‘ನನ್ನನ್ನು ಬೇಕಾದ್ರೆ ಬ್ಯಾನ್ ಮಾಡ್ಬಿಡಿ’ ಬಿಗ್ಬಾಸ್ ಸಲ್ಮಾನ್ ಸಿಟ್ಟು ಯಾರಮೇಲೆ?

Published : Sep 24, 2019, 05:29 PM ISTUpdated : Sep 24, 2019, 05:37 PM IST
‘ನನ್ನನ್ನು ಬೇಕಾದ್ರೆ ಬ್ಯಾನ್ ಮಾಡ್ಬಿಡಿ’ ಬಿಗ್ಬಾಸ್ ಸಲ್ಮಾನ್ ಸಿಟ್ಟು ಯಾರಮೇಲೆ?

ಸಾರಾಂಶ

ಪೋಟೋಗ್ರಾಫರ್ ಪಕ್ಕಕ್ಕೆ ದೂಡಿದ ಸಲ್ಮಾನ್ ಖಾನ್? ನನ್ನಿಂದ ಸಮಸ್ಯೆ ಆದರೆ ಬ್ಯಾನ್ ಮಾಡಿಬಿಡಿ/ ಹಿಂದಿಯ ಬಿಗ್ ಬಾಸ್ 13 ಲಾಂಚ್ ವೇಳೆ ಘಟನೆ

ಮುಂಬೈ[ಸೆ. 24]  ಕನ್ನಡದ ಹಾಗೆ ಹಿಂದಿಯಲ್ಲಿಯೂ ಬಿಗ್ ಬಾಸ್ ಹವಾ ಶುರುವಾಗಲಿದೆ. ಬಿಗ್ ಬಾಸ್ ಸೀಸನ್ 13 ಕ್ಕೆ ವೇದಿಕೆ ಸಿದ್ಧಮಾಡಿಕೊಳ್ಳಲಾಗುತ್ತಿದೆ. ಆದರೆ ಕಾರ್ಯಕ್ರಮದ ಲಾಂ.ಚ್ ವೇಳೆ ಸಲ್ಮಾನ್ ನಡೆದುಕೊಂಡ ರೀತಿ ಸುದ್ದಿಯಾಗುತ್ತಿದೆ.

ಬಿಗ್ ಬಾಸ್ ಲಾಂಚ್ ಕಾರ್ಯಕ್ರಮಕ್ಕೆ ಆಗಮಿಸಿದ್ದ ಸಲ್ಮಾನ್ ಖಾನ್ ಫೊಟೋ ತೆಗೆಯಲು ಛಾಯಾಚಿತ್ರಗ್ರಾಹಕರು ಮುಗಿಬಿದ್ದಿದ್ದರು. ಈ ವೇಳೆ ಒಬ್ಬ ಪ್ರೋಟೋಗ್ರಾಫರ್ ಸಲ್ಮಾನ್ ಎದುರಿಗೆ  ಅಡ್ಡ ಬಂದು ನಿಂತಿದ್ದಾನೆ.   ಸಿಟ್ಟಿನಿಂದ ಪೋಟೋ ಗ್ರಾಫರ್ ಪಕ್ಕಕ್ಕೆ ದೂಡಿದ ಸಲ್ಮಾನ್ ಖಾನ್  ‘ನನ್ನಿಂದ ನಿಮಗೆ ಸಮಸ್ಯೆಯಾಗುತ್ತಿದ್ದರೆ ನನ್ನನ್ನೇ ಬ್ಯಾನ್ ಮಾಡಿಬಿಡಿ’ ಎಂದು ಹೇಳಿರುವುದು ವೈರಲ್ ಆಗುತ್ತಿದೆ.

ಬಿಗ್ ಬಾಸ್ ಸೀಸನ್ 7ಗೆ ಪ್ರವೇಶ ಪಡೆಯಲಿರುವ ಸೆಲೆಬ್ರಿಟಿಗಳು

ಆ ವೇದಿಕೆ ಕಡೆಗೆ ಸಲ್ಮಾನ್ ಖಾನ್ ಬರುತ್ತಿದ್ದಾಗ ಇದ್ದಕ್ಕಿದ್ದಂತೆ ಪೋಟೋಗ್ರಾಫರ್ ಎದುರಿಗೆ ಬಂದಿದ್ದಾನೆ. ಈ ವೇಳೆ ಸಲ್ಮಾನ್ಪಿತ್ತ ನೆತ್ತಿಗೇರಿದ್ದು ಪೋಟೋಗ್ರಾಫರ್ ನನ್ನು ಪಕ್ಕಕ್ಕೆ ದೂಡುವ ಯತ್ನ ಮಾಡಿದ್ದಾರೆ.

ಹಿಂದೆ ತಮ್ಮ ಬಾಡಿಗಾರ್ಡ್ ಮೇಲೆ ಹಲ್ಲೆ ಮಾಡಿದ್ದಕ್ಕೆ, ಮಗುವೊಂದರ ಜತೆ ಮಿಸ್ ಬಿಹೇವ್ ಮಾಡಿದ್ದಕ್ಕೂ ಸಲ್ಮಾನ್ ಖಾನ್ ಸುದ್ದಿಯಾಗಿದ್ದರು. ಹಿಂದಿ ಬಿಗ್ ಬಾಸ್ ಸೆ. 29 ರಿಂದ ಆರಂಭವಾಗಲಿದ್ದು ವೇದಿಕೆ ಸಿದ್ಧವಾಗಿದೆ.

ಕನ್ನಡದ ಬಿಗ್ ಬಾಸ್ ಸಹ ಅಕ್ಟೋಬರ್ 2 ನೇ ವಾರದಿಂದ ಆರಂಭವಾಗಲಿದ್ದು ಕಿಚ್ಚ ಸುದೀಪ್ ನಡೆಸಿಕೊಡಲಿದ್ದಾರೆ.  ಹಿಂದಿ, ತಮಿಳು, ತೆಲುಗು ಸೇರಿದಂತೆ ಕನ್ನಡದಲ್ಲಿಯೂ ನಡೆಯುವ ಈ ರಿಯಾಲೀಟಿ ಶೋ ತನ್ನದೇ ಆದ ಪ್ರೇಕ್ಷಕ ವರ್ಗ ಹೊಂದಿದ್ದು ಟಿಆರ್ ಪಿ ಮಾಸ್ಟರ್ ಎಂದೇ ಕರೆಸಿಕೊಂಡಿದೆ. 

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

'ಬಂದವ್ರಿಗೆ ದಾರಿಕೊಡಿ, ಹೋಗೋರಿಗೆ ದಾರಿಬಿಡಿ..'ಜೀ ಕನ್ನಡ ವೇದಿಕೆಯಲ್ಲಿ ಹೇಳಿದ್ದ ಮಾತನ್ನೇ ಬಿಗ್‌ಬಾಸ್‌ನಲ್ಲಿ ಮರೆತ್ರಾ ಗಿಲ್ಲಿ ನಟ!
'ನನಗೆ ಡೈವೋರ್ಸ್‌ ಸಿಗೋದು ಪಕ್ಕಾ..' ನ್ಯಾಷನಲ್‌ ಕ್ರಶ್‌ ಗಿರಿಜಾ ಓಕ್‌ ಫೋಟೋಗೆ ಫ್ಯಾನ್ಸ್ ರಿಯಾಕ್ಷನ್‌