ಕನ್ನಡ ಸೇರಿದಂತೆ ಐದು ಭಾಷೆಗಳಲ್ಲಿ ನಟಿಸಿ ಪಂಚಭಾಷಾ ತಾರೆ ಎನಿಸಿಕೊಂಡಿರುವ ನಟಿ ಪ್ರಣೀತಾ ಸುಭಾಷ್ ಅವರಿಗೆ ಫ್ಯಾನ್ಸ್ ಧಮಕಿ ಹಾಕುತ್ತಿದ್ದಾರಾ? ಮಗುವಾದ ಬಳಿಕ ಕೂಡ ಸಾಕಷ್ಟು ಗ್ಲಾಮರಸ್ ಆಗಿರುವ ಕಾರಣಕ್ಕೆ ಅವರಿಗೆ ಈಗಲೂ ಆಫರ್‌ಗಳು ಬರುತ್ತಿವೆ ಎನ್ನಲಾಗಿದೆ.
ಕನ್ನಡ ಸೇರಿದಂತೆ ಐದು ಭಾಷೆಗಳಲ್ಲಿ ನಟಿಸಿ ಪಂಚಭಾಷಾ ತಾರೆ ಎನಿಸಿಕೊಂಡಿರುವ ನಟಿ ಪ್ರಣೀತಾ ಸುಭಾಷ್ (Pranitha Subhash) ಅವರಿಗೆ ಫ್ಯಾನ್ಸ್ ಧಮಕಿ ಹಾಕುತ್ತಿದ್ದಾರಾ? ಯಾಕೆ, ಏನಾಯ್ತು ಅಂತ ಗಾಬರಿ ಆಗ್ಬೇಡಿ. ಫ್ಯಾನ್ಸ್ ಯಾವತ್ತೂ ಅವರದೇ ಆದ ರೀತಿಯಲ್ಲಿ ಯೋಚಿಸಿ ಕಾರ್ಯ ಪ್ರವೃತ್ತರಾಗುತ್ತಾರೆ. ಇಲ್ಲೂ ಆಗಿರೋದು ಅದೇ. ನಟಿ ಪ್ರಣೀತಾ ಅವರು ತಮ್ಮ ಖುಷಿಗಾಗಿ ಏನೋ ಮಾಡಿದ್ದಾರೆ. ಅದಕ್ಕೆ ಅವರ ಫ್ಯಾನ್ಸ್ ಹುಸಿ ಕೋಪ ತೋರಿಸಿದ್ದಾರೆ.
ಹೌದು, ಆಗಿದ್ದಿಷ್ಟು. ಪ್ರಣೀತಾ ಸುಭಾಷ್ ಅವರು ಹಾಟ್ ಬಬಲ್ ಬಾತ್ ಮಾಡಲು ಸೋಪ್ ನೊರೆ ಸಹಿತ ಬಾತ್ ಟಬ್‌ನಲ್ಲಿ ಮುಳುಗಿದ್ದಾರೆ. ಅದನ್ನು ನೋಡಿ ಅವರ ಫ್ಯಾನ್ಸ್ ಕಂಗಾಲಾಗಿದ್ದಾರೆ. ಕಾರಣಗಳೇನೂ ಹತ್ತು ಹಲವು ಇರಲಿಕ್ಕಿಲ್ಲ, ಆದರೆ ಮುಖ್ಯವಾಗಿ ಅವರು ಮುಳುಗಿರುವುದು ಹಾಟ್ ವಾಟರ್ ಬತ್ ಟಬ್‌ನಲ್ಲಿ, ಜೊತೆಗೆ ಸೋಪ್ ನೊರೆ ಬೇರೆ. ನಟಿ ಪ್ರಣೀತಾ ಅವರ ಮಲ್ಲಿಗೆಯಂಥ ಕೋಮಲ ತ್ವಚೆಗೆ ಸಮಸ್ಯೆ ಆಗಬಹುದು ಎಂಬ ಕಾಳಜಿ ಒಂದು ಕಡೆ. ಬಾಲಿವುಡ್ ನಟಿ ಶ್ರೀದೇವಿ ಅವರಂತೆ ಬಾತ್ ಟಬ್ ಒಳಗೆ ಏನಾದ್ರೂ ಎಡವಟ್ಟು ಆಗ್ಬಿಟ್ರೆ ಎಂಬ ಚಿಂತೆ ಇನ್ನೊಂದು ಕಡೆ.
ದೊಡ್ಮನೆಯಲ್ಲಿ ದಾಂಪತ್ಯ ಕಲಹ, ನಟ ಯುವರಾಜ್ - ಶ್ರೀದೇವಿ ಬದುಕಲ್ಲಿ ಬಿರುಕು, ವಿಚ್ಚೇದನಕ್ಕೆ ಅರ್ಜಿ!
ನಟಿ ಪ್ರಣೀತಾ ಅವರು ಬಾಲಿವುಡ್ ಚಿತ್ರರಂಗದಲ್ಲಿ ಕೂಡ ಸಕ್ರಿಯರಾಗಿದ್ದವರು. ಕನ್ನಡದಲ್ಲಿ ಸ್ನೇಹಿತರು ಸೇರಿದಂತೆ ಕೆಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ತೆಲುಗು, ತಮಿಳು ಚಿತ್ರರಂಗದಲ್ಲಿ ಸಹ ಹಲವು ಸ್ಟಾರ್ ನಟರೊಂದಿಗೆ ನಟಿಸಿದ್ದಾರೆ. ಕಳೆದ ಎರಡು ವರ್ಷದ ಹಿಂದೆ ಮದುವೆಯಾಗಿರುವ ಪ್ರಣೀತಾ ಈಗ ಮುದ್ದು ಮಗುವಿನ ತಾಯಿ. ಮಗುವಿನ ಪಾಲನೆ ಜೊತೆಗೆ ತಮ್ಮ ಫಿಗರ್ ಕೂಡ ಮೆಂರ್ಟನ್ ಮಾಡಿಕೊಂಡು ಮೊದಲಿನಂತೆ ಕಳೆಕಳೆಯಾಗಿರುವನಟಿ ಪ್ರಣೀತಾ ನೋಡಿ ಎಲ್ಲರೂ ಅಚ್ಚರಿಯಿಂದ ಪ್ರಶಂಸೆ ವ್ಯಕ್ತಪಡಿಸುತ್ತಿದ್ದಾರೆ.
ಧಿಡೀರನೇ ಸುದ್ದಿಗೋಷ್ಠಿ ಕರೆದ ಚಂದನ್ ಶೆಟ್ಟಿ ನಿವೇದಿತಾ ಗೌಡ; ಏನಿರಬಹುದು ಅರ್ಜೆಂಟ್?
ನಟಿ ಪ್ರಣೀತಾ ಅವರು ಮಗುವಾದ ಬಳಿಕ ಕೂಡ ಸಾಕಷ್ಟು ಗ್ಲಾಮರಸ್ ಆಗಿರುವ ಕಾರಣಕ್ಕೆ ಅವರಿಗೆ ಈಗಲೂ ಆಫರ್‌ಗಳು ಬರುತ್ತಿವೆ ಎನ್ನಲಾಗಿದೆ. ಹಲವು ಜಾಹೀರಾತುಗಳಲ್ಲಿ ಅವರು ಇತ್ತೀಚೆಗೆ ಕಾಣಿಸಿಕೊಂಡಿದ್ದಾರೆ ಕೂಡ. ಮಗು ಸ್ವಲ್ಪ ದೊಡ್ಡದಾದ ಬಳಿಕ, ಮತ್ತೆ ಅವರು ಮೊದಲಿನಂತೆ ಸಿನಿಮಾ ನಟನೆಯಲ್ಲಿ ಸಕ್ರಿಯರಾದರೆ ಅಚ್ಚರಿಯೇನೂ ಇಲ್ಲ ಎನ್ನಬಹುದು.
ಮಾಲಾಶ್ರೀ ಮೇನಿಯಾಗೆ ಫುಲ್ ಸ್ಟಾಪ್ ಹಾಕಿದ್ಯಾರು; ಕನಸಿನ ರಾಣಿ ತೆರೆಮರೆಗೆ ಸರಿತಾರಾ?