Latest Videos

ನನ್ನ ಹೆಸರಿಗೆ ತಾತನ ಹೆಸರು ಸೇರಿಸಿಕೊಂಡು ಈ ಲೆಗ್ಗಸಿಯನ್ನು ಗೌರವಿಸುತ್ತಿದ್ದೇನೆ: ಧೀರೆನ್ ಆರ್‌ ರಾಜ್‌ಕುಮಾರ್

By Shriram BhatFirst Published Jun 17, 2024, 12:05 PM IST
Highlights

ಕಳೆದ ವರ್ಷ ಅಂದರೆ 27 ಆಗಸ್ಟ್ 2024ರಂದು, ಅನಿಲ್ ಕುಮಾರ್ ನಿರ್ದೇಶನ ಮಾಡಿರುವ 'ಶಿವ 143' ಅದ್ಧೂರಿ ಸಿನಿಮಾ ಮೂಲಕ ಧೀರೆನ್ ರಾಜ್‌ಕುಮಾರ್ ಅವರು ನಟರಾಗಿ ಬಂದಿದ್ದಾರೆ. ಲುಕ್, ಕ್ಯಾಮೆರಾ ಅಪಿಯರೆನ್ಸ್ ಹಾಗು ನಟನೆಯಲ್ಲಿ ಸೈ ..

ಡಾ ರಾಜ್‌ಕುಮಾರ್ (Dr Rajkumar) ಮಗಳು ಪೂರ್ಣಿಮಾ ಹಾಗೂ ನಟ ರಾಮ್‌ಕುಮಾರ್ (Actor Ramkumar) ದಂಪತಿ ಮಗ ಧೀರೆನ್ ರಾಮ್‌ಕುಮಾರ್ (Dhreen Ramkumar) ಅವರು ತಮ್ಮ ಹೆಸರು ಬದಲಾಯಿಸಿಕೊಂಡಿದ್ದಾರೆ. ಈಗಾಗಲೇ ಸಿನಿಮಾ ನಟರಾಗಿ ಸ್ಯಾಂಡಲ್‌ವುಡ್‌ಗೆ ಕಾಲಿಟ್ಟಿರುವ ಧೀರೆನ್ ರಾಮ್‌ಕುಮಾರ್ ಅವರು ಲುಕ್‌ನಲ್ಲಿ ತಂದೆ ರಾಮ್‌ಕುಮಾರ್ ಅವರಂತೆ ಹ್ಯಾಂಡ್‌ಸಮ್ ಆಗಿದ್ದಾರೆ. ಧೀರೆನ್ ತಂಗಿ ಧನ್ಯಾ ರಾಮ್‌ಕುಮಾರ್ ಸಹ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿಯಾಗಿದೆ. ಕಳೆದ ವರ್ಷ, ಅನಿಲ್ ಕುಮಾರ್ ನಿದ್ಏಶನದ  'ಶಿವ 143' ಚಿತ್ರದ ಮೂಲಕ ಧೀರೆನ್ ರಾಮ್‌ಕುಮಾರ್ ಅವರು ಸ್ಯಾಂಡಲ್‌ವುಡ್ ಪ್ರವೇಶ ಪಡೆದಿದ್ದಾರೆ. 

ಈ ಬಗ್ಗೆ ನಟ ಧೀರೆನ್ ರಾಮ್‌ಕುಮಾರ್ ಅದೇನು ಹೇಳಿದ್ದಾರೆ ಗೊತ್ತಾ? 'ನನ್ನ ಹೆಸರಿನ ಮುಂದೆ ನನ್ನ ತಾತ ರಾಜ್‌ಕುಮಾರ್ ಅವರ ಹೆಸರನ್ನು ಸೇರಿಸಿಕೊಳ್ಳುವ ಮೂಲಕ ನಾನು 'ಡಾ ರಾಜ್‌ಕುಮಾರ್ ಕುಟುಂಬದ' ಲೆಗ್ಗಸಿಗೆ (ವಂಶ ವೃಕ್ಷ) ಗೌರವ ಸೂಚಿಸುತ್ತಿದ್ದೇನೆ. ಡಾ ರಾಜ್‌ಕುಮಾರ್ ಮೊಮ್ಮಗನಾಗಿರುವ ನಾನು ಅವರ ಹೆಸರನ್ನ ನನ್ನ ಹೆಸರಿನ ಮುಂದೆ ಸೇರಿಸಿಕೊಂಡು ಈ ಮೂಲಕ ಅವರ ಮನೆತನಕ್ಕೆ ರೆಸ್ಪೆಕ್ಟ್‌ ಸೂಚಿಸುತ್ತಿದ್ದೇನೆ' ಎಂದಿದ್ದಾರೆ. ಕಾನೂನಿನ ಪ್ರಕಾರ ಹೆಸರನ್ನು ಬದಲಾಯಿಸಿಕೊಂಡು ಧಿರೇನ್ ರಾಮ್‌ಕುಮಾರ್‌ ಅವರು ಈಗ ಧೀರೆನ್ ಆರ್ ರಾಜ್‌ಕುಮಾರ್ (Dheeren R Rajkumar) ಆಗಿದ್ದಾರೆ. 

ಹ್ಯಾಪಿ ಫಾದರ್ಸ್ ಡೇ ಅಪ್ಪಾ, ಯೂ ಆರ್ ಫಾರ್ ಎವರ್ ಮೈ ಹೀರೋ; ವಿನೀಶ್ ತೂಗುದೀಪ

ಕಳೆದ ವರ್ಷ ಅಂದರೆ 27 ಆಗಸ್ಟ್ 2024ರಂದು, ಅನಿಲ್ ಕುಮಾರ್ ನಿರ್ದೇಶನ ಮಾಡಿರುವ 'ಶಿವ 143' ಅದ್ಧೂರಿ ಸಿನಿಮಾ ಮೂಲಕ ಧೀರೆನ್ ರಾಜ್‌ಕುಮಾರ್ ಅವರು ನಟರಾಗಿ ಬಂದಿದ್ದಾರೆ. ಲುಕ್, ಕ್ಯಾಮೆರಾ ಅಪಿಯರೆನ್ಸ್ ಹಾಗು ನಟನೆಯಲ್ಲಿ ಸೈ ಎಂಬಂತೆ ಎಂಟ್ರಿಯಲ್ಲೇ ಮೆಚ್ಚುಗೆ ಗಳಿಸಿಕೊಂಡಿದ್ದಾರೆ ಧೀರೆನ್. ಸ್ಯಾಂಡಲ್‌ವುಡ್‌ನಲ್ಲಿ ಧೀರೆನ್ ಅಪ್ಪ ರಾಮ್‌ಕುಮಾರ್‌ ಅವರೂ ಕೂಡ ಸಾಕಷ್ಟು ಹೆಸರು ಮಾಡಿರುವ ನಟ. ಆದರೆ, ಸದ್ಯ ನಟ ರಾಮ್‌ಕುಮಾರ್ ಸಿನಿಮಾರಂಗದಿಂದ ದೂರ ಇದ್ದಾರೆ. 

ಮೆಟ್ಟು ಮೇಲ್ಗಡೆ ಇಟ್ಟು ಇಳೀರಿ, ಗಂಗಮ್ಮ ತಾಯಿಗ್ ಹಿಂಗೆಲ್ಲಾ ಮಾಡ್ಬಾರ್ದು; ಶಾಕ್ ಆಗಿದ್ರಂತೆ ಡಾ ರಾಜ್‌!

ಶಿವ 143 ಸಿನಿಮಾದಲ್ಲಿ ಧೀರೆನ್‌ ರಾಮ್‌ಕುಮಾರ್‌ ಅವರಿಗೆ ನಟಿ ಮಾನ್ವಿತಾ ಹರೀಶ್ ಜೋಡಿಯಾಗಿದ್ದಾರೆ. ಸದ್ಯ ನಟ ರಾಮ್‌ಕುಮಾರ್ ಮಕ್ಕಳಾದ ಧೀರೆನ್ ರಾಜ್‌ಕುಮಾರ್ ಹಾಗು ಧನ್ಯಾ ರಾಮ್‌ಕುಮಾರ್ ಇಬ್ಬರೂ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ಮುಂದಿನ ದಿನಗಳಲ್ಲಿ ಅವರಿಬ್ಬರೂ ಮಿಂಚುತ್ತಾರೋ ಮರೆಯಾಗುತ್ತಾರೋ ಎಂಬುದನ್ನು ಕಾದು ನೋಡಬೇಕಿದೆ.  ಸದ್ಯ, ಧೀರೆನ್ ರಾಮ್‌ಕುಮಾರ್, ಅಲ್ಲ ಧೀರೆನ್ ರಾಜ್‌ಕುಮಾರ್ ತಾವು ಹೆಸರು ಬದಲಾಯಿಸಿಕೊಂಡ ಬಗ್ಗೆ ಕ್ಲಾರಿಫೀಕೇಶನ್ ಕೊಟ್ಟಿದ್ದಾರೆ. 

ಹತ್ತು ಎಕರೆ ಬೇಕಾ, ಜನಕ್ಕೆ ಉಪಯೋಗ ಆಗುತ್ತೆ ಅಂದ್ರೆ ನಾನೇ ಕೊಡ್ತೀನಿ; ರಾಕಿಂಗ್ ಸ್ಟಾರ್ ಯಶ್!

click me!