'ಕುಷ್ಠರೋಗ'ವೇ ಈಕೆಗೆ ವರವಾಯ್ತು.. ಸ್ಟಾರ್ ನಟಿಯಾಗಿ ಮೆರೆದ ಈ ಸುಂದರಿ ಕನ್ನಡದಲ್ಲೂ ನಟಿಸಿದ್ದರು!

Published : Sep 18, 2026, 08:16 PM IST
Dimple Kapadia

ಸಾರಾಂಶ

ವೃತ್ತಿಜೀವನ ಉತ್ತುಂಗದಲ್ಲಿದ್ದಾಗಲೇ ಈ ನಟಿಯ ವೈಯಕ್ತಿಕ ಜೀವನ ಮಹತ್ವದ ತಿರುವು ಪಡೆದುಕೊಂಡಿತು. ಬಾಲಿವುಡ್ ಸೂಪರ್‌ಸ್ಟಾರ್ ಒಬ್ಬರೊಂದಿಗೆ ವಿವಾಹವಾದ ಅವರು, ನಂತರ ಕೆಲವು ವರ್ಷಗಳ ಕಾಲ ಚಿತ್ರರಂಗದಿಂದ ದೂರ ಉಳಿದರು. ಆದರೆ ಈಗ ಮತ್ತೆ ಸಿನಿಮಾಗೆ ಮರಳಿದ್ದಾರೆ. ಯಾರು ಈಕೆ ಗೊತ್ತಾಯ್ತಾ?

15ನೇ ವಯಸ್ಸಿನಲ್ಲೇ ಸ್ಟಾರ್ ಪಟ್ಟ: ಮದುವೆ ಬಳಿಕ ಸಿನಿಮಾ ನಟನೆ ಬಿಟ್ಟ ನಟಿ, ಮತ್ತೆ ಕಮ್‌ಬ್ಯಾಕ್!

ಕೆಲವರ ಸಿನಿಮಾ ಪಯಣವೇ ಒಂದು ರೋಚಕ ಕಥೆಯಂತೆ ಇರುತ್ತದೆ. ಅದಕ್ಕೆ ಸೂಕ್ತ ಉದಾಹರಣೆ ಹಿರಿಯ ನಟಿ ಡಿಂಪಲ್ ಕಪಾಡಿಯಾ. ಕೇವಲ 15ನೇ ವಯಸ್ಸಿನಲ್ಲಿ ನಾಯಕಿಯಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟು, ಮೊದಲ ಸಿನಿಮಾದಲ್ಲೇ ದೇಶಾದ್ಯಂತ ಸಂಚಲನ ಮೂಡಿಸಿದ ನಟಿ ಅವರು. ಈಕೆ ಕನ್ನಡದಲ್ಲಿ ನಟ ರವಿಚಂದ್ರನ್ ನಾಯಕತ್ವದ 'ಯುಗಪುರುಷ' ಚಿತ್ರದಲ್ಲೂ ನಟಿಸಿದ್ದಾರೆ.

1973ರಲ್ಲಿ ರಾಜ್ ಕಪೂರ್ ನಿರ್ದೇಶನದ ‘ಬಾಬಿ’ ಸಿನಿಮಾ ಬಿಡುಗಡೆಯಾಯಿತು. ಈ ಚಿತ್ರದ ಮೂಲಕ ಡಿಂಪಲ್ ಕಪಾಡಿಯಾ (Dimple Kapadia) ಮತ್ತು ರಿಷಿ ಕಪೂರ್ ಹೊಸ ತಲೆಮಾರಿನ ಜನಪ್ರಿಯ ಜೋಡಿಯಾಗಿ ಪ್ರೇಕ್ಷಕರ ಮನ ಗೆದ್ದರು. ವಿಶೇಷವೆಂದರೆ, ಡಿಂಪಲ್ ಅವರಿಗೆ ಸ್ಕ್ರೀನ್ ಟೆಸ್ಟ್ ನೀಡುವಾಗ ಕೇವಲ 14 ವರ್ಷ. ಅವರ ಸೌಂದರ್ಯ, ಸಹಜ ಅಭಿನಯ ಮತ್ತು ವ್ಯಕ್ತಿತ್ವ ರಾಜ್ ಕಪೂರ್ ಅವರ ಗಮನ ಸೆಳೆದಿದ್ದು, ಅಂತಿಮವಾಗಿ ‘ಬಾಬಿ’ ನಾಯಕಿಯಾಗಿ ಆಯ್ಕೆಯಾದರು.

‘ಬಾಬಿ’ ಬಾಕ್ಸ್ ಆಫೀಸ್‌ನಲ್ಲಿ ಯಶಸ್ಸು ಕಾಣುತ್ತಿದ್ದಂತೆ ಡಿಂಪಲ್ ರಾತ್ರೋರಾತ್ರಿ ಸ್ಟಾರ್ ಆಗಿಬಿಟ್ಟರು. ಮೊದಲ ಸಿನಿಮಾದಲ್ಲೇ ಅಪಾರ ಅಭಿಮಾನಿಗಳನ್ನು ಸಂಪಾದಿಸಿಕೊಂಡ ಅವರು, ಬಾಲಿವುಡ್‌ನ ಬಹುಬೇಡಿಕೆಯ ನಟಿಯರಲ್ಲಿ ಒಬ್ಬರಾದರು.

ವೃತ್ತಿಜೀವನ ಉತ್ತುಂಗದಲ್ಲಿದ್ದಾಗಲೇ ಡಿಂಪಲ್ ಮದುವೆ!

ಆದರೆ ವೃತ್ತಿಜೀವನ ಉತ್ತುಂಗದಲ್ಲಿದ್ದಾಗಲೇ ಡಿಂಪಲ್ ಅವರ ವೈಯಕ್ತಿಕ ಜೀವನ ಮಹತ್ವದ ತಿರುವು ಪಡೆದುಕೊಂಡಿತು. ಬಾಲಿವುಡ್ ಸೂಪರ್‌ಸ್ಟಾರ್ ರಾಜೇಶ್ ಖನ್ನಾ ಅವರೊಂದಿಗೆ ವಿವಾಹವಾದ ಅವರು, ನಂತರ ಕೆಲವು ವರ್ಷಗಳ ಕಾಲ ಚಿತ್ರರಂಗದಿಂದ ದೂರ ಉಳಿದರು. ದಂಪತಿಗೆ ಟ್ವಿಂಕಲ್ ಖನ್ನಾ ಮತ್ತು ರಿಂಕೆ ಖನ್ನಾ ಎಂಬ ಇಬ್ಬರು ಪುತ್ರಿಯರು ಜನಿಸಿದರು.

ಮದುವೆಯ ಬಳಿಕ ಕುಟುಂಬ ಮತ್ತು ಮಕ್ಕಳ ಜವಾಬ್ದಾರಿಗಳಿಗೆ ಆದ್ಯತೆ ನೀಡಿದ ಡಿಂಪಲ್, ಸಿನಿಮಾಗಳಿಂದ ದೂರವಿದ್ದರು. ಈ ನಡುವೆ ರಾಜೇಶ್ ಖನ್ನಾ ಅವರ ವೃತ್ತಿಜೀವನದಲ್ಲೂ ಏರಿಳಿತಗಳು ಕಾಣಿಸಿಕೊಂಡವು. ಕ್ರಮೇಣ ದಾಂಪತ್ಯದಲ್ಲಿ ಬಿರುಕು ಮೂಡಿ, ಇಬ್ಬರೂ ಪ್ರತ್ಯೇಕವಾಗಿ ವಾಸಿಸಲು ಆರಂಭಿಸಿದರು.

ನಂತರ ಡಿಂಪಲ್ ಮತ್ತೆ ಬೆಳ್ಳಿತೆರೆಗೆ ಮರಳಲು ನಿರ್ಧರಿಸಿದರು. ಸುಮಾರು 25ನೇ ವಯಸ್ಸಿನಲ್ಲಿ ‘ಸಾಗರ್’ ಚಿತ್ರದ ಮೂಲಕ ನಾಯಕಿಯಾಗಿ ಕಮ್‌ಬ್ಯಾಕ್ ಮಾಡಿದರು. ಮತ್ತೊಂದು ವಿಶೇಷವೆಂದರೆ, ಈ ಸಿನಿಮಾದಲ್ಲಿ ತಮ್ಮ ಮೊದಲ ಚಿತ್ರದ ನಾಯಕ ರಿಷಿ ಕಪೂರ್ ಅವರೊಂದಿಗೇ ಮತ್ತೆ ತೆರೆ ಹಂಚಿಕೊಂಡರು.

ಹೀಗೆ ಬಾಲನಟಿಯಾಗಿ ಅಲ್ಲ, ಕೇವಲ 15ನೇ ವಯಸ್ಸಿನಲ್ಲಿ ನಾಯಕಿಯಾಗಿ ಬಂದ ಡಿಂಪಲ್ ಕಪಾಡಿಯಾ ಅವರ ಸಿನಿಮಾ ಪಯಣ, ಖ್ಯಾತಿ, ವೈಯಕ್ತಿಕ ನಿರ್ಧಾರಗಳು ಮತ್ತು ಕಮ್‌ಬ್ಯಾಕ್‌ನಿಂದ ಕೂಡಿದ ವಿಭಿನ್ನ ಕಥೆಯಾಗಿ ಉಳಿದಿದೆ.

ಆದರೆ.. ಕುಷ್ಠರೋಗವೇ ಈಕೆಗೆ ವರವಾಗಿದ್ದು ಹೇಗೆ? ಈ ರೋಚಕ ಸ್ಟೋರಿ ನೊಡಿ..

ಹೌದು, ಬಾಲಿವುಡ್‌ನ ಹಿರಿಯ ನಟಿ ಡಿಂಪಲ್ ಕಪಾಡಿಯಾ ಅವರು ಬಾಲ್ಯದಲ್ಲಿ ಕುಷ್ಠರೋಗದಿಂದ (Leprosy) ಬಳಲುತ್ತಿದ್ದರು.ಇತ್ತೀಚಿನ ಸಂದರ್ಶನವೊಂದರಲ್ಲಿ ಈ ವಿಷಯವನ್ನು ಬಹಿರಂಗಪಡಿಸಿದ ಅವರು, ತಮಗೆ 12 ವರ್ಷ ವಯಸ್ಸಾಗಿದ್ದಾಗ ಮೊಣಕೈ ಭಾಗದಲ್ಲಿ ಕುಷ್ಠರೋಗದ ಲಕ್ಷಣಗಳು ಕಾಣಿಸಿಕೊಂಡಿದ್ದವು ಎಂದು ತಿಳಿಸಿದ್ದಾರೆ. ಆ ಸಮಯದಲ್ಲಿ ಅವರ ಕುಟುಂಬಕ್ಕೆ ಆಪ್ತರಾಗಿದ್ದ ಪ್ರಸಿದ್ಧ ನಿರ್ದೇಶಕರೊಬ್ಬರು, ಈ ಕಾಯಿಲೆಯ ಕಾರಣದಿಂದ ಅವರನ್ನು ಶಾಲೆಯಿಂದ ಬಹಿಷ್ಕರಿಸುವಂತೆ ಮಾಡುವುದಾಗಿ ಬೆದರಿಕೆ ಹಾಕಿದ್ದರು. ಆ ವಯಸ್ಸಿನಲ್ಲಿ ತಮಗೆ ಆ ಪದದ ಅರ್ಥವಾಗಲಿ ಅಥವಾ ಅದರ ಹಿಂದಿರುವ ಸಾಮಾಜಿಕ ಅಪಪ್ರಚಾರದ (Stigma) ಬಗ್ಗೆಯಾಗಲಿ ಯಾವುದೇ ಅರಿವಿರಲಿಲ್ಲ ಎಂದು ಡಿಂಪಲ್ ನೆನಪಿಸಿಕೊಂಡಿದ್ದಾರೆ.

ಆದರೆ, ಈ ಕಾಯಿಲೆಯೇ ಅವರ ಸಿನಿಮಾ ರಂಗದ ಪ್ರವೇಶಕ್ಕೆ ಕಾರಣವಾಯಿತು ಎಂಬುದೂ ಅಷ್ಟೇ ಸತ್ಯ.. ಡಿಂಪಲ್ ಅವರ ತಂದೆ ಚುನ್ನಿಭಾಯ್ ಕಪಾಡಿಯಾ ಅವರು ಚಿತ್ರರಂಗದ ಪ್ರಮುಖರೊಂದಿಗೆ ಒಡನಾಟ ಹೊಂದಿದ್ದರು."ಒಬ್ಬ ಅತ್ಯಂತ ಸುಂದರ ಹುಡುಗಿ ಕುಷ್ಠರೋಗದಿಂದ ಬಳಲುತ್ತಿದ್ದಾಳೆ" ಎಂಬ ವಿಷಯ ತಿಳಿದ ಖ್ಯಾತ ನಿರ್ದೇಶಕ ರಾಜ್ ಕಪೂರ್ ಅವರು ಡಿಂಪಲ್ ಅವರನ್ನು ಭೇಟಿಯಾಗಲು ಬಯಸಿದರು. ಈ ಭೇಟಿಯ ಬಳಿಕವೇ ರಾಜ್ ಕಪೂರ್ ಅವರು ಡಿಂಪಲ್ ಕಪಾಡಿಯಾ ಅವರನ್ನು ತಮ್ಮ ಐತಿಹಾಸಿಕ ಸೂಪರ್‌ಹಿಟ್ ಚಿತ್ರ 'ಬಾಬಿ' (1973) ಮೂಲಕ ಬಾಲಿವುಡ್‌ಗೆ ಪರಿಚಯಿಸಿದರು. ಅದೇ ಸಮಯದಲ್ಲಿ ನೀಡಿದ ಚಿಕಿತ್ಸೆಯ ನಂತರ ಅವರು ಈ ಕಾಯಿಲೆಯಿಂದ ಸಂಪೂರ್ಣವಾಗಿ ಗುಣಮುಖರಾದರು.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Exclusive: 'ಎಲ್ಲಾ ಭಾಷೆಯನ್ನೂ ನನ್ನದೇ ಎನ್ನುತ್ತೇನೆ': ಬಹುಭಾಷಾ ಬಗ್ಗೆ ರಶ್ಮಿಕಾ ಓಪನ್ ಟಾಕ್
ಸ್ವಂತ 'ಐಲ್ಯಾಂಡ್' ಹೊಂದಿರೋ ಈ ನಟಿ ಕನ್ನಡದಲ್ಲೂ ನಟಿಸಿದ್ದಾರೆ.. ಈಕೆಯ ಒಟ್ಟೂ ಆಸ್ತಿ ಕೇಳಿದ್ರೆ ಶಾಕ್ ಆಗ್ತೀರಾ!