5 ತಿಂಗಳ ಹಿಂದೆ ಬೋನಿ ಕಪೂರ್ ‘ಅಲ್ಲಿಗೆ’ ಟಚ್ ಮಾಡಿದ್ರಾ? ಸತ್ಯ ಬಿಚ್ಚಿಟ್ಟ ಊರ್ವಶಿ

Published : Sep 23, 2019, 10:50 PM ISTUpdated : Sep 23, 2019, 10:52 PM IST
5 ತಿಂಗಳ ಹಿಂದೆ ಬೋನಿ ಕಪೂರ್  ‘ಅಲ್ಲಿಗೆ’ ಟಚ್ ಮಾಡಿದ್ರಾ? ಸತ್ಯ ಬಿಚ್ಚಿಟ್ಟ ಊರ್ವಶಿ

ಸಾರಾಂಶ

5 ತಿಂಗಳ ಹಿಂದಿನ ವೈರಲ್ ವಿಡಿಯೋದ ಬಗ್ಗೆ ಮಾತನಾಡಿದ ನಟಿ/ ಸೋಶಿಯಲ್ ಮೀಡಿಯಾ ಮತ್ತು ಮಾಧ್ಯಮಗಳ ಕೆಲಸದಿಂದ ಮನಸಿಗೆ ನೋವು/ ಅದೊಂದು ಆಕಸ್ಮಿಕ ಘಟನೆ ಅಷ್ಟೆ

ಮುಂಬೈ[ಸೆ. 23] ಮಿಸ್ ಯುನಿವರ್ಸ್  ಊರ್ವಶಿ ರೌಥೆಲಾರ ಹಿಂಭಾಗವನ್ನು ಬೋನಿ ಕಪೂರ್ ಟಚ್ ಮಾಡಿದ್ದರು ಎಂಬ ವಿಡಿಯೋಕ್ಕೆ ಇದೀಗ ಮತ್ತೊಂದು ತಿರುವು ಸಿಕ್ಕಿದೆ. ಸುಮಾರು ಐದು ತಿಂಗಳ ಬಳಿಕ ಊರ್ವಶಿ ವಿಡಿಯೋಗೆ ಸಂಬಂಧಿಸಿದ ಪ್ರಶ್ನೆಗಳಿಗೆ ಸಂದರ್ಶನದಲ್ಲಿ ಉತ್ತರಿಸಿದ್ದಾರೆ.

ಏಪ್ರಿಲ್ ನಲ್ಲಿ ಸ್ನೇಹಿತರ ಮದುವೆ ಸಮಾರಂಭದಲ್ಲಿ ಭಾಗಿಯಾಗಿದಗ್ದ ವೇಳೆ ಬೋನಿ ಕಪೂರ್ ಸಹ ಬಂದಿದ್ದರು. ವೇದಿಕೆ ಮೇಲೆ  ಫೋಟೋಗೆ ಪೋಸ್ ಕೊಡುತ್ತಿದ್ದ ಸಂದರ್ಭದಲ್ಲಿ ಬೋನಿ ಕಪೂರ್ ಕೈ ನನಗೆ ತಾಕಿದ್ದು, ಅದಕ್ಕಿಂತ ಹೆಚ್ಚಿನದು ಅಲ್ಲಿ ಏನು ನಡೆದಿಲ್ಲ. ಅವರ ಕೈ ನನಗೆ ತಾಕಿದ್ದಾಗ ನಾನು ಯಾವುದೇ ಪ್ರತಿಕಿಯೆ ಸಹ ನೀಡಿರಲಿಲ್ಲ. ಆದರೆ ಮರುದಿನ ದೊಡ್ಡ ಸುದ್ದಿಯಾಗಿತ್ತು.  ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋಕ್ಕೆ ಭಿನ್ನ ಭಿನ್ನ ಪ್ರತಿಕ್ರಿಯೆ ಬಂದಿದ್ದವು.

ಯಪ್ಪಾ ಈ ವೀಕೆಂಡ್ ಪಾರ್ಟಿ ನೋಡೋಕಾಗಲ್ಲ!

ನನ್ನ ಮತ್ತು ಬೋನಿ ಕಪೂರ್ ನಡುವೆ ಅಫೇರ್ ಇದೆ ಎಂಬುದಾಗಿಯೂ ಮಾತನಾಡಿಕೊಳ್ಳಲಾಗಿತ್ತು. ಒಂದು ವಾರ ಕಾಲ ನನ್ನ ಮೊಬೈಲ್ ಗೆ ನಿರಂತರ ಕರೆಗಳು ಬರುತ್ತಲೇ ಇದ್ದವು ಎಂದು ಅಂದಿನ ಘಟನೆಯಿಂದಾದ ನೋವಿನ ಬಗ್ಗೆ ಹೇಳಿದ್ದಾರೆ.

ಅದೊಂದು ಆ ಕ್ಷಣಕ್ಕೆ ನಡೆದ ಆಕಸ್ಮಿಕವಷ್ಟೆ. ಆದರೆ ಆ ವಿಡಿಯೋ ಬಣ್ಣ ತೆಗೆದುಕೊಂಡ ರೀತಿ  ನಿಜಕ್ಕೂ ನನಗೂ ಮತ್ತು ಬೋನಿ ಕಪೂರ್ ಇಬ್ಬರಿಗೂ ನೋವುಂಟು ಮಾಡಿದೆ ಎಂದು ನಟಿ ಹೇಳಿದ್ದಾರೆ.

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

'ಬಂದವ್ರಿಗೆ ದಾರಿಕೊಡಿ, ಹೋಗೋರಿಗೆ ದಾರಿಬಿಡಿ..'ಜೀ ಕನ್ನಡ ವೇದಿಕೆಯಲ್ಲಿ ಹೇಳಿದ್ದ ಮಾತನ್ನೇ ಬಿಗ್‌ಬಾಸ್‌ನಲ್ಲಿ ಮರೆತ್ರಾ ಗಿಲ್ಲಿ ನಟ!
'ನನಗೆ ಡೈವೋರ್ಸ್‌ ಸಿಗೋದು ಪಕ್ಕಾ..' ನ್ಯಾಷನಲ್‌ ಕ್ರಶ್‌ ಗಿರಿಜಾ ಓಕ್‌ ಫೋಟೋಗೆ ಫ್ಯಾನ್ಸ್ ರಿಯಾಕ್ಷನ್‌