ಕೇರಳ: ಮದುವೆಯ ಸಾವಿರಾರು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ಒಂದಕ್ಕಿಂತ ಒಂದು ವಿಭಿನ್ನವಾಗಿರುವ ಈ ವಿಡಿಯೋಗಳು ನೋಡುಗರ ಮೊಗದಲ್ಲಿ ಖುಷಿಯ ನಗೆಯುಕ್ಕಿಸುತ್ತವೆ. ಅದೇ ರೀತಿ ಕೇರಳದ ಮದುವೆ ಮನೆಯೊಂದರ ವಿಡಿಯೋವೊಂದು ವೈರಲ್ ಆಗಿದ್ದು, ನೋಡುಗರಲ್ಲಿ ನಗು ಮೂಡಿಸುತ್ತಿದೆ. ಅಜ್ಜ ಮೊಮ್ಮಗಳ ಸಖತ್ ಡಾನ್ಸ್‌ಗೆ ಇಂಟರ್‌ನೆಟ್ ಫಿದಾ ಆಗಿದೆ. ಮಲೆಯಾಳಂ ಸಿನಿಮಾವೊಂದರ ಹಾಡಿಗೆ ವೃದ್ಧರೊಬ್ಬರು ಸಖತ್ ಆಗಿ ತಾನ್ಯಾರಿಗೂ ಕಡಿಮೆ ಇಲ್ಲ ಎಂಬಂತೆ ಹೆಜ್ಜೆ ಹಾಕುತ್ತಿದ್ದು, ಇವರಿಗೆ ಮೊಮ್ಮಗಳು ಸಾಥ್ ನೀಡಿದ್ದಾರೆ. ತಾತ ಮೊಮ್ಮಗಳ ಜುಗಲ್‌ಬಂದಿಗೆ ನೋಡುಗರು ಚಪ್ಪಾಳೆ ತಟ್ಟಿ ಪ್ರೋತ್ಸಾಹಿಸಿದ್ದಾರೆ.
ಮದುವೆ ಮನೆ ಎಂದ ಮೇಲೆ ಅಲ್ಲಿ ಮೋಜು ಮಸ್ತಿ ಇರಲೇಬೇಕು ಎಂಬುದು ಒಂದು ಅಲಿಖಿತ ನಿಯಮ ಕುಟುಂಬದವರು, ಬಂಧುಗಳು ನೆಂಟರು, ಸ್ನೇಹಿತರು ಎಲ್ಲರೂ ಸೇರಿದಾಗ ಅಲ್ಲಿ ತನ್ನಿಂದ ತಾನೇ ಖುಷಿಯ ಕ್ಷಣಗಳು ಸೃಷ್ಟಿಯಾಗುತ್ತವೆ. ಈ ಖುಷಿಗೆ ಕೆಲವರು ಮತ್ತಷ್ಟು ರಸ ತುಂಬುತ್ತಾರೆ. ತಮ್ಮ ತಮಾಷೆಯ ಮಾತುಗಳು ಕಾಮೆಂಟ್‌ಗಳಿಂದ ಮದುವೆಗೆ ಸೇರಿದವರನ್ನು ನಗೆಗಡಲಲ್ಲಿ ಸೇರಿಸುತ್ತಾರೆ. ಇದುವರೆಗೆ ನೀವು ಹರೆಯದ ಯುವಕ ಯುವತಿಯರು ಮಧ್ಯ ವಯಸ್ಸಿನ ಅಂಟಿ ಅಂಕಲ್‌ಗಳು ಮದ್ವೆ ಮನೆಯಲ್ಲಿ ಕುಣಿದಿರುವ ವಿಡಿಯೋಗಳನ್ನು ನೋಡಿರಬಹುದು. ಆದರೆ ಈಗ ನಾವು ನಿಮಗೆ ತೋರಿಸಲು ಹೊರಟಿರುವ ವಿಡಿಯೋ ಓರ್ವ ತಾತ ಮದ್ವೆ ಮನೆಯಲ್ಲಿ ಸಖತ್ ಆಗಿ ಸ್ಟೆಪ್ ಹಾಕ್ತಿರುವ ವಿಡಿಯೋ.
'ನಾ ತಾನ್ ಕೇಸ್ ಕೊಡು' ಎಂಬ ಇನ್ನಷ್ಟೇ ರಿಲೀಸ್ ಆಗಬೇಕಾಗಿರುವ ಮಲೆಯಾಳಂ ಸಿನಿಮಾದ 'ದೇವದೂತರ್ ಪಾಡಿ' ಎಂಬ ಹಾಡು ಈಗಾಗಲೇ ಮಲೆಯಾಳಂ ಸಿನಿಮಾ ಪ್ರಿಯರ ಹಾಟ್ ಫೇವರಿಟ್ ಆಗಿದ್ದು, ಅನೇಕರು ಈ ಹಾಡಿಗೆ ಸ್ಟೆಪ್ ಹಾಕಿ ಸೋಶಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದರು. ಕೇರಳದಲ್ಲಿ ಅಷ್ಟೊಂದು ಫೇಮಸ್ ಆಗಿರುವ ಈ ಹಾಡನ್ನು ಮದ್ವೆ ಮನೆಯಲ್ಲಿ ಹಾಕಿದ್ದು, ಈ ಹಾಡು ಕೇಳಿದ್ದೇ ತಡ ವೃದ್ಧರೊಬ್ಬರು ಸಖತ್ ಆಗಿ ಹೆಜ್ಜೆ ಹಾಕಿದ್ದಾರೆ. ಸೂಪರ್ ಆಗಿ ಡಾನ್ಸ್ ಮಾಡುತ್ತಿದ್ದ ತಾತನಿಗೆ ಮೊಮ್ಮಗಳು ಸಾಥ್ ನೀಡಿದ್ದಾಳೆ. ಮದ್ವೆ ಮಂಟಪದ ಕೆಳಗೆ ಕ್ಯಾಮರಾಗಳ ಮಧ್ಯೆ ಈ ತಾತ ಮೊಮ್ಮಗಳು ಸೂಪರ್ ಆಗಿ ಡಾನ್ಸ್ ಮಾಡಿ ಮದುವೆಗೆ ಬಂದಿದ್ದವರು ಮೂಗಿನ ಮೇಲೆ ಬೆರಳಿಡುವಂತೆ ಮಾಡಿದ್ದಾರೆ. ಮಲೆಯಾಳಂ ನಟ ಕುಂಚಾಕೋ ಬೋಬನ್ ಅವರು ಈ ಹಾಡಿನಲ್ಲಿ ನರ್ತಿಸಿದ್ದರು.
Pak sv SL ಮೈದಾನದಲ್ಲೇ ಆಕರ್ಷಕ ಡ್ಯಾನ್ಸ್ ಮಾಡಿ ಗಮನ ಸೆಳೆದ ಪಾಕ್ ವೇಗಿ ಹಸನ್ ಹಲಿ..!
ಮದುವೆ ಫೋಟೋಗ್ರಾಪರ್ ಆಗಿರುವ ಬಿನು ಕೊಕದನ್ ಎಂಬುವವರು ಈ ವಿಡಿಯೋವನ್ನು ಸಾಮಾಜಿಕ ಜಾಲತಾಣ ಇನ್ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಅಲ್ಲದೇ ಕುಣಿಯುತ್ತಿರುವವರು ಅಜ್ಜ ಮೊಮ್ಮಗಳು ಎಂದು ಅವರು ಉಲ್ಲೇಖಿಸಿದ್ದಾರೆ. 2,23,000 ಅಧಿಕ ಮಂದಿ ಈ ವಿಡಿಯೋವನ್ನು ವೀಕ್ಷಿಸಿದ್ದು, 25,900 ಜನ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
"ದೇವದೂತರ್ ಪಾಡಿ" ಹಾಡು 1985 ರ ಚಲನಚಿತ್ರ ಕಥೋಡು ಕಥೋರಂನ ಹಿಟ್ ಸಂಖ್ಯೆಯ ಹೊಸ ನಿರೂಪಣೆಯಾಗಿದೆ. ಹಾಡಿನಲ್ಲಿ, ಬೋಬನ್ ಕೆಲವು ಕೋಮು ಆಚರಣೆಯ ಸಮಯದಲ್ಲಿ ನಿರಾತಂಕದ ಮನೋಭಾವದಿಂದ ಸಂಗೀತಕ್ಕೆ ಮಣಿಯುತ್ತಾನೆ. ಲುಂಗಿ ಮತ್ತು ಶರ್ಟ್ ಧರಿಸಿ ಮತ್ತು ಜಿಡ್ಡಿನ ಕೂದಲು ಮತ್ತು ಗಡ್ಡದೊಂದಿಗೆ, ಬೋಬನ್ ತಮ್ಮ ನೈಜ ಅಭಿನಯದಿಂದ ಹೃದಯಗಳನ್ನು ವಶಪಡಿಸಿಕೊಂಡರು. ಹೊಸ ಆವೃತ್ತಿಯ ಹಾಡಿನ ಮೂಲವನ್ನು ಹಾಡಿದ ಕೆ ಜೆ ಯೇಸುದಾಸ್ ಕೂಡ ಹಾಡಿದ್ದಾರೆ.
ಮ್ಯೂಸಿಕಲ್ ಹಾರ್ನ್ ಕೇಳಿ ಟ್ರಕ್ ಅಡ್ಡ ಹಾಕಿದ್ದ ಬೈಕರ್‌ಗಳಿಂದ ಸಖತ್ ಸ್ಟೆಪ್ಸ್
ಮೂಲತಃ ಈ ದೇವದೂತರ್ ಪಾಡಿ' ಹಾಡು 1985ರ ಚಲನಚಿತ್ರ 'ಕಥೋಡು ಕಥೋರಂ'ನ ಹಿಟ್ ಹಾಡಾಗಿದೆ. ನಟ ಬೋಬನ್ ಅವರು ಈ ಹಾಡಿನಲ್ಲಿ ನಿರಾತಂಕವಾಗಿ ಸಂಗೀತಕ್ಕೆ ಕುಣಿಯುತ್ತಾರೆ. ಲುಂಗಿ ಮತ್ತು ಶರ್ಟ್ ಧರಿಸಿರುವ ಬೋಬನ್ ಮತ್ತು ತಮ್ಮ ಕೂದಲು ಮತ್ತು ಗಡ್ಡದೊಂದಿಗೆ, ನೈಜ ಅಭಿನಯದಿಂದ ಅನೇಕ ಅಭಿಮಾನಿಗಳ ಹೃದಯ ಗೆದ್ದಿದ್ದರು. ಈ ಹಾಡಿನ ಹೊಸ ಆವೃತ್ತಿಯ ಹಾಡಿನ್ನು ಕೂಡ ಕೆ ಜೆ ಯೇಸುದಾಸ್ ಅವರೇ ಹಾಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.