ಸೋನು ಸೂದ್ ಮನ ಸೆಳೆದ ಹಳ್ಳಿ ಹೈದನ ಸ್ವರ ಮಾಧುರ್ಯ... ವಿಡಿಯೋ ವೈರಲ್

Published : Feb 22, 2023, 07:22 PM ISTUpdated : Feb 22, 2023, 07:23 PM IST
ಸೋನು ಸೂದ್ ಮನ ಸೆಳೆದ ಹಳ್ಳಿ ಹೈದನ ಸ್ವರ ಮಾಧುರ್ಯ... ವಿಡಿಯೋ ವೈರಲ್

ಸಾರಾಂಶ

ಇಲ್ಲೊಂದು ಹಳ್ಳಿ ಪ್ರತಿಭೆ ತನ್ನ ಸೊಗಸಾದ ಸ್ವರ ಮಾಧುರ್ಯದಿಂದ ಎಲ್ಲರ ಸೆಳೆಯುತ್ತಿದ್ದು, ಈತನ ಕಂಠಸಿರಿಗೆ ಖ್ಯಾತ ನಟ ಸೋನು ಸೂದ್ ಕೂಡ ತಲೆಬಾಗಿದ್ದಾರೆ. 

ಇತ್ತೀಚೆಗೆ ಪ್ರಪಂಚದಲ್ಲಿ ಪ್ರತಿಭೆಗಳಿಗೇನು ಕೊರತೆ ಇಲ್ಲ. ಪ್ರತಿಯೊಂದು ಮನೆಯಲ್ಲೂ ಸಿಂಗರ್‌ಗಳು ಡಾನ್ಸರ್‌ಗಳು ಇರುತ್ತಾರೆ. ಇಂತಹ ಪ್ರತಿಭೆಗಳಿಗೆ ಸೋಶಿಯಲ್ ಮೀಡಿಯಾಗಳು ಅವಕಾಶ ಒದಗಿಸುತ್ತಿದ್ದು, ಪ್ರತಿಭೆ ಇದ್ದವರು ವೇದಿಕೆ ಇಲ್ಲ ಎಂದು ಅಳಬೇಕಾದ ಸ್ಥಿತಿ ಇಲ್ಲ. ಹಾಗೆಯೇ ಇಲ್ಲೊಂದು ಹಳ್ಳಿ ಪ್ರತಿಭೆ ತನ್ನ ಸೊಗಸಾದ ಸ್ವರ ಮಾಧುರ್ಯದಿಂದ ಎಲ್ಲರ ಸೆಳೆಯುತ್ತಿದ್ದು, ಈತನ ಕಂಠಸಿರಿಗೆ ಖ್ಯಾತ ನಟ ಸೋನು ಸೂದ್ ಕೂಡ ತಲೆಬಾಗಿದ್ದಾರೆ. 

ಬಿಹಾರದ ಹಳ್ಳಿಯೊಂದರ ಯುವಕನೊಬ್ಬ ತನ್ನ ಸುಮಧುರ ಕಂಠದಿಂದ ಸಾಮಾಜಿಕ ಜಾಲತಾಣಗಳಲ್ಲಿ ಗಮನ ಸೆಳೆದಿದ್ದಾನೆ. ಅಮರಜೀತ್ ಜೈಕರ್ ಎಂಬ ಹೆಸರಿನ ಈ ತರುಣ  2004 ರಲ್ಲಿ ಬಿಡುಗಡೆಯಾದ ಮಸ್ತಿ ಸಿನಿಮಾದ ಆನಂದ್ ರಾಜ್ ಆನಂದ್ (Anand Raj Anand) ಸಂಯೋಜಿಸಿದ ದಿಲ್ ದೇ ದಿಯಾ ಹೈ ಹಾಡನ್ನು ಬಹಳ ಮಾಧುರ್ಯ ಪೂರ್ಣವಾಗಿ ಹಾಡಿದ್ದು, ಈತನ ಹಾಡಿಗೆ ನೆಟ್ಟಿಗರು ವಾಹ್ ವಾಹ್ ಅಂದಿದ್ದಾರೆ. ನಟ ಸೋನು ಸೂದ್ ಕೂಡ  ಈ ತರುಣದ ಹಾಡಿಗೆ ಮನ ಸೋತಿದ್ದು, ಏಕ್ ಬಿಹಾರಿ ಸೌ ಪೇ  ಭಾರಿ ಎಂದು ಆತನನ್ನು ಶ್ಲಾಘಿಸಿದ್ದಾರೆ. Chapra Zila ಎಂಬ ಪೇಜ್‌ನಿಂದ ಫೆ.19 ರಂದು ಈ ವಿಡಿಯೋ ಮೊದಲಿಗೆ ಪೋಸ್ಟ್ ಆಗಿದ್ದು, 7 ಲಕ್ಷಕ್ಕೂ ಅಧಿಕ ಜನ ಈ ವಿಡಿಯೋವನ್ನು ವೀಕ್ಷಿಸಿದ್ದಾರೆ. 

ಅಪ್ಪಟ ಹಳ್ಳಿ ಪ್ರತಿಭೆ, ಈ ಪೋರಿಯ ಇಂಗ್ಲೀಷ್ ಆಕ್ಸೆಂಟ್‌ಗೆ ಬೆರಗಾಗದವರಿಲ್ಲ...

ಅಮರ್‌ಜೀತ್‌ನ ಧ್ವನಿಯಿಂದ ಹಿಡಿದು ಅವರ ಸ್ವರ ಮತ್ತು  ರಾಗ ಎಲ್ಲವೂ ಈ ವೀಡಿಯೋದಲ್ಲಿ  ಪರಿಪೂರ್ಣವಾಗಿದೆ. ಜೈಕರ್ ತುಂಬು ಮನಸ್ಸಿನಿಂದ ಈ ಹಾಡನ್ನು ಹಾಡಿದ್ದು,  ಅವರ ಹಿಂದೆ ಇಬ್ಬರು ಮಕ್ಕಳು ಆಟವಾಡುತ್ತಿರುವುದನ್ನು ಈ ವಿಡಿಯೋದಲ್ಲಿ ಕಾಣಬಹುದು. ಜೊತೆಗೆ ಹಿಂಭಾಗದಲ್ಲಿ ಹಸಿರಿನಿಂದ ತುಂಬಿದ ಹೊಲವಿರುವುದು ಕಾಣುತ್ತದೆ. 

ಸೋನು ಸೂದ್ ಟ್ವಿಟ್‌ಗೆ ಪ್ರತಿಕ್ರಿಯಿಸಿರುವ ಜೈಕರ್ ಲವ್ ಯೂ ಸರ್ ಎಂದು ಪ್ರತಿಕ್ರಿಯಿಸಿದ್ದಾರೆ.  ಹಾಗೆಯೇ ಸಾವಿರಾರು ಜನ ಸೋಶಿಯಲ್ ಮೀಡಿಯಾ ಬಳಕೆದಾರರು ಕೂಡ ಈತನ ಪ್ರತಿಭೆ ಮೆಚ್ಚಿ ಹೊಗಳಿದ್ದಾರೆ. ಅಲ್ಲದೇ ಮತ್ತೆ ಕೆಲವರು ಬಳಕೆದಾರರು ಈತ ಹಾಡಿದ ಇತರ ಬಾಲಿವುಡ್ ಹಾಡುಗಳ ಹಲವು ವಿಡಿಯೋಗಳನ್ನು ಕೂಡ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಕೆಲವರು ಈತನಿಗೆ ಉತ್ತಮ ತರಬೇತಿ ನೀಡಿದರೆ ಈತ ಪಕ್ಕಾ ಖ್ಯಾತ ಗಾಯಕನಾಗುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದು ಕಾಮೆಂಟ್ ಮಾಡಿದ್ದಾರೆ. 

ಟೇಬಲ್‌ ಇಲ್ಲದಿದ್ದರೇನಂತೆ... ಇಟ್ಟಿಗೆ ಜೋಡಿಸಿ ಸ್ನೂಕರ್‌ ಆಡುವ ಪುಟ್ಟ ಬಾಲಕ.... ವಿಡಿಯೋ ವೈರಲ್‌

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಆಂಧ್ರಪ್ರದೇಶದ X MLA Gummadi Narsaiah ಮನೆಗೆ ಹೋದಾಗ ನನ್ನ ತಂದೆ ಬಳಿಗೆ ಹೋದಂತಾಯ್ತು: Shiva Rajkumar
ಬೆಳಗೆದ್ದು .. ನಾಚುತ್ತಲೇ ಮಲಗುವ ಕೋಣೆಯ ರಹಸ್ಯ ಬಹಿರಂಗಪಡಿಸಿದ ಪಿಗ್ಗಿ