
ಜೀ ಕನ್ನಡದಲ್ಲಿ ಕರ್ಣ ಸೀರಿಯಲ್ ಪ್ರೊಮೋ ಸಾಕಷ್ಟು ಹವಾ ಸೃಷ್ಟಿಸಿತ್ತು. ನಿನ್ನೆಯಿಂದ ಅಂದರೆ ಜೂನ್ 16ರಿಂದ ಇದು ಆರಂಭವಾಗಬೇಕಿತ್ತು. ಇದಕ್ಕಾಗಿಯೇ ಹಾಲಿ ಇರುವ ಕೆಲವು ಸೀರಿಯಲ್ಗಳ ಸಮಯವನ್ನೂ ಬದಲು ಮಾಡಲಾಗಿತ್ತು. ವಿಭಿನ್ನ ಕಥೆಯನ್ನು ಹೊತ್ತ ಕರ್ಣ ಸೀರಿಯಲ್ಗಾಗಿ ವೀಕ್ಷಕರು ಕಾತರದಿಂದ ಕಾಯುತ್ತಿದ್ದರು. ಆದರೆ ಏಕಾಏಕಿ, ಸೀರಿಯಲ್ ಮುಂದೂಡುವುದಾಗಿ ವಾಹಿನಿ ಹೇಳಿಕೊಂಡು ವೀಕ್ಷಕರಿಗೆ ಶಾಕ್ ಕೊಟ್ಟಿತ್ತು. ಈ ಸೀರಿಯಲ್ನಲ್ಲಿ ನಟಿಸ್ತಿರೋ ಭವ್ಯಾ ಗೌಡ ಅವರು ಇನ್ನೊಂದು ಚಾನೆಲ್ ಜೊತೆ ಒಪ್ಪಂದ ಮಾಡಿಕೊಂಡಿದ್ದರು. ಅದರ ಪ್ರಕಾರ ಅವರು ಕೆಲ ತಿಂಗಳ ಮಟ್ಟಿಗೆ ಬೇರೆ ಚಾನೆಲ್‌ಗಾಗಿ ಕೆಲಸ ಮಾಡುವಂತೆ ಇರಲಿಲ್ಲ. ಆದರೆ, ಅದನ್ನು ಭವ್ಯಾ ಅವರು ಮೀರಿದ್ದಾರೆ ಎಂಬ ಆರೋಪವಿದೆ. ಈ ಹಿನ್ನೆಲೆಯಲ್ಲಿ ಆ ಚಾನೆಲ್ ಕೋರ್ಟ್ಗೆ ದೂರು ದಾಖಲು ಮಾಡಿರುವ ಹಿನ್ನೆಲೆಯಲ್ಲಿ ಸದ್ಯ ಸೀರಿಯಲ್ಗೆ ತಡೆ ಬಂದಿದೆ. ಇದರಿಂದಾಗಿ ಕೋರ್ಟ್ನಲ್ಲಿ ಈ ಕೇಸ್ ಮುಗಿಯುವವರೆಗೂ ಸೀರಿಯಲ್ ಪ್ರಸಾರ ಆಗುವುದಿಲ್ಲ. ಪ್ರತಿಸ್ಪರ್ಧಿ ಚಾನೆಲ್ಗೆ ಭವ್ಯಾ ಅವರು ಕಾನೂನಿನ ಮೂಲಕ ಮಾತನಾಡಿ ಎಂದು ಹೇಳಿದ್ದರು, ಅದಕ್ಕಾಗಿ ದೂರು ದಾಖಲಿಸಲಾಗಿದೆ ಎನ್ನುವ ಆರೋಪವೂ ಇದ್ದು, ಈ ಬಗ್ಗೆ ಯಾವುದೇ ಸ್ಪಷ್ಟ ಮಾಹಿತಿ ಇಲ್ಲ.
ಆದರೆ, ಇದರ ನಡುವೆಯೇ ಭವ್ಯಾ ಅವರು, ತಮಗೆ ಈ ಸೀರಿಯಲ್ ಸಿಕ್ಕಿರುವ ಬಗ್ಗೆ ಹಾಗೂ ಅದನ್ನು ತಾವು ಯಾಕೆ ಆಯ್ಕೆ ಮಾಡಿಕೊಂಡಿದ್ದು ಎನ್ನುವ ಬಗ್ಗೆ ಎಫ್ಡಿಎಫ್ಎಸ್ ಯುಟ್ಯೂಬ್ ಚಾನೆಲ್ಗೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿದ್ದರು. ಅದೀಗ ಮತ್ತೆ ವೈರಲ್ ಆಗಿದೆ. ಈ ವಿಡಿಯೋ ಸೀರಿಯಲ್ ಶುರುವಾಗುವ ಬಗ್ಗೆ ವಾಹಿನಿ ಪ್ರೊಮೋ ಬಿಡುಗಡೆ ಮಾಡಿ ದಿನಾಂಕವನ್ನೂ ಹೇಳಿತ್ತು. ಆಗ ಸೀರಿಯಲ್ ಬಗ್ಗೆ ಭವ್ಯಾ ಮಾತನಾಡಿದ್ದರು. ಈ ಸೀರಿಯಲ್ನಲ್ಲಿ ಭವ್ಯಾ ಅವರು ನಿಧಿ ಎನ್ನುವ ಡಾಕ್ಟರ್ ಪಾತ್ರ ಮಾಡಿದ್ದಾರೆ. ಇದು ತುಂಬಾ ಚಾಲೆಂಜಿಂಗ್ ಪಾತ್ರ. ಇದಕ್ಕಾಗಿ ನಾನು ಸಾಕಷ್ಟು ವರ್ಕ್ಮಾಡಿದ್ದೇನೆ ಎಂದು ಸಂದರ್ಶನದಲ್ಲಿ ಹೇಳಿದ್ದರು. ಈ ಸೀರಿಯಲ್ನಲ್ಲಿ ತುಂಬಾ ಖ್ಯಾತ ನಟರು ಇದ್ದಾಗ, ನನ್ನನ್ನು ಸೆಲೆಕ್ಟ್ ಮಾಡಿದ್ದು ತುಂಬಾ ಖುಷಿಕೊಟ್ಟಿದೆ. ಇದನ್ನು ನಾನು ಅಂದುಕೊಂಡೇ ಇರಲಿಲ್ಲ. ಇಂಡಸ್ಟ್ರಿಗೆ ಕಾಲಿಟ್ಟು ಕೆಲವೇ ವರ್ಷ ಆಗಿದ್ದರೂ ನಾಯಕಿ ಪಾತ್ರದಲ್ಲಿ ನಾನು ಕಾಣಿಸಿಕೊಳ್ತಿರೋದಕ್ಕೆ ತುಂಬಾ ಖುಷಿ ಇದೆ ಎಂದಿದ್ದರು.
ಇದರಲ್ಲಿ ನಿಧಿ ತುಂಬಾ ಎಕ್ಸ್ಪ್ರೆಸಿವ್. ಏನೇ ಸಣ್ಣಪುಟ್ಟ ವಿಚಾರಕ್ಕೂ ಖುಷಿ ಪಡ್ತಾಳೆ. ಈ ಥರ ಪಾತ್ರ ಮಾಡಲು ನಾನು ತುಂಬಾ ಕಲಿಯಬೇಕು, ಕಲೀತಾ ಇದ್ದೇನೆ. ಇದು ನನ್ನ ಲರ್ನಿಂಗ್ ಸ್ಟೇಜ್. ನರ್ಸರಿಯಿಂದ ಮೇಲಕ್ಕೆ ಹೋಗುತ್ತಿದ್ದಾಳೆ ನಿಧಿ ಎಂದಿದ್ದರು. ಈ ಸೀರಿಯಲ್ ಪ್ರೊಮೋ ಆರಂಭದಲ್ಲಿ ಬಿಟ್ಟಾಗ ಕರ್ಣನ ಪಾತ್ರ ಮಾತ್ರ ಕಾಣಿಸಿಕೊಂಡಿತ್ತು. ಇತ್ತೀಚಿನ ದಿನಗಳಲ್ಲಿ ನಾನು ನೋಡಿದ ಪ್ರೊಮೋದಲ್ಲಿ ಇದೇ ಬೆಸ್ಟ್ ಎನ್ನಿಸಿಕೊಂಡು ಮನೆಯಲ್ಲಿ ಮಾತನಾಡುತ್ತಾ ಇದ್ವಿ. ಆದರೆ ಅದೇ ಸಮಯದಲ್ಲಿ ನನಗೇ ಕಾಲ್ ಬಂತು. ನಾಯಕಿ ಪಾತ್ರಕ್ಕೆ ನೀವು ಬರಬೇಕು ಎಂದಾಗ ತುಂಬಾ ಆಶ್ಚರ್ಯ ಆಯಿತು. ಇಷ್ಟು ಒಳ್ಳೆಯ ಪ್ರಾಜೆಕ್ಟ್ ಬಿಡಬೇಡ, ಅವಕಾಶ ಸಿಕ್ಕಿದೆ ಹೋಗು ಎಂದು ಅಮ್ಮನೂ ಹೇಳಿದ್ರು. ಅದಕ್ಕಾಗಿ ನಾನೂ ಒಪ್ಪಿಕೊಂಡೆ ಎಂದು ಹೇಳಿದ್ದರು. ಆದರೆ, ಇದೀಗ ಕಾನೂನು ಸಂಕಷ್ಟದಲ್ಲಿ ಅವರು ಸಿಲುಕಿಕೊಂಡಿರುವ ಕಾರಣದಿಂದ ಇಡೀ ಸೀರಿಯಲ್ ತಂಡದ ಸ್ಥಿತಿ ಅಯೋಮಯವಾಗಿದೆ.
ಸೀರಿಯಲ್ ಸ್ಟಾಪ್ ಆಗಿದ್ದ ಕಾರಣಕ್ಕೆ ನಾಯಕ ಕಿರಣ್ ರಾಜ್ ಮತ್ತು ಇನ್ನೋರ್ವ ನಾಯಕ ನಮ್ರತಾ ಗೌಡ ವೀಕ್ಷಕರಲ್ಲಿ ಕ್ಷಮೆ ಕೋರಿದ್ದಾರೆ. ನಾನು ಎಲ್ಲ ಪ್ರೇಕ್ಷಕರ ಕ್ಷಮೆ ಕೇಳುತ್ತೇನೆ. ನೀವು ಕೊಟ್ಟ ಸ್ಪಂದನೆ, ಪ್ರೀತಿಗೆ ನಾವು ಕೂಡ ಈ ಸೀರಿಯಲ್ ಅನ್ನ ನಿಮ್ಮ ಮುಂದೆ ಇಡಬೇಕು ಎಂದು ಉತ್ಸಾಹದಿಂದ ಕಾದಿದ್ವಿ. ಆದರೆ ಕೆಲವೊಂದು ಸಮಸ್ಯೆಗಳಿಂದ ಅದು ಆಗುತ್ತಿಲ್ಲ ಎಂದು ಕ್ಷಮೆ ಕೋರಿದ್ದರು. ಅದೇ ರೀತಿ ನಮ್ರತಾ ಗೌಡ ಕೂಡ ನೀವೆಲ್ಲಾ ಕೇಳುತ್ತಿರೋ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ. ತುಂಬಾ ಜನ ಮೆಸೇಜ್ ಮಾಡಿದ್ರಿ. 16ನೇ ತಾರೀಖು ಪ್ರಸಾರ ಆಗಬೇಕಿದ್ದ ಕರ್ಣ ಧಾರಾವಾಹಿ ಏಕೆ ಪ್ರಸಾರ ಆಗಲಿಲ್ಲ ಅಂತ ಕೇಳಿದ್ರಿ. ಆದ್ರೆ ಇಡೀ ತಂಡದ ಪರವಾಗಿ ನಾನು ನಿಮ್ಮಲ್ಲಿ ಕ್ಷಮೆ ಕೇಳುತ್ತೇನೆ. ಕಾರಣಾಂತರಗಳಿಂದ ನಾವು ಬರೋದಕ್ಕೆ ಆಗಿಲ್ಲ. ಆದ್ರೆ ಪ್ರಾಮಿಸ್ ಮತ್ತೆ 8 ಗಂಟೆಗೆ ನಾವು ಆದಷ್ಟು ಬೇಗನೇ ಬರುತ್ತೇವೆ ಅಂತ ಹೇಳಿದ್ದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.