Bhagyalakshmi Serial: ಭಾಗ್ಯಳಿಗೆ ಮತ್ತೊಮ್ಮೆ ಕೂಡಿ ಬಂತು ಕಂಕಣ ಭಾಗ್ಯ: ಆದಿ ಜೊತೆ ಸೊಸೆಯ ಮದ್ವೆಗೆ ಕುಸುಮಾ ಫಿಕ್ಸ್​?

Published : Aug 08, 2025, 05:19 PM IST
Bhagyalakshmi Bhagya and Adi

ಸಾರಾಂಶ

ಭಾಗ್ಯಳ ಭವಿಷ್ಯದ ಬಗ್ಗೆ ಚಿಂತೆ ಮಾಡ್ತಿದ್ದಾಳೆ ಕುಸುಮಾ. ಆದ್ದರಿಂದ ಭಾಗ್ಯಳಿಗೆ ಮತ್ತೊಮ್ಮೆ ಕಂಕಣ ಭಾಗ್ಯ ಕೂಡಿ ಬರುವುದು ಫಿಕ್ಸ್​ ಆದಂತಿದೆ. ಆದಿ ಜೊತೆ ಸೊಸೆಯ ಮದುವೆ ಮಾಡಿಸ್ತಾಳಾ ಕುಸುಮಾ? 

ಭಾಗ್ಯಳನ್ನು ತಾಂಡವ್​ ಚಿತ್ರಹಿಂಸೆ ಕೊಟ್ಟು ದೂರ ಮಾಡಿದ ಮೇಲೆ ಭಾಗ್ಯಳ ಜೀವನದಲ್ಲಿ ಹೊಸ ಎಂಟ್ರಿ ಆಗ್ಬೇಕು ಎಂದು ಸೀರಿಯಲ್​ ಪ್ರೇಮಿಗಳು ಅಂದುಕೊಳ್ಳುತ್ತಲೇ ಇದ್ದಾರೆ. ಅದಕ್ಕೆ ಸರಿಯಾಗಿ ಪೂಜಾಳ ಪತಿ ಕಿಶನ್​ನ ಅವಿವಾಹಿತ ಅಣ್ಣ ಆದಿಯ ಎಂಟ್ರಿಯಾಗಿದೆ. ಯಾವುದೋ ಕಾರಣಕ್ಕೆ ಮದುವೆನೇ ಬೇಡ ಎಂದಿರೋ ಕ್ಯಾರೆಕ್ಟರ್​ ಆದಿಯದ್ದು. ಇದೇ ಕಾರಣಕ್ಕೆ ಭಾಗ್ಯ ಮತ್ತು ಆದಿ (Bhagya and Adi) ಮದುವೆಯಾಗಲೇಬೇಕು ಎನ್ನುವುದು ಸೀರಿಯಲ್​ ಪ್ರೇಮಿಗಳ ಆಸೆ. ಅದು ಆಗಲು ಇನ್ನಷ್ಟು ವರ್ಷ ಕಾಯಬೇಕಾಗಿ ಬರಬಹುದು, ಅಥ್ವಾ ಸ್ಟೋರಿ ಬೇರೆ ಆ್ಯಂಗಲೇ ಪಡೆಯಬಹುದು. ಇದೀಗ ಆ ಕಾಲ ಕೂಡಿ ಬಂದಿದೆ ಎನ್ನಿಸುತ್ತಿದೆ. ಕುಸುಮಾಗೆ ಭಾಗ್ಯಳಿಗೆ ಇನ್ನೊಂದು ಮದುವೆ ಮಾಡಿಸುವ ಯೋಚನೆ ಬಂದಿದೆ. ರಸ್ತೆಯ ಮೇಲೆ ಹೋಗುತ್ತಿದ್ದ ಸಂದರ್ಭದಲ್ಲಿ, ವಿಚ್ಛೇದಿತ ಮಗಳ ಅಮ್ಮ ಒಬ್ಬಳು ಅಳುತ್ತಾ, ನನ್ನ ಬಳಿಕ ಇವಳನ್ನು ನೋಡಿಕೊಳ್ಳುವವರು ಯಾರು ಎಂದು ಪ್ರಶ್ನಿಸಿದ್ದಾಳೆ. ಅದನ್ನು ಕೇಳಿ ಕುಸುಮಾಗೆ ತಮ್ಮ ಬಳಿಕ ಭಾಗ್ಯ ಒಂಟಿಯಾದರೆ ಎನ್ನುವ ನೋವು ಕಾಡತೊಡಗಿದೆ. ಅದೇ ವೇಳೆ ತನ್ವಿ ಮತ್ತು ಗುಂಡನನ್ನು ಕರೆದು ನೀವು ದೊಡ್ಡವರಾದ ಮೇಲೆ ಏನು ಮಾಡುತ್ತೀರಿ ಎಂದು ಪ್ರಶ್ನಿಸಿದ್ದಾರೆ. ಆಗ ಗುಂಡ ಮತ್ತು ತನ್ವಿ ಇಬ್ಬರೂ ಬೇರೆ ಬೇರೆ ದೇಶಕ್ಕೆ ಹೋಗುವ ಬಗ್ಗೆ ಮಾತನಾಡಿದ್ದಾರೆ. ಹೀಗೆ ನೀವು ದೂರ ಆದರೆ ಅಮ್ಮನನ್ನು ನೋಡಿಕೊಳ್ಳುವವರು ಯಾರು ಎಂದು ಪ್ರಶ್ನಿಸಿದಾಗ, ಗುಂಡ ನೀವು ಇದ್ದೀರಲ್ಲ ಎಂದಿದ್ದಾನೆ. ಅಮ್ಮನಿಗೆ ಯಾರೂ ನೋಡಿಕೊಳ್ಳೋದು ಬೇಡ, ಅವಳು ತುಂಬಾ ಸ್ಟ್ರಾಂಗ್​ ಎಂದಿದ್ದಾನೆ.

ಈಗ ನಿಜವಾಗಿಯೂ ಕುಸುಮಾಗೆ ಚಿಂತೆ ಶುರುವಾಗಿದೆ. ಇದರ ಅರ್ಥ ಭಾಗ್ಯಳಿಗೆ ಇನ್ನೊಂದು ಮದ್ವೆಯ ಯೋಚನೆ ಅವಳ ತಲೆಯಲ್ಲಿ ಬಂದಿದೆ. ಇನ್ನೊಂದು ಮದುವೆ ಎಂದರೆ ಅದು ಆದಿಯೇ ಆಗಿರಲು ಸಾಧ್ಯ. ಏಕೆಂದರೆ ಇದಾಗಲೇ ಆದಿಯ ಸ್ವಭಾವಕ್ಕೆ ಕುಸುಮಾ ಕರಗಿ ಹೋಗಿದ್ದಾಳೆ. ಆದ್ದರಿಂದ ಶೀಘ್ರದಲ್ಲಿಯೇ ಆದಿ ಮತ್ತು ಭಾಗ್ಯ ಮದುವೆ ಫಿಕ್ಸ್​ ಎನ್ನುವುದು ಖಚಿತವಾಗಿದೆ. ಭಾಗ್ಯಳಿಗೆ ಮತ್ತೊಮ್ಮೆ ಕಂಕಣ ಭಾಗ್ಯ ಕೂಡಿ ಬರಲಿ ಎನ್ನುವುದು ವೀಕ್ಷಕರ ಆಸೆ ಕೂಡ.

ಅಷ್ಟಕ್ಕೂ ಕನ್ನಿಕಾ ಅಣ್ಣನಾಗಿ ಆದಿ ಅರ್ಥಾತ್​ ನಟ ಹರೀಶ್​ ಎಂಟ್ರಿಯಾದಾಗಲೇ ಭಾಗ್ಯಳಿಗೆ ಈತ ಜೋಡಿ ಎಂದಿದ್ದರು ನೆಟ್ಟಿಗರು. ಆದರೆ, ಈತ ಕಿಶನ್​ ಅಣ್ಣ ಎಂದು ತಿಳಿಯದೇ ಕುಸುಮಾ ಮತ್ತು ಭಾಗ್ಯ ಗಾಡಿಯ ವಿಷಯದಲ್ಲಿ ಆದಿ ಜೊತೆ ಜಗಳವಾಡಿಕೊಂಡಿದ್ದರು. ಕುಸುಮಾ, ಆದಿಯ ಕಾರನ್ನು ಒಡೆದಿದ್ದಳು. ಕೊನೆಗೆ ಇವನೇ ಕಿಶನ್​ ಅಣ್ಣ ಎಂದು ತಿಳಿದಾಗ ಇಬ್ಬರೂ ಕ್ಷಮೆ ಕೋರಿದ್ದರು. ಆದರೆ ಇವರಿಬ್ಬರ ಅಬ್ಬರ ನೋಡಿ, ಭಾಗ್ಯ ಮತ್ತು ಕುಸುಮಾ ಸರಿಯಿಲ್ಲ. ತನ್ನ ತಮ್ಮನ ಮದುವೆ ಅವಳ ಜೊತೆ ಸಾಧ್ಯನೇ ಇಲ್ಲ ಎಂದಿದ್ದ ಆದಿ. ಕೊನೆಗೆ ಇದಕ್ಕೆ ತಕ್ಕಂತೆ ಕನ್ನಿಕಾ ಮತ್ತು ಮೀನಾಕ್ಷಿ ಸೇರಿ ಭಾಗ್ಯಳ ಮನೆಯವರ ವಿರುದ್ಧ ಆದಿಯ ತಲೆ ತುಂಬಿದ್ದರು.

ಆದರೆ ಆದಿಗೆ ತನ್ನಿಂದ ತಪ್ಪಾಗಿರುವುದು ತಿಳಿಸಿದೆ. ಭಾಗ್ಯ ಎಂಥ ಸ್ವಾಭಿಮಾನಿ ಹೆಣ್ಣು, ಆಕೆ ಹೇಗೆಲ್ಲಾ ಬದುಕಿದ್ದಾಳೆ ಎನ್ನುವ ಸತ್ಯದ ಅರಿವು ಆಗುತ್ತಿದ್ದಂತೆಯೇ ನೊಂದುಕೊಂಡಿದ್ದ. ಭಾಗ್ಯಳಿಗೆ ಇಲ್ಲಸಲ್ಲದ ಮಾತುಗಳನ್ನಾಗಿ ನೋಯಿಸಿದ್ದ ಆತನಿಗೆ ಈಗ ನೋವಾಗಿತ್ತು. ಮಂಡಿಯೂರುತ್ತಲೇ ಬಿಕ್ಕಿ ಬಿಕ್ಕಿ ಅತ್ತಿದ್ದ. ಭಾಗ್ಯಳ ಬಳಿ ಕ್ಷಮೆ ಕೋರಿದ್ದ. ಪೂಜಾಳಿಗೆ ಯಾವುದೇ ಆಪತ್ತು ಬರದಂತೆ ಕಾಯುವ ಜವಾಬ್ದಾರಿ ನನ್ನದು ಎಂದು ಮಾತು ಕೊಟ್ಟಿದ್ದಾನೆ. ಅಲ್ಲಿಗೆ ಪೂಜಾ ವಿವಾಹ ಸಂಪನ್ನವಾಗುತ್ತದೆ. ಪೂಜಾಳ ಮದುವೆಗೆ ಇದ್ದ ಎಲ್ಲಾ ಅಡ್ಡಿ ಆತಂಕಕಗಳೂ ಸದ್ಯ ನಿವಾರಣೆಯಾಗಿದೆ. ಈ ಮಧ್ಯೆಯೇ ದಾರಿಯಲ್ಲಿ ಭಾಗ್ಯಳ ಕಾರು ಕೆಟ್ಟು ನಿಂತಾದ ಆದಿ ಸಹಾಯ ಮಾಡಿದ್ದಾನೆ. ಇಲ್ಲಿಂದ ಕುಸುಮಾರ ಇಬ್ಬರ ಮದ್ವೆ ಮಾಡಿಸುವುದರಲ್ಲಿ ಸಂಶಯ ಇಲ್ಲ ಎನ್ನುವುದು ಬಹುತೇಕ ನಿಶ್ಚಿತವಾಗಿದೆ.

 

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

'ಹೊಟ್ಟೆಗೆ ಹಿಟ್ಟಿಲ್ಲದೇ ಬದುಕಬಲ್ಲೆ, ಆದ್ರೆ 'ಅದಿಲ್ಲದೇ' ಬದುಕಲಾರೆ: ಮದುವೆ ಬೆನ್ನಲ್ಲೇ ಸಮಂತಾ ಹಳೆಯ ಹೇಳಿಕೆ ವೈರಲ್!
ಬಿಗ್ ಬಜೆಟ್ '45' ಅದ್ದೂರಿ ಇವೆಂಟ್, ಕರ್ನಾಟಕದ ಏಳು ಜಿಲ್ಲೆಗಳ ಚಿತ್ರಮಂದಿರದಲ್ಲಿ ಇವೆಂಟ್ ನೇರ ಪ್ರಸಾರ!