ಪಠ್ಯಗಳು ಮೊಘಲರಿಂದಲೇ ತುಂಬಿವೆ, ಭಾರತೀಯ ರಾಜರಿಗೇ ಜಾಗವಿಲ್ಲ: ನಟ ಅಕ್ಷಯ್ ಕಿಡಿ

By Suvarna NewsFirst Published Jun 2, 2022, 7:46 AM IST
Highlights

* ಭಾರತೀಯ ರಾಜರು ಸಹ ಶ್ರೇಷ್ಠ

* ಪಠ್ಯಗಳು ದಾಳಿಕೋರರಿಂದಲೇ ತುಂಬಿವೆ: ಆಕ್ಷಯ್‌ ಕಿಡಿ

* ಭಾರತೀಯ ರಾಜರಿಗೇ ಜಾಗವಿಲ್ಲ

* ಅವರ ಬಗ್ಗೆಯೂ ನಾವು ತಿಳಿದುಕೊಳ್ಳಬೇಕು: ನಟ

ನವದೆಹಲಿ(ಜೂ.02): ಕರ್ನಾಟಕದಲ್ಲಿ ಶಾಲಾ ಪಠ್ಯಪುಸ್ತಕ ವಿವಾದ ಮತ್ತು ದೇಶಾದ್ಯಂತ ಮುಘಲರು ಕಟ್ಟಿಸಿದ ಮಸೀದಿಗಳಿಗೆ ಸಂಬಂಧಿಸಿದಂತೆ ವಿವಾದ ಸೃಷ್ಟಿಯಾದ ಬೆನ್ನಲ್ಲೇ, ‘ಇತಿಹಾಸದ ಪಠ್ಯಪುಸ್ತಕಗಳು ದಾಳಿಕೋರರಿಂದಲೇ ತುಂಬಿಹೋಗಿದೆ. ಹಾಗಾಗಿ ಭಾರತೀಯ ರಾಜರುಗಳಿಗೆ ಜಾಗವಿಲ್ಲದಂತಾಗಿದೆ’ ಎಂದು ನಟ ಅಕ್ಷಯ್‌ ಕುಮಾರ್‌ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಬಿಡುಗಡೆಗೆ ಕಾದಿರುವ ಅವರ ಹೊಸ ಸಿನಿಮಾವಾದ ‘ಪೃಥ್ವಿರಾಜ್‌’ ಕುರಿತು ಮಾತನಾಡಿದ ಅವರು, ‘ಪಠ್ಯಗಳಲ್ಲಿ ಸಾಮ್ರಾಟ್‌ ಪೃಥ್ವಿರಾಜ್‌ ಚೌಹಾಣ್‌ ಅವರ ಬಗ್ಗೆ ಎರಡರಿಂದ ಮೂರು ಸಾಲು ಇರುವುದು ದುರದೃಷ್ಟಕರ. ಆದರೆ ಆಕ್ರಮಣಕಾರರ ಬಗ್ಗೆ ಇಡೀ ಪುಸ್ತಕದಲ್ಲಿ ವೈಭವೀಕರಿಸಲಾಗಿದೆ. ನಮ್ಮ ರಾಜರ ಕುರಿತು ಇತಿಹಾಸ ಪುಸ್ತಕಗಳಲ್ಲಿ ಬರೆಯುವವರು ಯಾರೂ ಇಲ್ಲದಂತಾಗಿದ್ದಾರೆ. ನಾವು ಮೊಘಲರ ಬಗ್ಗೆ ತಿಳಿದುಕೊಳ್ಳಬೇಕು. ಅದೇ ರೀತಿ ನಮ್ಮ ರಾಜರ ಬಗೆÜ್ಗಯೂ ತಿಳಿದುಕೊಳ್ಳಬೇಕು. ಅವರು ಸಹ ಶ್ರೇಷ್ಠರು. ಇವುಗಳಲ್ಲಿ ಸಮತೋಲನ ತರಬೇಕು ಎಂದು ಶಿಕ್ಷಣ ಸಚಿವರಲ್ಲಿ ಮನವಿ ಮಾಡುತ್ತೇನೆ’ ಎಂದು ಅವರು ಹೇಳಿದ್ದಾರೆ.

ಇದೇ ಸಮಯದಲ್ಲಿ, ‘ಭಾರತವನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ದಿದ್ದಕ್ಕೆ ಮೋದಿ ಅವರಿಗೆ ಧನ್ಯವಾದ ಅರ್ಪಿಸುತ್ತೇನೆ’ ಎಂದು ಅವರು ಹೇಳಿದ್ದಾರೆ.

click me!