ಇನ್ಫಿ ಸಂಸ್ಥಾಪಕ ಮೂರ್ತಿ, ಸುಧಾಮೂರ್ತಿ ಜೀವನ ಚರಿತ್ರೆ ಶೀಘ್ರ ತೆರೆಗೆ

By Kannadaprabha News  |  First Published Feb 20, 2021, 8:41 AM IST

ಶೀಘ್ರದಲ್ಲೇ ಇನ್ಫೋಸಿಸ್ ಸಂಸ್ಥಾಪಕರಾದ ಸುಧಾಮೂರ್ತಿ ಹಾಗೂ ನಾರಾಯಣಮೂರ್ತಿ ಜೀವನ ಚರಿತ್ರೆ ತೆರೆಗೆ ಬರಲಿದೆ. ಈ ಚಿತ್ರಗಳ ಕಥಾವಸ್ತು ಈಗಾಗಲೇ ಬಹುತೇಕ ಸಿದ್ಧವಾಗಿದ್ದುಪ್ರೇಕ್ಷಕರ ಮುಂದೆ ಬರಲಿದೆ.


ಮುಂಬೈ (ಫೆ.20): ಇಸ್ಫೋಸಿಸ್‌ ಸಂಸ್ಥಾಪಕ ಅಧ್ಯಕ್ಷ ನಾರಾಯಣ ಮೂರ್ತಿ ಹಾಗೂ ಅವರ ಪತ್ನಿ ಸುಧಾಮೂರ್ತಿ ಅವರ ಜೀವನವನ್ನು ಆಧರಿಸಿದ ಚಿತ್ರ ಶೀಘ್ರವೇ ತೆರೆಯ ಮೇಲೆ ಬರಲಿದೆ. 

ಈ ಚಿತ್ರಗಳ ಕಥಾವಸ್ತು ಈಗಾಗಲೇ ಬಹುತೇಕ ಸಿದ್ಧವಾಗಿದ್ದು, ಇದೇ ವರ್ಷದಲ್ಲಿ ಈ ಸಿನಿಮಾ ಪ್ರೇಕ್ಷಕರಿಗೆ ಅನಾವರಣವಾಗಲಿದೆ ಎಂದು ಸಿನಿಮಾ ನಿರ್ಮಾಪಕ ಮಹಾವೀರ್‌ ಜೈನ್‌ ತಿಳಿಸಿದ್ದಾರೆ. 

Tap to resize

Latest Videos

ಸಮಯದ ಪ್ರತಿ ಕ್ಷಣ ಅತ್ಯಂತ ಮಹತ್ವದ್ದು: ಸುಧಾಮೂರ್ತಿ

ಇದರ ಜೊತೆಗೆ ಈ ವರ್ಷ ತಲೈವಾ, ಶಬಾಶ್‌ ಮಿಥು, ಸರ್ದಾರ್‌ ಉಧಂ ಸೇರಿ ಹಲವು ಜೀವನಾಧಾರಿತ ಚಿತ್ರಗಳು ತೆರೆ ಕಾಣಲಿದ್ದು, 2021ನೇ ವರ್ಷವು ಜೀವನಾಧಾರಿತ ಚಿತ್ರಗಳ ವರ್ಷ ಎಂದು ವರ್ಣಿಸಲಾಗಿದೆ. 

ಅಲ್ಲದೆ ಭಾರತದ ಚೆಸ್‌ ಗ್ರಾಂಡ್‌ ಮಾಸ್ಟರ್‌ ವಿಶ್ವನಾಥನ್‌ ಆನಂದ್‌ ಜೀವನ ಚರಿತ್ರೆಯು 2022ರಲ್ಲಿ ತೆರೆ ಕಾಣಲಿದೆ ಎಂದು ಇದೇ ವೇಳೆ ಮಾಹಿತಿ ನೀಡಿದ್ದಾರೆ.

click me!