
ಬೆಂಗಳೂರು, [ಜ.07]: ರಾಕಿಂಗ್ ಸ್ಟಾರ್ ಯಶ್ ಅಲಿಯಾಸ್ ರಾಕಿಭಾಯ್ ಹುಟ್ಟುಹಬ್ಬಕ್ಕೆ ಕ್ಷಣಗಳನೆ ಆರಂಭವಾಗಿದೆ. ನಾಳೆ 8ನೇ ತಾರೀಖು ಬುಧವಾರ ದೊಡ್ಡ ಮಟ್ಟದಲ್ಲಿ ತಮ್ಮ ಹುಟ್ಟು ಹಬ್ಬ ಆಚರಿಸಿಕೊಳ್ಳುತ್ತಿರೋ ಮಿಸ್ಟರ್ ರಾಮಾಚಾರಿ ಯಶ್ ಹಲವು ಅಚ್ಚರಿಗಳ ಜೊತೆ ಅಭಿಮಾನಿಗಳ ಮುಂದೆ ಕಾಣಿಸಿಕೊಳ್ಳಲಿದ್ದಾರೆ.
ರಾಕಿಂಗ್ ಸ್ಟಾರ್ ಯಶ್ ಜನ್ಮ ದಿನಕ್ಕೆ 5 ಸಾವಿರ ಕೆಜಿ ಕೇಕ್ ರೆಡಿ ಆಗಿದೆ. ರಾಕಿಂಗ್ ಸ್ಟಾರ್ ಯಶ್ ಅಪ್ಪಟ್ಟ ಅಭಿಮಾನಿ ವೇಣು ಗೌಡ ಪ್ರೀತಿಯಿಂದ ಈ ಕೇಕ್ ಮಾಡಿಸಿದ್ದಾರೆ.
ಸಲಾಂ ರಾಕಿಭಾಯ್..! ವಿಶ್ವ ದಾಖಲೆ ಮಾಡಲಿದೆ ಯಶ್ ಬರ್ತ್ ಡೇ ಕೇಕ್!
ಬೆಂಗಳೂರಿನ ನಾಗರಭಾವಿಯ ರಾಮ್ ಭವನ್ ಸ್ಟೀಟ್ಸ್ ನ ಸುಮಾರು 40ಜನ ಸಿಬ್ಬಂದಿ ಈ ಕೇಕ್ ಸಿದ್ಧಗೊಳಿಸಿದ್ದಾರೆ. 40 ಅಡಿ ಅಗಲ 72 ಅಡಿ ಉದ್ದಳತೆಯ ಈ ಇಡೀ ಕೇಕ್ ವಿಶೇಷವಾಗಿದೆ. ನಂದಿ ಲಿಂಕ್ ಮೈದಾನದಲ್ಲಿ ನಡೆಯಲಿರುವ ಸಮಾರಂಭದಲ್ಲಿ ಈ ಕೇಕ್ ಅನ್ನು ಯಶ್ ಕಟ್ ಮಾಡಿ ತಮ್ಮ ಬರ್ತ್ ಡೇ ಆಚರಿಸಿಕೊಳ್ಳಲಿದ್ದಾರೆ.
ಇನ್ನು ಯಶ್ ಬಾಸ್ ಹುಟ್ಟಿದ ಹಬ್ಬ ಸಂಭ್ರಮಾಚರಣೆಗೆ ಆಗಮಿಸುತ್ತಿರುವ ಅಭಿಮಾನಿಗಳಿಗಾಗಿ ನಾಳೆ ಬೆಳಗ್ಗೆ 9 ಗಂಟೆಯಿಂದ ಸಂಜೆ 6 ಗಂಟೆವರೆಗೆ ಉಚಿತ ಬಸ್ ವ್ಯವಸ್ಥೆ ಮಾಡಲಾಗಿದೆ.
ಉಚಿತ ಬಸ್ ವ್ಯವಸ್ಥೆ
ಯಶ್ ಬಾಸ್ ಹುಟ್ಟಿದ ಹಬ್ಬ ಸಂಭ್ರಮಾಚರಣೆಗೆ ಆಗಮಿಸುತ್ತಿರುವ ಅಭಿಮಾನಿಗಳಿಗಾಗಿ ನಾಳೆ ಬೆಳಗ್ಗೆ 9 ಗಂಟೆಯಿಂದ ಸಂಜೆ 6 ಗಂಟೆವರೆಗೆ ಉಚಿತ ಬಸ್ ವ್ಯವಸ್ಥೆ ಮಾಡಲಾಗಿದೆ.
ರಾಧಿಕಾ ಪಂಡಿತ್ ತಮ್ಮ ಗೌರಂಗ್ ಕುಟುಂಬ ನೋಡಲು ಎಷ್ಟು ಚಂದ!
ಮೆಜೆಸ್ಟಿಕ್ ರೈಲ್ವೇ ಗೇಟ್ ನಿಂದ ಮತ್ತು ಸ್ಯಾಟಲೈಟ್ ಬಸ್ ಸ್ಟಾಪ್ ಮೈಸೂರು ರಸ್ತೆಯಿಂದ ಬೆಂಗಳೂರಿನ ನಾಯಂಡಹಳ್ಳಿಯ ನಂದಿ ಲಿಂಕ್ ಗ್ರೌಂಡ್ ವರೆಗೂ ಯಶ್ ಸಂಘದ ಲೋಗೋ ಇರುವ ಶಬರಿ ಬಸ್ ಗಳು ಓಡಾಡಲಿವೆ.
ಇದನ್ನು ಎಲ್ಲಾ ಯಶ್ ಬಾಸ್ ಅವರ ಅಭಿಮಾನಿಗಳು ಸದುಪಯೋಗ ಪಡಿಸಿಕೊಳ್ಳಬೇಕೆಂದು ಯಶ್ ಅಭಿಮಾನಿಗಳ ಸಂಘದವರು ತಿಳಿಸಿದ್ದಾರೆ. ದೊಡ್ಡ ಮಟ್ಟದಲ್ಲಿ ಬಹಲು ಅದ್ಧೂರಿಯಾಗಿ ನಡೆಯಲಿರುವ ರಾಕಿಭಾಯ್ ಹುಟ್ಟುಹಬ್ಬವನ್ನು ಮಿಸ್ ಮಾಡ್ಕೊಬೇಡಿ. ಅಭಿಮಾನಿಗಳು ಹೋಗಿ ಕಣ್ತುಂಬಿಕೊಳ್ಳಿ
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.