ಮಾಸ್ಕ್‌, ಹೆಲ್ಮೆಟ್‌ ಇಲ್ಲದೆ ಪತ್ನಿ ಜತೆ ಜಾಲಿರೈಡ್‌ : ನಟನ ವಿರುದ್ಧ ಕೇಸ್‌

Kannadaprabha News   | Asianet News
Published : Feb 21, 2021, 08:18 AM IST
ಮಾಸ್ಕ್‌, ಹೆಲ್ಮೆಟ್‌ ಇಲ್ಲದೆ ಪತ್ನಿ ಜತೆ ಜಾಲಿರೈಡ್‌ : ನಟನ ವಿರುದ್ಧ ಕೇಸ್‌

ಸಾರಾಂಶ

ತಮ್ಮ ಪತ್ನಿ ಜೊತೆ ಹೆಲ್ಮೆಟ್‌ ಮತ್ತು ಮಾಸ್ಕ್‌ ಇಲ್ಲದೆ ಬೈಕ್‌ನಲ್ಲಿ ಜಾಲಿರೈಡ್‌ ಮಾಡಿದ ಫೋಟೋವನ್ನು ಜಾಲತಾಣದಲ್ಲಿ ಹಂಚಿಕೊಂಡ ನಟ ಇದೀಗ ಸಂಕಷ್ಟಕ್ಕೆ ಸಿಲುಕಿದ್ದಾರೆ. 

ಮುಂಬೈ (ಫೆ.21): ಪ್ರೇಮಿಗಳ ದಿನಾಚರಣೆಯಂದು ತಮ್ಮ ಪತ್ನಿ ಜೊತೆ ಹೆಲ್ಮೆಟ್‌ ಮತ್ತು ಮಾಸ್ಕ್‌ ಇಲ್ಲದೆ ಬೈಕ್‌ನಲ್ಲಿ ಜಾಲಿರೈಡ್‌ ಮಾಡಿದ ಫೋಟೋವನ್ನು ಜಾಲತಾಣದಲ್ಲಿ ಹಂಚಿಕೊಂಡ ಬಾಲಿವುಡ್‌ ನಟ ವಿವೇಕ್‌ ಒಬೆರಾಯ್‌ ಸಂಕಷ್ಟಕ್ಕೆ ಸಿಲುಕಿದ್ದಾರೆ. 

ವಿವೇಕ್‌ ಒಬೆರಾಯ್‌ ಅವರು ಹಂಚಿಕೊಂಡಿರುವ ಫೋಟೋ ಹಾಗೂ ವಿಡಿಯೋಗಳ ಆಧಾರದಲ್ಲೇ ಅವರ ವಿರುದ್ಧ ಮಹಾರಾಷ್ಟ್ರ ಪೊಲೀಸರು ಕೇಸ್‌ ದಾಖಲಿಸಿಕೊಂಡಿದ್ದಾರೆ. 

ಜೊತೆಗೆ ಬೈಕ್‌ ಚಾಲನೆ ವೇಳೆ ಹೆಲ್ಮೆಟ್‌ ಹಾಕದ ಕಾರಣಕ್ಕೆ ವಿವೇಕ್‌ ಒಬೆರಾಯ್‌ ಅವರಿಗೆ 500 ರು. ದಂಡ ವಿಧಿಸಲಾಗಿದೆ. ಮಹಾರಾಷ್ಟ್ರದಲ್ಲಿ ಕಳೆದ ಕೆಲವು ದಿನಗಳಿಂದ ಕೊರೋನಾ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಮಾಸ್ಕ್‌ ಧಾರಣೆ ಕಡ್ಡಾಯಗೊಳಿಸಲಾಗಿದ್ದು, ಮಾಸ್ಕ್‌ ಧರಿಸದವರ ವಿರುದ್ಧ ಕಠಿಣ ಕ್ರಮಕ್ಕೆ ಸೂಚಿಸಲಾಗಿದೆ. 

'ನನ್ನಂತ ರೆಬಲ್ ಇಲ್ಲ.. 15ನೇ ವಯಸ್ಸಿನಲ್ಲಿ ಅಪ್ಪನ ವಿರುದ್ಧವೇ ತಿರುಗಿಬಿದ್ದಿದ್ದೆ'

ಈ ಹಿನ್ನೆಲೆಯಲ್ಲಿ 6 ತಿಂಗಳು ಜೈಲು ಶಿಕ್ಷೆ ಅಥವಾ ದಂಡ ಅಥವಾ ಇವೆರಡೂ ಶಿಕ್ಷೆ ವಿಧಿಸಬಹುದಾದ ಕಾಯ್ದೆಗಳಡಿ ನಟ ವಿವೇಕ್‌ ವಿರುದ್ಧ ಜೂಹು ಠಾಣೆ ಪೊಲೀಸರು ಕೇಸ್‌ ಜಡಿದಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಬೆಳಗೆದ್ದು .. ನಾಚುತ್ತಲೇ ಮಲಗುವ ಕೋಣೆಯ ರಹಸ್ಯ ಬಹಿರಂಗಪಡಿಸಿದ ಪಿಗ್ಗಿ
ಬೇರೆಯದೇ ಸಂದೇಶ ಕೊಡುತ್ತಿರೋ 'ದಿ ಡೆವಿಲ್’ ಟ್ರೈಲರ್; ದರ್ಶನ್ ಫ್ಯಾನ್ಸ್‌ ಮುಖದಲ್ಲಿ ಮೂಡ್ತಿದೆ ಮಂದಹಾಸ!