ಕಾವೇರಿ ಕೂಗು ಅಭಿಯಾನಕ್ಕೆ ಟೈಟಾನಿಕ್‌ ಹೀರೋ ಡಿಕ್ಯಾಪ್ರಿಯೋ ಬೆಂಬಲ!

By Web Desk  |  First Published Sep 24, 2019, 10:44 AM IST

ಸದ್ಗುರು ನೇತೃತ್ವದಲ್ಲಿ ಇಶಾ ಫೌಂಡೇಷನ್‌ ಆರಂಭಿಸಿರುವ ‘ಕಾವೇರಿ ಕೂಗು’ ಅಭಿಯಾನಕ್ಕೆ ಹಾಲಿವುಡ್‌ ಚಿತ್ರನಟ, ಟೈಟಾನಿಕ್‌ ಸಿನಿಮಾದ ಸ್ಟಾರ್‌ ಲಿಯೊನಾರ್ಡೊ ಡಿಕ್ಯಾಪ್ರಿಯೊ ತಮ್ಮ ಬೆಂಬಲ ವ್ಯಕ್ತಪಡಿಸಿದ್ದಾರೆ.


ಕೊಯಮತ್ತೂರು: ಪವಿತ್ರನದಿ ಕಾವೇರಿ ನಾನಾ ಕಾರಣಗಳಿಂದ ಅಳಿವಿನ ಅಂಚಿಗೆ ತಲುಪಿದ್ದು, ಉಳಿಸಿಕೊಳ್ಳುವ ಕೆಲಸ ಸಮಾಜದಿಂದ ಆಗಬೇಕೆಂದು ಒತ್ತಾಯಿಸಿ ಇಶಾ ಫೌಂಡೇಷನ್‌ ಈಗಾಗಲೇ ‘ಕಾವೇರಿ ಕೂಗು’ ಜಾಗೃತಿ ಅಭಿಯಾನ ಆರಂಭಿಸಿದೆ.

ಕಾವೇರಿ ಕೂಗು ; ಸುವರ್ಣ ನ್ಯೂಸ್ ಜೊತೆ ಸದ್ಗುರು ಮಾತುಕತೆ

Tap to resize

Latest Videos

undefined

ಈ ಅಭಿಯಾನಕ್ಕೆ ಸಂಬಂಧಿಸಿ ಲಿಯೊನಾರ್ಡೊ ಅವರು ತಮ್ಮ ಫೇಸ್‌ಬುಕ್‌ ಪುಟದಲ್ಲಿ ಬೆಂಬಲ ವ್ಯಕ್ತಪಡಿಸುವುದಾಗಿ ಬರೆದುಕೊಂಡಿದ್ದಾರೆ. ಹಾಲಿವುಡ್‌ ನಟನ ಕಳಕಳಿಗೆ ಲಕ್ಷಾಂತರ ಮಂದಿ ಕಾಮೆಂಟ್‌ ಮಾಡಿ, ತಾವೂ ಹಂಚಿಕೊಂಡಿದ್ದಾರೆ ಎಂದು ಇಶಾ ಫೌಂಡೇಷನ್‌ ಪ್ರಕಟಣೆ ತಿಳಿಸಿದೆ. ಇತ್ತೀಚೆಗೆ ಚೆನ್ನೈನಲ್ಲಿ ಭಾರೀ ಕುಡಿಯುವ ನೀರಿನ ಕೊರತೆ ಎದುರಾಗಿದ್ದ ವೇಳೆಯೂ ಅಲ್ಲಿನ ಸ್ಥಿತಿಗತಿ ಬಗ್ಗೆ ಡಿಕ್ಯಾಪ್ರಿಯೋ ತಮ್ಮ ಕಳವಳ ವ್ಯಕ್ತಪಡಿಸಿದ್ದರು.

ಗೇಮ್‌ ಚೇಂಜರ್‌ ಆಗಲಿದೆ ‘ಕಾವೇರಿ ಕೂಗು’

 

click me!