Chrisann Pereira: ನಾಯಿಯೊಂದಿಗೆ ಜಗಳವಾಡಿ ಡ್ರಗ್ಸ್​ ಕೇಸಲ್ಲಿ ನಟಿ ಅರೆಸ್ಟ್? ಕೊನೆಗೂ ಬಿಡುಗಡೆ

Published : Apr 27, 2023, 05:01 PM IST
Chrisann Pereira: ನಾಯಿಯೊಂದಿಗೆ ಜಗಳವಾಡಿ ಡ್ರಗ್ಸ್​ ಕೇಸಲ್ಲಿ ನಟಿ ಅರೆಸ್ಟ್? ಕೊನೆಗೂ ಬಿಡುಗಡೆ

ಸಾರಾಂಶ

ಡ್ರಗ್ಸ್​ ಪ್ರಕರಣದಲ್ಲಿ ಇತ್ತೀಚೆಗಷ್ಟೇ ದುಬೈನಲ್ಲಿ ಜೈಲು ಸೇರಿದ್ದ ಬಾಲಿವುಡ್ ನಟಿ ಕ್ರಿಸನ್ ಪೆರೇರಾ ಬಿಡುಗಡೆಯಾಗಿದ್ದಾರೆ. ಏನಿದು ಕೇಸ್​?  

ಡ್ರಗ್ಸ್ ಪ್ರಕರಣದಲ್ಲಿ ಇತ್ತೀಚೆಗಷ್ಟೇ ದುಬೈನಲ್ಲಿ ಜೈಲು ಸೇರಿದ್ದ ಬಾಲಿವುಡ್ ನಟಿ ಕ್ರಿಸನ್ ಪೆರೇರಾ ( Chrisann Pereira) ಇದೀಗ ಬಿಡುಗಡೆಯಾಗಿದ್ದಾರೆ. ವರದಿಗಳ ಪ್ರಕಾರ,  ಕ್ರಿಸನ್ (27 ) ಅವರು ಬಿಡುಗಡೆಯಾದ ತಕ್ಷಣ ಆಕೆಯ ಸಹೋದರ ಕೆವಿನ್ ಪೆರೇರಾ ಅವರೊಂದಿಗೆ ಮೊದಲು ಮಾತನಾಡಿದ್ದಾರೆ.  ಕೆವಿನ್ ಅವರು ಕ್ರಿಸನ್ ಅವರೊಂದಿಗಿನ ಸಂಭಾಷಣೆಯ ವೀಡಿಯೊವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ಅವರು ವಿಡಿಯೋದಲ್ಲಿ  'ಕ್ರಿಸನ್ ಬಿಡುಗಡೆಯಾಗಿದೆ, ಈಕೆ ಮುಂದಿನ 48 ಗಂಟೆಗಳಲ್ಲಿ ಭಾರತದಲ್ಲಿರುತ್ತಾಳೆ' ಎಂದಿದ್ದಾರೆ. ಕ್ರಿಸನ್ ತಮ್ಮ ಕುಟುಂಬ ಸದಸ್ಯರೊಂದಿಗೆ ಮಾತನಾಡುತ್ತಾ ಅಳುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಅದೇ ಸಮಯದಲ್ಲಿ, ಅವರ ತಾಯಿಯು ಅವರೊಂದಿಗೆ ಮಾತನಾಡುವುದನ್ನೂ ಕೇಳಬಹುದಾಗಿದೆ.  ನೀನು  ಬಿಡುಗಡೆಯಾಗಿರುವುದು   ತುಂಬಾ ಒಳ್ಳೆಯ ವಿಷಯ ಎಂದಿದ್ದಾರೆ.
 
ಅಂದಹಾಗೆ, ಕ್ರಿಸನ್​ ಪೆರೇರಾ ಅವರನ್ನು ಏಪ್ರಿಲ್ 1 ರಂದು ಶಾರ್ಜಾ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿತ್ತು. ನಾಯಿಯೊಂದರ ಜಗಳದ ನಂತರ ಸೇಡು ತೀರಿಸಿಕೊಳ್ಳಲು ಬೇಕರಿ ಮಾಲೀಕರು ನಟಿಯನ್ನು ಡ್ರಗ್ಸ್​ ಕೇಸ್​ನಲ್ಲಿ ಸಿಲುಕಿಸಿದ್ದಾರೆ  ಎಂದು ಮುಂಬೈ ಕ್ರೈಂ ಬ್ರಾಂಚ್ (Crime Branch) ನಂತರ ತಿಳಿದುಬಂದಿತ್ತು.  ಆಂಟನಿ ಕ್ರಿಸನ್​ ಪೆರೇರಾ ಅವರನ್ನು ಬಲೆಗೆ ಬೀಳಿಸಲು ಸಹಾಯ ಮಾಡಿದ ಬೇಕರಿ ಮಾಲೀಕ ಅಂಥೋನಿ ಪಾಲ್ ಮತ್ತು ಬ್ಯಾಂಕ್‌ನ ಸಹಾಯಕ ಜನರಲ್ ಮ್ಯಾನೇಜರ್ ರಾಜೇಶ್ ಬೋಭಾಟೆ ಅವರನ್ನು ಪೊಲೀಸರು ಬಂಧಿಸಿದ್ದಾರೆ. ನಾಯಿಯ ವಿಚಾರವಾಗಿ ಆಂಟನಿ ಸಹೋದರಿ ನಟಿಯ ತಾಯಿಯೊಂದಿಗೆ ಜಗಳವಾಡಿದ್ದರು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಇಬ್ಬರೂ ಒಂದೇ ಕಟ್ಟಡದಲ್ಲಿ ವಾಸಿಸುತ್ತಿದ್ದಾರೆ. ಇದೇ ವಿಚಾರವಾಗಿ ನಟಿಯನ್ನು ಡ್ರಗ್ಸ್​ ಕೇಸ್​ನಲ್ಲಿ ಸಿಲುಕಿಸಲಾಗಿದೆ  ಎಂದು ಪೊಲೀಸರು ಶಂಕಿಸಿದ್ದಾರೆ.

ಎರಡು ವರ್ಷ ಕದ್ದುಮುಚ್ಚಿ ಹಿಂದೂ ಯುವತಿ ಜೊತೆ ಸಂಸಾರ ಮಾಡಿದ್ದ ಆಮೀರ್​ ಖಾನ್​!

 ಆಂಥೋನಿ ಕ್ರಿಸನ್​ ಅವರನ್ನು ಟ್ಯಾಲೆಂಟ್ ಕನ್ಸಲ್ಟೆಂಟ್‌ನಂತೆ ರಾಜೇಶ್‌ನ (Rajesh) ಪಾತ್ರದಲ್ಲಿ ಸಂಪರ್ಕಿಸಿದ್ದರು ಮತ್ತು ಶಾರ್ಜಾದಲ್ಲಿ ವೆಬ್ ಸರಣಿಯ ಆಡಿಷನ್ ಬಗ್ಗೆ ಹೇಳಿದರು. ಆಕೆಗೆ ಒಯ್ಯಲು ಟ್ರೋಫಿ ನೀಡಿದ್ದು, ಅದರಲ್ಲಿ ಡ್ರಗ್ಸ್ ಬಚ್ಚಿಟ್ಟಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಈ ಟ್ರೋಫಿಯನ್ನು ತೆಗೆದುಕೊಂಡು, ಕ್ರಿಸ್‌ಗೆ ಇದು ಆಡಿಷನ್ ಪ್ರಾಪ್ ಎಂದು ಹೇಳಲಾಯಿತು.

ರಾಜೇಶ್ ಬೋಭಾಟೆ ಟ್ರೋಫಿಯಲ್ಲಿ ಗಾಂಜಾ ಮತ್ತು ಗಸಗಸೆಯನ್ನು ಬಚ್ಚಿಟ್ಟು ಕ್ರಿಸನ್‌ಗೆ ನೀಡಿದ್ದರಿಂದ ಆಕೆಯನ್ನು ಬಂಧಿಸಲಾಗಿತ್ತು  ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.  . ಕ್ರಿಸನ್ ಶಾರ್ಜಾ ವಿಮಾನ ನಿಲ್ದಾಣವನ್ನು ತಲುಪಿದಾಗ, ಆಕೆ ಡ್ರಗ್ಸ್ (Drugs) ಸಾಗಿಸುತ್ತಿರುವುದಾಗಿ ಅಧಿಕಾರಿಗಳಿಗೆ ಕರೆ ಮಾಡಲಾಗಿತ್ತು. ಡ್ರಗ್ಸ್‌ನೊಂದಿಗೆ ಸಿಕ್ಕಿಬಿದ್ದಿರುವ ಕ್ರಿಸನ್​ ಅವರನ್ನು ಬಿಡುಗಡೆ ಮಾಡಲು ಈ ಜನರು ಕುಟುಂಬದಿಂದ 80 ಲಕ್ಷ ರೂ. ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ. ವರದಿಗಳನ್ನು ನಂಬುವುದಾದರೆ, ಪೊಲೀಸರು ಪ್ರಕರಣಕ್ಕೆ ಸಂಬಂಧಿಸಿದ ದಾಖಲೆಗಳನ್ನು ಸಂಬಂಧಪಟ್ಟ ಅಧಿಕಾರಿಗಳಿಗೆ ಕಳುಹಿಸಿದ್ದಾರೆ, ನಂತರ ಬುಧವಾರ ರಾತ್ರಿ  ಈಕೆಯನ್ನು ಬಿಡುಗಡೆ ಮಾಡಲಾಗಿದೆ.

ಬಂಜೆ ಎಂಬ ಹೀಯಾಳಿಕೆಯಿಂದ ಡಿವೋರ್ಸ್​: ವಿಚ್ಛೇದನದ ಬಳಿಕ ಮಗುವಿನ ಅಮ್ಮ!

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

BBK 12: ಟೈಮ್‌ ಬಂದೇಬಿಡ್ತು, ಅಂದು ಹೊಟ್ಟೆ ಉರಿಸಿದ್ದ ರಘು; ಚಕ್ರಬಡ್ಡಿ ಸಮೇತ ವಾಪಸ್‌ ಕೊಟ್ಟ ಗಿಲ್ಲಿ ನಟ
ಪಡೆಯಪ್ಪ 'ನೀಲಾಂಬರಿ'ಗೆ ಮೊದಲ ಆಯ್ಕೆ ಐಶ್ವರ್ಯಾ ರೈ; ಶ್ರೀದೇವಿ-ಮಾಧುರಿಯನ್ನೂ ರಮ್ಯಾ ಕೃಷ್ಣನ್ ಬದಿಗೆ ಸರಿಸಿದ್ದು ಹೇಗೆ?