
ಬೆಂಗಳೂರು (ಫೆ.17): ಮಕರ ಸಂಕ್ರಾಂತಿ ಹಬ್ಬದ ದಿನ ಚಿಕ್ಕಬಳ್ಳಾಪುರ ಬಳಿ ಆವಲಗುರ್ಕಿ ಸಮೀಪ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಂದ ಲೋಕಾರ್ಪಣೆಗೊಂಡ ಆದಿಯೋಗಿ ಪ್ರತಿಮೆ ವೀಕ್ಷಿಸಲು ಚಿಕ್ಕಬಳ್ಳಾಪುರಕ್ಕೆ ಪ್ರಸಿದ್ಧ ಚಿತ್ರನಟ ರಜನಿಕಾಂತ್ ಶುಕ್ರವಾರ ಭೇಟಿ ನೀಡಿದರು. ತಮ್ಮ ಸಹೋದರ ಜೊತೆ ಭೇಟಿ ನೀಡಿದ ರಜನಿಕಾಂತ್ ಪ್ರಾರ್ಥಿಸಿ ಅಲ್ಲಿಂದ ತೆರಳಿದರು. ರಜನಿಕಾಂತ್ ಬರುವ ಬಗ್ಗೆ ಯಾವುದೇ ಮಾಹಿತಿ ನೀಡಿರಲಿಲ್ಲ. ಇದ್ದಕ್ಕಿದ್ದಂತೆ ಬಂದ ನಟನನ್ನು ಸ್ಥಳೀಯರು ಗುರುತಿಸಿದ್ದಾರೆ. ಬರುವ ವಿಚಾರ ತಿಳಿದರೆ ಅಭಿಮಾನಿಗಳನ್ನು ನಿಯಂತ್ರಿಸುವುದು ಕಷ್ಟವೆಂದು ಅರಿತು ತಿಳಿಸದೇ ಬಂದು ಹೊರಟು ಹೋಗಿದ್ದಾರೆ.
ಇಶಾ ಕೇಂದ್ರದ ಸದ್ಗುರು ಜಗ್ಗಿ ವಾಸುದೇವ್ ಅವರು ತಮಿಳುನಾಡಿನ ಕೊಯಮತ್ತೂರು ಬಳಿ ಸ್ಥಾಪಿಸಿರುವ ಆದಿಯೋಗಿ ಮಾದರಿಯಲ್ಲಿ ಚಿಕ್ಕಬಳ್ಳಾಪುರದಲ್ಲಿ 112 ಎತ್ತರದ ಆದಿಯೋಗಿ ಪ್ರತಿಮೆ ಸ್ಥಾಪಿಸಿದ್ದು ಅದು ಇದೀಗ ಜಿಲ್ಲೆಯ ಪ್ರವಾಸಿ ತಾಣವಾಗಿ ರೂಪುಗೊಂಡಿದೆ.
Rajinikanth: ಮತ್ತೆ ಕನ್ನಡಕ್ಕೆ ಸೂಪರ್ ಸ್ಟಾರ್?: 4 ದಶಕಗಳ ನಂತರ ತಲೈವಾ ಎಂಟ್ರಿ
ವಾರಾಂತ್ಯದ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿದಂತೆ ಹಲವಾರು ಸ್ಥಳಗಳಿಂದ ಶಿವನ ಭಕ್ತರು ಹಾದಿಯಾಗಿ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆದಿಯೋಗ ಸ್ಥಳಕ್ಕೆ ಭೇಟಿ ನೀಡಿ ವೀಕ್ಷಿಸುತ್ತಿದ್ದಾರೆ. ಜಿಲ್ಲೆಯ ವಿಶ್ವ ವಿಖ್ಯಾತ ನಂದಿಗಿರಿಧಾಮ ವೀಕ್ಷಣೆಗೆ ಆಗಮಿಸುತ್ತಿರುವ ಪ್ರವಾಸಿಗರು, ಅವಲಬೆಟ್ಟ ಜೊತೆಗೆ ಈಗ ಆದಿಯೋಗಿ ಪ್ರತಿಮೆ ಇರುವ ಆವಲಗುರ್ಕಿಗೆ ತೆರಳಿ ಆದಿಯೋಗಿಯನ್ನು ಕಣ್ಣು ತುಂಬಿಸಿಕೊಳ್ಳುತ್ತಿದ್ದಾರೆ.
'ಕಾಂತಾರ'ದ ಅರಮನೆಗೆ ತಲೈವಾ ಭೇಟಿ: ಜೈಲರ್ ಸಿನಿಮಾದ ಶೂಟಿಂಗ್ ಆರಂಭ
ಕರ್ನಾಟಕ ಲೋಕಾಯುಕ್ತರಾದ ಪಾಟೀಲ್ ಸಹ ಇಶಾ ಕೇಂದ್ರದ ಆದಿಯೋಗಿ ಪ್ರತಿಮೆ ವೀಕ್ಷಿಸಿದರು. ಪ್ರತಿದಿನ ಸಂಜೆ 6 ಗಂಟೆ ವಿಶೇಷ ಧ್ವನಿ, ಬೆಳಕಿನಲ್ಲಿ ಆದಿಯೋಗಿ ಭಕ್ತರಿಗೆ ದರ್ಶನ ನೀಡುತ್ತಿದ್ದು, ಭಕ್ತರ ಗಮನ ಸೆಳೆಯುತ್ತಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.