ಪಾಪ್ ಸೆನ್ಸೇಶನ್ ದಿಲ್ಜಿತ್ ದೋಸಾಂಜ್ ಸದ್ಯ ಬೆಂಗಳೂರಿನಲ್ಲಿದ್ದಾರೆ. ಮ್ಯೂಸಿಕ್ ಕಾನ್ಸರ್ಟ್‌ಗಾಗಿ ಆಗಮಿಸಿದ ದಿಲ್ಜಿತ್ ಬೆಂಗಳೂರಿನ ರಾಮೇಶ್ವರ ಕೆಫೆಯಲ್ಲಿ ವಿವಿಧ ಖಾದ್ಯಗಳ ಸವಿದು ವಿಡಿಯೋ ಹಂಚಿಕೊಂಡಿದ್ದಾರೆ.
ಬೆಂಗಳೂರು(ಡಿ.06) ಪಾಪ್ ಸೆನ್ಸೇಶನ್ ದಿಲ್ಜಿತ್ ದೋಸಾಂಜ್ ಮ್ಯೂಸಿಕ್ ಕಾನ್ಸರ್ಟ್ ಮೂಲಕ ವಿಶ್ವಾದ್ಯಂತ ಭಾರಿ ಸದ್ದು ಮಾಡುತ್ತಿದ್ದಾರೆ. ದಿಲ್ಜಿಜ್ ಮ್ಯೂಸಿಕ್ ಕಾನ್ಸರ್ಟ್‌ಗೆ ಜನ ಕಿಕ್ಕಿರಿದು ತುಂಬುತ್ತಿದ್ದಾರೆ. ಇದೀಗ ಭಾರತದ ಪ್ರಮುಖ ನಗರಗಳಲ್ಲಿ ದಿಲ್ ಲೂಮಿನಾಟಿ ಮ್ಯೂಸಿಕ್ ಪ್ರವಾಸ ಆರಂಭಿಸಿರುವ ದಿಲ್ಜಿತ್ ದೋಸಾಂಜ್ ಸದ್ಯ ಬೆಂಗಳೂರಿನಲ್ಲಿದ್ದಾರೆ. ಇಂದು ಮಾದಾವರದಲ್ಲಿರುವ ನೈಸ್ ಮೈದಾನದಲ್ಲಿ ದಿಲ್ಜಿತ್ ದೋಸಾಂಜ್ ದಿಲ್ ಲ್ಯೂಮಿನಾಟಿ ಅದ್ಧೂರಿ ಮ್ಯೂಸಿಕ್ ಕಾನ್ಸರ್ಟ್ ನಡೆಯಲಿದೆ. ಇದಕ್ಕಾಗಿ ಬೆಂಗಳೂರಿಗೆ ಆಗಮಿಸಿದ ದಿಲ್ಜಿತ್ ರಾಮೇಶ್ವರಂ ಕೆಫೆಯಲ್ಲಿ ವಿವಿದ ಖಾದ್ಯಗಳನ್ನು ಸವಿದಿದ್ದಾರೆ. ಈ ಕುರಿತು ವಿಡಿಯೋ ಇದೀಗ ಸಂಚಲನ ಸೃಷ್ಟಿಸಿದೆ.
ಖಾಸಗಿ ಜೆಟ್ ಮೂಲಕ ಬೆಂಗಳೂರಿಗೆ ಆಗಮಿಸಿದ ದಿಲ್ಜಿತ್ ದೋಸಾಂಜ್ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆಗಿದ್ದಾರೆ. ಬಳಿಕ ಕಾರಿನ ಮೂಲಕ ಆಗಮಿಸಿದ ದಿಲ್ಜಿತ್, ಜನಪ್ರಿಯ ರಾಮೇಶ್ವರಂ ಕೆಫೆ ಬಳಿ ನಿಲ್ಲಿಸಿದ್ದಾರೆ. ಬಳಿಕ ರಾಮೇಶ್ವರಂ ಕೆಫೆಯಲ್ಲಿ ಇಡ್ಲಿ, ಪೋಡಿ ಬೆಣ್ಣೆ ಇಡ್ಲಿ, ಮಸಾಲದೋಸೆ ಸವಿಸಿದ್ದಾರೆ. ರಾಮೇಶ್ವರಂ ಕೆಫೆ ವಿಶೇಷ ಚಹಾ ಕುಡಿದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕಾರಿನಲ್ಲಿ ಕುಳಿತು ರಾಮೇಶ್ವರಂ ಕೆಫೆ ಆಹಾರಗಳನ್ನು ಸವಿದಿದ್ದಾರೆ. ತಮ್ಮ ಬೆಂಗಳೂರು ಪ್ರವಾಸ, ಉಪಾಹರ ವಿಡಿಯೋವನ್ನು ಖುದ್ದು ದಿಲ್ಜಿತ್ ದೋಸಾಂಜ್ ಹಂಚಿಕೊಂಡಿದ್ದಾರೆ.
ಫಿಲ್ಮ್‌ಪೇರ್ OTT ಪ್ರಶಸ್ತಿ ಫುಲ್ ಲಿಸ್ಟ್, ದಿಲ್ಜಿತ್ ದೋಸಾಂಜ್‌ಗೆ ಉತ್ತಮ ನಟ, ಕರೀನಾ ಉತ್ತಮ ನಟಿ!
ದಿಲ್ಜಿತ್ ದೋಸಾಂಜ್ ಭಾರತದ ಪ್ರಮುಖ 10 ನಗರಗಳಿಗೆ ಮ್ಯೂಸಿಕ್ ಟೂರ್ ನಡೆಸುತ್ತಿದ್ದಾರೆ. ಅಕ್ಟೋಬರ್ 29 ರಂದು ಅಸ್ಸಾಂನ ಗೌವ್ಹಾಟಿಯಿಂದ ದಿಲ್ ಲ್ಯೂಮಿನಾಟಿ ಮ್ಯೂಸಿಕ್ ಕಾನ್ಸರ್ಟ್ ಟೂರ್ ಆರಂಭಗೊಂಡಿದೆ. ಇದೀಗ ಈ ಟೂರ್ ಬೆಂಗಳೂರು ತಲುಪಿದೆ. ಕಾರ್ಯಕ್ರಮ ಆಯೋಜಕರ ಪ್ರಕಾರ ದಿಲ್ಜಿತ್ ದೋಸಾಂಜ್ ಬೆಂಗಳೂರು ಮ್ಯೂಸಿಕ್ ಕಾನ್ಸರ್ಟ್ ಸಂಜೆ 7 ರಿಂದ 7.30ಕ್ಕೆ ಆರಂಭಗೊಳ್ಳಲಿದೆ. ಆದರೆ ಟಿಕೆಟ್ ಖರೀದಿಸಿರುವ ಸಂಗೀತ ಪ್ರೀಯಕರಿಗೆ ಸಂಜೆ ಗಂಟೆಗೆ ಕಾರ್ಯಕ್ರಮ ಪ್ರವೇಶಕ್ಕೆ ಗೇಟ್ ತೆರೆಯಲಾಗುತ್ತಿದೆ. ಇದರಿಂದ ತಮ್ಮ ತಮ್ಮ ಆಸನಗಳಲ್ಲಿ ಕುಳಿತುಕೊಳ್ಳಲು ಸಾಧ್ಯವಾಗಲಿದೆ. ಇಷ್ಟೇ ಅಲ್ಲ ಕಾರ್ಯಕ್ರಮ ಆರಂಭದ ಕೊನೆಯ ಕ್ಷಣದಲ್ಲಿ ಆಗುವ ನೂಕು ನುಗ್ಗಲು ತಪ್ಪಿಸಲು ಈ ರೀತಿ ಕ್ರಮ ಕೈಗೊಳ್ಳಲಾಗಿದೆ.
ಬೆಂಗಳೂರಿನಲ್ಲಿ ಆಯೋಜಿಸಿರುವ ದಿಲ್ ಲ್ಯೂಮಿನಾಟಿ ಮ್ಯೂಸಿಕ್ ಕಾನ್ಸರ್ಟ್ ಇಂದು ಸಂಜೆ 7 ರಿಂದ ರಾತ್ರಿ 11 ಗಂಟೆ ವರೆಗೆ ನಡೆಯಲಿದೆ ಎಂದು ಆಯೋಜಕರು ಹೇಳಿದ್ದಾರೆ. ಕಾರ್ಯಕ್ರಮ ಮುಗಿದ ಬಳಿಕವೂ ಸಂಗೀತ ಪ್ರಿಯರು ಶಾಂತಿಯುತವಾಗಿ, ತೆರಳಬೇಕಾಗಿ ವಿನಂತಿಸಿದ್ದಾರೆ. ಆರಂಭದದಲ್ಲಿ ದಿಲ್ ಲ್ಯೂಮಿನಾಟಿ ಬೆಂಗಳೂರು ಕಾರ್ಯಕ್ರಮದ ಟಿಕೆಟ್ ಪ್ರೀ ಸೆಲ್ ಮೂಲಕ ನೀಡಲಾಗುತ್ತಿತ್ತು. ಬಳಿಕ ಜೋಮ್ಯಾಟೋ ಲೈ್ ಮೂಲಕ ಮಾರಾಟಕ್ಕೆ ಅನುವು ಮಾಡಿಕೊಡಲಾಗಿತ್ತು.
Tomorrow BENGALURU 🇮🇳
DIL-LUMINATI TOUR
Year 24 🪷 pic.twitter.com/HlkiowEsno
ದಿಲ್ಜಿತ್ ದೋಸಾಂಜ್ ಮ್ಯೂಸಿಕ್ ಟೂರ್ ಎಲ್ಲಾ ನಗರದಲ್ಲಿ ಭಾರಿ ಮೆಚ್ಚುಗೆಗೆ ಪಾತ್ರವಾಗಿದೆ. ಸಂಗೀತ ಪ್ರೀಯರು ಆಸ್ವಾದಿಸಿದ್ದಾರೆ. ಆದರೆ ಹೈದರಾಬಾದ್‌ನಲ್ಲಿ ಆಯೋಜಿಸಿದ ಮ್ಯೂಸಿಕ್ ಕಾನ್ಸರ್ಟ್ ವಿವಾದಕ್ಕೆ ಕಾರಣಾಗಿತ್ತು. ದಿಲ್ಜಿತ್ ದೋಸಾಂಜ್ ತಮ್ಮ ಹಾಡಿನಲ್ಲಿ ಮದ್ಯ, ಡ್ರಗ್ಸ್ ಹಾಗೂ ನಿಯಮ ಬಾಹಿರ ವಿಚಾರಗಳನ್ನು ಪ್ರಚಾರ ಮಾಡಿದ್ದಾರೆ ಎಂಬ ಆರೋಪ ಎದುರಾಗಿದೆ. ಪಟಿಯಾಲ ಪೆಗ್ ಹಾಗೂ ಪಂಚತಾರ ಹಾಡಿನಲ್ಲಿ ಈ ರೀತಿಯ ವಿಷಗಳನ್ನು ಉಲ್ಲೇಖಿಸಿ ಹಾಡಿದ್ದಾರೆ ಎಂದು ದೂರು ದಾಖಲಾಗಿತ್ತು. ಈ ಕುರಿತು ಹೈದರಾಬಾದ್ ಸರ್ಕಾರ ದಿಲ್ಜಿತ್ ದೋಸಾಂಜ್‌ಗೆ ಲೀಗಲ್ ನೋಟಿಸ್ ಕಳುಹಿಸಿದೆ. ಇಷ್ಟೇ ಅಲ್ಲ ದಿಲ್ಜಿತ್ ದೋಸಾಂಜ್ ವಿರುದ್ಧ ಕೆಲ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿತ್ತು. ಪಂಜಾಬ್ ಸಂಸ್ಕೃತಿಯನ್ನು ಇಲ್ಲಿ ಪಸರಿಸುವುದು ಬೇಡ, ಇದು ಶಾಂತಿಯುತ ರಾಜ್ಯ ಎಂದು ಪಾಪ್ ಸಿಂಗರ್‌ಗೆ ಎಚ್ಚರಿಕೆ ನೀಡಿತ್ತು.