Latest Videos

ಬಾಲಿವುಡ್‌ನ ಪ್ರಖ್ಯಾತ ನಟನ ಕಚೇರಿಯಲ್ಲಿ ಕಳ್ಳತನ!

By Santosh NaikFirst Published Jun 21, 2024, 2:04 PM IST
Highlights

ಬಾಲಿವುಡ್‌ನ ಪ್ರಖ್ಯಾತ ನಟ ಅನುಪಮ್‌ ಖೇರ್‌ ಕಚೇರಿಯಲ್ಲಿ ಕಳ್ಳತನವಾಗಿದೆ. ಇದನ್ನು ಸ್ವತಃ ನಟ ಹೇಳಿಕೊಂಡಿದ್ದಾರೆ.
 

ಮುಂಬೈ (ಜೂ.21): ಇಬ್ಬರು ಅಪರಿಚಿತ ವ್ಯಕ್ತಿಗಳು ಖ್ಯಾತ ಬಾಲಿವುಡ್ ನಟ ಅನುಪಮ್ ಖೇರ್ ಅವರ ಕಚೇರಿಗೆ ನುಗ್ಗಿ 4.15 ಲಕ್ಷ ರೂಪಾಯಿ ನಗದು ಮತ್ತು ಅವರ 2005 ರ ಚಲನಚಿತ್ರ "ಮೈನೆ ಗಾಂಧಿ ಕೋ ನಹಿಂ ಮಾರಾ" ನ ನೆಗೆಟಿವ್ ಲಾಕರ್ ಅನ್ನು ಕದ್ದಿದ್ದಾರೆ ಎಂದು ವರದಿಯಾಗಿದೆ. ಬುಧವಾರ ಮಧ್ಯರಾತ್ರಿ ಅಂಧೇರಿ (ಪಶ್ಚಿಮ) ದ ವೀರ ದೇಸಾಯಿ ರಸ್ತೆಯಲ್ಲಿ ಕಾಯುತ್ತಿದ್ದ ಆಟೋ ರಿಕ್ಷಾದಲ್ಲಿ ಕಳ್ಳರು ಪರಾರಿಯಾಗುತ್ತಿದ್ದಾಗ ಕ್ಲೋಸ್ಡ್-ಸರ್ಕ್ಯೂಟ್ ಟೆಲಿವಿಷನ್ (ಸಿಸಿಟಿವಿ) ದೃಶ್ಯಗಳಲ್ಲಿ ಸೆರೆಹಿಡಿಯಲಾಗಿದೆ. ಸಿಸಿಟಿವಿ ದೃಶ್ಯಾವಳಿಗಳನ್ನು ಪಡೆದುಕೊಂಡಿರುವ ಅಂಬೋಲಿ ಪೊಲೀಸರು, ಕದ್ದ ಲಾಕರ್‌ನೊಂದಿಗೆ ಪರಾರಿಯಾದ ಕಳ್ಳರ ಸ್ಪಷ್ಟ ಚಿತ್ರಗಳನ್ನು ಪಡೆಯಲು ಅದನ್ನು ವಿಶ್ಲೇಷಣೆ ಮಾಡುತ್ತಿದ್ದಾರೆ. ನಟ ಅನುಪಮ್ ಖೇರ್ ಈ ಕುರಿತಾಗಿ ಟ್ವೀಟ್‌ ಮಾಡಿದ್ದಾರೆ. "ಕಳೆದ ರಾತ್ರಿ ನನ್ನ ವೀರ ದೇಸಾಯಿ ರಸ್ತೆಯ ಕಚೇರಿಯಲ್ಲಿ ಇಬ್ಬರು ಕಳ್ಳರು ನನ್ನ ಕಚೇರಿಯ ಎರಡು ಬಾಗಿಲುಗಳನ್ನು ಮುರಿದಿದ್ದಾರೆ. ಮತ್ತು ಅಕೌಂಟ್ಸ್ ಡಿಪಾರ್ಟ್‌ಮೆಂಟ್‌ನಿಂದ ಸಂಪೂರ್ಣ ಸೇಫ್ (ಬಹುಶಃ ಮುರಿಯಲು ಸಾಧ್ಯವಿಲ್ಲ) ಮತ್ತು ನಮ್ಮ ಕಂಪನಿ ನಿರ್ಮಿಸಿದ ಚಿತ್ರದ ನೆಗೆಟಿವ್ ಅನ್ನು ಕದ್ದಿದ್ದಾರೆ. ನಮ್ಮ ಕಛೇರಿಯಿಂದ ಎಫ್‌ಐಆರ್ ಮಾಡಲಾಗಿದೆ. ಶೀಘ್ರದಲ್ಲಿಯೇ ಕಳ್ಳರನ್ನು ಹಿಡಿಯುವ ಭರವಸೆಯನ್ನು ಪೊಲೀಸರು ನೀಡಿದ್ದಾರೆ. ಅಟೋದಲ್ಲಿ ಕದ್ದಿರುವ ವಸ್ತುಗಳನ್ನು ತೆಗೆದುಕೊಂಡು ಹೋಗುತ್ತಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಅವರಿಗೆ ದೇವರು ಬುದ್ಧಿ ನೀಡಲಿ. ಪೊಲೀಸರು ಬರುವ ಮುನ್ನ ನನ್ನ ಕಚೇರಿಯ ಅಧಿಕಾರಿಗಳು ಈ ವಿಡಿಯೋ ಮಾಡಿದ್ದಾರೆ ಎಂದು ಅವರು ಪೋಸ್ಟ್‌ ಮಾಡಿದ್ದಾರೆ.

click me!