
ಶ್ರೀರಸ್ತು ಶುಭಮಸ್ತು ಸೀರಿಯಲ್ ಈಗ ಕುತೂಹಲದ ಘಟ್ಟ ತಲುಪಿದೆ. ಮನೆಯ ಒಳಿತಿಗಾಗಿ ಏನು ಬೇಕಾದರೂ ಮಾಡಲು ಸಿದ್ಧವಿರುವ ತುಳಸಿ ಹಾಗೂ ಎಲ್ಲರನ್ನೂ ಸರ್ವನಾಶ ಮಾಡಲು ಏನು ಬೇಕಾದರೂ ಮಾಡಲು ಪಣ ತೊಟ್ಟಿರುವ ಶಾರ್ವರಿ... ಈ ಇಬ್ಬರು ಸೊಸೆಯಂದಿರ ನಡುವಿನ ಕಥೆಯ ಹಂತಕ್ಕೆ ಬಂದು ತಲುಪಿದೆ. ಕುಟುಂಬ, ಪತಿ, ಮಕ್ಕಳು ಎಂದು ಬಂದರೆ ಯಾವುದಕ್ಕೂ ಜಗ್ಗದೇ, ಕುಗ್ಗದೇ ಮುನ್ನುಗ್ಗುವವಳು ತುಳಸಿ. ಆದರೆ ಏನೇ ಆದರೂ ಸೈ. ಗಂಡನ ಇಡೀ ಕುಟುಂಬವನ್ನೇ ನಾಶ ಮಾಡಿ ನೆಮ್ಮದಿಯ ಉಸಿರು ಬಿಡುವ ತವಕದಲ್ಲಿದ್ದಾಳೆ ಶಾರ್ವರಿ. ಇದೀಗ ಪೊಲೀಸರ ಕೈಗೂ ಸಿಗದೇ ತಪ್ಪಿಸಿಕೊಂಡಿದ್ದಾಳೆ ಶಾರ್ವರಿ. ಇನ್ನೇನು ಸೀರಿಯಲ್ ಮುಗಿದೇ ಹೋಯ್ತು ಎನ್ನುವಾಗಲೇ ರಾಧಾಳ ಪ್ರವೇಶವೂ ಆಗಿದೆ. ಸೀರಿಯಲ್ ಇನ್ನೊಂದಿಷ್ಟು ದಿನ, ತಿಂಗಳು, ವರ್ಷ ಮುಂದಕ್ಕೆ ಹೋದರೂ ಅಚ್ಚರಿಯೇನಿಲ್ಲ.
ಇದು ಸೀರಿಯಲ್ ಕಥೆಯಾದ್ರೆ, ಇನ್ನು ಎಲ್ಲರ ಗಮನ ಸೆಳೆತೀರೋದು ತುಳಸಿಯ ಪುತ್ರಿ ಮೀರಾ. ಪುಟಾಣಿ ಕಂದ ಇದಾಗಲೇ ಸೀರಿಯಲ್ ವೀಕ್ಷಕರ ಮನಸ್ಸನ್ನು ಗೆದ್ದಿದೆ. ಈ ಮಗು ಯಾರದ್ದು ಎಂದು ತಿಳಿಯುವ ಕುತೂಹಲ ಹಲವರದ್ದು ಇದೆ. ಆದರೂ ಸದ್ಯ ಸೀರಿಯಲ್ ಮಟ್ಟಿಗೆ ಅದು ತುಳಸಿಯ ಮಗು, ಈಗ ಅದು ಪೂರ್ಣಿ ಮತ್ತು ಅಭಿಯ ಪುತ್ರಿ ಅಷ್ಟೇ. ದೀಪಿಕಾ ಅರ್ಥಾತ್ ದರ್ಶಿನಿ ಡೆಲ್ಟಾ ಅವರು ಮಗು ಸ್ಕ್ರಿಪ್ಟ್ ಹಿಡಿದುಕೊಂಡು ಓದುತ್ತಿರುವ ವಿಡಿಯೋ ಒಂದನ್ನು ಅಪ್ಲೋಡ್ ಮಾಡಿದ್ದಾರೆ. ಇದರಲ್ಲಿ ಪೂರ್ಣಿ ಅರ್ಥಾತ್ ಲಾವಣ್ಯ ಭಾರಧ್ವಾಜ್ ಅವರೂ ಈ ವಿಡಿಯೋದಲ್ಲಿ ಇದ್ದು, ಅವರು ಮಗುವಿನ ಜೊತೆ ಮಾತನಾಡುತ್ತಿರುವುದನ್ನು ನೋಡಬಹುದು. ಡೈಲಾಗ್ ಹೇಳಲು ಮಗಳು ರೆಡಿ ಆಗ್ತಾ ಇದ್ದಾಳೆ ಎಂದು ನಟಿಯರು ಇದರಲ್ಲಿ ಹೇಳಿದ್ದಾರೆ.
ಇನ್ನು ಇನ್ನು ದರ್ಶಿನಿ ಕುರಿತು ಹೇಳುವುದಾದರೆ, ಅಪ್ಪನ ಕನಸಿನಂತೆ ಡ್ಯಾನ್ಸರ್ (dancer) ಆಗಿ ಕರಿಯರ್ ಆರಂಭಿಸಿದ ದರ್ಶಿನಿ, ಮೊದಲಿಗೆ ತಮಿಳು ಮತ್ತು ತೆಲುಗು ರಿಯಾಲಿಟಿ ಶೋಗಳಲ್ಲಿ ಬಾಲ್ಯದಲ್ಲಿಯೇ ಭಾಗವಹಿಸಿದ್ದರು. ಕನ್ನಡದಲ್ಲಿ ನಟಿಯಾಗೋ ಮುನ್ನವೇ ಅವರು ತೆಲುಗು, ತಮಿಳು ಇಂಡಸ್ಟ್ರಿಯಲ್ಲಿ ಗುರುತಿಸಿಕೊಂಡರು. ಇದೀಗ ಕನ್ನಡ, ತೆಲುಗಿನ ಸೂಪರ್ ಸ್ಟಾರ್ ನಾಯಕರಿಗೆ ಅಂದರೆ ಪುನೀತ್ ರಾಜ್ ಕುಮಾರ್, ಯಶ್, ಸುದೀಪ್, ಶರಣ್, ಅಲ್ಲು ಅರ್ಜುನ್, ವಿಜಯ್ ದೇವರಕೊಂಡ, ನಾನಿಯಂತಹ ಮಹಾನ್ ನಟರಿಗೆ ಕೊರಿಯೋಗ್ರಫಿ ಮಾಡಿದ್ದಾರೆ. ತಮಿಳಿನಲ್ಲಿ ಜಾನಿ ಮಾಸ್ಟರ್ (Jani Master) ಅವರಿಗೆ ಅಸಿಸ್ಟಂಟ್ ಆಗಿ ಪ್ರಭುದೇವ (Prabhudeva) ಅವರಿಗೆ ಕೊರಿಯೋಗ್ರಫಿ ಮಾಡಿದ ದರ್ಶಿನಿ ಡೆಲ್ಟಾ ನಾಗರಾಜ್, ಸದ್ಯ ಕನ್ನಡದ ಮೊದಲ ಡ್ಯಾನ್ಸ್ ಕೊರಿಯೋಗ್ರಫರ್ ಆಗಿ ಮೊದಲ ಹೆಜ್ಜೆ ಇಟ್ಟಿದ್ದಾರೆ.
ಲಾವಣ್ಯ ಕುರಿತು ಹೇಳುವುದಾದರೆ, ಇವರ ರಿಯಲ್ ಪತಿಯ ಹೆಸರು ಶಶಿ. ಶಶಿ ಹಾಗೂ ಲಾವಣ್ಯ ಅವರದ್ದು ಲವ್ ಕಮ್ ಅರೇಂಜ್ಡ್ ಮ್ಯಾರೇಜ್. ಶಶಿ ಅವರು ಅಮೃತಧಾರೆ ಸೀರಿಯಲ್ನಲ್ಲಿ ಭೂಮಿಕಾ ಸಹೋದರನ ಪಾತ್ರ ಮಾಡುತ್ತಿದ್ದು ಇದೀಗ ಹೊರ ಬಂದಿದ್ದಾರೆ. ರಿಯಾಲಿಟಿ ಷೋ ಒಂದರಲ್ಲಿ ಲಾವಣ್ಯ ಅವರ ಹುಟ್ಟಿನ ಬಗ್ಗೆ ಅಪ್ಪ ಹೇಳಿಕೊಂಡಿದ್ದರು. ಪತ್ನಿ ಗರ್ಭಿಣಿಯಾಗಿದ್ದಾಗ ಅಂದರೆ ಲಾವಣ್ಯ ಹೊಟ್ಟೆಯಲ್ಲಿ ಇದ್ದಾಗ ಆಗಿನ ಸ್ಥಿತಿಯಲ್ಲಿ ಮಗು ಹುಟ್ಟುವುದು ಬೇಡವಾಗಿತ್ತು. ಅದಕ್ಕಾಗಿ ಪರಂಗಿ ಕಾಯಿ ತಿನ್ನಬೇಕೆಂದು ಆರೇಳು ಕಿಲೋಮೀಟರ್ ಪರಂಗಿ ಕಾಯಿ ಹುಡುಕಿ ಹೊರಟಿದ್ದು, ಕೊನೆಗೆ ಅದು ಸಿಗದೇ ಇದ್ದುದ ಬಗ್ಗೆ ತಿಳಿಸಿದ್ದರು!
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.