
ಅಮೃತಧಾರೆ ಸೀರಿಯಲ್ನಲ್ಲಿ ಸದ್ಯ ಮಲ್ಲಿಯ ಲೈಫ್ನಲ್ಲಿ ಬಿರುಗಾಳಿ ಎದ್ದಿದೆ. ಪತಿ ಜೈದೇವ್ ಬೇರೊಬ್ಬ ಹುಡುಗಿಯ ಜೊತೆ ಮದುವೆಯಾಗಿದ್ದಾನೆ. ಇಷ್ಟು ದಿನ ತಾನು ಬಡವಳು ಎಂದುಕೊಂಡಿದ್ದ ಮಲ್ಲಿ ಇದೀಗ ಸಹಸ್ರಾರು ಕೋಟಿ ರೂಪಾಯಿಗಳ ಒಡತಿ ಆಗಿದ್ದಾಳೆ. ಕೋಟ್ಯಧೀಶ್ವರ ರಾಜೇಂದ್ರ ಭೂಪತಿ ಮಗಳು ಎನ್ನುವ ವಿಷಯ ತಿಳಿಯುತ್ತಲೇ ಅಪ್ಪನನ್ನೂ ಕಳೆದುಕೊಂಡಿದ್ದಾಳೆ. ಒಟ್ಟಿನಲ್ಲಿ ಆಕೆಯ ಜೀವನ ಗೋಜಲು ಗೋಜಲಾಗಿದೆ. ಇಂತಿಪ್ಪ ಮಲ್ಲಿ ಇದೀಗ ಏಕಾಏಕಿ ಕೋಪಗೊಂಡಿರುವ ವಿಡಿಯೋ ವೈರಲ್ ಆಗ್ತಿದೆ. ಇದನ್ನು ನೋಡಿ ಇಷ್ಟು ಸಿಟ್ಟು ಯಾಕೆ ಬಂದಿದೆ ಎಂದು ಅಭಿಮಾನಿಗಳು ಶಾಕ್ ಆಗಿದ್ದಾರೆ.
ಅಷ್ಟಕ್ಕೂ ನಟಿ ಇಲ್ಲಿ ರಾಮ ಶಾಮ ಭಾಮ ಸಿನಿಮಾದ ಪಾತ್ರವನ್ನು ರಿಕ್ರಿಯೇಟ್ ಮಾಡಿದ್ದಾರೆ. ಇದೊಂದು ಸಕತ್ ಕಾಮಿಡಿ ಚಿತ್ರವಾಗಿದ್ದು ರಮೇಶ್ ಅರವಿಂದ್, ಕಮಲ ಹಾಸನ್ ಮತ್ತು ಊರ್ವಶಿ ನಟಿಸಿದ್ದಾರೆ. ಚಿತ್ರದಲ್ಲಿ ಊರ್ವಶಿಯ ರೋಲ್ ಅನ್ನು ಇಲ್ಲಿ ನಟಿ ಅನ್ವಿತಾ ಮಾಡಿದ್ದು, ಕಮೆಂಟ್ಗಳಲ್ಲಿ ಜೋಕ್ಸ್ಗಳ ಸುರಿಮಳೆಯೇ ತುಂಬಿದೆ. ಸಕತ್ ಆ್ಯಕ್ಟಿಂಗ್ ಎಂದು ಹಲವರು ಹೇಳುತ್ತಿದ್ದರೆ, ಅಯ್ಯಯ್ಯೋ ಮಲ್ಲಿಗೆ ಇದೇನಾಗೋಯ್ತು ಎಂದು ಮತ್ತೆ ಕೆಲವರು ನಟಿಯ ಕಾಲೆಳೆಯುತ್ತಿದ್ದಾರೆ.
ಇನ್ನು ನಟಿ ಅನ್ವಿತಾ ಸಾಗರ್ ಕುರಿತು ಹೇಳುವುದಾದರೆ, ಇವರು ಕನ್ನಡ ಸಿನಿಮಾ ಮತ್ತು ಧಾರಾವಾಹಿ ಕ್ಷೇತ್ರದಲ್ಲಿ ಕಳೆದೊಂದು ದಶಕದಿಂದ ಸಕ್ರಿಯರಾಗಿದ್ದದಾರೆ. ಈ ಹಿಂದೆ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಜನಪ್ರಿಯ ಧಾರಾವಾಹಿ ಗಟ್ಟಿಮೇಳದಲ್ಲಿ ಆದ್ಯಾ ಪಾತ್ರದಲ್ಲಿ ನಟಿಸಿದ್ದರು. ಇದಾದ ಬಳಿಕ ಉದಯ ಟಿವಿಯ ಅಣ್ಣ ತಂಗಿ ಸೀರಿಯಲ್ನಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ಅದು 1 ಸಾವಿರ ಸಂಚಿಕೆಗಳನ್ನು ಆಗಲೇ ಪೂರೈಸಿದೆ. ಇದೀಗ ಮತ್ತೆ ಅನ್ವಿತಾ ಸಾಗರ್ ಅಮೃತಧಾರೆ ಸೀರಿಯಲ್ ಮೂಲಕ ಕಮ್ ಬ್ಯಾಕ್ ಮಾಡಿದ್ದಾರೆ. ಮಲ್ಲಿ ಪಾತ್ರಧಾರಿಯಾಗಿದ್ದ ರಾಧಾ ಭಗವತಿ ಅವರು ಭಾರ್ಗವಿ ಎಲ್ಎಲ್ಬಿ ಸೀರಿಯಲ್ಗಾಗಿ ಈ ಪಾತ್ರ ತೊರೆದ ಬಳಿಕ, ಈಗ ಆ ಪಾತ್ರದಲ್ಲಿ ಅನ್ವಿತಾ ನಟಿಸುತ್ತಿದ್ದಾರೆ.
ಸೀರಿಯಲ್ನಲ್ಲಿ, ಅವಕಾಶ ಇದ್ದರೂ ಸಿನಿಮಾಕ್ಕೆ ಬರಲು ಕಾರಣವನ್ನೂ ತಿಳಿಸಿರುವ ಅವರು, ಧಾರಾವಾಹಿಗೆ ಅಂಟಿಕೊಂಡಿರುವುದು ಬೇಡ ಎಂದುಕೊಂಡೆ. ಸಿನಿಮಾಕ್ಕೆ ಬರಬೇಕು ಎನ್ನುವ ಹಂಬಲ ಇತ್ತು. ಇದೀಗ ಬಣ್ಣದ ಲೋಕಕ್ಕೆ ಬಂದು 10 ವರ್ಷನೇ ಆಗಿದೆ. ಸೀರಿಯಲ್ನಲ್ಲಿಯೂ ಸಾಕಷ್ಟು ಡಿಮಾಂಡ್ ಇದ್ದರೂ, ಸಿನಿಮಾ ನನ್ನ ಮೊದಲ ಪ್ರೀತಿ. ಐತಿಹಾಸಿಕ, ಪೌರಾಣಿಕ ಪಾತ್ರ ಮಾಡುವ ಆಸೆ ಕೂಡ ಇದೆ ಎಂದಿದ್ದಾರೆ ಅನ್ವಿತಾ. ಅಂದಹಾಗೆ ಈ ಚಿತ್ರಕ್ಕಾಗಿ ಅವರು ಪಾರ್ವತಿ ಎನ್ನುವ ಹೆಸರು ಇಟ್ಟುಕೊಂಡಿದ್ದಾರೆ. ತಮ್ಮ ಅಜ್ಜ ಈ ಹೆಸರು ಇಟ್ಟಿರುವುದಾಗಿ ಅನ್ವಿತಾ ಹೇಳಿದ್ದಾರೆ. ಆದ್ದರಿಂದ ಚಿತ್ರದಲ್ಲಿ ಪಾರ್ವತಿ ಎಂದೇ ಹೆಸರು ಇದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.