
Su From So ಸಿನಿಮಾ ಈಗ ಭರ್ಜರಿ ಯಶಸ್ಸು ಕಾಣಿಸುತ್ತಿದೆ. ಈ ಚಿತ್ರವನ್ನು ಇದಾಗಲೇ ಹಲವರು ಮೆಚ್ಚಿಕೊಂಡಿದ್ದಾರೆ. ಅದರಲ್ಲಿ ಇರುವ ಬಂದರೋ ಬಂದರೋ ಬಾವ ಬಂದರೋ ಹಾಡು ಸಕತ್ ಹಿಟ್ ಆಗಿದ್ದು, ಇದಾಗಲೇ ಹಲವಾರು ಮಂದಿ ಇದರ ರೀಲ್ಸ್ ಮಾಡಿದ್ದಾರೆ. ಅದೇ ಇನ್ನೊಂದೆಡೆ, ಅಮೃತಧಾರೆ ಸೀರಿಯಲ್ ಇದೀಗ ಕುತೂಹಲದ ಘಟ್ಟವನ್ನು ತಲುಪಿದೆ. ಭೂಮಿಕಾಳ ಮಗುವನ್ನು ಸಾಯಿಸಬೇಕು ಎನ್ನುವ ಉದ್ದೇಶದಿಂದ ಶಕುಂತಮಾ ಮತ್ತು ಜೈದೇವ ಮಾಡಿದ ಪ್ಲ್ಯಾನ್ಗಳೆಲ್ಲವೂ ಫ್ಲಾಪ್ ಆಗಿವೆ. ಅದೇ ಇನ್ನೊಂದೆಡೆ ಶಕುಂತಲಾ ಮಗುವನ್ನು ಸಾಯಿಸಲು ಮಾಡ್ತಿರೋ ಪ್ಲ್ಯಾನ್ ಬಗ್ಗೆ ಭಾಗ್ಯ ಭೂಮಿಕಾಳಿಗೆ ತನ್ನದೇ ಆದ ಭಾಷೆಯಲ್ಲಿ ಹೇಳಿದ್ದಾಳೆ. ಗೌತಮ್ ಇಲ್ಲದ ವೇಳೆ ಜೈದೇವ ಮತ್ತು ದಿಯಾಳನ್ನು ಕರೆಸಿ ಶಕುಂತಲಾ ಈಗ ಗೌತಮ್ನಿಂದ ಬಿಸಿ ತಟ್ಟಿಸಿಕೊಳ್ಳುತ್ತಿದ್ದಾರೆ. ಸದ್ಯ ಧಾರಾವಾಹಿ ಈ ಹಂತ ತಲುಪಿದ್ದರೆ ಇತ್ತ ಭಾಗ್ಯಮ್ಮಾ, ಮಲ್ಲಿ ಮತ್ತು ಅಪ್ಪಿ ಸಕತ್ ಡಾನ್ಸ್ ಮಾಡಿದ್ದಾರೆ. ಇಲ್ಲಿಯವರೆಗೂ ಮೌನವಾಗಿದ್ದ ಭಾಗ್ಯಮ್ಮ ಇದೀಗ ಈ ಪರಿಯಲ್ಲಿ ಡಾನ್ಸ್ ಮಾಡ್ತಿರೋದನ್ನು ನೋಡಿ ನೆಟ್ಟಿಗರಿಗೆ ಫುಲ್ ಖುಷಿಯಾಗಿದೆ. ಬಂದರೋ ಬಂದರೋ ಬಾವ ಬಂದರೋಗೆ ಎಲ್ಲರೂ ಸ್ಟೆಪ್ ಹಾಕಿದ್ದಾರೆ.
ಅಂದಹಾಗೆ ಭಾಗ್ಯಮ್ಮ ಪಾತ್ರಧಾರಿಯಾಗಿರುವ ನಟಿಯ ಎಸರು ಚಿತ್ಕಳಾ ಬಿರಾದಾರ್. ಕನ್ನಡತಿ ಸೀರಿಯಲ್ ಮೂಲಕ ಅಮ್ಮಮ್ಮನಾಗಿ ವೀಕ್ಷಕರ ಮೇಲೆ ಪ್ರಬಾವ ಬೀರಿದ ನಟಿ ಚಿತ್ಕಳಾ ಬಳಿಕ ಬೃಂದಾವನ ಧಾರಾವಾಹಿಯಲ್ಲಿ ವಿಭಿನ್ನ ಹೇರ್ ಸ್ಟೈಲ್ನೊಂದಿಗೆ ವೀಕ್ಷಕರ ಗಮನ ಸೆಳೆದಿದ್ದರು. ಇದೀಗ ಅಮೃತಧಾರೆಯಲ್ಲಿ ಮೌನವಾಗಿದ್ದರಿಂದ ವೀಕ್ಷಕರು ಭಾಗ್ಯಮ್ಮಾ ಬೇಗ ಮಾತನಾಡಮ್ಮಾ ಎನ್ನುತ್ತಿದ್ದರು. ಆದರೆ ಮಾತನಾಡಲು ಬಂದರೂ, ಹಳೆಯ ನೆನಪು ಮರುಕಳಿಸಿದರೂ ಶಕುಂತಲಾ ಮೇಲಿನ ಭಯದಿಂದ ಇಂದಿಗೂ ಭಾಗ್ಯಮ್ಮಾ ಮೌನವಾಗಿಯೇ ಇದ್ದಾಳೆ.
ಕನ್ನಡತಿಯಲ್ಲಿ ಅಮ್ಮಮ್ಮನ ಪಾತ್ರಕ್ಕೆ ಜೀವ ತುಂಬಿದ ನಟಿ ಚಿತ್ಕಳಾ ಬಿರಾದಾರ್(Chitkala Biradar). ಇದ್ರೆ ಇಂತಹ ಅತ್ತೆ ಇರಬೇಕು ಎಂದು ಕನ್ನಡತಿ ನೋಡಿದೋರೆಲ್ಲಾ ಹೇಳಿದ್ದಾರೆ. ಆದ್ರೆ ನಿಮಗೊತ್ತಾ, ನಿಜ ಜೀವನದಲ್ಲೂ ಚಿತ್ಕಳಾ ಬಿರಾದಾರ್ ಸೂಪರ್ ಅತ್ತೆ. ಸೊಸೆಗಾಗಿ ಮಿಡಿಯುವ ಅತ್ತೆ. ಇತ್ತೀಚೆಗೆ ಸಂದರ್ಶನವೊಂದರಲ್ಲಿ ನಟಿ ತಮ್ಮ ಸೊಸೆ, ಮಗನ ಮದುವೆ, ಸಂಬಂಧಗಳ ಬಗ್ಗೆ ಮನಸು ಬಿಚ್ಚಿ ಮಾತನಾಡಿದ್ದರು. ಚಿತ್ಕಳಾ ಬಿರಾದಾರ್ ಅವರ ಮಗ ಸೌರಭ್, ಇವರ ಮದ್ವೆ ಆಗಿ ಈಗಾಗಲೇ ಒಂದು ವರ್ಷ ಆಗ್ತಾ ಬಂದಿದೆ. ಇವರ ಪತ್ನಿ ದೇವಾಂಶಿ ಜಾರ್ಖಂಡ್ ಮೂಲದವರು. ಸೊಸೆಯನ್ನು ಮಗಳಂತೆ ನೋಡುವ ಚಿತ್ಕಳಾ, ಅಂತರ್ ರಾಜ್ಯ ಮದುವೆ, ಲವ್ ಮ್ಯಾರೇಜ್, ಮಕ್ಕಳ ಆಸೆ, ಆಕಾಂಕ್ಷೆಗಳ್ ಬಗ್ಗೆ ಹೇಳಿದ್ದರು.
ಇನ್ನು ನಟಿ ಅನ್ವಿತಾ ಸಾಗರ್ ಕುರಿತು ಹೇಳುವುದಾದರೆ, ಇವರು ಕನ್ನಡ ಸಿನಿಮಾ ಮತ್ತು ಧಾರಾವಾಹಿ ಕ್ಷೇತ್ರದಲ್ಲಿ ಕಳೆದೊಂದು ದಶಕದಿಂದ ಸಕ್ರಿಯರಾಗಿದ್ದಾರೆ . ಈ ಹಿಂದೆ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಜನಪ್ರಿಯ ಧಾರಾವಾಹಿ ಗಟ್ಟಿಮೇಳದಲ್ಲಿ ಆದ್ಯಾ ಪಾತ್ರದಲ್ಲಿ ನಟಿಸಿದ್ದರು. ಇದಾದ ಬಳಿಕ ಉದಯ ಟಿವಿಯ ಅಣ್ಣ ತಂಗಿ ಸೀರಿಯಲ್ನಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ಅದು 1 ಸಾವಿರ ಸಂಚಿಕೆಗಳನ್ನು ಆಗಲೇ ಪೂರೈಸಿದೆ. ಇದೀಗ ಮತ್ತೆ ಅನ್ವಿತಾ ಸಾಗರ್ ಅಮೃತಧಾರೆ ಸೀರಿಯಲ್ ಮೂಲಕ ಕಮ್ ಬ್ಯಾಕ್ ಮಾಡಿದ್ದಾರೆ. ಮಲ್ಲಿ ಪಾತ್ರಧಾರಿಯಾಗಿದ್ದ ರಾಧಾ ಭಗವತಿ ಅವರು ಭಾರ್ಗವಿ ಎಲ್ಎಲ್ಬಿ ಸೀರಿಯಲ್ಗಾಗಿ ಈ ಪಾತ್ರ ತೊರೆದ ಬಳಿಕ, ಈಗ ಆ ಪಾತ್ರದಲ್ಲಿ ಅನ್ವಿತಾ ನಟಿಸುತ್ತಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.