ನನ್ನ ಆಪ್ತರು, ಸ್ನೇಹಿತರು ಎಲ್ಲರೂ 'ನೀನು ಎರಡೂ ಕಡೆ ಒಂದೇ ದಿನ ಹೋಗಲು ಸಾಧ್ಯವೇ ಇಲ್ಲ. ಬೇಕಾದರೆ ಒಂದನ್ನು ಮಾಡಬಹುದು, ಅದೇನೆಂದರೆ, ನಿನಗೆ ಯಾವುದು ಇಷ್ಟವೋ ಅದನ್ನು ಆಯ್ಕೆ ಮಾಡಿಕೊಂಡು ಅಲ್ಲಿಗೆ ಹೋಗಬಹುದು' ಎಂದರು.
ನಟಿ ಪ್ರಿಯಾಂಕಾ ಚೋಪ್ರಾ (Priyanka Chopra) ಅವರು ಮಿಸ್ ಇಂಡಿಯಾ, ಮಿಸ್ ವರ್ಲ್ಡ್ ಆಗಿ ಆಯ್ಕೆಯಾದವರು. ಬಳಿಕ ಅವರು ಮಾಡೆಲಿಂಗ್ ಹಾಗು ಸಿನಿಮಾ ವೃತ್ತಿಜೀವನ ಆರಂಭಿಸಿದವರು. ಬಹಳಷ್ಟು ಬಾಲಿವುಡ್ ಸಿನಿಮಾಗಳಲ್ಲಿ ನಟಿಸಿ ಸಕ್ಸಸ್‌ಫುಲ್ ನಟಿ ಎಂದು ಗುರುತಿಸಿಕೊಂಡವರು. ಸದ್ಯ ಅವರು ಅಮೆರಿಕಾದಲ್ಲಿ ಜೀವನ ನಡೆಸುತ್ತಿದ್ದಾರೆ. ಅದಕ್ಕೆ ಕಾರಣ, ನಟಿ ಪ್ರಿಯಾಂಕಾ ಚೋಪ್ರಾ ಅವರು ಅಮೆರಿಕಾದ ಪಾಪ್ ಸಿಂಗರ್ ನಿಕ್ ಜೊನಾಸ್ ಅವರನ್ನು ಮದುವೆಯಾಗಿರುವುದು. ಸದ್ಯ ಪ್ರಿಯಾಂಕಾ ಅಲ್ಲಿನ ಹಾಲಿವುಡ್ ಸಿನಿಮಾಗಳು ಹಾಗೂ ವೆಬ್ ಸಿರೀಸ್‌ಗಳಲ್ಲಿ ನಟಿಸುತ್ತಿದ್ದಾರೆ.
ಇಂಥ ಪ್ರಿಯಾಂಕಾ ಅಚ್ಚರಿಯ ಸಂಗತಿಯನ್ನು ಹಂಚಿಕೊಂಡಿದ್ದಾರೆ. 'ನಾನು ಡಾನ್ 2 ಸಿನಿಮಾ ಶೂಟಿಂಗ್‌ನಲ್ಲಿದ್ದೆ. ಆ ಸಿನಿಮಾವನ್ನು ಬರ್ಲಿನ್ (Berlin) ಫಿಲಂ ಫೆಸ್ಟಿವಲ್‌ನಲ್ಲಿ ಪ್ರದರ್ಶಿಸಲು ಆಹ್ವಾನ ಬಂದಿತ್ತು. ಅದೇ ವೇಳೆ, ನಾನು ಮೊಟ್ಟ ಮೊದಲ ಬಾರಿಗೆ ಗ್ರಾಮಿ ಅವಾರ್ಡ್ ಫಂಕ್ಷನ್‌ಗೆ ಲಾಸ್ ಎಂಜಲೀಸ್‌ಗೆ (Los Angeles) ಆಹ್ವಾನಿತಳಾಗಿದ್ದೆ. ಎರಡೂ ದೇಶಗಳು ಬೇರೆ ಬೇರೆ ಖಂಡಗಳಲ್ಲಿ ಇದ್ದು, ಒಂದು ಕಡೆಯಿಂದ ಇನ್ನೊಂದು ಕಡೆಗೆ ಹೋಗಲು ಕನಿಷ್ಟಪಕ್ಷ ಒಂದು ದಿನ ಮಧ್ಯೆ ಅಂತರ ಬೇಕು. ಆದರೆ, ನಾನು ಎರಡೂ ಕಡೆ ಹೋಗಲು ನಿರ್ಧರಿಸಿದ್ದೆ.
ಯಾಕಂದ್ರು ಕಿಚ್ಚ ಸುದೀಪ್: ನಾವು ರಿಯಾಕ್ಟ್ ಮಾಡೋಕೆ ಹೋದ್ರೆ ಅದು ದೀಪಕ್ಕೆ ಎಣ್ಣೆ ಹಾಕಿದ ಹಾಗೆ!
ಆದರೆ, ನನ್ನ ಆಪ್ತರು, ಸ್ನೇಹಿತರು ಎಲ್ಲರೂ 'ನೀನು ಎರಡೂ ಕಡೆ ಒಂದೇ ದಿನ ಹೋಗಲು ಸಾಧ್ಯವೇ ಇಲ್ಲ. ಬೇಕಾದರೆ ಒಂದನ್ನು ಮಾಡಬಹುದು, ಅದೇನೆಂದರೆ, ನಿನಗೆ ಯಾವುದು ಇಷ್ಟವೋ ಅದನ್ನು ಆಯ್ಕೆ ಮಾಡಿಕೊಂಡು ಅಲ್ಲಿಗೆ ಹೋಗಬಹುದು' ಎಂದರು. ಆದರೆ, ನಾನು ಮಾತ್ರ ಎರಡು ಕಡೆ ಹೋಗಲು ನಿರ್ಧರಿಸಿದ್ದೆ. ಹೀಗಾಗಿ ನಾನು ಯಾರೂ ಊಹಿಸಲೂ ಅಸಾಧ್ಯವಾದ ಮಾರ್ಗದ ಪ್ಲಾನ್ ಹಾಕಿಕೊಂಡಿದ್ದೆ.
ಅಶ್ಲೀಲ ಮೆಸೇಜ್ ಅನ್ನೋದು ಆನ್‌ಲೈನ್ ರೇಪ್, ಎಲ್ಲಿಂದಲೋ ಮಾಡುವ ಮಾನಸಿಕ ಹಿಂಸೆ; ನಟಿ ಚಿತ್ರಾಲ್!
ಮುಂಬೈ ಟು ಲಂಡನ್, ಲಂಡನ್ ಟು ಬರ್ಲಿನ್, ಬರ್ಲಿನ್ ಟು ಆರ್ಮಸ್ಟ್ರಡ್ಯಾಂ, ಆರ್ಮಸ್ಟ್ರಡ್ಯಾಂ ಟು ಲಾಸ್ ಎಂಜಲೀಸ್, ಲಾಸ್ ಎಂಜಲೀಸ್ ಟು ಮುಂಬೈ. ಹೀಗೆ ಮೂರೇ ಮೂರು ದಿನಗಳಲ್ಲಿ ನಾನು ಎರಡೂ ಕಡೆ ಹೋಗಿ ಬರುವ ನನ್ನ ಕನಸನ್ನು ನನಸು ಮಾಡಿಕೊಂಡಿದ್ದೆ.ನಾನು ಹಾಗೆ ಪ್ಲಾನ್ ಮಾಡಿದ್ದು ಒಂದೇ ಬಾರಿ ಅಲ್ಲ, ಹಲವು ಬಾರಿ ನಾನು ಹಾಗೆ ಮಾಡಿ ತುಂಬಾ ಕಡೆ ಓಡಾಡಿದ್ದೇನೆ. ಯಾಕಂದ್ರೆ ನನಗೆ ಯಾವುದನ್ನೂ ಕಳೆದುಕೊಳ್ಳಲು ಇಷ್ಟವಿರಲಿಲ್ಲ.
ದರ್ಶನ್ ನಟನೆಯ 'ಇಂದ್ರ' ಚಿತ್ರಕ್ಕೆ ರಾತ್ರೋ ರಾತ್ರಿ ಹೀರೋಯಿನ್ ಬದಲಾಗಿದ್ದು ಯಾಕೆ?
ಹೀಗಾಗಿ ನಾನು ನನ್ನ ಪಾಲಿಗೆ ಬಂದಿದ್ದೆಲ್ಲವನ್ನೂ ಸ್ವೀಕರಿಸಲು, ನನಗೆ ಬಂದಿರುವ ಎಲ್ಲ ಆಮಂತ್ರಣಗಳನ್ನೂ ಒಪ್ಪಿಕೊಂಡು ಹೋಗಿ ಬರುತ್ತಿದ್ದೆ. ಏಕೆಂದರೆ, ನನಗೆ ಎಲ್ಲವೂ ಬೇಕಾಗಿತ್ತು. ನಾನು ತುಂಬಾನೇ ಬಯಸುತ್ತಿದ್ದೆ, ಪಡೆಯಲು ಹಾತೊರೆಯುತ್ತಿದ್ದೆ. ನನ್ನ ಪ್ರಕಾರ ಎಲ್ಲರೂ ಹಾಗೇ ಬದುಕಬೇಕು, ಬಾಳಬೇಕು. ಏಕೆಂದರೆ, ಲೈಫ್ ಈಸ್ ಶಾರ್ಟ್, ಮೇಕ್ ಇಟ್ ಸ್ವೀಟ್ ಎಂದಿದ್ದಾರೆ ನಟಿ ಪ್ರಿಯಾಂಕಾ ಚೋಪ್ರಾ.
ಸಡನ್ನಾಗಿ ಹಾಗೆ ಬರೋಕಾಗಲ್ಲ, ಅಲ್ಲಿ ಬಂದು ನಾನು ಏನ್ ಮಾಡೋದು ಅಂದೆ; ಅಶ್ವಿನಿ ಪುನೀತ್ ರಾಜ್‌ಕುಮಾರ್