ಸೋನಾಕ್ಷಿ ಸಿನ್ಹಾ ಹಾಗೂ ಜಹೀರ್ ಇಕ್ಬಾಲ್ ಜೂನ್‌ನಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಇದರ ನಡುವೆ ಸೋನಾಕ್ಷಿ ಸಿನ್ಹಾ ತಂದೆ ಶತ್ರುಘ್ನ ಸಿನ್ಹಾ ತಮ್ಮ ಮಗಳು ಮುಸ್ಲಿಂ ವ್ಯಕ್ತಿಯನ್ನು ಮುದುವೆಯಾಗುವುದರ ಬಗ್ಗೆ ಬೇಸರ ಹೊಂದಿದ್ದರು ಎಂದು ವರದಿಯಾಗಿತ್ತು.
ಜೂನ್‌ನಲ್ಲಿ ಬಾಲಿವುಡ್ ನಟಿ ಸೋನಾಕ್ಷಿ ಸಿನ್ಹಾ ಹಾಗೂ ಜಹೀರ್ ಇಕ್ಬಾಲ್ ಮದುವೆಯಾಗುವ ಮುನ್ನ, ಹಿರಿಯ ನಟ ಶತ್ರುಘ್ನ ಸಿನ್ಹಾ ಮಗಳ ಮದುವೆಯ ಬಗ್ಗೆ ಅಪಸ್ವರ ಹೊಂದಿದ್ದರು ಎಂದು ವರದಿಯಾಗಿತ್ತು. ಮಗಳು ಮುಸ್ಲಿಂ ವ್ಯಕ್ತಿಯನ್ನು ಮದುವೆಯಾಗುವುದು ಇಷ್ಟವಿಲ್ಲ ಎಂದು ಶತ್ರುಘ್ನ ಸಿನ್ಹಾ ಹೇಳಿದ್ದಾರೆ, ಅಪ್ಪನ ಮಾತನ್ನೂ ಧಿಕ್ಕರಿಸಿ ಸೋನಾಕ್ಷಿ ಸಿನ್ಹಾ ವಿವಾಹವಾಗುತ್ತಿದ್ದಾರೆ ಎಂದು ಸುದ್ದಿಯಾಗಿತ್ತು. ಇದರ ನಡುವೆ ಶತ್ರುಘ್ನ ಸಿನ್ಹಾ ಸಹೋದರ ಲವ್ ಸಿನ್ಹಾ ಕೂಡ ಮದುವೆಗೆ ಹಾಜರಾಗದೇ ಇದ್ದಿದ್ದು ಈ ಊಹಾಪೋಹಗಳಿಗೆ ಇನ್ನಷ್ಟು ರೆಕ್ಕೆಪುಕ್ಕ ಬಂದಂತಾಗಿತ್ತು. ಆದರೆ, ಸೋನಾಕ್ಷಿ ಸಿನ್ಹಾ ಮದುವೆಯ ಕುರಿತಾಗಿ ತಂದೆಯ ಜೊತೆ ಮೊದಲ ಬಾರಿ ಮಾತನಾಡಿದ ಸಮಯವನ್ನು ಇತ್ತೀಚೆಗೆ ಬಹಿರಂಗಪಡಿಸಿದ್ದಾರೆ. ಮದುವೆಯ ಕುರಿತಾಗಿ ಸ್ಪಷ್ಟ ನಿರ್ಧಾರ ಮಾಡುವ ಮುನ್ನ ತಂದೆಯಿಂದ ಸಂಪೂರ್ಣ ಒಪ್ಪಿಗೆ ಸಿಕ್ಕಿತ್ತು ಎಂದೂ ಅವರು ಹೇಳಿದ್ದಾರೆ. ಆ ಮೂಲಕ ಮದುವೆ ವಿಚಾರದಲ್ಲಿ ಶತ್ರುಘ್ನ ಸಿನ್ಹಾ ಬೇಸರ ಹೊಂದಿದ್ದರು ಎನ್ನುವ ಮಾತನ್ನು ಸಾರಾಸಗಟಾಗಿ ತಳ್ಳಿ ಹಾಕಿದ್ದಾರೆ.
ಗಲ್ಲಾಟ ಪ್ಲಸ್‌ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಸೋನಾಕ್ಷಿ ಸಿನ್ಹಾ, ಜಹೀರ್ ಇಕ್ಬಾಲ್‌ರನ್ನು ಮದುವೆಯಾಗುವ ವಿಚಾರವನ್ನು ತಂದೆಗೆ ಹೇಳುವಾಗ ಭಯವಾಗಿದ್ದು ಹೌದು ಎಂದಿದ್ದಾರೆ. ನನ್ನ ಪರವಾಗಿ ತಂದೆಯ ಬಳಿ ಮಾತನಾಡುವುದಾಗಿ ಜಹೀರ್ ಕೂಡ ತಿಳಿಸಿದ್ದ. ಆದರೆ, ಕೊನೆಗೆ ತಂದೆಯೊಂದಿಗೆ ನಾನೇ ಮಾತನಾಡುವ ಧೈರ್ಯದ ನಿರ್ಧಾರ ಮಾಡಿದ್ದೆ' ಎಂದು ಸೋನಾಕ್ಷಿ ಹೇಳಿದ್ದಾರೆ.
ಆ ದಿನ ನಾನು ಅವರ ಬಳಿ ಹೋಗಿದ್ದೆ. ಅವರ ಪಕ್ಕದಲ್ಲಿಯೇ ಕುಳಿತುಕೊಂಡಿದ್ದೆ. ನನ್ನ ತಂದೆ ತಮಾಷೆಯಾಗಿ ಮಾತನಾಡೋದನ್ನ ಇಷ್ಟಪಡುತ್ತಾರೆ ಎಂದು ಗೊತ್ತಿತ್ತು. ಸಂಪೂರ್ಣ ವಿಶ್ವಾಸದಲ್ಲಿ ಕುಳಿತುಕೊಂಡು ನಾನು ತಂದೆಯ ಬಳಿ, 'ಮಗಳ ಮದುವೆ ಆಗಿಲ್ಲ ಎನ್ನುವ ಚಿಂತೆ ನಿಮಗೆ ಇಲ್ವಾ?' ಎಂದು ಪ್ರಶ್ನೆ ಮಾಡಿದೆ. ಇದಕ್ಕೆ ಅವರು, 'ಖಂಡಿತವಾಗಿಯೂ ಇದೆ. ನಾನೂ ಕೂಡ ನಿಮ್ಮ ಅಮ್ಮನೊಂದಿಗೆ ಈ ಬಗ್ಗೆ ಪ್ರಶ್ನೆ ಮಾಡ್ತಾ ಇರ್ತೇನೆ. ಯಾಕೆ ಏನಾಯ್ತು?' ಎಂದು ಕೇಳಿದರು. ಈ ಹಂತದಲ್ಲಿ ನಾನು ಮದುವೆಯಾಗುವ ನಿರ್ಧಾರ ಮಾಡಿದ್ದೇನೆ ಎಂದು ಹೇಳಿದ್ದೆ.
ಇದಕ್ಕೆ ತಕ್ಷಣವೇ ನನ್ನ ತಂದೆ, ಹಾಗಿದ್ದರೆ ನಿನಗೆ ಸೂಕ್ತವಾದ ಗಂಡು ಹುಡುಕುವ ಕೆಲಸ ಮಾಡುತ್ತೇನೆ ಎಂದು ಹೇಳಿದ್ದರು.ಅದಕ್ಕೆ ನಾನು, ಬೇಡ, ನಾನೀಗಲೇ ಹುಡುಕಿಕೊಂಡಿದ್ದೇನೆ ಎಂದು ಹೇಳಿದ್ದಾಗಿ ತಿಳಿಸಿದ್ದೆ ಎಂದಿದ್ದಾರೆ.
ಆ ಬಳಿಕ ನಾನು ಜಹೀರ್ ಕುರಿತಾಗಿ ತಂದೆಗೆ ತಿಳಿಸಿದೆ. ಸುಮಾರು ವರ್ಷಗಳಿಂದ ಒಟ್ಟಿಗೆ ಇದ್ದೇವೆ. ಉತ್ತಮ ಸ್ನೇಹಿತನಾಗಿರುವ ಕಾರಣ, ಆತನೊಂದಿಗೆ ನಾನು ಖುಷಿ ಖುಷಿಯಾಗಿ ಇರುತ್ತೇನೆ ಎಂದು ಹೇಳಿದೆ. ತಂದೆಯೊಂದಿಗೆ ಅತ್ಯಂತ ಖುಷಿಯಾಗಿ ಮಾತನಾಡಿದೆ. ನನ್ನ ತಲೆಯಲ್ಲಿ ಈ ವಿಚಾರವನ್ನು ಬಹಳ ಕ್ಲಿಷ್ಟ ಮಾಡಿಕೊಂಡಿದ್ದೆ. ಆದರೆ, ತಂದೆ ಬಹಳ ಸಲೀಸಾಗಿ ಮಾತನಾಡಿದರು. ಈ ಮಾತುಕತೆಯ ವೇಳೆ ನನ್ನ ತಂದೆ ಹೇಳಿದ ಬೆಸ್ಟ್ ಮಾತೆಂದರೆ, ನೀವಿಬ್ಬರೂ ವಯಸ್ಕರರು. ಪರಸ್ಪರ ಪ್ರೀತಿ ಮಾಡ್ತಾ ಇದ್ದೀರಿ. ನಿಮಗೆ ಒಕೆ ಆಗಿದ್ದರೆ, ಬೇರೆಯವರು ಏನು ಮಾತನಾಡಲು ಸಾಧ್ಯ ಎಂದು ಹೇಳಿದ್ದರು. ಮದುವೆಗೆ ಒಕೆ ಎಂದು ಹೇಳಿದ್ದರು. ನಮ್ಮ ಸಂಭಾಷಣೆ ಅಷ್ಟು ಕೂಲ್ ಆಗಿ ನಡೆದಿತ್ತು.
ಪತ್ನಿ ಸೌಂದರ್ಯ ನೋಡಿ ಮೂಡಿಗೆ ಬಂದ ಇಕ್ಬಾಲ್, ಶರ್ಟ್ ಬಿಚ್ಚಿ ಮುತ್ತಿಟ್ಟ ಸೋನಾಕ್ಷಿ ಸಿನ್ಹಾ ಪತಿ
ಸೋನಾಕ್ಷಿ ಸಿನ್ಹಾ ಹಾಗೂ ಜಹೀರ್ ಅಬ್ಬಾಸ್ ಜೂನ್ 23 ರಂದು ವಿವಾಹವಾಗಿದ್ದರು. ಕುಟುಂಬದ ಆಪ್ತರಷ್ಟೇ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಅದೇ ದಿನ ಆಯೋಜನೆ ಮಾಡಿದ್ದ ಆರತಕ್ಷತೆ ಕಾರ್ಯಕ್ರಮದಲ್ಲಿ ಸಿನಿಮಾ ರಂಗದ ಗಣ್ಯರು ಭಾಗವಹಿಸಿದ್ದರು.
ಜಹೀರ್ರನ್ನು ಮದ್ವೆಯಾಗ್ತಿದ್ದಂತೆಯೇ ಶತ್ರುಘ್ನ ಫ್ಯಾಮಿಲಿನಿಂದ ಸೋನಾಕ್ಷಿ ಔಟ್? ಒಂದು ಫೋಟೋ, ಹತ್ತಾರು ಪ್ರಶ್ನೆ!