ಮದುವೆ ದಿನ ರಾಣಿಯಂತೆ ಕಂಗೊಳಿಸಬೇಕು ಎಂಬುದು ಬಹುತೇಕ ಹೆಣ್ಣು ಮಕ್ಕಳ ಕನಸು. ಎಲ್ಲರ ಮದುವೆಗಿಂತ ತಮ್ಮ ಮದುವೆ ವಿಭಿನ್ನವಾಗಿರಬೇಕು ಎಂದು ಬಹುತೇಕರು ಬಯಸುತ್ತಾರೆ. ಅಲ್ಲದೇ ಎಲ್ಲರಿಗಿಂತ ಡಿಫರೆಂಟ್ ಆಗಿ ಮದುವೆ ಆಗೋದು ಇಂದಿನ ಟ್ರೆಂಡ್. ಅದಕ್ಕಾಗಿ ಏನೆಲ್ಲಾ ಕಸರತ್ತುಗಳನ್ನು ಮಾಡುತ್ತಾರೆ. ಮದುವೆ ಹೆಣ್ಣು ಹೆಲಿಕಾಪ್ಟರ್‌ನಲ್ಲಿ, ಬುಲೆಟ್‌ನಲ್ಲಿ, ಎತ್ತಿಗಾಡಿಯಲ್ಲಿ ಹೀಗೆ ವರ ಜೆಸಿಬಿಯಲ್ಲಿ ಬಂದಂತಹ ಹಲವು ವಿಡಿಯೋಗಳನ್ನು ನೀವು ಈಗಾಗಲೇ ನೋಡಿದ್ದೀರಿ. ಅಲ್ಲದೇ ವಧು ಡಾನ್ಸ್ ಮಾಡುತ್ತಾ ಮದ್ವೆ ಮಂಟಪಕ್ಕೆ ಎಂಟ್ರಿ ಕೊಟ್ಟಿದ್ದನ್ನು ನೋಡಿದ್ದೀರಿ. ಇದು ಕೂಡ ಅದೇ ತರಹದ ಒಂದು ವಿಡಿಯೋ, ವಧುವೊಬ್ಬಳು ಯಾವ ಸಿನಿಮಾ ನಟಿಗೂ ಕಡಿಮೆ ಇಲ್ಲದಂತೆ ಡಾನ್ಸ್ ಮಾಡುತ್ತಾ ಮದುವೆ ಮಂಟಪಕ್ಕೆ ಎಂಟ್ರಿ ಕೊಟ್ಟಿದ್ದು, ಅದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಕಪ್ಪು ಬಣ್ಣದ ಕನ್ನಡಕ ಧರಿಸಿರುವ ವಧು ಕೆಂಪು ಬಣ್ಣದ ಲೆಹೆಂಗಾ ಹಾಗೂ ಚಿನ್ನಾಭರಣವನ್ನು ತೊಟ್ಟು ರಾಣಿಯಂತೆ ಕಂಗೊಳಿಸುತ್ತಿದ್ದು, ತನ್ನ ಸಹೋದರಿಯರು ಹಾಗೂ ಸಹೋದರರು ಮತ್ತು ಕುಟುಂಬದವರೊಂದಿಗೆ ಹೂವಿನ ಹಾಸಿನ ಮೇಲೆ ಡಾನ್ಸ್ ಮಾಡುತ್ತಾ ನಡೆದು ಬರುತ್ತಿದ್ದಾಳೆ. ಈ ವೇಳೆ ಬಾಲಿವುಡ್ ಹಾಡೊಂದಕ್ಕೆ ಆಕೆ ಸಖತ್ ಆಗಿ ಡಾನ್ಸ್ ಮಾಡುತ್ತಿದ್ದು, ನೋಡುಗರನ್ನು ಸೂಜಿಗಲ್ಲಿನಂತೆ ಸೆಳೆಯುತ್ತಿದ್ದಾಳೆ.
ಸಲ್ಮಾನ್ ಖಾನ್ (Salman Khan) ಹಾಗೂ ಪ್ರಿಯಾಂಕ ಚೋಪ್ರಾ (Priyanka Chopra) ಅಭಿನಯದ ಸಲಾಂ ಇ ಇಷ್ಕ್ ಸಿನಿಮಾದ ಇದೇ ಸಲಾಂ ಇ ಇಷ್ಕ್ ಹಾಡಿಗೆ ಆಕೆ ಸಖತ್ ಆಗಿ ಡಾನ್ಸ್ ಮಾಡಿದ್ದಾಳೆ. ಹೀಗೆ ಸುಂದರವಾಗಿ ಡಾನ್ಸ್ ಮಾಡಿ ಎಲ್ಲರನ್ನು ಸೆಳೆದ ವಧುವನ್ನು ಪ್ರಿಯಾಂಕಾ ಥಪ್ಲಿಯಾಲ್ (Priyanka Thapliyal) ಎಂದು ಗುರುತಿಸಲಾಗಿದೆ. ಈ ವಿಡಿಯೋವನ್ನು ‘bridal_lehenga_designn ಎಂಬ ಇನ್ಸ್ಟಾಗ್ರಾಮ್ ಪೇಜ್‌ನಿಂದ ಪೋಸ್ಟ್ ಮಾಡಲಾಗಿದೆ. ಈ ವಿಡಿಯೋವನ್ನು ಒಂದು ಲಕ್ಷಕ್ಕೂ ಅಧಿಕ ಜನ ವೀಕ್ಷಿಸಿದ್ದು, 6,300 ಕ್ಕೂ ಹೆಚ್ಚು ಜನ ಮೆಚ್ಚಿಕೊಂಡಿದ್ದಾರೆ.
ವರನಿಗೆ ರಪರಪನೇ ಬಾರಿಸಿ ಮಂಟಪದಿಂದ ಇಳಿದು ಹೋದ ವಧು
ಮದುವೆಯ ಕ್ಷಣದ ಹಲವು ವಿಡಿಯೋಗಳು ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕೆಲ ದಿನಗಳ ಹಿಂದೆ ವರ ಮದುವೆ ಮಂಟಪಕ್ಕೆ ಮೆರವಣಿಗೆ ಮೂಲಕ ಸಾಗಿ ಬರುತ್ತಿರುವುದನ್ನು ಕಿಟಕಿಯಲ್ಲಿ ನೋಡಿದ ವಧು ಅಲ್ಲಿಂದಲೇ ವರನನ್ನು ನೋಡಿ ಡಾನ್ಸ್ ಮಾಡುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ವಧುವಿನ ಡಾನ್ಸ್ ನೋಡಿದ ಕುದುರೆ ಮೇಲಿದ್ದ ವರ ಕೂಡ ಅಲ್ಲಿಂದಲೇ ವಧುವಿಗೆ ಡಾನ್ಸ್ ಮೂಲಕ ಪ್ರತಿಕ್ರಿಯಿಸುತ್ತಾನೆ. ಈ ವಿಡಿಯೋ ಹಿನ್ನೆಲೆಯಲ್ಲಿ ಸೋನಿ ನಿಗಮ್ (Sonu Nigam) ಹಾಗೂ ಅಲ್ಕಾ ಯಾಗ್ನಿಕ್ (Alka Yagnik) ಹಾಡಿದ ಚಲ್ ಪ್ಯಾರ್ ಕರೆಗಿ ಹಾಡು ಕೇಳಿ ಬರುತ್ತಿದೆ.
ಮದುವೆ ಹೆಣ್ಣಿನ ಫುಶ್ಅಪ್ ವಿಡಿಯೋ ವೈರಲ್
ಭಾರತೀಯ ಮದುವೆಗಳು ಹಾಡು ಹಾಗೂ ಸಂಗೀತಾ ಇವುಗಳಿಲ್ಲದೇ ಎಂದಿಗೂ ಕೊನೆಗೊಳ್ಳುವುದೇ ಇಲ್ಲ. ನಾವು ಬೇರೆಯವರ ಮದುವೆಗೆ ಅತಿಥಿಗಳಾಗಿ ಹೋಗುವುದಾದರೆ ಅದೊಂದು ಎಲ್ಲಾ ಚಿಂತೆಗಳನ್ನು ಮರೆತು ಆರಾಮವಾಗಿ ಸಂಭ್ರಮಿಸಲು ಇರುವ ಒಂದು ಉತ್ತಮ ಅವಕಾಶ. ಮದುವೆಯಲ್ಲಿ ಜನರು ಡಾನ್ಸ್ ಮಾಡುವ ದೃಶ್ಯಾವಳಿಗಳನ್ನು ನಾವು ಈಗಾಗಲೇ ಬೇಕಾದಷ್ಟು ನೋಡಿದ್ದೇವೆ. ಆದರೆ ಇತೀಚೆಗೆ ಮದುವೆಯ ಕೇಂದ್ರ ಬಿಂದುವಾಗಿರುವ ವಧು ಹಾಗೂ ವರರೇ ಬಿಂದಾಸ್ ಆಗಿ ಸ್ಟೆಪ್ ಹಾಕುವ ಮೂಲಕ ಮದುವೆ ಮಂಟಪ ಪ್ರವೇಶಿಸಿ ತಮ್ಮ ಮದುವೆಯನ್ನು ಸ್ಮರಣೀಯವಾಗಿಸುತ್ತಿದ್ದಾರೆ. ಎಲ್ಲಕ್ಕೂ ಹೆಚ್ಚು ಇದು ಅವರ ಬದುಕಿನ ವಿಶೇಷ ದಿನವಾಗಿರುತ್ತದೆ. ಇದೇ ರೀತಿ ವಧು ಹಾಗೂ ವರ ಬಿಂದಾಸ್ ಆಗಿ ತಮ್ಮ ಮದುವೆ ದಿನ ಮಾಡಿದ ಡಾನ್ಸ್ ಈ ಹಿಂದೆಯೂ ಒಮ್ಮೆ ಇನ್ಸ್ಟಾಗ್ರಾಮ್‌ನಲ್ಲಿ ವೈರಲ್ ಆಗಿತ್ತು. ಬಾಲಿವುಡ್ (Bollywood)ನ ಸೇ ಶವ ಶವ ಹಾಡಿಗೆ ಜೋಡಿಯೊಂದು ಡಾನ್ಸ್ ಮಾಡಿತ್ತು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.