ಕುಡಿದ ಮತ್ತಿನಲ್ಲಿ ಅತ್ತಿಗೆ ಕತ್ತಿಗೆ ಹಾರ ಹಾಕಿದ ಭೂಪ : ಬಿತ್ತು ಹಿಗ್ಗಾಮುಗ್ಗಾ ಗೂಸಾ

Published : Jun 25, 2022, 10:10 AM ISTUpdated : Jun 25, 2022, 10:33 AM IST
ಕುಡಿದ ಮತ್ತಿನಲ್ಲಿ ಅತ್ತಿಗೆ ಕತ್ತಿಗೆ ಹಾರ ಹಾಕಿದ ಭೂಪ : ಬಿತ್ತು ಹಿಗ್ಗಾಮುಗ್ಗಾ ಗೂಸಾ

ಸಾರಾಂಶ

ಭಾರತೀಯ ಮದುವೆಗಳಲ್ಲಿ ನಡೆಯುವ ಕೆಲವೊಂದು ದೃಶ್ಯಗಳು ಯಾವ ಸಿನಿಮಾ ಸೀನ್‌ಗಳಿಗೆ ಕಡಿಮೆ ಇರುವುದಿಲ್ಲ. ಅದೇ ರೀತಿ ಇಲ್ಲೊಂದು ಮದುವೆಯಲ್ಲಿ ವರನೋರ್ವ ಕಂಠಪೂರ್ತಿ ಕುಡಿದಿದ್ದಾನೆ. ಆತ ಎಷ್ಟು ಕುಡಿದಿದ್ದ ಎಂದರೆ ಆತನಿಗೆ ನೆಟ್ಟಗೆ ನಿಲ್ಲಲು ಕೂಡ ಆಗುತ್ತಿರಲಿಲ್ಲ. 

ಬಿಹಾರ: ಮದುವೆಗಳಲ್ಲಿ ನಡೆಯುವ ಮೋಜು ಮಸ್ತಿಗೆ ಲೆಕ್ಕವೇ ಇರುವುದಿಲ್ಲ. ವಿಶೇಷವಾಗಿ ಉತ್ತರ ಭಾರತದ ಮದುವೆಗಳಲ್ಲಿ ಸಂಗೀತಾ ಡಾನ್ಸ್‌ನಷ್ಟೇ ಪ್ರಮುಖ ಸ್ಥಾನ ಶರಾಬಿಗೆ ಇದೆ ಕೆಲ ದಿನಗಳ ಹಿಂದೆ ಮದುವೆ ದಿಬ್ಬಣ ಹೊರಟ ಮದುಮಗ ಮೂಹೂರ್ತದ ಸಮಯ ಮೀರಿದರು ಮದುವೆ ಮಂಟಪಕ್ಕೆ ತಲುಪದೇ ಸ್ನೇಹಿತರೊಂದಿಗೆ ಸೇರಿ ಸರಿಯಾಗಿ ಕುಡಿದು ಕುಣಿದು ಮಜಾ ಮಾಡಿದ್ದ ಪರಿಣಾಮ ವಧು ಅದೇ ಮಂಟಪದಲ್ಲಿ ಬೇರೆ ವರನನ್ನು ಮದುವೆಯಾದ ಘಟನೆ ನಡೆದಿತ್ತು. 

ಭಾರತೀಯ ಮದುವೆಗಳಲ್ಲಿ ನಡೆಯುವ ಕೆಲವೊಂದು ದೃಶ್ಯಗಳು ಯಾವ ಸಿನಿಮಾ ಸೀನ್‌ಗಳಿಗೆ ಕಡಿಮೆ ಇರುವುದಿಲ್ಲ. ಅದೇ ರೀತಿ ಇಲ್ಲೊಂದು ಮದುವೆಯಲ್ಲಿ ವರನೋರ್ವ ಕಂಠಪೂರ್ತಿ ಕುಡಿದಿದ್ದಾನೆ. ಆತ ಎಷ್ಟು ಕುಡಿದಿದ್ದ ಎಂದರೆ ಆತನಿಗೆ ನೆಟ್ಟಗೆ ನಿಲ್ಲಲು ಕೂಡ ಆಗುತ್ತಿರಲಿಲ್ಲ. ಅಲ್ಲದೇ ತಾನು ಮದುವೆಯಾಗುತ್ತಿರುವುದು ಯಾರನ್ನು ನಾನು ಯಾರಿಗೆ ಹೂವಿನ ಹಾರ ಹಾಕಬೇಕು ಎಂಬ ಅರಿವು ಕೂಡ ಇಲ್ಲದಷ್ಟು ಆತ ಆಮಲಿನಿಂದ ತೇಲಾಡುತ್ತಿದ್ದ. ಹಿಂದೆ ನಿಂತಿದ್ದವನೋರ್ವ ಆತನನ್ನು ಬೀಳದಂತೆ ಹಿಡಿದುಕೊಂಡಿದ್ದ. ಹೂವಿನ ಹಾರ ಹಾಕಿ ಎಂದು ಎಲ್ಲರೂ ಹೇಳುತ್ತಿದ್ದಂತೆ ಆತ ವಧುವಿನೊಂದಿಗೆ ನಿಂತಿದ್ದ ವಧುವಿನ ಸಹೋದರಿಗೆ ಹೂವಿನ ಹಾರ ಹಾಕಿದ್ದಾನೆ. ಇದರಿಂದ ಸಿಟ್ಟಿಗೆದ್ದ ವಧುವಿನ ಸಹೋದರಿ ಆತನಿಗೆ ಚೆನ್ನಾಗಿ ಕೆನ್ನೆಗೆ ಬಾರಿಸಿದ್ದಾಳೆ. ಅಲ್ಲದೇ ತನ್ನ ಕುತ್ತಿಗೆಯಿಂದ ಕೂಡಲೇ ಹಾರವನ್ನು ತೆಗೆಯುವಂತೆ ಹೇಳಿದ್ದಾಳೆ. 

ಆದರೆ ವರ ಮಾತ್ರ ಆಮಲಿನಲ್ಲಿ ಏನು ತಿಳಿಯದವನಂತೆ ನಿಂತಿದ್ದು, ಇದರಿಂದ ವಧುವಿನ ಸಹೋದರಿ ಆತನಿಗೆ ಮತ್ತೆ ಕೆನ್ನೆಗೆ ಬಾರಿಸಿ ಕುಡಿದಿರುವುದನ್ನೆಲ್ಲಾ ಇಳಿಸಿ ಬಿಟ್ಟಿದ್ದಾಳೆ. ವಧುವಿನ ಸಹೋದರಿ ಕೈಯಿಂದ ಸರಿಯಾಗಿ ಏಟು ತಿಂದ ಆತ ವಾಸ್ತವಕ್ಕೆ ಬಂದಿದ್ದು, ಆಕೆಯ ಕುತ್ತಿಗೆಯಲ್ಲಿದ್ದ ಹೂವಿನ ಹಾರವನ್ನು ತೆಗೆದಿದ್ದಾನೆ. ಪಕ್ಕದಲ್ಲಿ ಈತನನ್ನು ಹಿಡಿದುಕೊಂಡು ನಿಂತಿದ್ದ ವ್ಯಕ್ತಿ ಕೂಡ ಆತನಿಗೆ ಆತ ಮಾಡಿರುವ ತಪ್ಪಿನ ಬಗ್ಗೆ ಅರಿವು ಮೂಡಿಸುತ್ತಿದ್ದಾನೆ. ನೀನು ಹೂವಿನ ಹಾರ ಹಾಕಿದ್ದು, ವಧುವಿಗೆ ಅಲ್ಲ ಆಕೆಯ ಸಹೋದರಿಗೆ ಎಂದು ಹೇಳಿದರೂ ಆತನಿಗೆ ಅದು ತಲೆಗೆ ಹೋಗುವುದೇ ಇಲ್ಲ. ಕಡೆಗೆ ವಧುವಿನ ಅಕ್ಕ ಆತನಿಗೆ ಬಾರಿಸಿದ ಮೇಲಷ್ಟೇ ಆತ ವಾಸ್ತವಕ್ಕೆ ಬಂದಿದ್ದಾನೆ. ಈ ಮಧ್ಯೆ ವಧು ಅಸಹಾಯಕಳಾಗಿ ನೋಡುತ್ತಿದ್ದಾಳೆ. ತನ್ನದೇ ಮದುವೆಯ ದಿನವೂ ಸುಮ್ಮನಿರದೇ ಕುಡಿದು ತೂರಾಡುತ್ತಿರುವ ಈತನನ್ನು ಮದುವೆಯಾಗಲು ಮುಂದಾದ ವಧುವಿನ ಸ್ಥಿತಿ ಮಾತ್ರ ಕಣ್ಣೀರು ತರಿಸುವಂತಿದೆ. 

ಪತಿಯೊಂದಿಗೆ ಬಳೆ ಖರೀದಿಗೆಂದು ಹೋಗಿ ಕೈ ಕೊಟ್ಟ ಪತ್ನಿ: ಮದುವೆಯಾದ ಒಂದೇ ವಾರಕ್ಕೆ ಪ್ರಿಯಕರನೊಂದಿಗೆ ಎಸ್ಕೇಪ್‌

ವಿಚಿತ್ರ ಎಂದರೆ ಈ ಘಟನೆ ಮದ್ಯಪಾನಕ್ಕೆ ನಿಷೇಧ ಹೇರಿರುವ ಬಿಹಾರ ರಾಜ್ಯದಲ್ಲಿ ನಡೆದಿದೆ. ಶರಾಬು ನಿಷೇಧವಿರುವ ಬಿಹಾರದಲ್ಲೇ ಇಂತಹ ಸ್ಥಿತಿ ಎಂದು ಬರೆದು ಈ ವಿಡಿಯೋವನ್ನು ನೆಟ್ಟಿಗರೊಬ್ಬರು ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಇಂತಹ ವಿಚಿತ್ರ ಘಟನೆಗಳು ಉತ್ತರ ಭಾರತದ ಮದುವೆಗಳಲ್ಲಿ ಸಾಕಷ್ಟು ನಡೆಯುತ್ತಿದೆ. ಕೆಲ ದಿನಗಳ ಹಿಂದೆ ಮದುವೆ ಮಂಟಪದಲ್ಲೇ ವಧುವರರು ಪರಸ್ಪರ ಹೊಡೆದಾಡಿಕೊಂಡ ಘಟನೆ ನಡೆದಿತ್ತು. ಪರಸ್ಪರ ಹೂವಿನ ಹಾರ ಹಾಕಿಸಿಕೊಂಡ ನಂತರ ವಧು ವರರು ಸಿಹಿ ತಿನ್ನಿಸಿಕೊಳ್ಳುವ ಕಾರ್ಯಕ್ರಮವಿದ್ದು, ಈ ವೇಳೆ ವಧು ವರನಿಗೆ ಸಿಹಿ ತಿನ್ನಿಸಲು ಮುಂದಾಗುತ್ತಾಳೆ ಆದರೆ ವರ ತಿನ್ನಲು ಮುಂದಾಗದಾಗ ವಧು ಆತನ ಮುಖಕ್ಕೆ ಲಡ್ಡನ್ನು ಹುಡಿ ಮಾಡಿ ಉಜ್ಜುತ್ತಾಳೆ ಇದರಿಂದ ಸಿಟ್ಟಿಗೆದ್ದ ಆತ  ಆಕೆಯ ಕೆನ್ನೆಗೆ ಬಾರಿಸುತ್ತಾನೆ. ಈ ವೇಳೆ ವಧುವೂ ಕೂಡ ವರನ ಕೆನ್ನೆಗೆ ಹೊಡೆದಿದ್ದು, ಮದುವೆಗೆ ಬಂದವರು ಇವರ ಹೊಡೆದಾಟ ನೋಡಿ ದಂಗಾಗಿದ್ದಾರೆ. ಇವರ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. 

ಪ್ರೀತಿಸಿ ಮದುವೆಯಾದ ನಲ್ವತ್ತೈದೇ ದಿನಕ್ಕೆ ಚಿನ್ನಾಭರಣ ಕದ್ದು ಮಾಜಿ ಪ್ರಿಯಕರನೊಂದಿಗೆ ಪತ್ನಿ ಪರಾರಿ
 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಶಾಕಿಂಗ್.. ಆ ನಟ-ನಟಿ ಈ ವಯಸ್ಸಿನಲ್ಲಿ ಮದುವೆ ಆಗೋದಾ?.. ವಿಡಿಯೋ ನೋಡಿ ನೆಟ್ಟಿಗರ ತಲೆ ಗಿರಗಿರ..!
ರಾಜಮೌಳಿ-ಜೇಮ್ಸ್ ಕ್ಯಾಮರೂನ್ ಹೊಸ ಹೆಜ್ಜೆ, ನಟ ಮಹೇಶ್ ಬಾಬುಗೆ ಪ್ಯಾನ್ ವರ್ಲ್ಡ್ ಪಟ್ಟ..!