ಗಾಯಕ ಕೆಕೆ ನಡೆಸಿಕೊಂಡು ಹೋಗಿದ್ದು ವಿವಾದ

Published : Jun 02, 2022, 08:15 AM IST
ಗಾಯಕ ಕೆಕೆ ನಡೆಸಿಕೊಂಡು ಹೋಗಿದ್ದು ವಿವಾದ

ಸಾರಾಂಶ

* ಕೆಕೆ ಕೊನೆಯ ಕ್ಷಣಗಳು ವಿಡಿಯೋದಲ್ಲಿ ದಾಖಲು * ಗಾಯಕ ಕೆಕೆ ನಡೆಸಿಕೊಂಡು ಹೋಗಿದ್ದು ವಿವಾದ * ಸಭಾ ಸ್ಥಳದಲ್ಲಿ ಕನಿಷ್ಠ ಮೂಲಸೌಕರ್ಯವೂ ಇಲ್ಲ

ಕೋಲ್ಕತಾ(ಜೂ.02): ಬಂಗಾಳದಲ್ಲಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾಗಲೇ ಕುಸಿದು ಬಿದ್ದು ಸಾವನ್ನಪ್ಪಿದ ಗಾಯಕ ಕೆಕೆ ಅವರ ಕೊನೆಯ ಕ್ಷಣಗಳು ವಿಡಿಯೋಗಳಲ್ಲಿ ದಾಖಲಾಗಿವೆ. ಹೃದಯಾಘಾತ ಆದವರನ್ನು ಸಾಮಾನ್ಯವಾಗಿ, ಹೃದಯಕ್ಕೆ ತೊಂದರೆಯಾಗದಂತೆ ಸ್ಟೆ್ರಚರ್‌ನಲ್ಲಿ ಮಲಗಿಸಿ ಕರೆದೊಯ್ಯುವುದು ಸಾಮಾನ್ಯ. ಆದರೆ ನಡೆಸಿಕೊಂಡು ಆಸ್ಪತ್ರೆಗೆ ಕರೆದೊಯ್ಯುತ್ತಿರುವುದು ದೃಶ್ಯದಲ್ಲಿ ಕಂಡುಬರುತ್ತದೆ.

ಹೀಗಾಗಿ ಇಷ್ಟುದೊಡ್ಡ ಕಾರ್ಯಕ್ರಮ ಆಯೋಜಿಸಿದ್ದರೂ ಇಡೀ ಸಭಾಂಗಣದಲ್ಲಿ ವೈದ್ಯಕೀಯ ಸೌಲಭ್ಯ ಇಲ್ಲದ ಕಾರಣಕ್ಕೆ ತೀವ್ರ ಆಕ್ರೋಶ ವ್ಯಕ್ತವಾಗಿದೆ. ನಡೆಸಿಕೊಂಡು ಕರೆದೊಯ್ದರೆ ಎದೆ ಮೇಲೆ ಒತ್ತಡ ಬೀಳುತ್ತದೆ ಎಂಬುದು ತಜ್ಞರ ವಾದ.

ಈ ನಡುವೆ, ವಿಡಿಯೋದಲ್ಲಿ ಕೆಕೆ ಅವರು ಎದೆನೋವಿನಿಂದ ಒದ್ದಾಡುತ್ತಿರುವ ದೃಶ್ಯ ದಾಖಲಾಗಿದೆ. ಇದೇ ಸ್ಥಿತಿಯಲ್ಲಿ ಅವರು ಅವರ ಹೋಟೆಲ್‌ಗೆ ಹಿಂದಿರುಗಿದ್ದಾರೆ. ಇಲ್ಲಿಂದ ಆಸ್ಪತ್ರೆಗೆ ಕರೆದೊಯ್ಯುವ ದಾರಿಯ ಮಧ್ಯದಲ್ಲಿ ಕೊನೆಯುಸಿರೆಳೆದಿದ್ದಾರೆ. ಮತ್ತೊಂದು ವಿಡಿಯೋದಲ್ಲಿ ಕೆಕೆ ವಿಪರೀತವಾಗಿ ಬೆವರುತ್ತಿರುವುದು ದಾಖಲಾಗಿದೆ. ಕುಸಿದು ಬಿದ್ದ ಅವರನ್ನು ಕರೆದೊಯ್ಯಲು ಸ್ಟೆ್ರಚರ್‌ ಸಹ ಇಲ್ಲದೇ ಅವರನ್ನು ನಡೆಸಿಕೊಂಡು ಹೋಗಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ರಿಷಬ್‌ ಶೆಟ್ಟಿ, ವಿಜಯ್ ಕಿರಗಂದೂರು ವ್ಯಾಪಾರಿಗಳು, ದೈವಾರಾಧನೆಯನ್ನ ವ್ಯಾಪಾರಕ್ಕೆ ಹಾಕಿದ್ದಾರೆ: ದೈವಾರಾಧಕ ಬೇಸರ
BBK 12: ಗಿಲ್ಲಿ ನಟನಿಗೆ ಏನ್‌ ಮಾಡೋದು ಅಂತ ನಿರ್ಧಾರ ಮಾಡಿ: ರಘು ಬಳಿ ಕಾವ್ಯ ಶೈವ ಬೇಸರ ತೋಡಿಕೊಂಡ್ರು