ಸಿಗರೇಟ್‌ ಸೇದುತ್ತಿರುವ ಕಾಳಿ ಮಾತೆ, ಕೈಯ್ಯಲ್ಲಿ LGBTQ ಧ್ವಜ: ಸಿನಿಮಾ ಪೋಸ್ಟರ್‌ನಿಂದ ಭಾರೀ ವಿವಾದ!

Published : Jul 04, 2022, 09:48 AM ISTUpdated : Jul 04, 2022, 03:11 PM IST
ಸಿಗರೇಟ್‌ ಸೇದುತ್ತಿರುವ ಕಾಳಿ ಮಾತೆ, ಕೈಯ್ಯಲ್ಲಿ LGBTQ ಧ್ವಜ: ಸಿನಿಮಾ ಪೋಸ್ಟರ್‌ನಿಂದ ಭಾರೀ ವಿವಾದ!

ಸಾರಾಂಶ

* ಸಾಕ್ಷ್ಯಚಿತ್ರ 'ಕಾಳಿ' ಪೋಸ್ಟರ್ ಬಿಡುಗಡೆ, ಟ್ವಿಟರ್‌ನಲ್ಲಿ ಆಕ್ರೋಶ * ಸಿಗರೇಟ್‌ ಸೇದುತ್ತಿರುವ ಅವತಾರದಲ್ಲಿ ಕಾಳಿ ಮಾತೆ * ಕಾಳಿ ಮಾತೆಯ ಕೈಯ್ಯಲ್ಲಿ LGBTQ ಧ್ವಜ

ಬೆಂಗಳೂರು(ಜು.04): ಇತ್ತೀಚೆಗೆ ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ಅಭಿನಯದ ಬ್ರಹ್ಮಾಸ್ತ್ರ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಇದನ್ನು ನೋಡಿದ ಅಭಿಮಾನಿಗಳು ಇದರಲ್ಲಿ ನಟನನ್ನು ದೇವಸ್ಥಾನದಲ್ಲಿ ಶೂ ಧರಿಸಿ ತೋರಿಸಲಾಗಿದೆ ಎಂದು ಆರೋಪಿಸಿದ್ದರು. ಈ ವಿಚಾರವಾಗಿ ಪ್ರೇಕ್ಷಕರು ನಿರ್ಮಾಪಕರನ್ನು ಭಾರೀ ಟ್ರೋಲ್ ಮಾಡಿದರು ಮತ್ತು ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ ಎಂದು ಆರೋಪಿಸಿದ್ದರು. ಈಗ ಮತ್ತೊಮ್ಮೆ ಅದಕ್ಕಿಂತಲೂ ಗಂಭೀರವಾದ ಪ್ರಕರಣ ಚಿತ್ರರಂಗದಿಂದ ಕಂಡು ಬಂದಿದೆ. ಭಾರತೀಯ ಚಲನಚಿತ್ರ ನಿರ್ಮಾಪಕಿ ಲೀನಾ ಮಣಿಮೇಕಲೈ ಅವರ ಸಾಕ್ಷ್ಯಚಿತ್ರ ಪೋಸ್ಟರ್ ಬಗ್ಗೆ ಟ್ವಿಟರ್‌ನಲ್ಲಿ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ. ನಿರ್ದೇಶಕಿ, ಕವಯಿತ್ರಿ ಮತ್ತು ನಟಿ ಲೀನಾ ಮಣಿಮೇಕಲೈ ಅವರು ತಮ್ಮ ಸಾಕ್ಷ್ಯಚಿತ್ರದ ಪೋಸ್ಟರ್ ಅನ್ನು ಹಂಚಿಕೊಂಡಿದ್ದಾರೆ, ಇದು ಹಿಂದೂ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದೆ ಎಂದು ಟ್ವಿಟರ್‌ನಲ್ಲಿ ಆರೋಪಿಸಲಾಗಿದೆ. ಪ್ರೇಕ್ಷಕರು ಈ ಪೋಸ್ಟರ್ ಅನ್ನು ವಿರೋಧಿಸಿದ್ದಾರೆ.

ಚಲನಚಿತ್ರ ನಿರ್ಮಾಪಕಿ ಲೀನಾ ಅವರು ತಮ್ಮ ಸಾಕ್ಷ್ಯಚಿತ್ರ ಕಾಳಿಯ ಪೋಸ್ಟರ್ ಅನ್ನು ಜೂನ್ 2, 2022 ರಂದು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಈ ಪೋಸ್ಟರ್‌ನೊಂದಿಗೆ ಮಾಹಿತಿಯನ್ನು ಹಂಚಿಕೊಂಡ ಅವರು, ಕೆನಡಾ ಫಿಲ್ಮ್ ಫೆಸ್ಟಿವಲ್‌ನಲ್ಲಿ (ರಿದಮ್ಸ್ ಆಫ್ ಕೆನಡಾ) ತಮ್ಮ ಸಾಕ್ಷ್ಯಚಿತ್ರ ಕಾಳಿ ಬಿಡುಗಡೆಯಾದ ಕಾರಣ ನಾನು ತುಂಬಾ ಉತ್ಸುಕಳಾಗಿದ್ದೇನೆ ಎಂದು ಹೇಳಿದರು.

'ದ್ವಿತ್ವ' ಪೋಸ್ಟರ್ ವಿವಾದ; ನಕಲು ಮಾಡಿ ಜನಪ್ರಿಯತೆ ಪಡೆದರೇ?

ವಿವಾದಾತ್ಮಕ ಪೋಸ್ಟರ್

ಲೀನಾ ಅವರ ಸಾಕ್ಷ್ಯಚಿತ್ರದ ಹೆಸರು ಕಾಳಿ. ಈ ಪೋಸ್ಟರ್‌ನಲ್ಲಿ ಮಾ ಕಾಳಿ ಸಿಗರೇಟ್ ಸೇದುತ್ತಿರುವುದನ್ನು ತೋರಿಸಲಾಗಿದ್ದು, ಇದನ್ನು ನೋಡಿ ಸಾಮಾಜಿಕ ಜಾಲತಾಣಗಳಲ್ಲಿ ಬಳಕೆದಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಾ ಕಾಳಿಯ ವೇಷಭೂಷಣದಲ್ಲಿ, ಕಲಾವಿದರು ಒಂದು ಕೈಯಲ್ಲಿ ತ್ರಿಶೂಲವನ್ನು ಮತ್ತು ಒಂದು ಕೈಯಲ್ಲಿ LGBTQ ಸಮುದಾಯದ ಹೆಮ್ಮೆಯ ಧ್ವಜವನ್ನು ಹಿಡಿದಿದ್ದಾರೆ.

ಬಳಕೆದಾರರು ಏನು ಹೇಳಿದ್ದಾರೆ

ಕಾಳಿ ಸಾಕ್ಷ್ಯಚಿತ್ರದ ಪೋಸ್ಟರ್ ನೋಡಿದ ಬಳಕೆದಾರರು, "ಪ್ರತಿದಿನವೂ ಹಿಂದು ಧರ್ಮದ ಭಾವನೆಗಳಿಗೆ ಧಕ್ಕೆಯಾಗುತ್ತಿದೆ. ಅವರು ನಮ್ಮ ತಾಳ್ಮೆಯನ್ನು ಪರೀಕ್ಷಿಸುತ್ತಾರೆ. ಅಷ್ಟೇ ಅಲ್ಲ, ಅಮಿತ್ ಶಾ ಅವರನ್ನು ಪಿಎಂಒಗೆ ಟ್ಯಾಗ್ ಮಾಡುವ ಬಳಕೆದಾರರು ಈ ಪೋಸ್ಟರ್ ಮತ್ತು ಚಿತ್ರದ ಮೇಲೆ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.

ಇದು ಧರ್ಮನಿಂದನೆ

ಅದೇ ಸಮಯದಲ್ಲಿ, ಕೆಲವು ಬಳಕೆದಾರರು ಇತರ ಧರ್ಮದ ದೇವರುಗಳನ್ನು ಈ ರೀತಿ ಧೂಮಪಾನವನ್ನು ತೋರಿಸಬಹುದೇ? ಅಲ್ಲದೇ ಮತ್ತೊಬ್ಬ ಬಳಕೆದಾರರು ಇದನ್ನು ಧರ್ಮನಿಂದನೆ ಎಂದು ಕರೆದರು ಮತ್ತು ಹಿಂದೂಗಳ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ ಎಂದು ಆರೋಪಿಸಿದರು.

ರಾಜರಥ ಚಿತ್ರದ ಪೋಸ್ಟರ್ ಅಸಲಿಯೋ, ನಕಲಿಯೋ?

ಲೀನಾ ಮಣಿಮೇಕಲೈ ಯಾರು?

ಲೀನಾ ಮಣಿಮೇಕಲೈ ಸ್ವತಂತ್ರ ಚಲನಚಿತ್ರ ನಿರ್ಮಾಪಕಿ, ಕವಿ ಮತ್ತು ನಟಿ, ಅವರು ಇಲ್ಲಿಯವರೆಗೆ ಹನ್ನೆರಡು ಸಾಕ್ಷ್ಯಚಿತ್ರಗಳನ್ನು ಮಾಡಿದ್ದಾರೆ. ಚಲನಚಿತ್ರ ನಿರ್ಮಾಪಕರಾಗುವ ಮೊದಲು, ಅವರು ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದರು. ಅವರ ಮೊದಲ ಸಾಕ್ಷ್ಯಚಿತ್ರವು 2003 ರಲ್ಲಿ 'ಮಹಾತ್ಮ' ಎಂಬ ಶೀರ್ಷಿಕೆಯಲ್ಲಿ ಬಂದಿತು, ಇದರಲ್ಲಿ ಅವರು ತಮಿಳುನಾಡಿನ ಅರಕ್ಕೋಣಂ ಬಳಿಯ ಮಗಟ್ಟುಚೇರಿ ಗ್ರಾಮದ ಅರುಂಧತಿಯಾರ್ ಸಮುದಾಯದಲ್ಲಿ ಪ್ರಚಲಿತದಲ್ಲಿರುವ ದೇವತೆಗೆ ಹೆಣ್ಣು ಮಕ್ಕಳನ್ನು ಅರ್ಪಿಸುವ ಅಭ್ಯಾಸವನ್ನು ಚಿತ್ರಿಸಿದ್ದಾರೆ. ಅವರು ತಮ್ಮ ಸಾಕ್ಷ್ಯಚಿತ್ರಗಳ ಮೂಲಕ ದಲಿತ ಮಹಿಳೆಯರ ಮೇಲಿನ ದೌರ್ಜನ್ಯದಂತಹ ಸಮಸ್ಯೆಗಳನ್ನು ಎತ್ತಿ ತೋರಿಸಿದ್ದಾರೆ.

ಲೀನಾ ವಿರುದ್ಧ ರೇಣುಕಾಚಾರ್ಯ ಆಕ್ರೋಶ:
ದಾವಣಗೆರೆ: ಹಿಂದೂ ದೇವತೆಗಳಿಗೆ ಅಪಮಾನ ಮಾಡಿದ ಚಲನಚಿತ್ರ ತಯಾರಕಿ ಲೀನಾ ವಿರುದ್ದ ರೇಣುಕಾಚಾರ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಲೀನಾ ಮಾಡಿದ ಅಪಮಾನವನ್ನು ಖಂಡಿಸುತ್ತೇವೆಂದು ಜಿಲ್ಲೆಯ ದಾವಣಗೆರೆಯ ಹೊನ್ನಾಳಿ ಯಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ ಎಂಪಿ ರೇಣುಕಾಚಾರ್ಯ.

ನಮ್ಮ ದೇವಾನುದೇವತೆಗಳಿಗೆ ದೇಶದ್ರೋಹಿಗಳು ಅಪಮಾನ ಮಾಡುತ್ತಿದ್ದಾರೆ. ಮತ್ತೊಂದೆಡೆ ಹಿಂದೂ ಯುವಕರನ್ನು ಹತ್ಯೆ ಮಾಡಲಾಗುತ್ತಿದೆ. 
ತಮಿಳುನಾಡಿನಲ್ಲಿ ಲೀನಾ ಎನ್ನುವ ಕ್ರಿಶ್ಚಿಯನ್ ಮಹಿಳೆ ಕಾಳಿ ದೇವತೆಗೆ ಅವಮಾನಿಸಿದ್ದಾರೆ. ಒಂದು ಕೈಯಲ್ಲಿ ಸಿಗರೇಟ್ ಹಿಡಿಸಿ ಅಪಮಾನ ಮಾಡಿದ್ದಾರೆ. ಇದನ್ನು ಹಿಂದೂಗಳು ಒಕ್ಕೂರಲಿನಿಂದ ಖಂಡಿಸಬೇಕು. ತಮಿಳುನಾಡಿನಲ್ಲಿ ಕಾಂಗ್ರೆಸ್  ಅಧಿಕಾರದಲ್ಲಿದೆ. ಅವರೇ ಇಂಥವರಿಗೆ ಕುಮ್ಮಕ್ಕು ಕೊಡ್ತಾರೆ ಎಂದು ಆರೋಪಿಸಿದ್ದಾರೆ.  
 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಬಾಲಿವುಡ್ ನಿರ್ದೇಶಕ ವಿಕ್ರಂ ಭಟ್, ಪತ್ನಿ ಶ್ವೇತಾಂಬರಿ ಭಟ್ ಬಂಧನ; ಅಂತಿಂಥ ವಂಚನೆ ಕೇಸಲ್ಲ ಇದು ಅಂತೀರಾ?!
'ಧಂ' ಬೇಕಲೇ ಎಂದಿದ್ದ ದರ್ಶನ್‌ಗೆ ಟಾಂಗ್ ಕೊಟ್ರಾ ಸುದೀಪ್? ಏನಿದು ಮಾರ್ಕ್ ಡೈಲಾಗ್ ಮರ್ಮ?