ಮೋದಿಗೆ ಮತ ಹಾಕದಂತೆ ಈ ಬಾಲಿವುಡ್​ ಸೆಲೆಬ್ರಿಟಿಗಳ ಸಹಿ ಸಂಗ್ರಹ: ಆ ದಿನಗಳ ನೆನೆದ ಅನುಪಮ್​ ಖೇರ್​

Published : Apr 27, 2026, 12:48 PM IST
Anupam Kher about PM Modi

ಸಾರಾಂಶ

2014ರಲ್ಲಿ ಪ್ರಧಾನಿ ಅಭ್ಯರ್ಥಿಯಾಗಿದ್ದ ನರೇಂದ್ರ ಮೋದಿಗೆ ಮತ ಹಾಕದಂತೆ ಸುಮಾರು 60 ಬಾಲಿವುಡ್ ಸೆಲೆಬ್ರಿಟಿಗಳು ಸಹಿ ಚಳವಳಿ ನಡೆಸಿದ್ದರು. ಈ ಪತ್ರಕ್ಕೆ ಸಹಿ ಹಾಕಲು ತಮ್ಮ ಮೇಲೂ ಒತ್ತಡ ಹೇರಲಾಗಿತ್ತು ಎಂದು ನಟ ಅನುಪಮ್ ಖೇರ್ ಈಗ ಆ ಘಟನೆಯನ್ನು ನೆನಪಿಸಿಕೊಂಡಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಮತ್ತು ಬಾಲಿವುಡ್ ನಡುವೆ ಇಂದು ಬಲವಾದ ನಂಟಿದೆ. ಸ್ವಚ್ಛ ಭಾರತ್, ಬೇಟಿ ಬಚಾವೋ-ಬೇಟಿ ಪಢಾವೋ ಮುಂತಾದ ಅಭಿಯಾನಗಳಿಗೆ ಬಾಲಿವುಡ್ ತಾರೆಯರು ರಾಯಭಾರಿಗಳಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಚಿತ್ರರಂಗದ ಸಮಸ್ಯೆಗಳಾದ ಜಿಎಸ್‌ಟಿ ಕಡಿತದಂತಹ ವಿಷಯಗಳಿಗೂ ಸರ್ಕಾರ ಸ್ಪಂದಿಸಿದೆ. ಮೋದಿ ಸರ್ಕಾರದ ನೀತಿಗಳು ಮತ್ತು ಯೋಜನೆಗಳನ್ನು ಬಾಲಿವುಡ್‌ನ ಹಲವು ನಟ-ನಟಿಯರು ಬಹಿರಂಗವಾಗಿ ಬೆಂಬಲಿಸುತ್ತಾರೆ. ಅಷ್ಟೇ ಅಲ್ಲದೇ ಮೋದಿ ನೇತೃತ್ವದ ಸರ್ಕಾರ, ಚಲನಚಿತ್ರರಂಗದ ಅಭಿವೃದ್ಧಿಗೆ ಮತ್ತು ಪ್ರಚಾರಕ್ಕೆ ಹಿಂದೆಂದಿಗಿಂತಲೂ ನಿರಂತರ ಪ್ರೋತ್ಸಾಹ ನೀಡುತ್ತಾ ಬಂದಿದೆ. ಜೊತೆಗೆ, ಕಳೆದೊಂದು ದಶಕದಿಂದ ಬಾಲಿವುಡ್‌ನಲ್ಲಿ ರಾಷ್ಟ್ರೀಯತೆ, ರಾಜಕೀಯ ಮತ್ತು ಐತಿಹಾಸಿಕ ಹಿನ್ನೆಲೆಯುಳ್ಳ ಸಿನಿಮಾಗಳು ಹೆಚ್ಚು ಯಶಸ್ಸನ್ನು ಕಾಣುತ್ತಿವೆ. ಗಾಂಧಿ ಜಯಂತಿಯಂತಹ ವಿಶೇಷ ಸಂದರ್ಭಗಳಲ್ಲಿ ಪ್ರಧಾನಿ ಮೋದಿ ಬಾಲಿವುಡ್‌ನ ಪ್ರಮುಖ ತಾರೆಯರೊಂದಿಗೆ ಸಭೆ ನಡೆಸಿ, ಸಮಾಜ ಜಾಗೃತಿಯಲ್ಲಿ ಸಿನಿಮಾರಂಗದ ಪಾತ್ರದ ಬಗ್ಗೆ ಚರ್ಚಿಸಿದ್ದಾರೆ.

ಮೋದಿಗೆ ಸಹಿ ಹಾಕಬೇಡಿ ಎಂದಿದ್ದರು!

ಇವೆಲ್ಲವೂ ನರೇಂದ್ರ ಮೋದಿ ಅವರು ಪ್ರಧಾನಿಯಾದ ಮೇಲಿನ ಘಟನೆಗಳು ಅನ್ನಿ. ಆದರೆ ನಿಮಗೆ ಗೊತ್ತಾ? 2014ರಲ್ಲಿ ನರೇಂದ್ರ ಮೋದಿ ಅವರ ಪ್ರಥಮ ಬಾರಿಗೆ ಪ್ರಧಾನಿ ಹುದ್ದೆ ಆಕಾಂಕ್ಷಿಯಾಗಿದ್ದರು. 14 ವರ್ಷಗಳವರೆಗೆ ಗುಜರಾತ್​ ಮುಖ್ಯಮಂತ್ರಿಯಾದ ಬಳಿಕ ಅವರು ಪ್ರಧಾನಿ ಹುದ್ದೆಗೆ ಉಮೇದುವಾರಿಕೆ ಸಲ್ಲಿಸಿದ್ದರು. ಆಗ ಬಾಲಿವುಡ್​ನಲ್ಲಿ ನಡೆದದ್ದೇ ಬೇರೆ. ಸ್ಟಾರ್​ ನಟರೂ ಸೇರಿ ಸುಮಾರು 60 ಮಂದಿ ಬಾಲಿವುಡ್​ ಸೆಲೆಬ್ರಿಟಿಗಳು ಮೋದಿ ಅವರಿಗೆ ಮತ ಹಾಕದಂತೆ ಸಹಿ ಸಂಗ್ರಹ ಚಳವಳಿ ನಡೆಸಿದ್ದರು. ಅದು ಅಂದು ತುಂಬಾ ಸುದ್ದಿ ಕೂಡ ಆಗಿತ್ತು. ಹಾಗೂ ಅದರಲ್ಲಿ ಇರುವ ಸ್ಟಾರ್​ ನಟರು ಯಾರು ಎನ್ನುವ ಬಗ್ಗೆಯೂ ಕೆಲವು ಹೆಸರುಗಳು ಮುನ್ನೆಲೆಗೆ ಬಂದಿದ್ದವು.

ಅನುಪಮ್ ಖೇರ್​ ಮಾತು

ಈಗ ಆ ಬಗ್ಗೆ ನಟ ಅನುಪಮ್ ಖೇರ್​ ಪುನಃ ಮಾತನಾಡಿದ್ದಾರೆ. viral_news_ind ನಲ್ಲಿ ಇದನ್ನು ಶೇರ್​ ಮಾಡಲಾಗಿದೆ. 2014ರಲ್ಲಿ ಕೆಲವು ಬಾಲಿವುಡ್​ ನಟರು ಪತ್ರವೊಂದನ್ನು ತಂದು ನನಗೆ ಸಹಿ ಮಾಡಲು ಒತ್ತಾಯಿಸಿದ್ದರು. ಅದರಲ್ಲಿ ಮೋದಿ ಅವರಿಗೆ ವೋಟ್​ ಹಾಕಬಾರದು ಎಂದು ಉಲ್ಲೇಖಿಸಲಾಗಿತ್ತು. ನನ್ನ ಮೇಲೆಯೂ ಸಹಿ ಹಾಕುವಂತೆ ಒತ್ತಡ ಹಾಕಿದ್ದರು. ನಾನು ಹಾಕುವುದಿಲ್ಲ. ನಾನ್ಯಾಕೆ ಹಾಕಬೇಕು, ನನ್ನ ಮೇಲೆ ಏಕೆ ಒತ್ತಡ ಹಾಕುತ್ತೀರಿ ಎಂದು ಪ್ರಶ್ನಿಸಿದೆ. ಇದು ಪ್ರಜಾಪ್ರಭುತ್ವ ರಾಷ್ಟ್ರ. ನಾನು ಯಾರಿಗಾದರೂ ವೋಟ್​ ಮಾಡಬಹುದು, ನನ್ನ ಮೇಲೆ ಒತ್ತಡ ಯಾಕೆ ಹಾಕುತ್ತೀರಿ ಎಂದು ಪ್ರಶ್ನಿಸಿದೆ ಎಂದು ಅಂದು ನಡೆದ ಘಟನೆಯನ್ನು ನೆನಪಿಸಿಕೊಂಡಿದ್ದಾರೆ ಅನುಪಮ್​ ಖೇರ್​.

ಯಾರವರು?

ಪತ್ರಕ್ಕೆ ಸಹಿ ಹಾಕಿರುವ ಅರವತ್ತು ಚಲನಚಿತ್ರ ವ್ಯಕ್ತಿಗಳಲ್ಲಿ ಇಮ್ತಿಯಾಜ್ ಅಲಿ, ವಿಶಾಲ್ ಭಾರದ್ವಾಜ್, ನಂದಿತಾ ದಾಸ್, ಗೋವಿಂದ್ ನಿಹಲಾನಿ, ಸಯೀದ್ ಮಿರ್ಜಾ, ಜೋಯಾ ಅಖ್ತರ್, ನಂದಿತಾ ದಾಸ್, ಕಬೀರ್ ಖಾನ್, ಮಹೇಶ್ ಭಟ್, ಶುಭಾ ಮುದ್ಗಲ್ ಮತ್ತು ಅದಿತಿ ರಾವ್ ಹೈದರಿ ಸೇರಿರುವುದಾಗಿ ಅಂದು ಸಾಕಷ್ಟು ಸುದ್ದಿಯಾಗಿತ್ತು. ಇವರ ಪೈಕಿ, ನಂದಿತಾ ದಾಸ್, ಅದಿತಿ ರಾವ್ ಹೈದರಿ, ಸ್ವರಾ ಭಾಸ್ಕರ್, ಜಾಯ್ ಸೇನ್‌ಗುಪ್ತಾ ನಟರಾಗಿದ್ದರೆ ಉಳಿದವರು ಸಂಗೀತಗಾರರು ಹಾಗೂ ಇತರರು.

 

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

'ಮದುವೆ ಬೇಡ, ಮಗು ಬೇಕು ಅಂದ್ರೇನು ತಪ್ಪು?'.. ಕನ್ನಡತಿ ನಿತ್ಯಾ ಮೆನನ್ ಬೋಲ್ಡ್ ಮಾತಿಗೆ ಸಿಕ್ಕಾಪಟ್ಟೆ ಸಂಚಲನ!
ಕೈಗೆ ಬಂದ ತುತ್ತು ಬಾಯಿಗೆ ಬರ್ಲಿಲ್ಲ.. ಧನುಷ್ ಚಿತ್ರದಿಂದ ಚೈತ್ರಾ ಆಚಾರ್ ಔಟ್ ಆಗಿದ್ದೇಕೆ? ಇಲ್ಲಿದೆ ಆ ಸೀಕ್ರೆಟ್ ಕಹಾನಿ