Toxic ಬೋಲ್ಡ್ ಸೀನ್ಸ್‌ನಿಂದ ಕಿಯಾರಾಗೆ ಮುಜುಗರ; ನಿರ್ಮಾಪಕರ ಬಳಿ ನಟಿ ರಿಕ್ವೆಸ್ಟ್‌, 'ಆ' ದೃಶ್ಯಕ್ಕೆ ಕತ್ತರಿ ಬೀಳುತ್ತಾ?

Published : May 03, 2026, 09:03 AM IST
Toxic

ಸಾರಾಂಶ

Toxic Movie Update: ಸ್ಯಾಂಡಲ್‌ವುಡ್‌ನ ಮೋಸ್ಟ್ ಅವೈಟೆಡ್ ಸಿನಿಮಾ 'ಟಾಕ್ಸಿಕ್' ಬಿಡುಗಡೆಯ ದಿನಾಂಕ ಮುಂದೂಡಲ್ಪಟ್ಟಿರುವುದು ಒಂದೆಡೆಯಾದರೆ, ಚಿತ್ರದ ಬೋಲ್ಡ್ ದೃಶ್ಯಗಳನ್ನು ಕತ್ತರಿಸುವಂತೆ ನಟಿ ಕಿಯಾರಾ ಅಡ್ವಾಣಿ ಅವರು ಚಿತ್ರತಂಡಕ್ಕೆ ಮನವಿ ಮಾಡಿದ್ದಾರೆ ಎನ್ನಲಾಗಿದೆ. ಈ ಕುರಿತು ಹೊರಬಿದ್ದಿರುವ ಲೇಟೆಸ್ಟ್ ಅಪ್‌ಡೇಟ್ ಇಲ್ಲಿದೆ ನೋಡಿ.

ನ್ನಡ ಚಿತ್ರರಂಗದ ಹೆಮ್ಮೆಯ ನಟ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ಚಿತ್ರ 'ಟಾಕ್ಸಿಕ್' (Toxic) ದಿನಕ್ಕೊಂದು ಹೊಸ ಸುದ್ದಿಯ ಮೂಲಕ ಸಿನಿರಂಗದಲ್ಲಿ ಸಂಚಲನ ಮೂಡಿಸುತ್ತಿದೆ. ಚಿತ್ರದ ಬಿಡುಗಡೆ ದಿನಾಂಕ ಪದೇ ಪದೇ ಮುಂದೂಡಲ್ಪಡುತ್ತಿರುವುದು ಅಭಿಮಾನಿಗಳಲ್ಲಿ ಕುತೂಹಲ ಮತ್ತು ಆತಂಕವನ್ನು ಮೂಡಿಸಿದ್ದರೆ, ಇದೀಗ ಚಿತ್ರದ ನಾಯಕಿ ಕಿಯಾರಾ ಅಡ್ವಾಣಿ ಅವರು ಮಾಡಿರುವ ಒಂದು ವಿಶೇಷ ವಿನಂತಿ ಚಿತ್ರತಂಡದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ.

ಬಿಡುಗಡೆ ದಿನಾಂಕದ ಗೊಂದಲ ಮತ್ತು ಬದಲಾವಣೆ

ಸಿನಿಮಾ ಪ್ರೇಮಿಗಳು ಯಶ್ ಅವರ 'ಟಾಕ್ಸಿಕ್' ಮತ್ತು 'ರಾಮಾಯಣ' ಚಿತ್ರಗಳಿಗಾಗಿ ಕಾತರದಿಂದ ಕಾಯುತ್ತಿದ್ದಾರೆ. ಮೊದಲು 'ಟಾಕ್ಸಿಕ್' ಚಿತ್ರವನ್ನು ಮಾರ್ಚ್ 19 ರಂದು ಅದ್ಧೂರಿಯಾಗಿ ತೆರೆಗೆ ತರಲು ಸಿದ್ಧತೆ ನಡೆಸಲಾಗಿತ್ತು. ಆದರೆ ಅದೇ ದಿನ 'ಧುರಂಧರ್ 2' ಸಿನಿಮಾ ಕೂಡ ಬಿಡುಗಡೆಯಾಗಲಿದ್ದ ಕಾರಣ, ಬಾಕ್ಸ್ ಆಫೀಸ್ ಸಂಘರ್ಷ ತಪ್ಪಿಸಲು ದಿನಾಂಕವನ್ನು ಬದಲಿಸಲಾಯಿತು. ತದನಂತರ ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿನ ಯುದ್ಧದಂತಹ ಪರಿಸ್ಥಿತಿ ಹಾಗೂ ತಾಂತ್ರಿಕ ಕಾರಣಗಳಿಂದಾಗಿ ಜೂನ್ 4 ಕ್ಕೆ ದಿನಾಂಕ ನಿಗದಿಪಡಿಸಲಾಗಿತ್ತು. ಆದರೆ ಈಗ ಜೂನ್ 4 ರಂದು ಸಹ ಸಿನಿಮಾ ಬಿಡುಗಡೆಯಾಗುತ್ತಿಲ್ಲ ಎಂಬ ಮಾಹಿತಿ ಹೊರಬಿದ್ದಿದ್ದು, ದಿನಾಂಕವನ್ನು ಮತ್ತೆ ಮುಂದಕ್ಕೆ ಹಾಕಲಾಗಿದೆ.

ಕಿಯಾರಾ ಅಡ್ವಾಣಿ ಅವರ ಬೇಡಿಕೆ ಮತ್ತು ಆತಂಕ

ಈ ಬೃಹತ್ ಬಜೆಟ್ ಸಿನಿಮಾದಲ್ಲಿ ಕಿಯಾರಾ ಅಡ್ವಾಣಿ, ನಯನತಾರಾ, ಹುಮಾ ಖುರೇಷಿ, ರುಕ್ಮಿಣಿ ವಸಂತ್ ಮತ್ತು ತಾರಾ ಸುತಾರಿಯಾ ಅವರಂತಹ ಹೆಸರಾಂತ ನಟಿಯರು ನಟಿಸುತ್ತಿದ್ದಾರೆ. ಚಿತ್ರದಲ್ಲಿ ಯಶ್‌ ಅವರಿಗೆ ಜೋಡಿಯಾಗಿ ಕಿಯಾರಾ ಅಡ್ವಾಣಿ ಕಾಣಿಸಿಕೊಂಡಿದ್ದು, ಈಗಾಗಲೇ ಇವರ ಜೋಡಿಯ ಒಂದು ಹಾಡು ಬಿಡುಗಡೆಯಾಗಿ ಸಖತ್ ಸೌಂಡ್ ಮಾಡುತ್ತಿದೆ. ಕಿಯಾರಾ ಅವರು ಈ ಚಿತ್ರದ ಶೂಟಿಂಗ್ ಅನ್ನು ಬಹಳ ಮೊದಲೇ ಪೂರ್ಣಗೊಳಿಸಿದ್ದರು. ಆದರೆ ಇತ್ತೀಚೆಗೆ ಚಿತ್ರದ ಕೆಲವು ದೃಶ್ಯಗಳು ಮತ್ತು ಟೀಸರ್‌ನಲ್ಲಿರುವ ಇಂಟಿಮೇಟ್ (ಆಪ್ತ) ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಗೆ ಹಾಗೂ ವಿವಾದಕ್ಕೆ ಗ್ರಾಸವಾದವು.

ವರದಿಗಳ ಪ್ರಕಾರ, ಚಿತ್ರೀಕರಣದ ಸಮಯದಲ್ಲಿ ನಿರ್ದೇಶಕಿ ಗೀತು ಮೋಹನ್ ದಾಸ್ ಅವರ ಸೂಚನೆಯಂತೆ ಕಿಯಾರಾ ಈ ಬೋಲ್ಡ್ ದೃಶ್ಯಗಳಲ್ಲಿ ನಟಿಸಲು ಸಮ್ಮತಿಸಿದ್ದರು. ಆದರೆ ಎಡಿಟಿಂಗ್ ನಂತರ ಸಿದ್ಧವಾದ ದೃಶ್ಯಗಳನ್ನು ನೋಡಿದಾಗ ಕಿಯಾರಾ ಅವರಿಗೆ ಮುಜುಗುರ ಉಂಟಾಗಿದೆ ಎನ್ನಲಾಗಿದೆ. ಈ ಕಾರಣದಿಂದಾಗಿ ಅವರು ಚಿತ್ರತಂಡಕ್ಕೆ ಆ ದೃಶ್ಯಗಳ ಉದ್ದವನ್ನು ತಕ್ಷಣವೇ ಕಡಿಮೆ ಮಾಡಲು ಅಥವಾ ಆ ದೃಶ್ಯಗಳನ್ನೇ ಚಿತ್ರದಿಂದ ಪೂರ್ಣವಾಗಿ ಕೈಬಿಡುವಂತೆ ಮನವಿ ಮಾಡಿದ್ದಾರೆ. ಒಂದು ವೇಳೆ ಈ ದೃಶ್ಯಗಳನ್ನು ಹಾಗೆಯೇ ಉಳಿಸಿಕೊಂಡರೆ ಅದು ತಮ್ಮ ಕೌಟುಂಬಿಕ ಇಮೇಜ್ ಮೇಲೆ ಪರಿಣಾಮ ಬೀರಬಹುದು ಎಂಬ ಆತಂಕ ಅವರಲ್ಲಿದೆ ಎನ್ನಲಾಗಿದೆ.

ದೊಡ್ಡ ಮೊತ್ತದ ಸಂಭಾವನೆ ಮತ್ತು ಸವಾಲು

ಕಿಯಾರಾ ಅಡ್ವಾಣಿ ಈ ಚಿತ್ರಕ್ಕಾಗಿ ಬರೋಬ್ಬರಿ 15 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರೆ ಎಂದು ವರದಿಯಾಗಿದೆ. ಇದು ಅವರ ವೃತ್ತಿಜೀವನದ ಅತ್ಯಂತ ಹೆಚ್ಚಿನ ಸಂಭಾವನೆಯಾಗಿದ್ದು, ಚಿತ್ರದ ಮೇಲಿನ ನಿರೀಕ್ಷೆಯನ್ನು ಹೆಚ್ಚಿಸಿದೆ. ಕಿಯಾರಾ ಅವರ ಈ ಮನವಿಯಿಂದಾಗಿ ಚಿತ್ರದ ಅಂತಿಮ ಎಡಿಟಿಂಗ್‌ನಲ್ಲಿ ಮಹತ್ವದ ಬದಲಾವಣೆ ಮಾಡಬೇಕಾದ ಅನಿವಾರ್ಯತೆ ನಿರ್ದೇಶಕರಿಗೆ ಎದುರಾಗಿದೆ. ಯಶ್ ಅವರ ಕೆರಿಯರ್‌ನಲ್ಲಿ 'ಟಾಕ್ಸಿಕ್' ಅತ್ಯಂತ ಮಹತ್ವದ ಚಿತ್ರವಾಗಿದ್ದು, ನಾಯಕಿಯ ಈ ಹೊಸ ಬೇಡಿಕೆಯನ್ನು ಚಿತ್ರತಂಡ ಹೇಗೆ ನಿಭಾಯಿಸುತ್ತದೆ ಎಂಬುದನ್ನು ಕಾದು ನೋಡಬೇಕಿದೆ. ಈ ಬೆಳವಣಿಗೆಯು ಚಿತ್ರದ ಬಿಡುಗಡೆಗೆ ಮತ್ತಷ್ಟು ತಡವಾಗುವಂತೆ ಮಾಡುವ ಸಾಧ್ಯತೆಯೂ ಇದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ನಟ ಅಜಿತ್ ಮೇಲೆ ಕ್ರಶ್ ಇತ್ತು.. ಆ ಒಂದು ಮಾತಿಗೆ ಎಲ್ಲ ಮುಗೀತು: ನಟಿ ಮಹೇಶ್ವರಿ
ಭಾಗ್ಯಲಕ್ಷ್ಮೀ ಧಾರಾವಾಹಿ ತನ್ಮಯ್‌ಗೆ ಒಲಿದ 'ಅದೃಷ್ಟಲಕ್ಷ್ಮೀ'; ಶೋಮ್ಯಾನ್‌ ಕಣ್ಣಿಗೆ ಬಿದ್ದ ನಿಹಾರ್‌ ಗೌಡ