ್ನು ಗೆದ್ದ ನಂತರ, ಹಾಲಿವುಡ್ ನಟ ಜಾನಿ ಡೆಪ್ ತನ್ನ ಸ್ನೇಹಿತರೊಂದಿಗೆ ಜಾಲಿ ಟೈಮ್‌ ಕಳೆಯುತ್ತಿದ್ದಾರೆ. ಮಾಜಿ ಪತ್ನಿ ವಿರುದ್ದ ಗೆದ್ದು ಖುಷಿಯಲ್ಲಿರುವ ಜಾನಿ ಡೆಪ್‌ ತನ್ನ ಸ್ನೇಹಿತರಿಗೆ ಪಾರ್ಟಿ ಆಯೋಜಿಸಿದ್ದರು. ಬರ್ಮಿಂಗ್ಹ್ಯಾಮ್‌ನಲ್ಲಿರುವ ಭಾರತೀಯ ರೆಸ್ಟೋರೆಂಟ್‌ ಒಂದಕ್ಕೆ ತನ್ನ ಇಪ್ಪತ್ತು ಸ್ನೇಹಿತರೊಂದಿಗೆ ತೆರಳಿದ ಜಾನಿ ಡೆಪ್‌ ಅಲ್ಲಿ ಅವರಿಗೆ ಅದ್ದೂರಿ ಔತಣಕೂಟ ನೀಡಲು 62,000 ಡಾಲರ್ ಎಂದರೆ ಸುಮಾರು 48.16 ಲಕ್ಷ ರೂ. ಖರ್ಚು ಮಾಡಿದ್ದಾರೆ ಎಂದು ಡೈಲಿ ಮೇಲ್ ವರದಿ ಮಾಡಿದೆ. 

ಜಾನಿ ಡೆಪ್ (Johnny Depp) ಭಾನುವಾರ (ಜೂನ್ 5) ರಂದು ಗಿಟಾರ್ ವಾದಕ ಜೆಫ್ ಬೆಕ್ (Jeff Beck) ಸೇರಿದಂತೆ ತನ್ನ 20 ಸ್ನೇಹಿತರೊಂದಿಗೆ ವಾರಣಾಸಿ (Varanasi) ಹೆಸರಿನ ಭಾರತೀಯ ರೆಸ್ಟೋರೆಂಟ್‌ಗೆ (Indian restaurant) ಭೇಟಿ ನೀಡಿದ್ದರು. ವಾರಣಾಸಿಯ ಆಪರೇಷನ್ ಡೈರೆಕ್ಟರ್ ಮೊಹಮ್ಮದ್ ಹುಸೇನ್ (Mohammed Hussain) ಪ್ರಕಾರ, ರೆಸ್ಟೋರೆಂಟ್‌ಗೆ ಡೆಪ್ ಅವರ ಭೇಟಿಯ ಬಗ್ಗೆ ಸಣ್ಣ ಸೂಚನೆ ನೀಡಲಾಗಿತ್ತು. 

Tap to resize

Latest Videos

ಜಾನಿ ಡೆಪ್‌ ವಿರುದ್ಧ ಮಾಜಿ ಪತ್ನಿ ಲೈಂಗಿಕ ಕಿರುಕುಳದ ಆರೋಪ!

ನಾನು ಆಘಾತಕ್ಕೊಳಗಾಗಿದ್ದೆ ಮತ್ತು ಮೊದಲಿಗೆ, ಇದು ಗಾಳಿ ಸುದ್ದಿಯಾಗಿರಬಹುದು ಎಂದು ನಾನು ಭಾವಿಸಿದೆ ಎಂದು ಮೊಹಮ್ಮದ್‌ ಹುಸೇನ್ ಹೇಳಿದರು. ಆದರೆ ರಾತ್ರಿ 7 ಗಂಟೆ ಸುಮಾರಿಗೆ ಈ ನಟ ತಮ್ಮ ಭದ್ರತಾ ತಂಡದೊಂದಿಗೆ ಬಂದರು ಮತ್ತು ಅವರಿಗಾಗಿ ಇಡೀ ರೆಸ್ಟೋರೆಂಟ್ ಅನ್ನು ಕಾಯ್ದಿರಿಸಲಾಗಿತ್ತು ಎಂದು ಅವರು ಹೇಳಿದರು.

ಡೆಪ್ ಬಗ್ಗೆ ಮಾತನಾಡುತ್ತಾ, ಹುಸೇನ್ ಅವರನ್ನು ಅತ್ಯಂತ ಸುಂದರ ಮತ್ತು 'ಡೌನ್ ಟು ಅರ್ಥ್' ಮನುಷ್ಯ  ಎಂದು ಬಣ್ಣಿಸಿದರು. ಜಾನ್‌ ಡೆಪ್‌ ಔತಣದಲ್ಲಿ  ಸಂಭ್ರಮದಿಂದ ಓಡಾಡುತ್ತಾ ಸಿಬ್ಬಂದಿಯೊಂದಿಗೆ ಮಾತನ್ನಾಡುತ್ತಾ ಅವರ ಕುಟುಂಬ ಸದಸ್ಯರೊಂದಿಗೆ ಚಿತ್ರಗಳನ್ನು ಕ್ಲಿಕ್ಕಿಸುತ್ತಾ ಸಮಯ ಕಳೆದಿದ್ದಾರೆ ಎಂದು ಮೊಹಮ್ಮದ್‌ ಅವರು ಹೇಳಿದರು.

ನೈಟ್ ಗೌನ್ ಹರಿದು, ಗುಪ್ತಾಂಗಕ್ಕೆ ಬಾಟಲಿ ತುರುಕಿದ್ದ; ಜಾನಿ ಡೆಪ್ ವಿರುದ್ಧ ಮಾಜಿ ಪತ್ನಿ ಗಂಭೀರ ಆರೋಪ

ಆ ರಾತ್ರಿ ಊಟದ ಅಂತಿಮ ಬಿಲ್ ಅನ್ನು ರೆಸ್ಟೋರೆಂಟ್ ಬಹಿರಂಗಪಡಿಸುವುದಿಲ್ಲ ಎಂದು ಭರವಸೆ ನೀಡಬೇಕೆಂದು ಅವರು ಕೇಳಿದರು  ಆದಾಗ್ಯೂ, ಬಿಲ್ ಸುಲಭವಾಗಿ ಐದು ಅಂಕಿಗಳನ್ನು ದಾಟಿತ್ತು. ಅದು ಸುಮಾರು $62,000 ಡಾಲರ್‌ ಆಗಿತ್ತು ಎಂದು ಅವರು ಹೇಳಿದರು. 
ವಾರಾಂತ್ಯದ ರಾತ್ರಿಯೊಂದರಲ್ಲಿ ನಾವು ಜಾನಿ ಡೆಪ್ ಅವರ ಭೇಟಿಯಿಂದ ಹೆಚ್ಚು ಹಣವನ್ನು ಗಳಿಸಿದ್ದೇವೆ, ಶನಿವಾರ ನಾವು ಸುಮಾರು 400 ಗ್ರಾಹಕನ್ನು ಹೊಂದಿದ್ದೆವು ಎಂದು ಹುಸೇನ್ ಹೇಳಿದರು. 

ಜಾನಿ ಡೆಪ್ ಮತ್ತು ಅವರ ಸ್ನೇಹಿತರು ಚಿಕನ್ ಟಿಕ್ಕಾ (chicken tikka), ಪನೀರ್ ಟಿಕ್ಕಾ ಮಸಾಲಾ (paneer tikka masala), ಶಿಶ್ ಕಬಾಬ್‌ಗಳು (shish kebabs), ತಂದೂರಿ ಸೀಗಡಿಗಳು (tandoori prawns), ಕುರಿ ಕಡಹಿ(lamb kadahi), ನಾನ್ಸ್ ಮತ್ತು ಅನ್ನವನ್ನು ಒಳಗೊಂಡಿರುವ ಕೆಲವು ಅಧಿಕೃತ ಭಾರತೀಯ ಭಕ್ಷ್ಯಗಳನ್ನು (authentic Indian dishes) ಸೇವಿಸಿ ಖುಷಿ ಪಟ್ಟರು. ಜೊತೆಗೆ ಅವರು ಕೆಲವು ಗುಲಾಬಿ ಹೂವಿನ ಶಾಂಪೇನ್ ಅನ್ನು ಸೇವಿಸಿದರು.

ಜಾನಿ ಡೆಪ್‌ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಮಾಡಿದ್ದ ಮಾಜಿ ಪತ್ನಿ ಅಂಬೆರ್ ಹರ್ಡ್‌ಗೆ ವರ್ಜಿನಿಯಾ ನ್ಯಾಯಾಲಯ ಮಾನನಷ್ಟ ಮಾಡಿದ್ದಕ್ಕೆ ಆತನಿಗೆ $15 ಮಿಲಿಯನ್ ಡಾಲರ್‌ ನಷ್ಟವನ್ನು ನೀಡುವಂತೆ ಆದೇಶಿಸಿತ್ತು. ಇದರಿಂದ ಭಾರಿ ಖುಷಿಯಾದ ಜಾನಿ ಡೆಪ್‌ ಈ ಸಂಭ್ರಮವನ್ನು ಸಖತ್ ಆಗಿ ಆಚರಿಸಿದ್ದಾರೆ. 

ಮಾಜಿ ಪತ್ನಿ ಜತೆಗೆ ಮಾನಹಾನಿ ಪ್ರಕರಣದ ಹೋರಾಟ ನಡೆಸುತ್ತಿದ್ದ ಹಾಲಿವುಡ್‌ನ ಖ್ಯಾತ ನಟ ಜಾನಿ ಡೆಪ್ ಅವರಿಗೆ ಕಾನೂನು ಹೋರಾಟ ಭಾರಿ ಸುದ್ದಿಯಾಗಿತ್ತು. ಪ್ರಕರಣದಲ್ಲಿ ಜಾನಿ ಡೆಪ್ (Johnny Depp) ಮತ್ತು ಅವರ ಮಾಜಿ ಹೆಂಡತಿ ಅಂಬೆರ್ ಹರ್ಡ್ (Amber Heard) ಇಬ್ಬರೂ ಮಾನಹಾನಿ ಪ್ರಕರಣದಲ್ಲಿ ತಪ್ಪಿತಸ್ಥರು ಎಂದು ಅಮೆರಿಕದ ನ್ಯಾಯಾಲಯ ಹೇಳಿತ್ತು. ಆದರೆ ಕೌಟುಂಬಿಕ ಹಿಂಸಾಚಾರ ಆರೋಪದ ಕುರಿತಾದ ತೀವ್ರ ವಾದ ವಿವಾದಗಳ ಬಳಿಕ, ಜಾನಿ ಡೆಪ್ ಅವರ ಪರವಾಗಿ ಕೋರ್ಟ್ ತೀರ್ಪು ನೀಡಿತ್ತು. ಆರು ವಾರಗಳ ಕಾಲ ನಡೆದ ವಿಚಾರಣೆ ಭಾರಿ ಕುತೂಹಲ ಕೆರಳಿಸಿತ್ತು.
 

click me!