ನಟ ವಿಜಯ್ ದೇವರಕೊಂಡ ತಮ್ಮ ಮುಂದಿನ ಚಿತ್ರ ಫ್ಯಾಮಿಲಿ ಸ್ಟಾರ್ ಸಿನಿಮಾದ ಟ್ರೇಲರ್ ಬಿಡುಗಡೆಯ ಖುಷಿಯಲ್ಲಿದ್ದಾರೆ. ಈ ಸಿನಿಮಾ ಏಪ್ರಿಲ್ 6 ರಂದು ಬಿಡುಗಡೆಗೆ ಸಿದ್ಧವಾಗಿದೆ.
ರಶ್ಮಿಕಾ ಮಂದಣ್ಣ ಅವರ ಬಾಯ್‌ಫ್ರೆಂಡ್ ಎಂದೇ ಹೇಳಲಾಗುತ್ತಿರುವ ನಟ ವಿಜಯ್ ದೇವರಕೊಂಡ ತಮ್ಮ ಮುಂದಿನ ಸಿನಿಮಾ ಫ್ಯಾಮಿಲಿ ಸ್ಟಾರ್‌ನ ಬಿಡುಗಡೆಯ ಖುಷಿಯಲ್ಲಿದ್ದಾರೆ. ಇತ್ತೀಚೆಗೆ ಸಿನಿಮಾದ ಟ್ರೇಲರ್ ಕೂಡ ಬಿಡುಗಡೆಯಾಗಿದ್ದು, ವ್ಯಾಪಕ ಪ್ರತಿಕ್ರಿಯೆ ವ್ಯಕ್ತವಾಗಿದೆ. ವಿಜಯ್ ದೇವರಕೊಂಡ ಅವರೊಂದಿಗೆ ಈ ಸಿನಿಮಾದಲ್ಲಿ ಮೃಣಾಲ್ ಠಾಕೂರ್ ಜೋಡಿಯಾಗಿ ನಟಿಸಿದ್ದಾರೆ. ಪರಶುರಾಮ್ ನಿರ್ದೇಶನದ ಈ ಸಿನಿಮಾ ಏಪ್ರಿಲ್ 6 ರಂದು ತೆರೆಗೆ ಬರಲಿದೆ. ಮಾರ್ಚ್ 28 ರಂದು ಸಿನಿಮಾದ ಟ್ರೇಲರ್ ಬಿಡುಗಡೆಯಾಗಿದ್ದು, ಇದರ ಬೆನ್ನಲ್ಲಿಯೇ ವಿಜಯ್ ದೇವರಕೊಂಡ ಚಿತ್ರದ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿದ್ದಾರೆ. ಈ ನಡುವೆ ಸನ್ ಟಿವಿಯ ನಿರೂಪಕಿ ಅಕ್ಷತಾ ದಾಸ್ ಬಗ್ಗೆ ವಿಜಯ್ ದೇವರಕೊಂಡ ಹೇಳಿರುವ ಮಾತು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಸಂದರ್ಶನದಲ್ಲಿ ಭಾಗಿಯಾಗಿದ್ದ ವಿಜಯ್ ದೇವರಕೊಂಡ ಅವರಿಗೆ ನಿರೂಪಕಿ ಅಕ್ಷತಾ ದಾಸ್ ಕೆಲ ಪ್ರಶ್ನೆಗಳನ್ನು ಕೇಳುತ್ತಾರೆ. ಹೆಡ್‌ಫೋನ್ ಹಾಕಿಕೊಂಡಿರುವ ವಿಜಯ್ ದೇವರಕೊಂಡ ಇದಕ್ಕೆ ಉತ್ತರ ನೀಡಬೇಕಿರುತ್ತದೆ. ಅದರಂತೆ ಅಕ್ಷತಾ ದಾಸ್ ಪ್ರಶ್ನೆ ಕೇಳಿದಾಗ ಮೊದಲಿಗೆ ಉತ್ತರ ನೀಡಲು ವಿಜಯ್ ದೇವರಕೊಂಡ ವಿಫಲರಾಗಿದ್ದಾರೆ. ಈ ವೇಳೆ ಸರಿ ಮತ್ತೊಮ್ಮೆ ಪ್ರಯತ್ನ ಮಾಡೋಣ ಎನ್ನುತ್ತಾರೆ. ಅದಕ್ಕೆ ಅಕ್ಷತಾ ದಾಸ್ ಉಚ್ಛಾರ ಮಾಡದೇ ಏನೋ ಹೇಳುತ್ತಾರೆ. ಈ ಬಾರಿಯೂ ವಿಜಯ್ ದೇವರಕೊಂಡಗೆ ಆಕೆ ಹೇಳಿದ್ದು ಏನು ಅನ್ನೋದು ಅರ್ಥವಾಗದೇ ಅತ್ತ ಇತ್ತ ನೋಡುತ್ತಾರೆ.
ಈ ವೇಳೆ ಮಾತನಾಡುವ ಅಕ್ಷತಾ ದಾಸ್, ನೀವು ಹಾಗೆಲ್ಲ ಬೇರೆ ಕಡೆ ನೋಡೋ ಹಾಗಿಲ್ಲ. ಅವರು ಯಾರೂ ನಿಮಗೆ ಸಹಾಯ ಮಾಡೋದಿಲ್ಲ ಎನ್ನುತ್ತಾರೆ. ಆಗ ತಕ್ಷಣವೇ ವಿಜಯ್ ದೇವರಕೊಂಡ ಎದುರಲ್ಲಿದ್ದ ಇನ್ನೊಬ್ಬ ವ್ಯಕ್ತಿಯನ್ನು ಉದ್ದೇಶಿಸಿ ಅದೇ ಮಾತನ್ನು ನೀವು ಹೇಳಿ ಎನ್ನುತ್ತಾರೆ. ಆಕೆಯ ತುಟಿಗಳು ನನಗೆ Distract ಮಾಡ್ತಿದೆ ಎಂದು ಹೇಳುತ್ತಾರೆ. ಸೋಶಿಯಲ್ ಮೀಡಿಯಾದಲ್ಲಿ ಈ ಕ್ಲಿಪ್‌ಅನ್ನು ಕಟ್ ಮಾಡಿ ಪೋಸ್ಟ್ ಮಾಡಿರುವ ವ್ಯಕ್ತಿ ಕೂಡ ನಿಜಕ್ಕೂ ಆಕೆಯ ತುಟಿಗಳು Distract ಮಾಡುತ್ತಿದೆ ಎಂದು ಪೋಸ್ಟ್ ಮಾಡಿದ್ದಾರೆ.
Her lips are actually distracting 🤣🤣 pic.twitter.com/n4bwOgDGQr
— Rohit Reddy (@FanDeverakonda)ವೇದಿಕೆ ಮೇಲೆ ವಿಜಯ್ ದೇವರಕೊಂಡನ್ನು ತಬ್ಬಿ ಕಿಸ್ ಮಾಡಿದ ಶಾಹಿದ್ ಕಪೂರ್: ವಿಡಿಯೋ ವೈರಲ್
ಇನ್ನು ಈ ಪೋಸ್ಟ್‌ಗೆ ಸಾಕಷ್ಟು ಮಂದಿ ಕಾಮೆಂಟ್ ಕೂಡ ಮಾಡಿದ್ದಾರೆ. ಶುಕ್ರವಾರ ರಾತ್ರಿ ಪೋಸ್ಟ್ ಮಾಡಿದ ಈ ವಿಡಿಯೋಗೆ ಈಗಾಗಲೇ 3 ಲಕ್ಷಕ್ಕೂ ಅಧಿಕ ವೀವ್ಸ್‌ಗಳು ಬಂದಿದ್ದು, 3 ಸಾವಿರ ಮಂದಿ ಲೈಕ್ಸ್ ಒತ್ತಿದ್ದಾರೆ. ಕಾಮೆಂಟ್ ಮಾಡಿದ ಹೆಚ್ಚಿನ ಮಂದಿ ಈ ವಿಡಿಯೋ ನೋಡಿ ರಶ್ಮಿಕಾ ಮಂದಣ್ಣ, ವಿಜಯ್ ದೇವರಕೊಂಡಗೆ ಏನನ್ನಬಹುದು ಎಂದೇ ತಮಾಷೆಯಾಗಿ ಪೋಸ್ಟ್ ಮಾಡಿದ್ದಾರೆ.
ನೀವು ಸ್ಕೂಲ್ ಗರ್ಲ್ ಅಲ್ಲ, ದೊಡ್ಡವರಾಗಿದ್ದೀರಿ; ಸಮಂತಾಗೆ ಯಾಕೆ ಹೀಗಂದ್ರು ಸದ್ಗುರು ಜಗ್ಗಿ ವಾಸುದೇವ್!