ಆದರ್ ಪೂನಾವಲ್ಲಾ ಧರ್ಮ ಪ್ರೊಡಕ್ಷನ್ಸ್ ಮತ್ತು ಧರ್ಮಾಟಿಕ್ ಎಂಟರ್‌ಟೈನ್‌ಮೆಂಟ್‌ನಲ್ಲಿ 50% ಪಾಲನ್ನು ಸ್ವಾಧೀನಪಡಿಸಿಕೊಂಡಿದ್ದಾರೆ. ಒಟ್ಟಾರೆ 1 ಸಾವಿರ ಕೋಟಿ ರೂಪಾಯಿಗೆ ಈ ಒಪ್ಪಂದ ಅಂತಿಮವಾಗಿದ್ದು, ಕರಣ್ ಜೋಹರ್ ಕಂಪನಿಯ ಕಾರ್ಯಕಾರಿ ಅಧ್ಯಕ್ಷರಾಗಿ ಮತ್ತು ಕ್ರಿಯೇಟಿವ್ ವಿಭಾಗದ ಮುಖ್ಯಸ್ಥರಾಗಿ ಮುಂದುವರಿಯಲಿದ್ದಾರೆ.
ಮುಂಬೈ (ಅ.21): ಕರಣ್ ಜೋಹರ್ ಅವರ ಧರ್ಮ ಪ್ರೊಡಕ್ಷನ್ಸ್ ಮತ್ತು ಧರ್ಮಾಟಿಕ್ ಎಂಟರ್‌ಟೈನ್‌ಮೆಂಟ್‌ನಲ್ಲಿ (ಒಟ್ಟಾರೆಯಾಗಿ ಧರ್ಮ ಎಂದು ಕರೆಯಲಾಗುತ್ತದೆ) 50% ಪಾಲನ್ನು ಉದ್ಯಮಿ ಆದರ್ ಪೂನಾವಲ್ಲಾ ಸ್ವಾಧೀನಪಡಿಸಿಕೊಂಡಿದ್ದಾರೆ. ಈ ಬಗ್ಗೆ ಧರ್ಮ ಪ್ರೊಡಕ್ಷನ್ ಮಾಹಿತಿ ನೀಡಿದ್ದು, ಒಟ್ಟಾರೆ 1 ಸಾವಿರ ಕೋಟಿ ರೂಪಾಯಿಗೆ ಈ ಒಪ್ಪಂದ ಅಂತಿಮ ಮಾಡಲಾಗಿದೆ.ಇದರಲ್ಲಿ ಆದರ್ ಪೂನಾವಲ್ಲಾ ಸೆರೆನ್ ಎಂಟರ್‌ಟೈನ್‌ಮೆಂಟ್ ಒಳಗೊಂಡಿದೆ. ಕಂಪನಿಯ ಉಳಿದ ಶೇ. 50ರಷ್ಟು ಮಾಲೀಕತ್ವವು ಕರಣ್ ಜೋಹರ್ ಅವರ ಬಳಿಯೇ ಉಳಿಯಲಿದ್ದು, ಕಂಪನಿಯ ಕಾರ್ಯಕಾರಿ ಅಧ್ಯಕ್ಷರಾಗಿ ಮತ್ತು ಕ್ರಿಯೇಟಿವ್ ವಿಭಾಗದ ಮುಖ್ಯಸ್ಥರಾಗಿ ಮುಂದುವರಿಯಲಿದ್ದಾರೆ. ಮುಖ್ಯ ವ್ಯವಸ್ಥಾಪಕ ಅಧಿಕಾರಿಯಾಗಿ ಅಪೂರ್ವ ಮೆಹ್ತಾ ಅವರು ಕರಣ್ ಅವರೊಂದಿಗೆ ಕಂಪನಿಯ ಜವಾಬ್ದಾರಿಯನ್ನು ಮುನ್ನಡೆಸಲಿದ್ದಾರೆ ಎಂದು ತಿಳಿಸಲಾಗಿದೆ.
ಕರಣ್ ಜೋಹರ್ ಅವರೊಂದಿಗೆ ಕೈಜೋಡಿಸಿದ್ದಕ್ಕೆ ಆದರ್ ಪೂನಾವಲ್ಲಾ ಸಂತಸ ಹಂಚಿಕೊಂಡಿದ್ದಾರೆ.'ನನ್ನ ಸ್ನೇಹಿತ ಕರಣ್ ಜೋಹರ್ ಜೊತೆಗೆ ನಮ್ಮ ರಾಷ್ಟ್ರದ ಅತ್ಯಂತ ಅಪ್ರತಿಮ ನಿರ್ಮಾಣ ಸಂಸ್ಥೆಯೊಂದಿಗೆ ಪಾಲುದಾರರಾಗುವ ಅವಕಾಶವನ್ನು ಹೊಂದಲು ನಾನು ಸಂತೋಷಪಡುತ್ತೇನೆ. ಮುಂದಿನ ವರ್ಷಗಳಲ್ಲಿ ಧರ್ಮವನ್ನು ನಿರ್ಮಿಸಲು ಮತ್ತು ಬೆಳೆಸಲು ಮತ್ತು ಇನ್ನೂ ಹೆಚ್ಚಿನ ಎತ್ತರಕ್ಕೆ ಏರಲು ನಾವು ಆಶಿಸುತ್ತೇವೆ' ಎಂದು ಹೇಳಿದ್ದಾರೆ.
ಧರ್ಮ ಪ್ರೊಡಕ್ಷನ್ಸ್ ಅನ್ನು 1976 ರಲ್ಲಿ ಕರಣ್ ಜೋಹರ್ ಅವರ ತಂದೆ ಯಶ್ ಜೋಹರ್ ಸ್ಥಾಪಿಸಿದರು. ಪ್ರೊಡಕ್ಷನ್ ಹೌಸ್ ಕುಚ್ ಕುಚ್ ಹೋತಾ ಹೈ, ಕಭಿ ಅಲ್ವಿದಾ ನಾ ಕೆಹನಾ, ಸ್ಟೂಡೆಂಟ್ ಆಫ್ ದಿ ಇಯರ್, ಗುಡ್ ನ್ಯೂಜ್ ಮತ್ತು ಬ್ರಹ್ಮಾಸ್ತ್ರ: ಭಾಗ ಒಂದು - ಶಿವ ಮುಂತಾದ ಚಿತ್ರಗಳನ್ನು ನಿರ್ಮಾಣ ಮಾಡಿದೆ.
ನಾನು ಯಾರ ಕೈಗೆ ಉಗುಳ್ತೇನೋ ಅವರೆಲ್ಲಾ ನಂಬರ್ 1 ನಟಿ ಆಗ್ತಾರೆ! ಆಮೀರ್ ಖಾನ್ ಹೇಳಿದ್ದೇನು ಕೇಳಿ
ಮತ್ತೊಂದೆಡೆ, ಧರ್ಮಟಿಕ್ ಎಂಟರ್‌ಟೈನ್‌ಮೆಂಟ್ ಅನ್ನು 2018 ರಲ್ಲಿ ಪ್ರಾರಂಭಿಸಲಾಯಿತು ಮತ್ತು ವೆಬ್ ಸರಣಿಗಳು, ಸಾಕ್ಷ್ಯಚಿತ್ರಗಳು ಮತ್ತು ಚಲನಚಿತ್ರಗಳು ಸೇರಿದಂತೆ ವ್ಯಾಪಕವಾದ ಯೋಜನೆಗಳ ಮೇಲೆ ಕೇಂದ್ರೀಕರಿಸುತ್ತದೆ. ಅಜೀಬ್ ದಾಸ್ತಾನ್ಸ್, ಏ ವತನ್ ಮೇರೆ ವತನ್, ಕಾಫಿ ವಿತ್ ಕರಣ್, ಫ್ಯಾಬುಲಸ್ ಲೈವ್ಸ್ ಆಫ್ ಬಾಲಿವುಡ್ ವೈವ್ಸ್ ಮತ್ತು ದಿ ಟ್ರೈಬ್ ಅನ್ನು ಧರ್ಮಟಿಕ್ ಎಂಟರ್‌ಟೈನ್‌ಮೆಂಟ್ ನಿರ್ಮಿಸಿದೆ.
ವೀಕೆಂಡ್‌ನಲ್ಲಿ ಸಿನಿಮಾ ನೋಡೋಕೆ ಹೋದ್ರೆ ಖರ್ಚಾಗೋದೆಷ್ಟು? ಶುರುವಾಗಿದೆ ಸಖತ್ ಚರ್ಚೆ!