ವಿರಾಟ್ ಅಂಕಲ್, ವಮಿಕಾ ಜೊತೆ ನಾನು ಡೇಟಿಂಗ್ ಹೋಗ್ಬಹುದಾ? ಪುಟ್ಟ ಹುಡುಗನ ಮೆಸೇಜ್‌ಗೆ ನೆಟ್ಟಿಗರು ರಾಂಗ್!

Published : Apr 19, 2023, 11:57 AM IST
ವಿರಾಟ್ ಅಂಕಲ್, ವಮಿಕಾ ಜೊತೆ ನಾನು ಡೇಟಿಂಗ್ ಹೋಗ್ಬಹುದಾ? ಪುಟ್ಟ ಹುಡುಗನ ಮೆಸೇಜ್‌ಗೆ ನೆಟ್ಟಿಗರು ರಾಂಗ್!

ಸಾರಾಂಶ

ಮೊನ್ನೆಆರ್‌ಸಿಬಿ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ಟೀಮ್‌ ನಡುವೆ ಐಪಿಎಲ್ ಮ್ಯಾಚ್ ನಡೆಯುವಾಗ ಪುಟ್ಟ ಹುಡುಗನೊಬ್ಬ, 'ವಿರಾಟ್ ಅಂಕಲ್, ವಮಿಕಾ ಜೊತೆ ನಾನು ಡೇಟಿಂಗ್ ಮಾಡಬಹುದಾ?' ಅನ್ನೋ ಪ್ಲಕಾರ್ಡ್ ಹಿಡ್ಕೊಂಡು ನಿಂತಿದ್ದ. ಈ ಫೋಟೋ ವೈರಲ್ ಆಗಿದೆ. ಇನ್ನೊಂದು ಕಡೆ ಸೋಷಿಯಲ್ ಮೀಡಿಯಾದಲ್ಲಿ ಹಿಗ್ಗಾಮಗ್ಗಾ ಜನ ಝಾಡಿಸ್ತಾನೂ ಇದ್ದಾರೆ.

ವಿರಾಟ್ ಕೊಯ್ಲಿ ಮತ್ತು ಅನುಷ್ಕಾ ಶರ್ಮಾರ ಮುದ್ದಿನ ಮಗಳು ವಮಿಕಾ. ಈ ಮಗುವಿಗೀಗ ಎರಡು ವರ್ಷ. ವಿರಾಟ್ ಮತ್ತು ಅನುಷ್ಕಾ ಮಗಳ ಜೊತೆ ಲೈಫನ್ನ ಸಖತ್ತಾಗೇ ಎನ್ ಜಾಯ್ ಮಾಡ್ತಿದ್ದಾರೆ. ಇನ್ನೊಂದು ಕಡೆ ತಮ್ಮ ಮಗಳ ಬಗ್ಗೆ ಆರಂಭದಿಂದಲೂ ಗೌಪ್ಯತೆ ಕಾಯ್ದುಕೊಂಡಿದ್ದಾರೆ. ಅವಳು ಹುಟ್ಟಿದಾಗಲೇ ಆಕೆಯ ಫೋಟೋ, ವೀಡಿಯೋಗಳನ್ನು ಪ್ರಕಟಿಸದಂತೆ ಮಾಧ್ಯಮಗಳಿಗೆ, ಸೋಷಿಯಲ್ ಮೀಡಿಯಾ ಪೇಜ್‌ಗಳಿಗೆ ಅನುಷ್ಕಾ, ವಿರಾಟ್ ಮನವಿ ಮಾಡಿದ್ದರು. ಆದರೆ ಕೆಲವೊಂದು ಪಾಪರಾಜಿಗಳು ಮ್ಯಾಚ್ ನಡೆಯುವಾಗ ಅನುಷ್ಕಾ ಕೈಯಲ್ಲಿದ್ದ ವಮಿಕಾ ಫೋಟೋ ಕ್ಲಿಕ್ಕಿಸಿ ಪ್ರಕಟಿಸಿದವು. ಇದಕ್ಕೆ ಅನುಷ್ಕಾ ಮತ್ತು ವಿರಾಟ್ ದಂಪತಿಗಳು ಸಿಟ್ಟು, ನೋವು ತೋಡಿಕೊಂಡಿದ್ದರು. ಆ ಬಳಿಕ ವಮಿಕಾ ಫೋಟೋ ಪ್ರಕಟಿಸುವ ಧೈರ್ಯ ಯಾರು ಮಾಡಿದಂತಿಲ್ಲ. ಆದರೆ ಇದೀಗ ಪುಟ್ಟ ಪೋರನೊಬ್ಬ ತಾನು ವಮಿಕಾ ಜೊತೆ ಡೇಟ್ ಮಾಡ್ಬೇಕು, ವಿರಾಟ್ ಅಂಕಲ್ ಅವಳನ್ನು ನನ್ನ ಜೊತೆ ಡೇಟ್ಸ್ ಗೆ ಕಳಿಸ್ತೀರ ಅಂತ ಕೇಳ್ತಿರೋ ಫೋಟೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಎಲ್ಲ ಕಡೆ ಐಪಿಎಲ್ ಜ್ವರ. ಈ ಸಲ ಕಪ್ ನಂದೇ ಅನ್ನೋ ಕೂಗು ಆರಂಭದಿಂದಲೇ ಇದ್ರೂ ಆರ್‌ಸಿಬಿ ಎಂದಿನಂತೆ ಮುಗ್ಗರಿಸಿದ್ದೇ ಹೆಚ್ಚು. ಈ ತಂಡದ ಕ್ಯಾಪ್ಟನ್ ವಿರಾಟ್ ಕೊಯ್ಲಿ ಶುರುವಲ್ಲಿ ಸಾಕಷ್ಟು ಹವಾ ಮೆರೆದರೂ ಮೊನ್ನೆ ಮ್ಯಾಚ್‌ನಲ್ಲಿ ಸೋತಿದ್ದರಿಂದ ಆರ್‌ಸಿಬಿ ಫ್ಯಾನ್ಸ್ ಗೆ ತುಂಬ ನಿರಾಸೆ ಆಗಿದೆ. ಆದರೆ ಈ ಐಪಿಎಲ್ ಮ್ಯಾಚ್‌ನಲ್ಲೇ ಅಂದರೆ ಆರ್‌ಸಿಬಿ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವೆ ನಡೆದ ರೋಚಕ ಕ್ರಿಕೆಟ್ ಪಂದ್ಯಾಟದಲ್ಲಿ ಸುಮಾರು ಮೂರ್ನಾಲ್ಕು ವರ್ಷದ ಪುಟ್ಟ ಹುಡುಗನೊಬ್ಬ ಪ್ಲಕಾರ್ಡ್ ಹಿಡಿದು ಕ್ಯಾಮರಗೆ ಫೋಸ್ ನೀಡುತ್ತಿದ್ದ. 'ಹಾಯ್, ವಿರಾಟ್ ಅಂಕಲ್ ಕ್ಯಾನ್ ಐ ಟೇಕ್ ವಮಿಕಾ ಆನ್ ಎ ಡೇಟ್' ಅಂತ ಆ ಬೋರ್ಡ್ ನಲ್ಲಿ ಬರೆದಿತ್ತು. ಈ ಫೋಟೋವನ್ನು ಯಾರೋ ಸೋಷಿಯಲ್ ಮೀಡಿಯಾದಲ್ಲಿ ಅಪ್‌ಲೋಡ್ ಮಾಡಿದ್ರು. ಕೂಡಲೇ ಈ ಫೋಟೋ ಎಲ್ಲೆಡೆ ವೈರಲ್ ಆಯ್ತು.

ಇಳಕಲ್‌ ಸೀರೆಯಲ್ಲಿ 'ಈ ಸಲ ಕಪ್‌ ನಮ್ದೇ' ಘೋಷವಾಕ್ಯ! ಆರ್‌ಸಿಬಿ ಅಭಿಮಾನಿ ಸೀರೆಗೆ ಮಹಿಳೆಯರ ಬೇಡಿಕೆ

ಆದರೆ ಇದೀಗ ಎಲ್ಲರೂ ಈ ಹುಡುಗನ ಪೋಷಕರಿಗೆ ಹಿಗ್ಗಾಮಗ್ಗ ಝಾಡಿಸುತ್ತಿದ್ದಾರೆ. 'ಪ್ರಚಾರಕ್ಕೋಸ್ಕರ ಪುಟ್ಟ ಮಕ್ಕಳ ಕೈಯಲ್ಲಿ ಇಂಥಾ ಹೀನ ಕೆಲಸ ಮಾಡಿಸಬಹುದಾ?' ಅಂತ ನೆಟ್ಟಿಗರು ತರಾಟೆಗೆ ತೆಗೆದುಕೊಳ್ತಿದ್ದಾರೆ.

'ಈ ಫೋಟೋ ನೋಡಿದಾಗ ಈ ಪ್ಲಕಾರ್ಡ್ ಹಿಡಿದು ನಿಂತ ಆ ಮಗುವಿನ ಬಗ್ಗೆ ನೋವಾಯ್ತು. ಆ ಪುಟ್ಟ ಪೋರನಿಗೆ ಡೇಟ್ ಅಂದರೆ ಏನು ಅನ್ನೋ ಕಲ್ಪನೆಯೂ ಇರಲ್ಲ. ಜಗತ್ತನ್ನು ಬೆರಗುಗಣ್ಣಿಂದ ನೋಡೋ ವಯಸ್ಸದು. ಅಂಥಾ ಮುಗ್ಧ ಮನಸ್ಸಿಗೆ ಪೋಷಕರು ತಮ್ಮ ವಿಕೃತತೆಯ ಮಸಿ ಬಳಿದಿದ್ದಾರೆ. ಪ್ರಚಾರ ಪಡೆಯಬೇಕು ಅನ್ನೋ ಒಂದೇ ಒಂದು ಉದ್ದೇಶದಿಂದ ಈ ಪುಟಾಣಿಯ ಮನಸ್ಸಲ್ಲಿ ವಿಷ ತುಂಬುವ ಕೆಲಸ ಮಾಡಿದ್ದಾರೆ. ಇದು ಪೋಷಕರು ಮಕ್ಕಳನ್ನು ಬೆಳೆಸಬೇಕಾದ ಸರಿಯಾದ ವಿಧಾನ ಅಲ್ಲ' ಅನ್ನೋ ಮಾತನ್ನು ಒಬ್ಬರು ಕಮೆಂಟ್‌ನಲ್ಲಿ ದಾಖಲಿಸಿದರೆ, ಇನ್ನೊಬ್ಬರು, 'ಅತಿಯಾದ ಪ್ರಚಾರದ ಹುಚ್ಚಿಂದ ಈಗೀಗ ಇಂಥಾ ವಿಕೃತಿಗಳು ಹೆಚ್ಚಾಗುತ್ತಿವೆ' ಎಂದು ಬರೆದುಕೊಂಡಿದ್ದಾರೆ. ಈ ಪೋಸ್ಟನ್ನು ಡಾ ನಿಮೋ ಯಾದವ್ ಅನ್ನುವವರು ಶೇರ್ ಮಾಡಿದ್ದಾರೆ. 'ಇದು ಸರಿಯಾದ ಪೇರೆಂಟಿಂಗ್ ಅಲ್ಲ. ಯಾಕೆ ಜನ ಇದನ್ನು ಕ್ಯೂಟ್ ಅಂತ ಹೇಳ್ತಾರೋ ನಂಗೆ ಗೊತ್ತಾಗ್ತಿಲ್ಲ' ಅಂತ ತಮ್ಮ ಪೋಸ್ಟ್ ಜೊತೆಗೆ ಅವರು ಬರೆದುಕೊಂಡಿದ್ದಾರೆ. ಜೊತೆಗೆ ಜನರೂ ಸೋಷಿಯಲ್ ಮೀಡಿಯಾದಲ್ಲಿ ಈ ಹುಡುಗನ ಹೆತ್ತವರಿಗೆ ಚೆನ್ನಾಗಿಯೇ ಕ್ಲಾಸ್ ತಗಳ್ತಿದ್ದಾರೆ.

Shyam Rangeela: ಮೋದಿಯನ್ನು ಅನುಕರಿಸಿ ಪೇಚಿಗೆ ಸಿಲುಕಿದ ಕಾಮಿಡಿಯನ್​ಗೆ ಬಂತು ನೋಟಿಸ್​!

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಪತ್ನಿ ಪ್ರಣತಿ ಬಂದ್ಮೇಲೆ ಈ ವಿಷ್ಯದಲ್ಲಿ ವೀಕ್ ಆದ್ರಾ ಜೂ.ಎನ್‌ಟಿಆರ್? ಸತ್ಯ ಬಿಚ್ಚಿಟ್ಟ ನಟ!
OTT Release This Week: ಒಟಿಟಿಯಲ್ಲಿ ತೆರೆಕಂಡ, ಜನರನ್ನು ಕಾಡು ಸಿನಿಮಾಗಳು; ಸಿನಿಪ್ರೇಮಿಗಳಿಗೆ ಹಬ್ಬದೂಟ