ಮೀರಾ ಚೋಪ್ರಾ ಮತ್ತು ರಕ್ಷಿತ್ ಕೇಜ್ರಿವಾಲ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಮಾರ್ಚ್ 12 ರಂದು ಇವರ ಅದ್ದೂರಿ ವಿವಾಹ ಕಾರ್ಯಕ್ರಮ ನೆರವೇರಿದೆ.
ಕನ್ನಡ, ತಮಿಳು, ತೆಲುಗು ಸೇರಿದಂತೆ ವಿವಿಧ ಭಾಷೆಗಳಲ್ಲಿ ನಟಿಸಿದ್ದ ನಟಿ ಹಾಗೂ ಮಾಡೆಲ್ ಮೀರಾ ಚೋಪ್ರಾ ಮಂಗಳವಾರ ಉದ್ಯಮಿ ರಕ್ಷಿತ್ ಕೇಜ್ರಿವಾಲ್ ಅವರ ಕೈಹಿಡಿದಿದ್ದಾರೆ. ಜೈಪುರದಲ್ಲಿ ಅದ್ದೂರಿ ವಿವಾಹ ಸಮಾರಂಭ ನಡೆದಿದ್ದು, ಮದುವೆಯ ಚಿತ್ರಗಳನ್ನು ಮೀರಾ ಚೋಪ್ರಾ ಹಂಚಿಕೊಂಡಿದ್ದಾರೆ. ಮೀರಾ ಚೋಪ್ರಾ ಕೆಂಪು ಬಣ್ಣದ ಲೆಹೆಂಗಾದಲ್ಲಿ ಕಂಗೊಳಿಸುತ್ತಿದ್ದರೆ, ರಕ್ಷಿತ್ ದಂತ ಬಣ್ಣದ ಶೇರ್ವಾನಿಯನ್ನು ಆಯ್ಕೆ ಮಾಡಿಕೊಂಡಿದ್ದರು.
ಜೈಪುರದಲ್ಲಿ ಹಸೆಮಣೆ ಏರಲಿದ್ದಾರೆ ದರ್ಶನ್ ನಟನೆಯ 'ಅರ್ಜುನ್' ಚಿತ್ರದ ಹೀರೋಯಿನ್!
ಮದುವೆಯ ಎಲ್ಲಾ ಚಿತ್ರಗಳಲ್ಲಿ ಮೀರಾ ಚೋಪ್ರಾ ಅವರ ನಗು ಹೈಲೈಟ್ ಆಗಿದೆ.
ಅದರೊಂದಿಗೆ ವರಮಾಲೆಯನ್ನು ಹಂಚಿಕೊಳ್ಳುತ್ತಿರುವ ಪೋಟೋಗಳನ್ನು ಇವರು ಹಂಚಿಕೊಂಡಿದ್ದಾರೆ.
ಚಿತ್ರಗಳನ್ನು ಹಂಚಿಕೊಂಡ ಮೀರಾ, "ಎಂದೆಂದಿಗೂ ಸಂತೋಷ, ಜಗಳ, ನಗು, ಕಣ್ಣೀರು ಮತ್ತು ಜೀವಮಾನದ ನೆನಪುಗಳಲ್ಲಿ. ಹರ್ ಜನಮ್ ತೇರೆ ಸಾಥ್" ಎಂದು ಬರೆದಿದ್ದಾರೆ.
ಜೈಪುರ-ದೆಹಲಿ ಹೆದ್ದಾರಿಯಲ್ಲಿರುವ ಬ್ಯೂನಾ ವಿಸ್ಟಾ ಐಷಾರಾಮಿ ಗಾರ್ಡನ್ ಸ್ಪಾ ರೆಸಾರ್ಟ್‌ನಲ್ಲಿ ವಿವಾಹ ನಡೆಯಿತು. ಮಾರ್ಚ್ 11 ರಂದು ದಂಪತಿಗಳು ತಮ್ಮ ಮೆಹಂದಿ, ಹಲ್ದಿ ಮತ್ತು ಸಂಗೀತ ಸಮಾರಂಭಗಳನ್ನು ಅಯೋಜಿಸಿದ್ದರು. ಇದರಲ್ಲಿ ಸಂದೀಪ್ ಸಿಂಗ್, ಆನಂದ್ ಪಂಡಿತ್, ಅರ್ಜನ್ ಬಾಜ್ವಾ ಮತ್ತು ಗೌರವ್ ಚೋಪ್ರಾ ಸೇರಿದಂತೆ ಮೀರಾ ಚೋಪ್ರಾ ಅವರ ಆಪ್ತರು ಆಗಮಿಸಿದ್ದರು.
ಮೀರಾ ಚೋಪ್ರಾ ಕನ್ನಡದಲ್ಲಿ ದರ್ಶನ್ ಅವರ ನಟನೆಯ ಅರ್ಜುನ್ ಚಿತ್ರದಲ್ಲಿ ನಟಿಸಿದ್ದರು. ಆ ಬಳಿಕ ಕೆಲವು ತೆಲುಗು ಹಾಗೂ ತಮಿಳು ಚಿತ್ರಗಳಲ್ಲಿ ನಡಿಸಿದ್ದ ಅವರು ಬಳಿಕ ಮಾಡೆಲಿಂಗ್ ಕಡೆ ಮುಖ ಮಾಡಿದ್ದರು.