
ಕನ್ನಡ ಸಿನಿಮಾ ಕ್ಷೇತ್ರವನ್ನು ದೇಶ, ವಿಶ್ವವೇ ತಿರುಗಿ ನೋಡುವಂತೆ ಮಾಡಿದ ಕೆಜಿಎಫ್ ಸಿನಿಮಾದ ಎರಡನೇ ಭಾಗದಲ್ಲಿ ಬಾಲಿವುಡ್ ಸ್ಟಾರ್ ಸಂಜಯ್ ದತ್ ಅಭಿನಯಿಸುತ್ತಾರೆ ಎಂಬುದು ಗೊತ್ತು. ಅವರ ಲುಕ್ ಹೇಗಿರಲಿದೆ.. ಎಂಬ ಕುತೂಹಲ ಎಲ್ಲರಿಗೂ ಇತ್ತು.
ಇದೀಗ ಎಲ್ಲರ ಕುತೂಹಲಕ್ಕೆ ತೆರೆ ಬಿದ್ದಿದೆ. ಕೆಜಿಎಫ್ ಚಾಪ್ಟರ್ -2 ನಲ್ಲಿ ನಟಿಸ್ತಿರೋ ಸಂಜಯ್ ದತ್ ರಿವೀಲ್ ಆಗಿದೆ. ಹೈ ಕಾನ್ಫಿಡೆನ್ಶಿಯಲ್ ಆಗಿದ್ದ ಫೋಟೋ ಲೀಕ್ ಆಗಿ ಸದ್ದು ಮಾಡ್ತಿದೆ.
#KGF ಹೊಸ ದಾಖಲೆ ಮುರಿದ ಯಶ್; ಏನಿದು?
ಸಂಜು ಭಾಯ್ ಲುಕ್ ರಿವೀಲ್ ಆಗಬಾರದು ಅಂತಾ ಕೆಜಿಎಫ್ ಟೀಂ ಹರಸಾಹಸ ಪಟ್ಟಿತ್ತು. ಆದರೆ ಈಗ ಲೀಕ್ ಫೋಟೊವನ್ನು ಅಧೀರ ಲುಕ್ ಎನ್ನಲಾಗಿದೆ. ಕೆಜಿಎಫ್ ಶೂಟಿಂಗ್ ಆರಂಭವಾಗಿದ್ದ ಟೈಂನಲ್ಲಿ ಸಂಜಯ್ ದತ್, ಇದೇ ಹೇರ್ ಸ್ಟೈಲ್, ಬಿಯರ್ಡ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದರು.
ಹೀಗಾಗಿ ಲೀಕ್ ಆಗಿರೋ ಫೋಟೊ ಅಧೀರನದ್ದೇ ಅನ್ನೋ ಸುದ್ದಿ ಹರಿದಾಡ್ತಿದೆ. ರಿವೀಲ್ ಆಗಿರುವ ಫೋಟೋ ಬಗ್ಗೆ ಚಿತ್ರರಂಗ ಇನ್ನೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಒಂದು ವೇಳೆ ಇದೇ ಲುಕ್ ನಿಜವಾಗಿದ್ದರೆ ಭಾರೀ ಸೀಕ್ರೇಟ್ ಕಾಪಾಡಿಕೊಂಡಿದ್ದ ಸಿನಿಮಾ ತಂಡಕ್ಕೆ ನಿರಾಸೆಯಾಗುವ ಸಾಧ್ಯತೆ ಇದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.