
ವಾಷಿಂಗ್ಟನ್: ಪೈರೇಟ್ಸ್ ಆಫ್ ದ ಕೆರೆಬಿಯನ್ ಸಿನಿಮಾ ಖ್ಯಾತಿಯ ನಟ ಜಾನಿ ಡೆಪ್ ವಿರುದ್ಧ ಅವರ ಮಾಜಿ ಪತ್ನಿ ಅಂಬರ್ ಹರ್ಡ್ ಅವರು ಲೈಂಗಿಕ ಕಿರುಕುಳದ ಆರೋಪ ಮಾಡಿದ್ದಾರೆ. 2015ರಲ್ಲಿ ಮದುವೆಯಾದ ನಂತರದ ತಿಂಗಳಲ್ಲಿ ನಡೆದ ವಾದದಲ್ಲಿ ಬಾಟೆಲ್‌ನಿಂದ ಮುಖಕ್ಕೆ ಹೊಡೆಯುವುದಾಗಿ ಹೇಳಿದ್ದರು ಎಂದು ಅಂಬರ್ ಆರೋಪಿಸಿದ್ದಾರೆ.
ಅಂಬರ್ ವಿರುದ್ಧ ಸಲ್ಲಿಸಿರುವ ಮಾನನಷ್ಟಮೊಕದ್ದಮೆಯ ವಿಚಾರಣೆ ವೇಳೆ ಡೆಪ್ ಅವರು ದೈಹಿಕ ಮತ್ತು ಲೈಂಗಿಕವಾಗಿ ಕಿರುಕುಳ ನೀಡಿರುವ ಬಗ್ಗೆ ಸಾಕ್ಷ್ಯಗಳನ್ನು ವಿವರಿಸಿದ್ದಾರೆ. ಡೆಪ್, ನನ್ನ ಕುತ್ತಿಗೆ, ಮುಖ, ದವಡೆಗಳ ಮೇಲೆ ವೋಡ್ಕಾ ಬಾಟಲ್‌ಗಳಿಂದ ಹೊಡೆದಿದ್ದಾರೆ. ಅಲ್ಲದೇ ನನ್ನಿಂದ ಜೀವನ ಹಾಳಾಯಿತು ಎಂದು ಕಿರುಚಾಡಿದ್ದಾರೆ. ಅಲ್ಲದೇ ನೈಟ್‌ಗೌನ್‌ನ್ನು ಹರಿದು ಹಾಕಿ ಬಾಟಲ್ ಮೂಲಕ ಲೈಂಗಿಕ ಕಿರುಕುಳ ನೀಡಿದ್ದಾರೆ. ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ಅವರು ಹೇಳಿದ್ದಾರೆ.
ಇದಕ್ಕೂ ಮೊದಲು ಅಂಬರ್ ತನ್ನ ಮೇಲೆ ಬಾಟಲ್‌ನಿಂದ ದಾಳಿ ಮಾಡಿದ್ದಳು ಎಂದು ಡೆಪ್ ಹೇಳಿದ್ದರು. ಅಂಬರ್ ಹರ್ಡ್ ಸಹ ನಟಿಯಾಗಿದ್ದು, ನಟ ಜೇಮ್ಸ್ ಫ್ರಾಂಕೋ ಜೊತೆ ನಟಿಸುವುದನ್ನು ಒಪ್ಪಿಕೊಂಡಿದ್ದಕ್ಕಾಗಿ ಈ ಇಬ್ಬರ ನಡುವೆ ಜಗಳ ಏರ್ಪಟ್ಟಿತ್ತು.
ನಿದ್ರೆಯಲ್ಲಿದ್ದಾಗ ಪತಿ ಜೊತೆ ಸಂಬಂಧ ಬೆಳೆಸಿದ ಪತ್ನಿ.. ಎಚ್ಚರಗೊಂಡ ಪತಿ ಮಾಡಿದ್ದೇನು ?
ಹಾಲಿವುಡ್ ಖ್ಯಾತನಟನ ಹೆಂಡತಿ ಜೊತೆ ಎಲಾನ್ ಮಸ್ಕ್ ಥ್ರೀಸಮ್ ಮಾಡಿದ ಆರೋಪ
ನಟ ಜಾನಿ ಡೆಪ್ (Johnny Depp) ಹಾಗೂ ಆತನ ಮಾಜಿ ಪತ್ನಿ ಆಂಬರ್ ಹರ್ಡ್ (Amber Heard) ಅವರ ಮಾನನಷ್ಟ ಮೊಕದ್ದಮೆಯ ವಿಚಾರಣೆಯ ವೇಳೆ ಖ್ಯಾತ ಉದ್ಯಮಿ ಎಲಾನ್ ಮಸ್ಕ್(Elon Musk) ಅವರ ಹೆಸರು ಕೂಡ ಜೋಡಿಕೊಂಡಿದೆ. ಮಸ್ಕ್ ಅವರು ತನ್ನ ಮಾಜಿ ಪತ್ನಿ ಆಂಬರ್ ಹರ್ಡ್ ಹಾಗೂ ಕಾರಾ ಎಂಬ ಇನ್ನೊಬ್ಬ ನಟಿಯ ಜೊತೆ ಥ್ರೀಸಮ್ ಮಾಡಿದ್ದರು ಎಂದು ಡೆಪ್ ಆರೋಪಿಸಿದ್ದಾರೆ.
ಈ ಆರೋಪ ಹಾಗೂ ಅವರಿಬ್ಬರ ಪ್ರಕರಣಕ್ಕೆ ದೊಡ್ಡ ಹಿನ್ನೆಲೆಯೇ ಇದೆ. ನಟಿ ಆಂಬರ್ ಹರ್ಡ್, ಜಾನಿ ಡೆಪ್‌ನ ಮಾಜಿ ಪತ್ನಿ. ಈ ಹರ್ಡ್, ಒಂದು ಕಾಲದ ಮಸ್ಕ್‌ನ ಪ್ರೇಯಸಿಯೂ ಹೌದು. ಜಾನಿ ಡೆಪ್ ಜೊತೆಗೆ ಮೂರು ವರ್ಷ ಸಂಸಾರ ನಡೆಸಿದ ಬಳಿಕ ಇಬ್ಬರಿಗೂ ವಿಚ್ಛೇದನವಾಗಿತ್ತು. ಇಬ್ಬರೂ ಪರಸ್ಪರ ದೌರ್ಜ್ಯನ್ಯದ ಕಾರಣ ನೀಡಿದ್ದರು. ಇದೇ ಸಂದರ್ಭದಲ್ಲಿ ಮಸ್ಕ್ ತನ್ನ ಹೆಂಡತಿಯ ಜೊತೆಗೆ ಡೇಟಿಂಗ್ ನಡೆಸುತ್ತಿದ್ದ ಎಂದು ಜಾನಿ ಡೆಪ್ ಆರೋಪಿಸುತ್ತಿದ್ದರು. ಆದರೆ ಇದು ನಿಜವಲ್ಲ ಎಂದು ಮಸ್ಕ್ ಸ್ಪಷ್ಟನೆ ನೀಡಿದ್ದಾರೆ.
'ನಾನು ಆಂಬರ್ ಹರ್ಡ್ ಜೊತೆ ಡೇಟಿಂಗ್ ಮಾಡುತ್ತಿದ್ದಾಗ ಅವರಿಬ್ಬರ ದಾಂಪತ್ಯ ಆಗಲೇ ವಿಚ್ಛೇದನದ ಕೋರ್ಟ್ ಹತ್ತಿತ್ತು. ಅವರು ಕೇಸು ಹಾಕಿದ ಒಂದು ತಿಂಗಳ ಬಳಿಕವೇ ನಾವಿಬ್ಬರೂ ಜೊತೆಯಾದದ್ದು' ಎಂದು ಮಸ್ಕ್ ಹೇಳಿದ್ದಾರೆ.
ಹಾಗಿದ್ದರೆ ಥ್ರೀಸಮ್? ಅದೂ ಜಾನಿ ಡೆಪ್ ಮಾಡಿದ ಆರೋಪ. ಕಾರಾ ಡೆಲೆವಿನೆ (Cara Devevingne) ಎಂಬ ನಟಿ ಹಾಗೂ ಆಂಬರ್ ಹರ್ಡ್ ಸೇರಿ ಮಸ್ಕ್‌ನ ಹಾಸಿಗೆ ಹಂಚಿಕೊಂಡಿದ್ದರು ಎಂಬುದು ಡೆಪ್ ಮಾಡಿದ ಗಂಭೀರ ಆರೋಪ. ಆದರೆ ಇದನ್ನೂ ಮಸ್ಕ್ ಅಲ್ಲಗಳೆದಿದ್ದಾರೆ. 'ಕಾರಾ ನನಗೆ ಸ್ನೇಹಿತೆ ಅಷ್ಟೇ. ನಾವಿಬ್ಬರೂ ದೈಹಿಕ ಸಂಪರ್ಕ ಹೊಂದಿಲ್ಲ. ಇದನ್ನು ಕಾರಾ ಕೂಡ ಸ್ಪಷ್ಟಪಡಿಸಬಹುದು' ಎಂದಿದ್ದಾರೆ. ಹೀಗಾಗಿ ಇದು ನಿಜವೋ ಅಲ್ಲವೋ ಕಾರಾ ಮತ್ತು ಹರ್ಡ್ ಹೇಳಬೇಕು.
ಜಾನಿ ಡೆಪ್ ಮತ್ತು ಹರ್ಡ್ ಜಗಳಕ್ಕೆ ಕಾರಣವಿದೆ. ಇವರಿಬ್ಬರೂ 2015ರಲ್ಲಿ ಮದುವೆಯಾಗಿದ್ದರು. ದಾಂಪತ್ಯ ಸುಖಮಯವಾಗಿರಲಿಲ್ಲ. ಇಬ್ಬರೂ ಕುಡಿದು, ಡ್ರಗ್ಸ್ ಸೇವಿಸಿ ಬಂದು ಬಡಿದಾಡಿಕೊಳ್ಳುತ್ತಿದ್ದರು. ಕಡೆಗೂ 2017ರಲ್ಲಿ ಇಬ್ಬರೂ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿ ಡೈವೋರ್ಸ್(Divorce) ಪಡೆದುಕೊಂಡರು. ಇದಾಗಿ ಒಂದು ವರ್ಷದಲ್ಲಿ 'ನಾನು ಮನೆಯೊಳಗಿನ ಹಿಂಸೆಯ ಸಂತ್ರಸ್ತೆ' ಎಂದು ಹರ್ಡ್ ಬರೆದುಕೊಂಡರು. ಇದು ಡೆಪ್ ಅವರನ್ನು ರೇಗಿಸಿತು. ಅವರು ಮಾನನಷ್ಟ ಕೇಸ್ ದಾಖಲಿಸಿದರು. ಪ್ರತಿಯಾಗಿ ಹರ್ಡ್ ಕೂಡ ಮಾನನಷ್ಟ ಕೇಸು (Defamation lawsuit) ದಾಖಲಿಸಿದರು. ಅದೇ ಈಗ ನಡೆಯುತ್ತಿದೆ. ಇದರಲ್ಲೇ ಮಸ್ಕ್ ಹೆಸರು ಕೆಡಿಸಿಕೊಂಡಿರುವುದು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.