ಇವಳೇನು ಮತ್ತೊಬ್ಬ ಉರ್ಫಿ ಜಾವೇದಾ? ತುಂಡುಡುಗೆ ತೊಟ್ಟು ಮೆಟ್ರೋ ಹತ್ತಿದ ಯುವತಿ!

Published : Apr 04, 2023, 01:22 PM ISTUpdated : Apr 04, 2023, 01:23 PM IST
ಇವಳೇನು ಮತ್ತೊಬ್ಬ ಉರ್ಫಿ ಜಾವೇದಾ? ತುಂಡುಡುಗೆ ತೊಟ್ಟು ಮೆಟ್ರೋ ಹತ್ತಿದ ಯುವತಿ!

ಸಾರಾಂಶ

'ನಾನು, ನನ್ನಿಷ್ಟದ ಪ್ರಕಾರ ಡ್ರೆಸ್‌ ಮಾಡಿಕೊಳ್ತೀನಿʼ ಅಂತ ಹೇಳಿದ ಈ ಹುಡುಗಿ ಇದ್ದಕ್ಕಿದ್ದಂತೆ ಸಮಾಜದ ವಿರುದ್ಧ, ಫ್ಯಾಮಿಲಿ ವಿರುದ್ಧ ಬಂಡಾಯ ಎದ್ದವಳ ಹಾಗೆ ದಿಲ್ಲಿ ಮೆಟ್ರೋದಲ್ಲು ಟೂಪೀಸ್‌ನಲ್ಲಿ ಬಂದುಬಿಟ್ಟಳು. ಸುತ್ತ ಇದ್ದವರು ಬೆಚ್ಚಿ ಬಿದ್ದರೋ ಇಲ್ಲವೋ ಸೋಶಿಯಲ್‌ ಮೀಡಿಯಾದಲ್ಲಿ ಮಾತ್ರ ಕದನಕುತೂಹಲ.

ಡೆಲ್ಲಿ ಮೆಟ್ರೋ ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಬಿಸಿ ಬಿಸಿ ಚರ್ಚೆಯಲ್ಲಿದೆ. ಈ ಚರ್ಚೆ ಮೆಟ್ರೋ ಬಗ್ಗೆ ಅಲ್ಲ. ಅಲ್ಲಿ ಕಾಣಿಸಿಕೊಂಡ ತರಲೆ ಹುಡುಗಿಯೊಬ್ಬಳ ಬಗ್ಗೆ. ಹೌದು, ಈ ಹುಡುಗಿ ಎಲ್ಲರ ಥರ ಕಾಣಿಸಿಕೊಂಡಿದ್ರೆ ಯಾರು ಕೆಮ್ಮುತ್ತಿರಲಿಲ್ಲ. ಆದ್ರೆ ಪಕ್ಕದಲ್ಲಿರುವವರು ಉಗುಳು ನುಂಗಿಕೊಳ್ಳೋ ಹಾಗೆ ಮಾಡಿದ್ದೇ ಈ ಹುಡುಗಿಯ ಹೆಚ್ಚುಗಾರಿಕೆ. ಇದನ್ನ ನೋಡಿ ಕಾಲ ಕೆಟ್ಟೋಯ್ತಪ್ಪ ದೇವ್ರೇ ಅಂತ ದೊಡ್ಡೋರು ಗೊಣಗುತ್ತಿದ್ದಾರೆ.

'ನಾನು, ನನ್ನಿಷ್ಟದ ಪ್ರಕಾರ ಡ್ರೆಸ್‌ ಮಾಡಿಕೊಳ್ತೀನಿ' ಅಂತ ಹೇಳಿದ ಈ ಹುಡುಗಿ ಇದ್ದಕ್ಕಿದ್ದಂತೆ ಸಮಾಜದ ವಿರುದ್ಧ, ಫ್ಯಾಮಿಲಿ ವಿರುದ್ಧ ಬಂಡಾಯ ಎದ್ದವಳ ಹಾಗೆ ದಿಲ್ಲಿ ಮೆಟ್ರೋದಲ್ಲು ಟೂಪೀಸ್‌ನಲ್ಲಿ ಬಂದುಬಿಟ್ಟಳು. ಸುತ್ತ ಇದ್ದವರು ಬೆಚ್ಚಿ ಬಿದ್ದರೋ ಇಲ್ಲವೋ ಸೋಶಿಯಲ್‌ ಮೀಡಿಯಾದಲ್ಲಿ ಮಾತ್ರ ಕದನಕುತೂಹಲ.

ಕಳೆದ ಒಂದೆರಡು ದಿನಗಳಿಂದ ಮೀಡಿಯಾದಲ್ಲಿ ಈಕೆಯದೇ ಹವಾ. ಮೆಟ್ರೋದಲ್ಲಿ ಬರೀ ಬ್ರಾ ಮತ್ತು ಕಾಚಾ ಧರಿಸಿ ಬರಬಹುದೋ ಬಾರದೋ? ಅಮೆರಿಕ, ಇಂಗ್ಲೆಂಡ್‌ಗಳಲ್ಲಿ ಇದು ಪ್ರಶ್ನೆಯೇ ಅಲ್ಲ. ಅಲ್ಲಿ ʼನೋ ಪ್ಯಾಂಟ್ಸ್‌ ಡೇʼ ಮಾಡುತ್ತಾರೆ. ಪ್ಯಾಂಟ್‌ ಧರಿಸದೇ ಬರೀ ಕಾಚಾದಲ್ಲಿ ಮೆಟ್ರೋದಲ್ಲಿ ಒಂದಿಡೀ ದಿನ ಓಡಾಡುತ್ತಾರೆ. ಯಾರೂ ದರಕಾರು ಮಾಡುವುದಿಲ್ಲ. ಆದರೆ ಭಾರತದಲ್ಲಿ ಇಂಥದಕ್ಕೆ ನೂರೆಂಟು ಸಮಸ್ಯೆಗಳು.

ನೀತಾ ಅಂಬಾನಿ ನಾಟ್ಯ ವೈಭವ: ರಘುಪತಿ ರಾಘವ ಹಾಡಿಗೆ ನೃತ್ಯ: ವಿಡಿಯೋ ವೈರಲ್

ಹೀಗೆ ಸದ್ಯ ಹಾಹಾಕಾರ ಎಬ್ಬಿಸಿದವಳ ಹೆಸರು ರಿದಂ ಚನಾನಾ (Rhythm Chanana). ಸದ್ಯ ಈಕೆ ದಿಲ್ಲಿ ಮೆಟ್ರೋ ಗರ್ಲ್‌ (Delhi Metro girl) ಅಂತಲೇ ಫೇಮಸ್ಸಾಗಿದಾಳೆ. ದಿಲ್ಲಿ ಮೆಟ್ರೋದಲ್ಲಿ ಟೂಪೀಸ್‌ ಧರಿಸಿ ಬಂದ ಈಕೆಯ ಫೋಟೋಗಳು ಹಾಗೂ ವಿಡಿಯೋ ದಿನಾರ್ಧದಲ್ಲಿ ವೈರಲ್‌ ಆದವು. ಇದು ಇಂಟರ್‌ನೆಟ್‌ನಲ್ಲಿ ಬಿಸಿಬಿಸಿ ಚರ್ಚೆಗೆ ಮೂಲವಾಯಿತು.

ಈಕೆ ಯಾರು, ಎಲ್ಲಿಯವಳು ಎಂದು ಹುಡುಕುತ್ತ ಹೋದವರಿಗೆ ಈಕೆಯ ಇನ್‌ಸ್ಟಾಗ್ರಾಂ ಅಕೌಂಟ್‌ (@prettypastry11112222) ಎದುರಾಯಿತು. ಈಕೆ ಪಂಜಾಬ್‌ನ ಫೇತ್‌ಗಢ ಸಾಹಿಬ್‌ ನಗರದವಳು. ಆಜ್‌ತಕ್‌ ವಾಹಿನಿಗೆ ಈಕೆ ನೀಡಿದ ಸಂದರ್ಶನದಲ್ಲಿ ಹೇಳಿಕೊಂಡಂತೆ, ಈಕೆ ಸಾಂಪ್ರದಾಯಿಕ ಕುಟುಂಬದಿಂದ ಬಂದವಳಂತೆ. ಈ ಸಾಂಪ್ರದಾಯಿಕತೆಯ ಒತ್ತಡವೇ ಆಕೆ ಈಗ ರೆಬೆಲ್‌ ಆಗಲು ಕಾರಣವಾಗಿದೆ. ಈಕೆಯ ಬೋಲ್ಡ್‌ ನಿಲುವುಗಳು ಈಕೆಯ ಮನೆಯವರಿಗೆ ಇಷ್ಟವಾಗುತ್ತಿರಲಿಲ್ಲ. ಹೀಗಾಗಿ ಈಕೆ ಮನೆ ಬಿಟ್ಟಳಂತೆ.

ಇವಳ ಇನ್‌ಸ್ಟಾಗ್ರಾಂ(Instagram) ಖಾತೆಯಲ್ಲಿ ಸಾಕಷ್ಟು ಹಾಟ್‌ ಮತ್ತು ಬೋಲ್ಡ್‌ ಫೋಟೋಗಳಿವೆ. ವಿಶೇಷ ಅಂದ್ರೆ ಕಳೆದ ವರ್ಷ ಅಕ್ಟೋಬರ್‌ವರೆಗೂ ಆಕೆ ಅಷ್ಟೊಂದು ಹಾಟ್‌ ಡ್ರೆಸ್‌(Hot dress) ಧರಿಸಿರಲಿಲ್ಲ. ಸಾಂಪ್ರದಾಯಿಕ ಉಡುಗೆ ಧರಿಸುತ್ತಿದ್ದಳು, ಅಕ್ಟೋಬರ್‌ನಲ್ಲಿ ಇದ್ದಕ್ಕಿದ್ದಂತೆ ಬೋಲ್ಡ್‌ ಆಗಿಬಿಟ್ಟಳು. ʼʼಇಲ್ಲಿಂದ ಬಿರುಗಾಳಿ ಶುರು!ʼʼ ಅಂದಳು. ಅಂದಹಾಗೆ ಈಕೆಗೆ ಉರ್ಫಿ ಜಾವೇದ್‌ ಮಾಡೆಲ್‌ ಅಲ್ಲವಂತೆ.

ಈಕೆ ನಟನೆಯ ವಿದ್ಯಾರ್ಥಿ ಕೂಡ. ಯಶಸ್ವಿ ಮಾಡೆಲ್‌(Model) ಆಗಬೇಕು ಎಂಬುದು ಈಕೆಯ ಆಸೆ.

 

ಮೆಟ್ರೋದಲ್ಲಿ ಇವಳ ವಸ್ತ್ರಧಾರಣೆ ಮಾತ್ರ ಅನೇಕ ಸಾಂಪ್ರದಾಯಿಕರ, ಸನಾತನವಾದಿಗಳ ಕೆಂಗಣ್ಣಿಗೆ ಗುರಿಯಾಗಿದೆ. ʼʼಯಾಕಮ್ಮಾ ಮೆಟ್ರೋದಲ್ಲಿ ಓಡಾಡುವವರ ಚಿತ್ತ ಹಾಳು ಮಾಡ್ತಿದೀಯ?ʼʼ ಎಂಬಲ್ಲಿಂದ ಹಿಡಿದು, ʼʼನಿನ್ನಂಥವರೇ ಭಾರತೀಯ ಯುವಜನತೆ ಹಾಳಾಗೋಕೆ ಕಾರಣʼʼ ಎಂಬಲ್ಲಿಯವರೆಗೆ ಇದು ಹರಡಿದೆ. ಕೆಲವರು ಆಕೆಯನ್ನು ಸಪೋರ್ಟ್‌(Support) ಮಾಡಿದ್ದಾರೆ. ʼʼಆಕೆಯ ಮೈ, ಆಕೆಯ ಇಷ್ಟ. ಇದು ಪ್ರಜಾಪ್ರಭುತ್ವ. ಬಟ್ಟೆ ಧರಿಸುವುದು ಆಕೆಯ ಸ್ವಾತಂತ್ರ್ಯʼʼ ಎಂಬುದು ಇವರ ಮಾತಾದರೆ, ʼʼಹಾಗಾದರೆ ನಿಮ್ಮ ಅಕ್ಕ ತಂಗಿಯರನ್ನೂ ಹೀಗೇ ಕಳಿಸ್ತೀರಾ?ʼʼ ಎಂದು ಟ್ರೋಲ್‌ ಮಾಡಿದವರೂ ಸಾಕಷ್ಟು ಮಂದಿ.

ರಾಜಕೀಯಕ್ಕೆ ಬರ್ತಾರಂತೆ ರಿಷಭ್ ಶೆಟ್ಟಿ, ರಕ್ಷಿತ್ ಸಾಥ್ ಕೊಡ್ತಾರಾ?

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ರಿಷಬ್‌ ಶೆಟ್ಟಿ, ವಿಜಯ್ ಕಿರಗಂದೂರು ವ್ಯಾಪಾರಿಗಳು, ದೈವಾರಾಧನೆಯನ್ನ ವ್ಯಾಪಾರಕ್ಕೆ ಹಾಕಿದ್ದಾರೆ: ದೈವಾರಾಧಕ ಬೇಸರ
BBK 12: ಗಿಲ್ಲಿ ನಟನಿಗೆ ಏನ್‌ ಮಾಡೋದು ಅಂತ ನಿರ್ಧಾರ ಮಾಡಿ: ರಘು ಬಳಿ ಕಾವ್ಯ ಶೈವ ಬೇಸರ ತೋಡಿಕೊಂಡ್ರು