ಕಾಳಿ ಚಿತ್ರದಲ್ಲಿ ಹಿಂದೂ ಧಾರ್ಮಿಕ ಭಾವನೆಗೆ ಧಕ್ಕೆ: ಸಾಕ್ಷ್ಯಚಿತ್ರ ಪ್ರದರ್ಶನ ಮಾಡದಂತೆ ಸೂಚನೆ

By Govindaraj SFirst Published Jul 4, 2022, 11:22 PM IST
Highlights

ಒಟ್ಟಾವಾದಲ್ಲಿರುವ ಭಾರತೀಯ ಹೈಕಮಿಷನ್ ಸೋಮವಾರ ವಿವಾದಾತ್ಮಕ ಸಾಕ್ಷ್ಯಚಿತ್ರ 'ಕಾಳಿ'ಗೆ ಸಂಬಂಧಿಸಿದ ಎಲ್ಲಾ 'ಪ್ರಚೋದನಕಾರಿ' ಅಂಶಗಳನ್ನು ತೆಗೆದು ಹಾಕುವಂತೆ ಕೆನಡಾದ ಅಧಿಕಾರಿಗಳಿಗೆ ಒತ್ತಾಯಿಸಿದೆ.

ಒಟ್ಟವಾ (ಜು.04): ಒಟ್ಟಾವಾದಲ್ಲಿರುವ ಭಾರತೀಯ ಹೈಕಮಿಷನ್ ಸೋಮವಾರ ವಿವಾದಾತ್ಮಕ ಸಾಕ್ಷ್ಯಚಿತ್ರ 'ಕಾಳಿ'ಗೆ ಸಂಬಂಧಿಸಿದ ಎಲ್ಲಾ 'ಪ್ರಚೋದನಕಾರಿ' ಅಂಶಗಳನ್ನು ತೆಗೆದು ಹಾಕುವಂತೆ ಕೆನಡಾದ ಅಧಿಕಾರಿಗಳಿಗೆ ಒತ್ತಾಯಿಸಿದೆ. ಟೊರೊಂಟೊದ ಅಗಾ ಖಾನ್ ಮ್ಯೂಸಿಯಂನಲ್ಲಿ ಪ್ರದರ್ಶಿಸಲಾದ ಚಲನಚಿತ್ರ ಪೋಸ್ಟರ್‌ನಲ್ಲಿ ಹಿಂದೂ ದೇವರುಗಳ 'ಅಗೌರವ'ದ ಬಗ್ಗೆ ಕೆನಡಾದ ಹಿಂದೂ ಸಮುದಾಯದ ಮುಖಂಡರಿಂದ ದೂರುಗಳನ್ನು ಸ್ವೀಕರಿಸಲಾಗಿದೆ ಎಂದು ಆಯೋಗ ಹೇಳಿದೆ.

ಈ ಕುರಿತು ಪ್ರಕಟಣೆ ಹೊರಡಿಸಿರುವ ಭಾರತೀಯ ಹೈಕೋರ್ಟ್, ಅಗಾ ಖಾನ್ ಮ್ಯೂಸಿಯಂನಲ್ಲಿ 'ಅಂಡರ್ ದಿ ಟೆಂಟ್' ಯೋಜನೆಯ ಭಾಗವಾಗಿ ಪ್ರದರ್ಶಿಸಲಾದ ಚಿತ್ರದ ಪೋಸ್ಟರ್‌ನಲ್ಲಿ ಹಿಂದೂ ದೇವರುಗಳನ್ನು ಅಗೌರವದಿಂದ ಚಿತ್ರಿಸಲಾಗಿದೆ. ಈ ಬಗ್ಗೆ ಕೆನಡಾದ ಹಿಂದೂ ಸಮುದಾಯದ ಮುಖಂಡರಿಂದ ನಾವು ದೂರುಗಳನ್ನು ಸ್ವೀಕರಿಸಿದ್ದೇವೆ. ಹಲವಾರು ಹಿಂದೂ ಸಮುದಾಯಗಳು ಈ ಬಗ್ಗೆ ಕ್ರಮ ಕೈಗೊಳ್ಳಲು ಕೆನಡಾದ ಅಧಿಕಾರಿಗಳನ್ನು ಸಂಪರ್ಕಿಸಿವೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

Latest Videos

ಸಿಗರೇಟ್‌ ಸೇದುತ್ತಿರುವ ಕಾಳಿ ಮಾತೆ, ಕೈಯ್ಯಲ್ಲಿ LGBTQ ಧ್ವಜ: ಸಿನಿಮಾ ಪೋಸ್ಟರ್‌ನಿಂದ ಭಾರೀ ವಿವಾದ!

ಧಾರ್ಮಿಕ ಭಾವನೆಗೆ ಧಕ್ಕೆ ವಿಚಾರದಲ್ಲಿ ದೇಶ ರಣಾಂಗಣವಾಗಿದೆ. ಸಾಲು ಸಾಲು ಘಟನೆಗಳ ಬೆನ್ನಲ್ಲೇ ಇದೀಗ ಕಾಳಿ ಸಾಕ್ಷ್ಯ ಚಿತ್ರ ಹೊಸ ಸಂಘರ್ಷಕ್ಕೆ ದಾರಿ ಮಾಡಿದೆ. ನಿರ್ಮಾಪಕಿ ಲೀನಾ ಮಣಿಮೇಕಲೈ ಅವರ ಸಾಕ್ಷ್ಯಚಿತ್ರ ಕಾಳಿ ಈ ವಿವಾದದ ಕೇಂದ್ರ ಬಿಂದು. ಕಾಳಿ ದೇವತೆಯ ಕೈಯಲ್ಲಿ ಸಿಗರೇಟು, ಹಾಗೂ ಸಲಿಂಗಿಗಳ ಧ್ವಜ ಹಿಡಿದಿರುವ ಪೋಸ್ಟರ್ ಭಾರಿ ವಿವಾದ ಸೃಷ್ಟಿಸಿದೆ. ಭಾರತದ ಹಲವು ಕಡೆಗಳಲ್ಲಿ ದೂರು ದಾಖಲಾಗಿದೆ. 

ಕೆನಡಾದಲ್ಲಿರುವ ಹಿಂದೂ ಸಮುದಾಯ ದೂರು ನೀಡಿದೆ. ಟೊರೆಂಟೋದಲ್ಲಿ ಆಯೋಜಿಸಿರುವ ಚಲನಚಿತ್ರ ಪ್ರದರ್ಶನ ಕಾರ್ಯಕ್ರಮದಲ್ಲಿ ಈ ಪೋಸ್ಟರ್ ಬಹಿರಂಗವಾಗಿದೆ. ಇದು ಹಿಂದೂ ಸಮುದಾಯದ ಆಕ್ರೋಶಕ್ಕೆ ಕಾರಣವಾಗಿದೆ. ಇದರ ಬೆನ್ನಲ್ಲೇ ಓಟ್ಟಾವದಲ್ಲಿರುವ ಭಾರತೀಯ ಹೈಕಮಿಷನರ್ ಕಚೇರಿಯಲ್ಲಿ ದೂರು ನೀಡಲಾಗಿದೆ. ಹಲವು ಹಿಂದೂ ಸಂಘಟನೆಗಳು ಈ ಕುರಿತು ದೂರು ನೀಡಿದ್ದು ಕಠಿಣ ಕ್ರಮಕ್ಕೆ ಆಗ್ರಹಿಸಿದೆ.

ಲೀನಾ ವಿರುದ್ಧ ರೇಣುಕಾಚಾರ್ಯ ಆಕ್ರೋಶ
ದಾವಣಗೆರೆ: ಹಿಂದೂ ದೇವತೆಗಳಿಗೆ ಅಪಮಾನ ಮಾಡಿದ ಚಲನಚಿತ್ರ ತಯಾರಕಿ ಲೀನಾ ವಿರುದ್ದ ರೇಣುಕಾಚಾರ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಲೀನಾ ಮಾಡಿದ ಅಪಮಾನವನ್ನು ಖಂಡಿಸುತ್ತೇವೆಂದು ಜಿಲ್ಲೆಯ ದಾವಣಗೆರೆಯ ಹೊನ್ನಾಳಿ ಯಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ ಎಂಪಿ ರೇಣುಕಾಚಾರ್ಯ.

ಲಾಠಿ ಚಿತ್ರದ ಶೂಟಿಂಗ್ ವೇಳೆ ನಟ ವಿಶಾಲ್‌ಗೆ ಗಾಯ,ಚಿತ್ರೀಕರಣ ರದ್ದು!

ನಮ್ಮ ದೇವಾನುದೇವತೆಗಳಿಗೆ ದೇಶದ್ರೋಹಿಗಳು ಅಪಮಾನ ಮಾಡುತ್ತಿದ್ದಾರೆ. ಮತ್ತೊಂದೆಡೆ ಹಿಂದೂ ಯುವಕರನ್ನು ಹತ್ಯೆ ಮಾಡಲಾಗುತ್ತಿದೆ.  ತಮಿಳುನಾಡಿನಲ್ಲಿ ಲೀನಾ ಎನ್ನುವ ಕ್ರಿಶ್ಚಿಯನ್ ಮಹಿಳೆ ಕಾಳಿ ದೇವತೆಗೆ ಅವಮಾನಿಸಿದ್ದಾರೆ. ಒಂದು ಕೈಯಲ್ಲಿ ಸಿಗರೇಟ್ ಹಿಡಿಸಿ ಅಪಮಾನ ಮಾಡಿದ್ದಾರೆ. ಇದನ್ನು ಹಿಂದೂಗಳು ಒಕ್ಕೂರಲಿನಿಂದ ಖಂಡಿಸಬೇಕು. ತಮಿಳುನಾಡಿನಲ್ಲಿ ಕಾಂಗ್ರೆಸ್  ಅಧಿಕಾರದಲ್ಲಿದೆ. ಅವರೇ ಇಂಥವರಿಗೆ ಕುಮ್ಮಕ್ಕು ಕೊಡ್ತಾರೆ ಎಂದು ಆರೋಪಿಸಿದ್ದಾರೆ.  

click me!