ಮುಕ್ಕಾಲ ಮುಕಾಬುಲಾ ಹಾಡಿಗೆ ತಾತಪ್ಪ ಮಾಡಿದ ಡಾನ್ಸ್‌ಗೆ ಹುಡುಗ್ರೆಲ್ಲಾ ಸೈಡ್‌ಲೈನ್: ವೀಡಿಯೋ ವೈರಲ್‌

ಇಲ್ಲೊಂದು ಕಡೆ ವೃದ್ಧರೊಬ್ಬರು ಪ್ರಭುದೇವ್ ಅವರ ಕಾದಲನ್ ಸಿನಿಮಾದ ಮುಕ್ಕಾಲ ಮುಕ್ಕಾಬುಲಾ ಹಾಡಿಗೆ ಬಿಂದಾಸ್ ಆಗಿ ಡಾನ್ಸ್ ಮಾಡಿದ್ದು, ಅವರ ಸ್ಟೈಲಿಶ್ ಸ್ಟೆಪ್‌ಗೆ ಸ್ಟೇಜ್ ಮೇಲಿದ್ದ ಹುಡುಗರೆಲ್ಲಾ ಸೈಡ್‌ಲೈನ್ ಆಗಿದ್ದಾರೆ.  

Elderly Man Steals the Show with Epic Dance Performance to Mukkala Mukkabula

ಇದು ಸೋಶಿಯಲ್ ಮೀಡಿಯಾ ಯುಗ. ಅದೃಷ್ಟವಿದ್ದರೆ ಕುಂಭ ಮೇಳದಲ್ಲಿ ಬೆಳಕಿಗೆ ಬಂದು ಜನಪ್ರಿಯತೆ ಗಳಿಸಿದ ಮೋನಾಲಿಸಾಳಂತೆ ಯಾರು ಬೇಕಾದರೂ ಯಾವಾಗ ಬೇಕಾದರೂ ಜನಪ್ರಿಯತೆ ಗಳಿಸಬಹುದು, ವಯಸ್ಸಿನ ಹಂಗಿಲ್ಲದೇ ಇಂದು ಸೋಶಿಯಲ್ ಮೀಡಿಯಾವನ್ನು ಎಲ್ಲರೂ ಬಳಸಿಕೊಳ್ಳುತ್ತಿದ್ದಾರೆ. ಅದೇ ರೀತಿ ಖ್ಯಾತಿಯನ್ನು ಕೂಡ ಗಳಿಸುತ್ತಿದ್ದಾರೆ. ಹಾಗೆಯೇ ಇಲ್ಲೊಬ್ಬರು ಹಿರಿಯ ವಯಸ್ಕರ ನೃತ್ಯದ ವೀಡಿಯೋವೊಂದು ಸಾಮಾಜಿಕ  ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದ್ದು, ಪ್ರತಿಭೆಗೆ ವಯಸ್ಸಿನ ಹಂಗಿಲ್ಲ ಎಂಬುದನ್ನು ಈ ವೃದ್ಧ ತೋರಿಸಿಕೊಟ್ಟಿದ್ದಾರೆ. 

ಪ್ರಭುದೇವ್ ಅವರ ಕಾದಲನ್ ಸಿನಿಮಾದ ಮುಕ್ಕಾಲ ಮುಕ್ಕಾಬುಲಾ ಹಾಡಿಗೆ ಕಾಲು ಕುಣಿಸದವರಿಲ್ಲ,  ಈ ಸಿನಿಮಾ ಬಂದು 40 ವರ್ಷಗಳೇ ಕಳೆದರೂ ಈ ಹಾಡಿನ ಕ್ರೇಝ್ ಇನ್ನು ಕಡಿಮೆ ಆಗಿಲ್ಲ, ಎಲ್ಲೆ ಇದ್ದರೂ ಈ ಹಾಡು ಕೇಳಿದ ಕೂಡಲೇ ಯಾರೇ ಆದರೂ ಡಾನ್ಸ್ ಮಾಡಲು ಹಾತೊರೆಯುತ್ತಾರೆ. ಈ ಹಾಡು ಹಾಗೂ ಅದರ ಸಂಗೀತಕ್ಕಿರುವ ಶಕ್ತಿ ಅದು. ಅದೇ ರೀತಿ ಇಲ್ಲೊಂದು ಕಡೆ ವೃದ್ಧರೊಬ್ಬರು ಈ ಹಾಡಿಗೆ ಬಿಂದಾಸ್ ಆಗಿ ಡಾನ್ಸ್ ಮಾಡಿದ್ದು, ಅವರ ಸ್ಟೈಲಿಶ್ ಸ್ಟೆಪ್‌ಗೆ ಸ್ಟೇಜ್ ಮೇಲಿದ್ದ ಹುಡುಗರೆಲ್ಲಾ ಸೈಡ್‌ಲೈನ್ ಆಗಿದ್ದಾರೆ.  mehzaayzal__ ಎಂಬ ಇನ್ಸ್ಟಾಗ್ರಾಮ್ ಪೇಜ್‌ನಿಂದ ಈ ವೀಡಿಯೋ ಪೋಸ್ಟ್ ಮಾಡಿದ್ದರು, '2ಡಿ ವಾವೆಟ್ಟನ್ ಟಪ್ ಸ್ಟೆಪ್ಸ್ ಓನ್ಲಿ' ಎಂದು ಬರೆದುಕೊಂಡಿದ್ದಾರೆ.

Latest Videos

ವೈರಲ್ ಆದ ವೀಡಿಯೋದಲ್ಲಿ ನೀಲಿ ಬಣ್ಣದ ಲುಂಗಿ ಹಾಗೂ ಬೂದಿ ಬಣ್ಣದ ಟೀಶರ್ಟ್ ಹಾಕಿರುವ ವೃದ್ಧರೊಬ್ಬರು ತಮ್ಮ ನೀಲಿ ಲುಂಗಿಯನ್ನು ಎತ್ತಿ ಕಟ್ಟಿ ಸ್ಟೇಜ್ ಮೇಲೆ ಈ ಹಾಡಿಗೆ ನಾಳೆ ಇಲ್ಲವೇನೋ ಎಂಬಂತೆ ಡಾನ್ಸ್‌ ಮಾಡಿದ್ದಾರೆ. ಅವರ ಡಾನ್ಸ್ ಈಗ ಸಖತ್ ವೈರಲ್ ಆಗಿದೆ. ವೃದ್ಧನ ಡಾನ್ಸ್‌ಗೆ ಸ್ಟೇಜ್‌ನಲ್ಲಿದ್ದ ಹುಡುಗರೆಲ್ಲಾ ಪಕ್ಕಕ್ಕೆ ಸರಿದಿದ್ದನ್ನು ನೀವು ವೀಡಿಯೋದಲ್ಲಿ ನೋಡಬಹುದು. ಸಂಗೀತಾ ರಸಂಮಂಜರಿಯ ಸ್ಟೇಜ್ ಇದಾಗಿದ್ದು,  ನಡುವೆ ಗಾಯಕಿಯೊಬ್ಬರು ಹಾಡುತ್ತಿದ್ದರೆ, ಸ್ಟೇಜ್ ತುಂಬಾ ಎಲ್ಲರೂ ತಮಗೆ ಬಂದಂತೆ ಹೆಜ್ಜೆ ಹಾಕುತ್ತಿದ್ದಾರೆ. ಆದರೆ ಕಾರ್ಯಕ್ರಮದ ಕೇಂದ್ರಬಿಂದುವಾಗಿದ್ದು, ಮಾತ್ರ ಈ ಲುಂಗಿ ಕಟ್ಟಿ ಡಾನ್ಸ್ ಮಾಡಿದ ವೃದ್ಧ. ಅವರ ಪ್ರತಿಯೊಂದು ಸ್ಟೆಪ್ ಕೂಡ ವಾವ್ ಎನಿಸುವಂತಿದ್ದು, ವೀಡಿಯೋ ನೋಡಿದ ಎಲ್ಲರೂ ಅವರ ಡಾನ್ಸ್‌ಗೆ ಫಿದಾ ಆಗಿದ್ದಾರೆ.

ಅನೇಕರು ಈ ವೀಡಿಯೋಗೆ ಹಲವು ಕಾಮೆಂಟ್ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ವೃದ್ಧನೂ ಒಂದು ದಿನ ಸ್ಟಾರ್ ಅಗುತ್ತಾರೆ ಎಂದು ಒಬ್ಬರು ಈ ವೀಡಿಯೋ ನೋಡಿ ಕಾಮೆಂಟ್ ಮಾಡಿದ್ದಾರೆ.  ಅವರಿಗೂ ಡಾನ್ಸ್ ಮಾಡಲು ಅವಕಾಶ ನೀಡಿದ್ದಕ್ಕೆ ಧನ್ಯವಾದ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಹಾಗೆಯೇ ಕೆಲವರು ಒಮ್ಮೆ ಸಿಂಹ ಆಗಿದ್ದವರು ಯಾವಾಗಲೂ ಸಿಂಹವೇ ಎಂದು ಕಾಮೆಂಟ್ ಮಾಡಿದ್ದಾರೆ. ಒಟ್ಟಿನಲ್ಲಿ ಈ ವೀಡಿಯೋ ಇಂಟರ್‌ನೆಟ್‌ನಲ್ಲಿ ಸೆನ್ಸೇಷನ್ ಸೃಷ್ಟಿಸಿದೆ. ಈ ವೀಡಿಯೋ ಬಗ್ಗೆ ನಿಮ್ಮ ಅಭಿಪ್ರಾಯವೇನು? 

 
 
 
 
 
 
 
 
 
 
 
 
 
 
 

A post shared by MEHZA AYZAL (@mehzaayzal__)

 

vuukle one pixel image
click me!
vuukle one pixel image vuukle one pixel image