
ಕಾಮಿಡಿ ಕಿಲಾಡಿಗಳು ಹಾಗೂ ಬಿಗ್ ಬಾಸ್ ಖ್ಯಾತಿಯ ತುಕಾಲಿ ಸಂತೋಷ್ ಮತ್ತು ಪತ್ನಿ ಮಾನಸ ತಮ್ಮ ಹೊಸ ಕಾರಿನಲ್ಲಿ ತುಮಕೂರು ಕಡೆಯಿಂದ ಕುಣಿಗಲ್ ಮಾರ್ಗವಾಗಿ ಹೊಳೆನರಸೀಪುರಕ್ಕೆ ಪ್ರಯಾಣ ಮಾಡುವಾಗ ಕಾರು ಅಪಘಾತವಾಗಿದೆ. ಕುಣಿಗಲ್‌ನಿಂದ ಕುರುಡಿಹಳ್ಳಿಗೆ ಆಟೋವೊಂದು ತೆರಳುತ್ತಿತ್ತು. ತುಕಾಲಿ ಸಂತೋಷ್ ಕಾರಿನ ಬಲ ಭಾಗಕ್ಕೆ ಆಟೋ ಡಿಕ್ಕಿ ಹೊಡೆದು ಬಹುತೇಕ ನಜ್ಜುಗುಜ್ಜಾಗಿತ್ತು.
ಗಾಯಗೊಂಡ ಆಟೋ ಚಾಲಕನನ್ನು ತಕ್ಷಣವೇ ಕುಣಿಗಲ್ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಮಾರ್ಚ್ 13ರಂದು ರಾತ್ರಿ ಈ ಘಟನೆ ನಡೆದಿದ್ದು ಮಾರ್ಚ್ 14ರಂದು ಆಟೋ ಚಾಲಕ ಮೃತಪಟ್ಟಿದ್ದಾರೆ. ಮೃತಪಟ್ಟಿರುವ ಆಟೋ ಚಾಲಕನನ್ನು ಜಗದೀಶ್ ಎಂದು ಗುರುತಿಸಲಾಗಿತ್ತು ವಯಸ್ಸು 40 ವರ್ಷ. ಜಗದೀಶ್ ಅವರ ಅಗಲುವಿಕೆ ಕುಟುಂಬಸ್ಥರಿಗೆ ತೀವ್ರ ನೋವುಂಟು ಮಾಡಿದೆ.
ಕಿಯಾ ಕಾರು ಖರೀದಿಸಿ, ನನ್ನ ಬಹುದಿನಗಳ ಕನಸು ನನಸಾಯ್ತು ಎಂದ ಬಿಗ್‌ಬಾಸ್ ತುಕಾಲಿ ಸಂತೋ
ಬಿಗ್ ಬಾಸ್ ಸೀಸನ್ 10 ಮುಗಿದ ಮೇಲೆ ತುಕಾಲಿ ಸಂತೋಷ್ ಸಾಕಷ್ಟು ಖಾಸಗಿ ಕಾರ್ಯಕ್ರಮಗಳು ಮತ್ತು ಸಂದರ್ಶನಗಳಲ್ಲಿ ಕಾಣಿಸಿಕೊಳ್ಳುತ್ತಿದ್ದರು. ಹೀಗಾಗಿ ಬೆಂಗಳೂರು ಅಲ್ಲಿ ಇಲ್ಲಿ ಅಂತ ಸುತ್ತಾಡಬೇಕು ಎಂದು ಹೇಳಿ ಹೊಸ ಕಾರು ಖರೀದಿಸಿದ್ದರು. ತುಕಾಲಿ ಕಾರು ಖರೀದಿಸಿದ್ದ ವಿಚಾರ ದೊಡ್ಡ ಸುದ್ದಿ ಆಗಿತ್ತು. ಬಿಗ್ ಬಾಸ್‌ನಿಂದ ಜಾಸ್ತಿ ಹಣ ಬಂದಿರಬೇಕು ಅದಿಕ್ಕೆ ಹೊಸ ಕಾರು ಅಲ್ಲಿ ಇಲ್ಲಿ ದುಡ್ಡು ಜಾಸ್ತಿ ತೆಗೆದುಕೊಳ್ಳುತ್ತಿರ ಬೇಕು ಹಾಗೆ ಹೀಗೆ ಎಂದು ಟೀಕೆಗಳು ವ್ಯಕ್ತವಾಗಿತ್ತು. ಆಗ 'ತುಂಬಾ ದಿನಗಳಿಂದ ಕಾರು ಖರೀದಿ ಮಾಡಬೇಕು ಅಂದುಕೊಳ್ಳುತ್ತಿದ್ದೆ ಆಗ ಕನಸು ನನಸು ಆಗಿದೆ. ದೊಡ್ಡ ಕಾರುಗಳನ್ನು ನೋಡಿದರೆ ನಮಗೂ ಆಸೆ ಆಗುತ್ತಿತ್ತು ಆದರೆ EMI ಅನ್ನೋ ಭಯ ಜಾಸ್ತಿ ಇದೆ. ಬಿಗ್ ಬಾಸ್ ಮನೆಯಿಂದ ಬಂದ ಹಣದಲ್ಲಿ ಕಾರಿನ ಡೈನ್ ಪೇಮೆಂಟ್ ಮಾಡಲು ಸಾಕಾಗುಷ್ಟು ಹಣ ಬಂದಿದೆ...ಅದು ಡೈನ್ ಪೇಮೆಂಟ್ ಮಾಡಿರುವೆ ಅಷ್ಟೆ. ಸಂಪೂರ್ಣ ಹಣವನ್ನು ಒಂದಕ್ಕೆ ಹಾಕಲು ಆಗಲ್ಲ. ಗಿಚ್ಚಿ ಗಿಲಿಗಿಲಿ ಸೀಸನ್ 3 ಮಾಡುತ್ತಿರುವೆ ಹಾಗೂ ಖಾಸಗಿ ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತಿರುವೆ. ಜೀವನದಲ್ಲಿ ಕಮಿಟ್‌ಮೆಂಟ್ ಸಾಕಷ್ಟಿದೆ. EMI ಆದ್ರೂ ಪರ್ವಾಗಿಲ್ಲ ಬಿಗ್ ಬಾಸ್‌ನಿಂದ ಹಣದಲ್ಲಿ ಕಾರು ಖರೀದಿ ಮಾಡೋಣ ಅಂತ ಮನಸ್ಸು ಮಾಡಿದೆ. ಉತ್ತರ ಕನ್ನಡ ಕಡೆ ಜಾಸ್ತಿ ಪ್ರಯಾಣ ಮಾಡುವುದು ಹೀಗಾಗಿ ದೊಡ್ಡ ಕಾರಿದ್ದರೆ ಬೇಗ ಪ್ರಯಾಣ ಮಾಡಬಹುದು' ಎಂದು ಖಾಸಗಿ ಯುಟ್ಯೂಬ್ ಸಂದರ್ಶನದಲ್ಲಿ ತುಕಾಲಿ ಸಂತೋಷ್ ಮಾತನಾಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.