Watch: ಎಲ್ಲಿಗೆ ಬಂತಪ್ಪ ಕಾಲ.. ದೊಡ್ಡಣ್ಣ ಸಿನಿಮಾ ಸ್ಟೈಲ್‌ನ 'ಇವಾದೋಪು' ಟ್ರೈ ಮಾಡಿದ ಗಂಡ-ಹೆಂಡ್ತಿ!

By Santosh Naik  |  First Published May 10, 2024, 9:27 PM IST


ಇವಾದೋಪು ಅಂದ್ರೆ ಸಾಕು.. ಕನ್ನಡ ಸಿನಿಮಾ ಪ್ರಿಯರಿಗೆ ನೆನಪಾಗೋದೆ ಸಾಧುಕೋಕಿಲ ಹಾಗೂ ದೊಡ್ಡಣ್ಣ ಜೋಡಿಯ ಎಪಿಕ್‌ ಕಾಮಿಡಿ ಸೀನ್‌. ತೆರೆಯ ಮೇಲೆ ದೊಡ್ಡಣ್ಣ ಮಾಡಿದ್ದ ಇವಾದೋಪುವನ್ನು ವಾಸ್ತವದಲ್ಲಿ ಟ್ರೈ ಕೂಡ ಮಾಡಿದ್ದಾರೆ.
 


ಬೆಂಗಳೂರು (ಮೇ.10): ಕನ್ನಡ ಸಿನಿಮಾದಲ್ಲಿ ಯಾವುದಾದರೂ ಕಾಮಿಡಿ ಸೀನ್‌ಗೆ ಎಪಿಕ್‌ ಫ್ಯಾನ್‌ ಬೇಸ್‌ ಇದ್ದರೆ ಅದು ಇವಾದೋಪು ಕಾಮಿಡಿ ಸೀನ್‌ಗೆ ಮಾತ್ರ. ಹಿರಿಯ ಕಲಾವಿದ ದೊಡ್ಡ ಹಾಗೂ ಸಾಧು ಕೋಕಿಲ ಪಾತ್ರವಿದ್ದ ಈ ಸೀನ್‌ ಶಿವರಾಜ್‌ಕುಮಾರ್‌ ಹಾಗೂ ರಾಧಿಕಾ ಕುಮಾರಸ್ವಾಮಿ ಅಭಿನಯದ ಅಣ್ಣ ತಂಗಿ ಚಿತ್ರದ್ದು. ಇಂದಿಗೂ ಸಿನಿಮಾದ ಈ ಸೀನ್‌ಅನ್ನು ನೋಡಿ ಬಿದ್ದುಬಿದ್ದು ನಗುವವರಿದ್ದಾರೆ. ಇವಾದೋಪು.. ಇವತ್ತು ನೀವ್‌ ತೋಪು.. ಎಂದು ಸಾಧು ಕೋಕಿಲ ಹೇಳುವಾಗ ನಕ್ಕು ನಕ್ಕು ಹೊಟ್ಟೆ ಹುಣ್ಣಾಗಿರುತ್ತದೆ. ಇಡ್ಲಿ, ವಡೆ, ದೋಸೆ, ಪೂರಿ ಎಲ್ಲವನ್ನೂ ಮಿಕ್ಸ್‌ ಮಾಡಿ ಮಾಡೋ ಫುಡ್‌ ಇವಾದೋಪು ಅನ್ನೋದು ಎಲ್ಲರಿಗೂ ಗೊತ್ತಿರುವ ಸತ್ಯ. ಇದೀಗ. ದೊಡ್ಡಣ್ಣ ಸಿನಿಮಾದಲ್ಲಿ ಮಾಡಿದ್ದ ಇವಾದೋಪುವನ್ನು ರಿಯಲ್‌ಅಲ್ಲಿ ಮಾಡಿ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದ್ದಾರೆ. ಇದಕ್ಕೆ ಸಖತ್‌ ಕಾಮೆಂಟ್‌ಗಳು ಕೂಡ ಬಂದಿವೆ.

ನಗಲಾರದೇ ಅಳಲಾರದೆ (@UppinaKai) ಅನ್ನೋ ಎಕ್ಸ್‌ ಪೇಜ್‌ನಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. 'ಇವತ್ತು ನಾವು ಇವಾದೋಪು ಹೇಗಿರುತ್ತೆ ಅಂತಾ ತಿಂದು ನೋಡಬೇಕು ಅಂದುಕೊಂಡ್ವಿ. ಅದಕ್ಕಾಗಿ ಹೋಟೆಲ್‌ಗೆ ಹೋಗಿ ಅದಕ್ಕೆ ಬೇಕಾದ ಇಡ್ಲಿ, ವಡೆ, ಪೂರಿ, ದೋಸೆ ಹಾಗೂ ಸಾಂಬಾರ್‌ಅನ್ನು ಪಾರ್ಸಲ್‌ ಮಾಡಿಕೊಂಡು ಬಂದ್ವಿ. ದೊಡ್ಡಣ್ಣ ಹೇಳಿರೋ ಹಾಗೆ ಇವಾದೋಪು ಮಾಡೋದಕ್ಕೆ ಇವೆಲ್ಲವೂ ಬೇಕಾಗುತ್ತದೆ. ಆ ಮೂವಿಯ ಸೀನ್‌ ನೋಡಿಯೇ ನಾವು ಇವಾದೋಪು ಮಾಡಬೇಕು ಅಂತಾ ತೀರ್ಮಾನ ಮಾಡಿದ್ವಿ.  ಎಲ್ಲವನ್ನೂ ಚಿಕ್ಕ ಚಿಕ್ಕದಾಗಿ ಕಟ್‌ ಮಾಡಿಕೊಂಡ ಬಳಿಕ, ಅದಕ್ಕೆ ಕೊಟ್ಟಿರೋ ಸಾಂಬಾರ್‌ಅನ್ನೂ ಪಾತ್ರೆಗೆ ಹಾಕಿಕೊಳ್ಳಬೇಕು. ಇದನ್ನ ಯಾವ್‌ ರೀತಿ ಕಲಿಸಬೇಕು ಅಂದ್ರೆ, ಅದಕ್ಕೆ ಏನು ಹಾಕಿದ್ದೇವೆ ಅನ್ನೋದೇ ಗೊತ್ತಾಗಬಾರದು. ಆ ರೀತಿ ಕಲಿಸಬೇಕು. ಇದನ್ನ ಚೆನ್ನಾಗಿ ಕಲಿಸಿ ಆದ ಮೇಲೆ ಒಗ್ಗರಣೆ ಕೊಟ್ಟೆವು' ಎಂದು ಇನ್ಫ್ಲುಯೆನ್ಸರ್‌ಗಳು ಹೇಳಿದ್ದಾರೆ. ಪತ್ನಿ ತನಗೆ ಇವಾದೋಪು ಇಷ್ಟ ಆಯ್ತು ಎಂದಿದ್ದರೆ, ಪತಿ ಯಾವುದೇ ರೀತಿಯ ಕಾಮೆಂಟ್‌ ಮಾಡಿಲ್ಲ.

ಇದಕ್ಕೆ ಹಲವರು ಕಾಮೆಂಟ್‌ ಮಾಡಿದ್ದು, ಇದು ದೊಡ್ಡಣ್ಣ ಮಾಡಿರೋ ಅಥೆಂಟಿಕ್‌ ಇವಾದೋಪು ಅಲ್ಲ. ಇವು ಫ್ರೆಶ್‌ ಆಗಿರೋ ಇಡ್ಲಿ, ದೋಸೆ, ವಡೆ ಹಾಗೂ ಪೂರಿಯನ್ನ ಯೂಸ್‌ ಮಾಡಿದ್ದೀರಿ ಎಂದು ಮೀಮರ್‌ ಮುತ್ತಣ್ಣ ಕಾಮೆಂಟ್‌ ಮಾಡಿದ್ದಾರೆ. 'ಇವದೋಪು ಮಾಡ್ಕೊಂಡ್ ತಿಂದ್ರೂ ಅಂತ ಬೇಜಾರಿಲ್ಲ... ಲಾಸ್ಟ್ನಲ್ಲಿ ಫಿಲಾಸಫಿ ಜಡೈಸಿದ್ರಲ್ಲ...ಅದು ಕಣ್ಣೀರ್‌ ತರಿಸಿದೆ' ಎಂದು ಇನ್ನೊಬ್ಬರು ಬರೆದಿದ್ದಾರೆ.

ಪಾರ್ಸಲ್‌ ತಂದು ಎರಡು ದಿನ ಆದಮೇಲೆ ಮಾಡಿದ್ರೆ ಅದು ರಿಯಲ್ ಇವಾದೋಪು ಆಗಿರೋದು. ಇದದು ಫ್ರೆಶ್‌ ಫುಡ್‌ಅನ್ನು ಇಲ್ಲಿ ಮಿಕ್ಸ್‌ ಮಾಡಿದ್ದೀರಿ ಎಂದು ಬರೆದಿದ್ದಾರೆ. ನಮ್ಮ ಕಡೆ ಇದನ್ನ ಮುಸ್ರೆ ಅಂತಾರೆ. ಇದನ್ನ ದನಗಳಿಗೆ ಮಾತ್ರ ಕೊಡ್ತಾರೆ ಅಂತಾ ಇನ್ನೊಬ್ಬರು ಬರೆದಿದ್ದಾರೆ.

Tap to resize

Latest Videos

undefined

ಬಾಲಿಯಲ್ಲಿ ಹನಿಮೂನ್ : ಪತಿ ಜೊತೆ ರೊಮ್ಯಾಂಟಿಕ್ ಫೋಟೋಸ್ ಹಂಚಿ ಕೊಂಡ ಕೌಸ್ತುಭ ಮಣಿ

ಇದೇ ಇವಾದೋಪುನ ರಾಮೇಶ್ವರಂಅಲ್ಲಿ ಮಾಡಿದ್ರೆ ಕ್ಯೂನಲ್ಲಿ ನಿಂತು ತಿಂತಾರೆ ಎಂದು ಇನ್ನೊಬ್ಬರು ಬರೆದಿದ್ದಾರೆ. 'ಮುಖ್ಯವಾದ ingradient ಬಿಟ್ರಲ್ಲ!! ಇಡ್ಲಿ ವಡೆ ಪೂರಿ ಸಾಂಬಾರ್ ಎಲ್ಲ ಹಳಸಿ ಹೋಗಿರಬೇಕು. ಮೂಗು ಹತ್ರ ಹೋದ್ರೆ ಗಮ್ಮ್ ಅಂತ ವಾಸನೆ ಮೂಗಿಗೆ ಹೊಡಿಬೇಕು' ಎಂದು ಮತ್ತೊಬ್ಬರು ಬರೆದಿದ್ದಾರೆ. ಇದು ಇಲ್ಲಿಗೇ ನಿಲ್ಲೋ ತರ ಕಾಣ್ತಿಲ್ಲ. ಇದ್ನ ಇನ್ಯಾವ್ಯವ್ ಹೊಟೇಲ್ನೋರು "ಇವತ್ತಿನ ಸ್ಪೆಷಲ್ - ಇವದೋಪು" ಅಂತ ವ್ಯಾಪಾರ ಶುರು ಮಾಡ್ಕೋತಾರೋ ಗೊತ್ತಿಲ್ಲ' ಎಂದು ಬರೆದಿದ್ದಾರೆ.

ಅಶ್ಲೀಲ ವೀಡಿಯೋ ವೈರಲ್ ಆದ ಬೆನ್ನಲ್ಲೇ Partner ಜೊತೆ ಕೂಲ್ ಪೋಟೋ ಶೇರ್ ಮಾಡ್ಕೊಂಡ ಜ್ಯೋತಿ ರೈ!

ಇವತ್ತು ನೀವು ತೋಪು! pic.twitter.com/yc5M9carek

— ನಗಲಾರದೆ 𝕏 ಅಳಲಾರದೆ (@UppinaKai)
click me!